Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
Mahashivratri 2026: ನಿಮ್ಮ ರಾಶಿ ಪ್ರಕಾರ ಶಿವನಿಗೆ ಅಭಿಷೇಕ ಏನು? ಹೀಗೆ ಮಾಡಿದ್ರೆ ಇಷ್ಟಾರ್ಥ ಸಿದ್ಧಿ
ಶಿವರಾತ್ರಿಯಂದು ನಿಮ್ಮ ರಾಶಿಯಂತೆ ಶಿವನಿಗೆ ಈ ವಸ್ತುವಿನಿಂದ ಅಭಿಷೇಕ ಮಾಡಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಿ! ಶಿವಲಿಂಗಕ್ಕೆ ಅಭಿಷೇಕ ಮಾಡುವ ಸರಿಯಾದ ವಿಧಾನ ಇಲ್ಲಿದೆ. ಹೌದು, ಮಹಾಶಿವರಾತ್ರಿ (Mahashivratri 2026) ದಿನ ಭೋಲೆನಾಥನ (ಶಿವಭಗವಂತನ) ಪೂಜೆ ಮತ್ತು ಉಪವಾಸಕ್ಕೆ ವಿಶೇಷ ಮಹತ್ವವಿದೆ. ಶಿವರಾತ್ರಿ ದಿನ ಉಪವಾಸ ಮತ್ತು ಶಿವಭಗವಂತನನ್ನು ವಿಧಿಪೂರ್ವಕವಾಗಿ ಪೂಜಿಸುವ ಭಕ್ತರಿಗೆ ಇಡೀ ವರ್ಷದ ಶಿವರಾತ್ರಿಯ ಫಲ ಲಭಿಸುತ್ತದೆ.
ಈ ಬಾರಿ ಫೆಬ್ರವರಿ 15, ಭಾನುವಾರದಂದು ಮಹಾಶಿವರಾತ್ರಿ (Maha shivratri 2026) ವ್ರತ ಆಚರಿಸಲಾಗುವುದು. ಈ ಪವಿತ್ರ ದಿನದಂದು ಶಿವನ ಪೂಜೆ ಮತ್ತು ವ್ರತದ ಜೊತೆಗೆ ಅಭಿಷೇಕಕ್ಕೂ ವಿಶೇಷ ಮಹತ್ವವಿದೆ. ಶ್ರದ್ಧೆಯಿಂದ ಈ ಕಾರ್ಯಗಳನ್ನು ಮಾಡುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

ಮಹಾಶಿವರಾತ್ರಿ (Shivratri 2026) ದಿನದಂದು ಭಕ್ತರು ತಮ್ಮ ರಾಶಿಗನುಗುಣವಾಗಿ ದ್ವಾದಶ ಜ್ಯೋತಿರ್ಲಿಂಗಗಳನ್ನು ಸ್ಮರಿಸುತ್ತಾ ಶಿವಲಿಂಗಕ್ಕೆ ಅಭಿಷೇಕ (Mahashivratri 2026 Abhishek) ಮಾಡಿ ಪೂಜಿಸಬೇಕು ಎಂದು ಧಾರ್ಮಿಕ ನಂಬಿಕೆ ಇದೆ. ಮಹಾಶಿವರಾತ್ರಿ ದಿನ ರಾಶಿಗಳಿಗನುಗುಣವಾಗಿ ಭೋಲೆನಾಥನಿಗೆ ಯಾವ ವಸ್ತುಗಳಿಂದ ಅಭಿಷೇಕ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಮೇಷ
ಮಹಾಶಿವರಾತ್ರಿ ದಿನದಂದು ಮೇಷ ರಾಶಿಯವರು ಸೋಮನಾಥ ಜ್ಯೋತಿರ್ಲಿಂಗವನ್ನು ಧ್ಯಾನಿಸುತ್ತಾ ಶಿವನ ಪೂಜೆ ಮಾಡಬೇಕು. ಇದರ ಜೊತೆಗೆ ಭೋಲೆನಾಥನಿಗೆ ಹಾಲು ಮತ್ತು ಬೆಲ್ಲದಿಂದ ಅಭಿಷೇಕ ಮಾಡುವುದು ಅತ್ಯಂತ ಶುಭಕರ. ಹೀಗೆ ಮಾಡುವುದರಿಂದ ಮೇಷ ರಾಶಿಯವರಿಗೆ ಶಿವನ ವಿಶೇಷ ಅನುಗ್ರಹ ಲಭಿಸುತ್ತದೆ.
ವೃಷಭ
ಶಿವನ ಆಶೀರ್ವಾದ ಪಡೆಯಲು ವೃಷಭ ರಾಶಿಯವರು ಮಹಾಶಿವರಾತ್ರಿ ದಿನ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವನ್ನು ಸ್ಮರಿಸುತ್ತಾ ದೇವರನ್ನು ಪೂಜಿಸಬೇಕು. ಇದರೊಂದಿಗೆ, ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ, ಕೇಸರಿಯ ಲೇಪನ ಮಾಡುವುದ ಉತ್ತಮ. ಇದರಿಂದ ಅಪಾರ ಪುಣ್ಯ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.
ಮಿಥುನ
ಮಹಾಶಿವರಾತ್ರಿ ದಿನದಂದು ಮಿಥುನ ರಾಶಿಯವರು ಮಹಾಕಾಳೇಶ್ವರ ಜ್ಯೋತಿರ್ಲಿಂಗವನ್ನು ಧ್ಯಾನಿಸುತ್ತಾ ಶಿವನನ್ನು ಪೂಜಿಸಬೇಕು. ಜೇನುತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಉತ್ತಮ. ಅಭಿಷೇಕ ಮಾಡುವಾಗ 11 ಅಥವಾ 21 ಬಿಲ್ವಪತ್ರೆಗಳ ಮೇಲೆ 'ಓಂ ನಮಃ ಶಿವಾಯ' (Om Namah Shivaya) ಎಂದು ಬರೆದು ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಜೀವನದ ಅಡೆತಡೆಗಳಿಂದ ಮುಕ್ತಿ ಹೊಂದಬಹುದು.
ಕರ್ಕ
ಶಿವನ ಪೂಜೆ ಮತ್ತು ಅಭಿಷೇಕ ಮಾಡುವಾಗ ಕರ್ಕಾಟಕ ರಾಶಿಯವರು ಓಂಕಾರೇಶ್ವರ ಜ್ಯೋತಿರ್ಲಿಂಗವನ್ನು ಧ್ಯಾನಿಸಬೇಕು. ಗಂಗಾಜಲ ಅಥವಾ ಶುದ್ಧ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿ. ಇದರೊಂದಿಗೆ 108 ಅಖಂಡ ಅಕ್ಕಿ ಕಾಳುಗಳನ್ನು ಅರ್ಪಿಸುತ್ತಾ 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಿ.
ಸಿಂಹ
ಮಹಾಶಿವರಾತ್ರಿ ದಿನದಂದು ಸಿಂಹ ರಾಶಿಯವರು ಕೇದಾರನಾಥನನ್ನು ಧ್ಯಾನಿಸುತ್ತಾ ಶಿವನ ಪೂಜೆ ಮತ್ತು ಅಭಿಷೇಕ ಮಾಡಬೇಕು. ಭೋಲೆನಾಥನಿಗೆ ಭಾಂಗ್ ಮಿಶ್ರಿತ ನೀರಿನಿಂದ ಅಭಿಷೇಕ ಮಾಡುವುದು ಉತ್ತಮ. ಇದು ಸಾಧ್ಯವಾಗದಿದ್ದರೆ, ಮೊಸರಿನಿಂದಲೂ ಅಭಿಷೇಕ ಮಾಡಬಹುದು.
ಕನ್ಯಾ
ಮಹಾಶಿವರಾತ್ರಿ ದಿನ ಶಿವನ ಪೂಜೆಗಾಗಿ ಕನ್ಯಾ ರಾಶಿಯವರು ಭೀಮಾಶಂಕರ ಜ್ಯೋತಿರ್ಲಿಂಗವನ್ನು ಧ್ಯಾನಿಸಬೇಕು. ಮತ್ತು ಶಿವನಿಗೆ ಹಾಲಿನ ಅಭಿಷೇಕ ಮಾಡುವುದು ಅತ್ಯಂತ ಶುಭಕರ. ಹೀಗೆ ಮಾಡುವುದರಿಂದ ಭೋಲೆನಾಥನ ಕೃಪೆಯಿಂದ ಜೀವನದಲ್ಲಿ ಸುಖ-ಸಮೃದ್ಧಿ ಲಭಿಸುತ್ತದೆ.
ತುಲಾ
ಮಹಾಶಿವರಾತ್ರಿ ದಿನ ಶಿವನಿಗೆ ಅಭಿಷೇಕ ಮಾಡುವಾಗ ತುಲಾ ರಾಶಿಯವರು ಕಾಶಿ ವಿಶ್ವನಾಥನನ್ನು ಧ್ಯಾನಿಸಬೇಕು. ಈ ದಿನ ಭೋಲೆನಾಥನಿಗೆ ಮೊಸರಿನಿಂದ ಅಭಿಷೇಕ ಮಾಡಿ, ಜೇನುತುಪ್ಪವನ್ನೂ ಅರ್ಪಿಸಿ. ಹೀಗೆ ಮಾಡುವುದರಿಂದ ತುಲಾ ರಾಶಿಯವರಿಗೆ ಶಿವನ ಆಶೀರ್ವಾದ ಲಭಿಸುತ್ತದೆ.
ವೃಶ್ಚಿಕ
ಶಿವನ ಪೂಜೆ ಮತ್ತು ಅಭಿಷೇಕ ಮಾಡುವಾಗ ವೃಶ್ಚಿಕ ರಾಶಿಯವರು ತ್ರಯಂಬಕೇಶ್ವರ ಜ್ಯೋತಿರ್ಲಿಂಗವನ್ನು ಧ್ಯಾನಿಸಬೇಕು. ಮಹಾಶಿವರಾತ್ರಿ ದಿನದಂದು ಗಂಗಾಜಲ ಅಥವಾ ಶುದ್ಧ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿ. ಭೋಲೆನಾಥನಿಗೆ ಭಾಂಗ್ ಮತ್ತು ಧತೂರಾವನ್ನು ಸಹ ಅರ್ಪಿಸಬಹುದು.
ಧನು
ಮಹಾಶಿವರಾತ್ರಿ ದಿನದಂದು ಧನು ರಾಶಿಯವರು ನೀರು ಮತ್ತು ತುಪ್ಪದಿಂದ ಭೋಲೆನಾಥನಿಗೆ ಅಭಿಷೇಕ ಮಾಡಬೇಕು. ಈ ಸಮಯದಲ್ಲಿ ತಮ್ಮ ರಾಶಿಗನುಗುಣವಾಗಿ ವೈದ್ಯನಾಥ ಜ್ಯೋತಿರ್ಲಿಂಗವನ್ನು ಧ್ಯಾನಿಸಬೇಕು. ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ಲಭಿಸುತ್ತದೆ.
ಮಕರ
ಶಿವ ಪೂಜೆ ಮತ್ತು ಅಭಿಷೇಕದ ಸಮಯದಲ್ಲಿ ಮಕರ ರಾಶಿಯವರು ಧ್ಯಾನಿಸಬೇಕಾದ ಜ್ಯೋತಿರ್ಲಿಂಗ ನಾಗೇಶ್ವರ. ಇದರೊಂದಿಗೆ ಜೇನುತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ, ರುದ್ರಾಷ್ಟಕ ಪಠಣ ಮಾಡಿ. ಹೀಗೆ ಮಾಡುವುದರಿಂದ ಭೋಲೆ ಬಾಬಾ ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.
ಕುಂಭ
ಮಹಾಶಿವರಾತ್ರಿ ದಿನದಂದು ಕುಂಭ ರಾಶಿಯವರು ತುಪ್ಪ ಮತ್ತು ಗಂಗಾಜಲದಿಂದ ಭೋಲೆನಾಥನಿಗೆ ಅಭಿಷೇಕ ಮಾಡಬೇಕು. ಈ ದಿನ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುತ್ತಾ ರಾಮೇಶ್ವರಂ ಜ್ಯೋತಿರ್ಲಿಂಗವನ್ನು ಧ್ಯಾನಿಸುತ್ತಾ ಶಿವನ ಪೂಜೆ ಮಾಡಿ. ಹೀಗೆ ಮಾಡುವುದರಿಂದ ಶಿವನ ವಿಶೇಷ ಅನುಗ್ರಹ ಲಭಿಸುತ್ತದೆ.
ಮೀನ
ಮಹಾದೇವನ ಪೂಜೆ ಮತ್ತು ಅಭಿಷೇಕದ ಸಮಯದಲ್ಲಿ ಮೀನ ರಾಶಿಯವರು ಘುಷ್ಮೇಶ್ವರ ಜ್ಯೋತಿರ್ಲಿಂಗವನ್ನು ಧ್ಯಾನಿಸಬೇಕು. ಮಹಾಶಿವರಾತ್ರಿ ದಿನದಂದು ತುಪ್ಪ ಮತ್ತು ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿ, 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸುತ್ತಾ 108 ಅಖಂಡ ಅಕ್ಷತೆಗಳನ್ನು ಅರ್ಪಿಸಿ.



Click it and Unblock the Notifications