Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಬಾಣಂತಿಯರ ಆರೋಗ್ಯ ವೃದ್ಧಿಸುವ ಕಿಸುಕಾರೆ ಹೂವಿನ ತಂಬಳಿ
ಕಿಸುಕಾರೆ ಅಥವಾ ಹೊಳೆ ದಾಸವಾಳ ಎಂದು ಕರೆಯಲ್ಪಡುವ ಹೂವು ಗುಡ್ಡಗಾಡುಗಳಲ್ಲಿ ಸಾಮಾನ್ಯವಾಗಿ ಸಹಜವಾಗಿಯೇ ಬೆಳೆದಿರುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು ಇಕ್ಸೋರ ಕೊಸಿನಿಯಾ(ಲಿನ್) ಎನ್ನಲಾಗುತ್ತದೆ. ಇಂಗ್ಲೀಷಿನಲ್ಲಿ ಇದನ್ನು ಜಂಗಲ್ ಫ್ಲೇಮ್ ಎಂದು ಗುರುತಿಸಲಾಗುತ್ತದೆ. ರುಬಿಯಾಸಿಯೇ ಕುಟುಂಬಕ್ಕೆ ಸೇರಿದ ಹೂವು ಇದು. ಕನ್ನಡದಲ್ಲೂ ಬೇರೆಬೇರೆ ಪ್ರದೇಶಗಳಲ್ಲಿ ಈ ಹೂವಿಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಕುಸುಮಾಲೆ, ಕೇಪಳ, ಕಿಸುಕಾರೆ, ಹೊಳೆ ದಾಸವಾಳ ಇತ್ಯಾದಿ ಹೆಸರುಗಳು ಕೂಡ ಇದೆ.

ಹಲವು ಬಣ್ಣಗಳಲ್ಲಿ ಈ ಹೂವನ್ನು ನೀವು ಕಾಣಬಹುದು. ಕೆಂಪು, ಬಿಳಿ, ಹಳದಿ,
ತುಪ್ಪದ ವರ್ಣ, ಗುಲಾಬಿ ವರ್ಣ ಸೇರಿದಂತೆ ಹಲವು ಬಣ್ಣಗಳ ಹೂವು ಗೊಂಚಲು ಗೊಂಚಲಾಗಿ
ಬಿಟ್ಟರೆ ನೋಡಲು ಬಲು ಸುಂದರ. ಕಣ್ಣಿಗೆ ಆಹ್ಲಾದ ನೀಡುವ ಈ ಹೂವುಗಳು ಕೇವಲ
ಸೌಂದರ್ಯಕ್ಕಷ್ಟೇ ಸೀಮಿತವಲ್ಲ ಬದಲಾಗಿ ಇದೊಂದು ಔಷಧೀಯ ಸಸ್ಯವೂ ಹೌದು.
ಈ ಹೂವುಗಳಿಂದ ಖಾಧ್ಯಗಳನ್ನೂ ಕೂಡ ತಯಾರಿಸಬಹುದು. ಅನೇಕ ಆರೋಗ್ಯ ಸಮಸ್ಯೆಗಳಿಗೆ
ಪರಿಹಾರ ನೀಡುವ ಸಾಮರ್ಥ್ಯವನ್ನು ಈ ಹೂವುಗಳು ಹೊಂದಿದೆ. ನಾವಿಂದು ಇಲ್ಲಿ ಹಳದಿ
ಬಣ್ಣದ ಕಿಸುಕಾರೆ ಹೂವುಗಳನ್ನು ಬಳಸಿ ತಂಬಳಿ ಮಾಡುವುದು ಹೇಗೆ ಎಂಬ ಬಗ್ಗೆ
ತಿಳಿಸಿಕೊಡುತ್ತಿದ್ದೇವೆ.
Recipe By: Sushma chatra
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
• ಕಿಸುಕಾರೆ ಹೂವು - ಮೂರರಿಂದ ನಾಲ್ಕು ಗೊಂಚಲು
• ಜೀರಿಗೆ - ಅರ್ಧ ಟೀ ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಮಜ್ಜಿಗೆ - ಕಾಲು ಲೀಟರ್
• ಕಾಳುಮೆಣಸು - ಎರಡರಿಂದ ಮೂರು
• ಬೆಲ್ಲ - ರುಚಿಗೆ ತಕ್ಕಷ್ಟು( ಖಾರ ಇಷ್ಟಪಡುವವರು ಹಾಕದೆಯೂ ಇರಬಹುದು)
• ತುಪ್ಪ - ಒಂದು ಚಮಚ
-
ಮಾಡುವ ವಿಧಾನ
• ಮೊದಲಿಗೆ ಹೂವುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.
• ಕಾಲು ಟೀ ಸ್ಪೂನ್ ಜೀರಿಗೆ ಮತ್ತು ಕಾಳುಮೆಣಸಿನ ಜೊತೆಗೆ ಹೂವುಗಳನ್ನು ಹುರಿದುಕೊಳ್ಳಿ.
• ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.
• ಮಿಕ್ಸಿ ಮಾಡಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
• ಮಜ್ಜಿಗೆ ಮತ್ತು ಬೆಲ್ಲವನ್ನು ಸೇರಿಸಿ.
• ತುಪ್ಪದೊಂದಿಗೆ ಜೀರಿಗೆ ಹುರಿದು ಒಗ್ಗರಣೆ ಮಾಡಿದರೆ ರುಚಿರುಚಿಯಾದ ಕಿಸುಕಾರೆ ಹೂವಿನ ತಂಬಳಿ ಸವಿಯಲು ಸಿದ್ಧ.
- ಜ್ವರ ಬಂದಾಗ ಬಾಯಿ ರುಚಿ ಇಲ್ಲದೆ ಇರುವವರು ಈ ತಂಬಳಿ ಸೇವನೆ ಮಾಡುವುದರಿಂದಾಗಿ ಜ್ವರ ಸಮಸ್ಯೆ ನಿವಾರಣೆಯಾಗಿ ಬಾಯಿ ರುಚಿಯೂ ಕೂಡ ಅಧಿಕವಾಗುತ್ತದೆ. ಸೂಪ್ ನಂತೆ ಊಟಕ್ಕೂ ಮುನ್ನ ಕುಡಿಯಲೂಬಹುದು ಅಥವಾ ಅನ್ನದೊಂದಿಗೆ ಕಲಸಿ ಸೇವಿಸುವುದಕ್ಕೂ ಕೂಡ ಅಧ್ಬುತವಾಗಿರುತ್ತದೆ.
ಮಾಡುವ ಹಂತ-ಹಂತದ ವಿಧಾನ
• ಮೊದಲಿಗೆ ಹೂವುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.

• ಕಾಲು ಟೀ ಸ್ಪೂನ್ ಜೀರಿಗೆ ಮತ್ತು ಕಾಳುಮೆಣಸಿನ ಜೊತೆಗೆ ಹೂವುಗಳನ್ನು ಹುರಿದುಕೊಳ್ಳಿ.
• ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

• ಮಿಕ್ಸಿ ಮಾಡಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

• ಮಜ್ಜಿಗೆ ಮತ್ತು ಬೆಲ್ಲವನ್ನು ಸೇರಿಸಿ.


• ತುಪ್ಪದೊಂದಿಗೆ ಜೀರಿಗೆ ಹುರಿದು ಒಗ್ಗರಣೆ ಮಾಡಿದರೆ ರುಚಿರುಚಿಯಾದ
ಕಿಸುಕಾರೆ ಹೂವಿನ ತಂಬಳಿ ಸವಿಯಲು ಸಿದ್ಧ.


ಆರೋಗ್ಯ ಲಾಭಗಳು
• ಬಾಣಂತಿಯರು ಈ ತಂಬಳಿ ಸೇವಿಸುವುದರಿಂದಾಗಿ ತಾಯಿ ಮತ್ತು ಮಗುವಿಗೆ ಆಗುವ ಚವಿ
ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು
• ಈ ಹೂವುಗಳು ನೋವು ನಿವಾರಕ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ನಿಮಗೆ ದೇಹದ
ಯಾವುದೇ ಭಾಗದಲ್ಲಿ ನೋವು ಇದ್ದಲ್ಲಿ ಈ ತಂಬಳಿ ಸೇವನೆ ನಿಮ್ಮ ನೋವನ್ನು
ನಿವಾರಿಸುತ್ತದೆ.
• ತಲೆ ನೋವು ಸಮಸ್ಯೆಯಿಂದ ಆಗಾಗ ಬಳಲುತ್ತಿರುವವರು ವಾರಕ್ಕೊಮ್ಮೆ ಈ ತಂಬಳಿ ಸೇವನೆ
ಮಾಡಿದರೆ ಒಳ್ಳೆಯದು.
• ಹೊಟ್ಟೆಯ ಸಮಸ್ಯೆ ಎದುರಿಸುತ್ತಿರುವವರು ಕಿಸುಕಾರೆ ತಂಬಳಿಯನ್ನು ಕುಡಿಯಬಹದು
ಅಥವಾ ಮೆತ್ತನೆಯ ಅನ್ನದ ಜೊತೆಗೆ ಕಲಸಿಯೂ ಸೇವಿಸಬಹುದು.
• ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಈ ತಂಬಳಿ ಸೇವಿಸುವುದು ಒಳ್ಳೆಯದು.



Click it and Unblock the Notifications