Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೌಂದರ್ಯ ವೃದ್ಧಿಸುವ ಬಸಲೆ ಸೊಪ್ಪಿನ ಸಿಹಿ ಸಾಸಿವೆ ರೆಸಿಪಿ
ಕರಾವಳಿ ಭಾಗದ ಮಂದಿಗೆ ಬಸಲೆ ಎಂದರೆ ಪಂಚಪ್ರಾಣ. ಪ್ರತಿಯೊಬ್ಬರ ಮನೆಯಲ್ಲೂ ಬಸಲೆ ಗಿಡ ನೆಟ್ಟಿರುತ್ತಾರೆ. ಇನ್ನು ಬೆಂಗಳೂರು ಸೇರಿರುವ ಕರಾವಳಿ ಮಂದಿ ಮಂಗಳೂರು ಸ್ಟೋರ್ ನಲ್ಲಿ ಯಾವಾಗ ಬಸಲೆ ಸೊಪ್ಪು ಬಂದಿರುತ್ತದೆ ಎಂದು ಕಾತರದಿಂದ ಕಾಯುತ್ತಾರೆ. ಬಸಲೆಯಿಂದ ಅನೇಕ ರೀತಿಯ ರೆಸಿಪಿಗಳನ್ನು ಮಾಡುವುದು ಇವರಿಗೆ ಕರಗತವಾಗಿರುತ್ತದೆ. ಬಸಲೆಯಿಂದ ತಯಾರಿಸುವ ಖಾಧ್ಯಗಳು ಅನೇಕ.

ಬಸಲೆ ಸಾಂಬಾರು, ಬಸಲೆ ಪಕೋಡ ಇತ್ಯಾದಿ. ಬೆಂಡೆಕಾಯಿಯಂತೆ ಬಸಲೆಯಲ್ಲೂ ಕೂಡ ಲೋಳೆಯಂತ ಅಂಶವಿರುತ್ತದೆ. ಹಾಗಾಗಿ ಬೆಂಡೆಯಂತೆಯೇ ಸರಿಯಾದ ಕ್ರಮದಲ್ಲಿ ಅಡುಗೆ ಮಾಡದೇ ಇದ್ದಲ್ಲಿ ಸ್ವಲ್ಪ ಅಡುಗೆ ಲೋಳೆ ಅನ್ನಿಸಬಹುದು.
ಸಾಕಷ್ಟು ಆರೋಗ್ಯ ಲಾಭವನ್ನು ಮಾಡುವ ಬಸಲೆ ಸೊಪ್ಪಿನಿಂದ ತಯಾರಿಸಬಹುದಾದ ಸಿಹಿಯಾದ ರೆಸಿಪಿಯೊಂದನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ರುಚಿಗೂ ಸೈ, ಆರೋಗ್ಯಕ್ಕೂ ಜೈ ಅನ್ನುವ ಈ ರೆಸಿಪಿಯಿಂದಾಗಿ ನೀವು ನಿಮ್ಮ ಊಟವನ್ನು ಆನಂದದಿಂದ ಸವಿಯಬಹುದು. ಹಾಗಾದ್ರೆ ಬಸಲೆ ಸೊಪ್ಪಿನ ಸಿಹಿ ಸಾಸಿವೆ ಮಾಡಲು ಏನೆಲ್ಲಾ ಬೇಕು ಮತ್ತು ತಯಾರಿಸುವ ಬಗೆ ಹೇಗೆ ಎಂಬುದನ್ನು ತಿಳಿಯೋಣ.
Recipe By: Sushma chatra
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
• ಬಸಲೆ ಸೊಪ್ಪು - ಎರಡು ಕಟ್ಟು
• ತೆಂಗಿನ ಕಾಯಿ ತುರಿ - ಒಂದು ಕಪ್
• ಸಾಸಿವೆ ಕಾಳು - ಒಂದು ಟೇಬಲ್ ಸ್ಪೂನ್
• ಅರಿಶಿನ ಪುಡಿ - ಚಿಟಿಕೆ
• ಹಸಿಮೆಣಸು - ಎರಡರಿಂದ ಮೂರು (ಖಾರದ ಮೇಲೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)
• ಉಪ್ಪು - ರುಚಿಗೆ ತಕ್ಕಷ್ಟು
• ಬೆಲ್ಲ - ಎರಡು ಟೇಬಲ್ ಸ್ಪೂನ್
• ಗಟ್ಟಿ ಮೊಸರು -ಕಾಲು ಲೀಟರ್
-
ಮಾಡುವ ವಿಧಾನ
ಹಂತ 1 : ಬಸಲೆ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ
ಹಂತ 2 : ಅದಕ್ಕೆ ಸ್ವಲ್ಪವೇ ನೀರು ಸೇರಿಸಿ ಬೇಯಿಸಿಕೊಳ್ಳಿ
ಹಂತ 3: ಕಾಯಿ ತುರಿ, ಸಾಸಿವೆ, ಅರಿಶಿನ ಪುಡಿ, ಹಸಿಮೆಣಸಿನ ಕಾಯಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ
ಹಂತ 4: ಈ ಮಿಶ್ರಣವನ್ನು ಬೇಯಿಸಿದ ಬಸಲೆಗೆ ಸೇರಿಸಿ ಕುದಿಸಿ
ಹಂತ 5: ಒಂದೆರಡು ಕುದಿ ಬಂದ ನಂತರ ಅದಕ್ಕೆ ಉಪ್ಪು, ಬೆಲ್ಲ ಹಾಕಿ ಮತ್ತೊಂದೆರಡು ಕುದಿ ಬರುವ ತನಕ ಕಾಯಿರಿ.
ಹಂತ 6: ತಣ್ಣಗಾದ ನಂತರ ಇದಕ್ಕೆ ಒಂದು ಕಪ್ ಸಿಹಿ ಮೊಸರನ್ನು ಸೇರಿಸಿ.
ಹಂತ 7: ನಂತರ ಕೊಬ್ಬರಿ ಎಣ್ಣೆಗೆ ಚಿಟಿಕೆ ಸಾಸಿವೆ ಹಾಕಿ, ಸಾಸಿವೆ ಪಟಪಟ ಅಂದ ನಂತರ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿದರೆ ಬಸಲೆ ಸೊಪ್ಪಿನ ಸಿಹಿ ಸಾಸಿವೆ ಸಿದ್ಧವಾಗುತ್ತದೆ.
- ಬಸಲೆ ಸೊಪ್ಪಿನ ಸಿಹಿ ಸಾಸಿವೆಯನ್ನು ರೊಟ್ಟಿ, ಅನ್ನ, ಚಪಾತಿ, ದೋಸೆಯ ಜತೆ ಸವಿಯಲು ತುಂಬಾ ರುಚಿ ಇರುತ್ತದೆ''. ಹಲವು ಆರೋಗ್ಯ ಲಾಭಗಳಿರುವ ಬಸಲೆ ಸೊಪ್ಪಿನ ಈ ಖಾದ್ಯವನ್ನು ನೀವು ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ.
ಆರೋಗ್ಯ ಲಾಭಗಳು
1. ಬಾಯಿ ಹುಣ್ಣಿನ ಸಮಸ್ಯೆ ಎದುರಿಸುವವರು ಈ ಅಡುಗೆಯನ್ನು ಸೇವಿಸುವುದರಿಂದಾಗಿ
ನಿವಾರಣೆ ಮಾಡಿಕೊಳ್ಳಬಹುದು.
2. ದೇಹದ ಉಷ್ಣತೆ ನಿಯಂತ್ರಣಕ್ಕೆ ಇದು ಸಹಕಾರಿ. ಬಸಲೆ ಎಲೆಗಳು ದೇಹಕ್ಕೆ
ತಂಪಾಗುತ್ತದೆ. ಹಾಗಾಗಿ ಬೇಸಿಗೆಯ ನಿಮ್ಮ ಅಡುಗೆಯಲ್ಲಿ ಈ ರೆಸಿಪಿ ಆಗಾಗ ಇದ್ದರೆ
ದೇಹಕ್ಕೆ ಆರಾಮವೆನ್ನಿಸುತ್ತದೆ.
3. ಜೀರ್ಣಕ್ರಿಯೆ ಸಮಸ್ಯೆ ಎದುರಿಸುತ್ತಿರುವವರು ಈ ರೆಸಿಪಿ ಬಳಸಿ ಊಟ
ಮಾಡುವುದರಿಂದ ಬೇಗನೆ ಜೀರ್ಣವಾಗುತ್ತದೆ.
4. ಉರಿಯೂತ ಸಮಸ್ಯೆ ಇರುವವರಿಗೆ ಇದು ಹೇಳಿ ಮಾಡಿಸಿದ ಅಡುಗೆ.
5. ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಬಸಲೆ ಎಲೆಗಳ ಪಾತ್ರ ಬಹಳ ದೊಡ್ಡದು. ಹಾಗಾಗಿ
ಆಗಾಗ ಬಸಲೆ ಎಲೆಗಳಿಂದ ತಯಾರಿಸಿದ ಅಡುಗೆ ನಿಮ್ಮ ಚರ್ಮದ ಸೌಂದರ್ಯ ವೃದ್ಧಿಗೆ
ನೆರವು ನೀಡುತ್ತದೆ.
6. ನೀವು ಒತ್ತಡದ ಸಮಸ್ಯೆ ಎದುರಿಸುತ್ತಿದ್ದಲ್ಲಿ ಈ ರೀತಿಯ ಸಾತ್ವಿಕ ಆಹಾರವು
ನಿಮ್ಮನ್ನ ಒತ್ತಡ ಮುಕ್ತರನ್ನಾಗಿಸುತ್ತದೆ.
7. ದೇಹದ ನಿರ್ವಿಶೀಕರಣಕ್ಕೆ ಬಸಲೆಯ ಅಡುಗೆ ಬಹಳ ಸಹಕಾರಿ.
8. ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಸಾಮರ್ಥ್ಯ ಬಸಲೆ
ಎಲೆಗಳಿಗಿದೆ. ಹಾಗಾಗಿ ಈ ಅಡುಗೆಯಿಂದ ನಿಮ್ಮ ಲಿವರ್ ನ ಕಾರ್ಯ ನಿರ್ವಹಣೆ
ಸುಧಾರಿಸುತ್ತದೆ.
9. ದೇಹದ ನೈಸರ್ಗಿಕ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಈ ಅಡುಗೆ
ಉತ್ತಮವಾದದ್ದಾಗಿದೆ. ಕರುಳಿನ ಮೈಕ್ರೋಫ್ಲೋರಾದೊಳಗೆ ಆರೋಗ್ಯಕರ
ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.
10. ಆಂಟಿ ಆಕ್ಸಿಡೆಂಟ್ ಗಳು ಬಸಲೆ ಎಲೆಗಳಲ್ಲಿರುವುದರಿಂದಾಗಿ ಈ ಅಡುಗೆ
ಸೇವನೆಯಿಂದ ದೇಹದಲ್ಲಿ ನೈಸರ್ಗಿಕವಾಗಿ ಆಂಟಿ ಆಕ್ಸಿಡೆಂಟ್ ಗಳು
ಅಧಿಕವಾಗುತ್ತದೆ.



Click it and Unblock the Notifications