Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಂಧ್ಯಾ ಆರತಿಯಲ್ಲಿ ಈ ಪ್ರಸಾದ ಅರ್ಪಿಸಿ.. ಶಿವನಿಗೆ ಇಷ್ಟವಾದ ನೈವೇದ್ಯಗಳಿವು! ಮಾಡೋದು ಹೇಗೆ?
ಶಿವನಿಗೆ ಇಷ್ಟವಾದ ನೈವೇದ್ಯಗಳು! ಸಂಜೆ ಸಂಧ್ಯಾ ಆರತಿಗಾಗಿ ಈ ಭೋಗ್ ಅರ್ಪಿಸಿ.. ಮಹಾದೇವನ ಕೃಪೆ ಪಡೆಯಿರಿ. ಹೌದು, ಮಹಾಶಿವರಾತ್ರಿಯಂದು (Maha Shivratri 2026) ಅಥವಾ ನಿಯಮಿತವಾದ ಸೋಮವಾರಗಳ ಸಂಧ್ಯಾ ಆರತಿಯ (Sandhya Aarti) ಸಮಯದಲ್ಲಿ ಶಿವನನ್ನು ಪ್ರಸನ್ನಗೊಳಿಸಲು ವಿಶೇಷ ನೈವೇದ್ಯಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರ. ಮಹಾದೇವನ ಕೃಪೆಗೆ ಪಾತ್ರರಾಗಲು, ಭಕ್ತಿಪೂರ್ವಕವಾಗಿ ಆಚರಿಸುವ ಸಂಜೆಯ ಪೂಜೆಗೆ ಸೂಕ್ತವಾದ ಐದು ಸಾತ್ವಿಕ ನೈವೇದ್ಯಗಳನ್ನು (Mahashivratri Bhog Ideas) ಇಲ್ಲಿ ತಿಳಿಸಲಾಗಿದೆ.
ಹಿಂದೂ ಧರ್ಮದಲ್ಲಿ ಶಿವನ ಆರಾಧನೆಯು ಸರಳ ಮತ್ತು ಭಾವನಾತ್ಮಕತೆಯಿಂದ ಕೂಡಿರುತ್ತದೆ. 'ಅಭಿಷೇಕಪ್ರಿಯ ಶಿವ' ಎಂಬಂತೆ, ಈಶ್ವರನು ಕೇವಲ ಒಂದು ಚೊಂಬು ನೀರು ಅಥವಾ ಬಿಲ್ವಪತ್ರೆಗೆ ಒಲಿಯುತ್ತಾನೆ. ಆದರೂ, ಶಿವರಾತ್ರಿ (Mahashivratri 2026) ಅಥವಾ ಇತರೆ ವಿಶೇಷ ಸಂದರ್ಭಗಳಲ್ಲಿ ಸಂಧ್ಯಾವೇಳೆಯ ಆರತಿಯ ಬಳಿಕ ಸಾತ್ವಿಕ ನೈವೇದ್ಯವನ್ನು ಅರ್ಪಿಸುವುದು ವಿಶೇಷ ಫಲ ನೀಡುತ್ತದೆ. ಸಂಜೆಯ ಪೂಜೆಯು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಜೊತೆಗೆ, ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ.
ಸಂಧ್ಯಾ ಆರತಿಗೆ ಸಿದ್ಧಪಡಿಸುವ ನೈವೇದ್ಯಗಳು ಸಂಪೂರ್ಣವಾಗಿ ಸಾತ್ವಿಕವಾಗಿರಬೇಕು. ಅವುಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಇತರೆ ಯಾವುದೇ ತಾಮಸಿಕ ಪದಾರ್ಥಗಳನ್ನು ಬಳಸಬಾರದು. ಉಪವಾಸ ವ್ರತ ಆಚರಿಸುವ ಭಕ್ತರು ಈ ನೈವೇದ್ಯಗಳನ್ನೇ ಪ್ರಸಾದವಾಗಿ ಸ್ವೀಕರಿಸುವುದರಿಂದ, ಅವುಗಳನ್ನು ವ್ರತಕ್ಕೆ ಸೂಕ್ತವಾದ ಪದಾರ್ಥಗಳನ್ನು ಬಳಸಿ ತಯಾರಿಸುವುದು ಅತಿ ಮುಖ್ಯ. ಈ ನಿಯಮಗಳನ್ನು ಪಾಲಿಸುವ ಮೂಲಕ ಶುದ್ಧವಾದ ಭೋಗ್ ಸಿದ್ಧಪಡಿಸಬಹುದು. ಮಖಾನಾ ಖೀರ್‌ನಿಂದ ಪಂಚಾಮೃತದವರೆಗೆ, ಭಕ್ತಿಯಿಂದ ಅರ್ಪಿಸಬಹುದಾದ ಈ ನೈವೇದ್ಯಗಳು ಮನೆಗಳಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತವೆ.
ಶಿವನಿಗೆ ಅರ್ಪಿಸಬಹುದಾದ ನೈವೇದ್ಯಗಳಿವು
ಮಖಾನಾ ಖೀರ್
ವ್ರತಗಳನ್ನು ಆಚರಿಸುವಾಗ ಮಖಾನಾ (ಕಮಲದ ಬೀಜ) ಖೀರ್ ಅತ್ಯಂತ ಜನಪ್ರಿಯ ನೈವೇದ್ಯವಾಗಿದೆ. ಇದು ಕೇವಲ ರುಚಿಕರ ಮಾತ್ರವಲ್ಲದೆ ದೇಹಕ್ಕೆ ತಕ್ಷಣ ಶಕ್ತಿ ಒದಗಿಸುತ್ತದೆ.
ತಯಾರಿಸುವ ವಿಧಾನ: ಮಖಾನಾವನ್ನು ತುಪ್ಪದಲ್ಲಿ ಹುರಿದು, ಇಡಿಯಾಗಿ ಅಥವಾ ಪುಡಿ ಮಾಡಿ ಹಾಲಿನಲ್ಲಿ ಬೇಯಿಸಿ. ನಂತರ ಸಕ್ಕರೆ, ಏಲಕ್ಕಿ ಪುಡಿ, ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿದರೆ ಪವಿತ್ರವಾದ ಖೀರ್ ಸಿದ್ಧ. ಇದನ್ನು ಸಂಧ್ಯಾ ಆರತಿಯ ನಂತರ ಬೆಳ್ಳಿಯ ಅಥವಾ ಸ್ಟೀಲ್ ಪಾತ್ರೆಯಲ್ಲಿ ಶಿವನಿಗೆ ಅರ್ಪಿಸಬಹುದು.
ಪಂಚಾಮೃತ
ಶಿವನಿಗೆ ತಾಜಾ ಹಣ್ಣುಗಳೆಂದರೆ ಅತ್ಯಂತ ಪ್ರಿಯ. ಅದರಲ್ಲೂ ಸೇಬು, ಬಾಳೆಹಣ್ಣು ಮತ್ತು ದಾಳಿಂಬೆಯನ್ನು ಹೆಚ್ಚಾಗಿ ಅರ್ಪಿಸಲಾಗುತ್ತದೆ. ಇದರ ಜೊತೆಗೆ, ಪಂಚಾಮೃತವು ಶಿವಪೂಜೆಯ ಅವಿಭಾಜ್ಯ ಭಾಗವಾಗಿದೆ.
ತಯಾರಿಸುವ ವಿಧಾನ: ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಮೊದಲು ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಂತರ ಅದನ್ನು ನೈವೇದ್ಯವಾಗಿ ಅರ್ಪಿಸಿ ಪ್ರಸಾದವಾಗಿ ಹಂಚಬಹುದು.
ಸಾಬೂದಾನ ಕಿಚಡಿ
ಸಂಜೆ ಉಪವಾಸ ಮುರಿಯುವವರಿಗೆ ಅಥವಾ ಶಿವನಿಗೆ ಲಘು ಆಹಾರವನ್ನು ಅರ್ಪಿಸಲು ಬಯಸುವವರಿಗೆ ಸಬ್ಬಕ್ಕಿ ಕಿಚಡಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಂಪೂರ್ಣ ಸಾತ್ವಿಕವಾಗಿದ್ದು, ವ್ರತಕ್ಕೆ ಅಳವಡಿಸಲು ಹೇಳಿ ಮಾಡಿಸಿದ ಆಹಾರವಾಗಿದೆ.
ತಯಾರಿಸುವ ವಿಧಾನ: ಇದನ್ನು ತಯಾರಿಸುವಾಗ ಕೇವಲ ಸೈಂಧವ ಲವಣ (ಕಲ್ಲುಪ್ಪು) ಬಳಸಿ. ಹಸಿಮೆಣಸಿನಕಾಯಿ, ಶೇಂಗಾ ಮತ್ತು ಆಲೂಗಡ್ಡೆ ಸೇರಿಸಿ ರುಚಿಕರವಾಗಿ ತಯಾರಿಸಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಸಿಂಗಾಡಾ ಹಿಟ್ಟಿನ ಹಲ್ವಾ
ವ್ರತದ ಸಮಯದಲ್ಲಿ ಸಿಂಗಾಡಾ (ಶೃಂಗಾಟಕ) ಹಿಟ್ಟನ್ನು ಅತ್ಯಂತ ಶುದ್ಧವೆಂದು ಪರಿಗಣಿಸಲಾಗುತ್ತದೆ. ಈ ಹಿಟ್ಟಿನಿಂದ ತಯಾರಿಸಿದ ಹಲ್ವಾ ಶಿವನಿಗೆ ಪ್ರಿಯವಾದ ಭೋಗ್‌ಗಳಲ್ಲಿ ಒಂದಾಗಿದೆ.
ತಯಾರಿಸುವ ವಿಧಾನ: ಇದನ್ನು ತಯಾರಿಸಲು ತುಪ್ಪದಲ್ಲಿ ಸಿಂಗಾಡಾ ಹಿಟ್ಟನ್ನು ಕೆಂಪು ಬಣ್ಣ ಬರುವವರೆಗೆ ಹುರಿದು, ಬಳಿಕ ಬಿಸಿ ನೀರು ಮತ್ತು ಸಕ್ಕರೆ ಸೇರಿಸಿ. ಮಿಶ್ರಣವು ಗಟ್ಟಿಯಾಗುವವರೆಗೆ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಒಣ ದ್ರಾಕ್ಷಿ ಮತ್ತು ಗೋಡಂಬಿ ಉದುರಿಸಿ ಅರ್ಪಿಸಬಹುದು.
ಭಾಂಗ್ ಲಡ್ಡು
ಪುರಾಣಗಳ ಪ್ರಕಾರ, ಶಿವನಿಗೆ ಭಾಂಗ್ (ಗಾಂಜಾ ಎಲೆಗಳು) ಪ್ರಿಯವೆಂಬ ನಂಬಿಕೆ ಇದೆ. ಅನೇಕ ಕಡೆಗಳಲ್ಲಿ ಸಂಪ್ರದಾಯದಂತೆ ಭಾಂಗ್ ಮಿಶ್ರಿತ ಲಡ್ಡು ಅಥವಾ ಹಾಲಿನಿಂದ ತಯಾರಿಸಿದ ಥಂಡಾಯಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದನ್ನು ಕೇವಲ ಪೂಜೆಯ ಉದ್ದೇಶಕ್ಕಾಗಿ ಮತ್ತು ಸಾಂಕೇತಿಕವಾಗಿ ಮಾತ್ರ ಬಳಸುವುದು ಉತ್ತಮ.
ತಯಾರಿಸುವ ವಿಧಾನ: ಮನೆಯಲ್ಲಿ ಇದನ್ನು ತಯಾರಿಸುವಾಗ, ಶುದ್ಧ ಹಾಲಿಗೆ ಬಾದಾಮಿ, ಪಿಸ್ತಾ, ಮತ್ತು ಕೇಸರಿ ಸೇರಿಸಿ ರುಚಿಕರವಾದ ಥಂಡಾಯಿ ರೂಪದಲ್ಲಿ ಅರ್ಪಿಸಬಹುದು.
ಪೂಜಾ ಸಮಯದಲ್ಲಿ ನೆನಪಿಡಿ
- ನೈವೇದ್ಯ ತಯಾರಿಸುವ ಮೊದಲು ಸ್ನಾನ ಮಾಡಿ ಶುದ್ಧವಾದ ಬಟ್ಟೆ ಧರಿಸಿ. ಅಡುಗೆಮನೆಯೂ ಸಂಪೂರ್ಣ ಸ್ವಚ್ಛವಾಗಿರಲಿ.
- ವ್ರತದ ಅಡುಗೆಯಲ್ಲಿ ಸಾಮಾನ್ಯ ಉಪ್ಪಿನ ಬದಲು ಸೈಂಧವ ಲವಣ (ಕಲ್ಲುಪ್ಪು) ಬಳಸುವುದು ಕಡ್ಡಾಯ.
- ನೈವೇದ್ಯ ಅರ್ಪಿಸುವಾಗ ಪಾತ್ರೆಯ ಪಕ್ಕದಲ್ಲಿ ಒಂದು ಬಿಲ್ವಪತ್ರೆಯನ್ನು ಇಡುವುದು ಅತ್ಯಂತ ಶ್ರೇಷ್ಠವೆದೆಂದು ಪರಿಗಣಿಸಲಾಗಿದೆ.



Click it and Unblock the Notifications
