Latest Updates
-
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು?
ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...
ನಗರ ಪ್ರದೇಶದವರು ಈ ಲೇಖನವನ್ನು ಒಮ್ಮೆ ಓದಲೇಬೇಕು. ಏಕೆಂದರೆ ಹಿಂದಿನ ಕಾಲಗಳಲ್ಲಿ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಸಿಗುತ್ತಿದ್ದ ಹಾಗೂ ಈಗಲೂ ಸಿಗುತ್ತಿರುವಂತಹ ರುಚಿರುಚಿಯಾದ ಆಹಾರವೆಂದರೆ ರಾಗಿ ಮುದ್ದೆ ಮತ್ತು ಉಪ್ಪುಸಾರು. ಹೌದು! ಅದರಲ್ಲೂ ರಾಗಿ ಮುದ್ದೆ ಎಂದರೆ ಹಳ್ಳಿ ಜನರಿಗೆ ಪಂಚಪ್ರಾಣ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿಯೂ ಸಹ ರಾಗಿ ಮುದ್ದೆಯ ಬಳಕೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಅದಕ್ಕೆ ಕಾರಣ ರಾಗಿಯಲ್ಲಿರುವ ವಿಶೇಷ ವಿಟಮಿನ್ ಮತ್ತು ಖನಿಜ ಸತ್ವಗಳು. ಹಾಗಾಗಿ ರಾಗಿ ಮುದ್ದೆಯು ಅತ್ಯಂತ ಆರೋಗ್ಯಕರವಾದ ಆಹಾರ ಪದಾರ್ಥಗಳಲ್ಲಿ ಒಂದು ಎನ್ನಬಹುದು.
ಕ್ರಮವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುವವರು ರಾಗಿ ಮುದ್ದೆಯನ್ನು ತಮ್ಮ ಆಹಾರದ ಭಾಗವಾಗಿ ಸೇವಿಸಲೇಬೇಕು. ಸಾಮಾನ್ಯವಾಗಿ ರಾಗಿ ಮುದ್ದೆಯು ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಸೇವಿಸುತ್ತಾರೆ. ಬಿಸಿಬಿಸಿ ರಾಗಿ ಮುದ್ದೆಯನ್ನು ತರಕಾರಿ ಸಾಂಬಾರಿನ ಜೊತೆ ಸೇವಿಸುತ್ತಿದ್ದರೆ ಅದರ ಮಜವೇ ಮಜಾ. ನಿಜ, ರಾಗಿ ಮುದ್ದೆಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ದೇಹದ ಸಾಮರ್ಥ್ಯ ಹೆಚ್ಚಾಗಿ ಅತ್ಯಂತ ಆರೋಗ್ಯಪೂರ್ಣವಾದ ಜೀವನ ನಡೆಸಬಹುದು.

ಇತ್ತೀಚೆಗಂತೂ ರಾಗಿ ಮುದ್ದೆಯ ಗುಣವನ್ನು ತಿಳಿದವರು ಹೆಚ್ಚಾಗುತ್ತಿದ್ದು, ಬೆಳಗಿನ ಉಪಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತು ರಾತ್ರಿಯ ಊಟಕ್ಕೂ ರಾಗಿ ಮುದ್ದೆಯನ್ನೇ ಆದ್ಯತೆಯ ಮೇರೆಗೆ ಸೇವಿಸುತ್ತಿದ್ದಾರೆ. ಹಾಗಾದರೆ ಏಕೆ ತಡ? ರಾಗಿ ಮುದ್ದೆ ಮತ್ತು ತರಕಾರಿ ಸಾಂಬಾರು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.... ಸರ್ವರೋಗವನ್ನು ಬಗ್ಗುಬಡಿಯುವ ರಾಗಿಮುದ್ದೆಯ ಕರಾಮತ್ತೇನು?
ಇಬ್ಬರಿಗೆ ಉಣಬಡಿಸಲು
*ಬೇಕಾಗುವ ತಯಾರಿಯ ಸಮಯ - 10 ನಿಮಿಷ
*ತಯಾರಿಸಲು ಬೇಕಾದ ಸಮಯ - 10 ನಿಮಿಷ
ರಾಗಿ ಮುದ್ದೆ ತಯಾರಿಸಲು ಬೇಕಾದ ಸಾಮಗ್ರಿಗಳು:
*ರಾಗಿ ಹಿಟ್ಟು - 2 ಬಟ್ಟಲು
*ತುಪ್ಪ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಸ್ವಲ್ಪ
ಮಾಡುವ ವಿಧಾನ:
*ಒಂದು ಪಾತ್ರೆಯಲ್ಲಿ 2 ಲೋಟ ನೀರು ಮತ್ತು 1 ಚಮಚ ಎಣ್ಣೆ, ಹಾಕಿ. ನೀರನ್ನು ಚೆನ್ನಾಗಿ ಕಾಯಲು ಬಿಡಿ.
*ಒಮ್ಮೆ ನೀರು ಕುದಿಯಲು ಪ್ರಾರಂಭಿಸಿದಾಗ ರಾಗಿ ಹಿಟ್ಟನ್ನು ನಿಧಾನವಾಗಿ ಹಾಕುತ್ತಾ ನಿಧಾನವಾಗಿ ಕಲಕುತ್ತಾ ಇರಿ.
*ಕಡಿಮೆ ಉರಿಯೊಂದಿಗೆ ನಿಧಾನವಾಗಿ ಕಲಕುತ್ತಾ ಇರಿ. ಆದರೆ ಜಾಗ್ರತೆ, ರಾಗಿ ಹಿಟ್ಟು ಉಂಡೆಗಲಾಗುವುದಕ್ಕೆ ಬಿಡಬೇಡಿ.
*ಸುಮಾರು 5 ರಿಂದ 10 ನಿಮಿಷ ಕಲಕುತ್ತಾ ಇರಿ.
*ಇನ್ನು ಈ ಮಿಶ್ರಣವನ್ನು ಒಂದು ತಟ್ಟೆಯ ಮೇಲೆ ಇಟ್ಟುಕೊಳ್ಳಿ.
*ತದನಂತರ ಹಸ್ತಕ್ಕೆ ತುಪ್ಪವನ್ನು ಸವರಿಕೊಂಡು ನಿಧಾನವಾಗಿ ಮೃದುವಾದ ಮುದ್ದೆಯಾಗುವಂತೆ ಮಾಡಿ.
ರಾಗಿ ಮುದ್ದೆ ಇದೀಗ ತಯಾರಾಗಿದ್ದು, ತುಪ್ಪದ ಜೊತೆ ನೀಡಿದರೆ ಮತ್ತಷ್ಟು ರುಚಿಯಾಗಿರುತ್ತದೆ.
ಸಾಂಬಾರನ್ನು ತಯಾರಿಸಲು ಬೇಕಾದ ಸಾಮಗ್ರಿಗಳು
*ಬಸಲೆ ಸೊಪ್ಪು - 2 ಬಟ್ಟಲು
*ಹಸಿ ಮೆಣಸಿನಕಾಯಿ - 4 ರಿಂದ 5
*ತೊಗರಿಬೇಳೆ - 1 ಬಟ್ಟಲು
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1/4 ಚಮಚ
*ಕರಿಬೇವು - 8 ರಿಂದ 10
*ಅರಿಶಿನ - 1/4 ಚಮಚ
*ಜೀರಿಗೆ - 1/4 ಚಮಚ
*ಎಣ್ಣೆ
ತಯಾರಿಸುವ ವಿಧಾನ:
*ಮೊದಲಿಗೆ ಕುಕ್ಕರ್ ಗೆ ತೊಗರಿ ಬೇಳೆ, ಬಸಲೆ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಮತ್ತು ನೀರನ್ನು ಹಾಕಿ.
*ಇನ್ನು ಕುಕ್ಕರ್ ಬಾಯಿಯನ್ನು ಮುಚ್ಚಿ 3 ವಿಶಲ್ ಆಗುವವರೆಗೆ ಒಲೆಯ ಮೇಲಿಡಿ.
*ಕುಕ್ಕರ್ ಆರಿದ ನಂತರ ಅದರ ಬಾಯಿಯನ್ನು ತೆರೆದು ಮಿಶ್ರಣವನ್ನು ಚೆನ್ನಾಗಿ ಕಲಸಿ.
*ಇನ್ನು ಮತ್ತೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಮೇಲೆ ಜೀರಿಗೆ ಮತ್ತು ಕರಿಬೇವನ್ನು ಸೇರಿಸಿ.
*ನಂತರ ಇದಕ್ಕೆ ಕುಕ್ಕರ್‌ನ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ.
ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಈಗ ರುಚಿರುಚಿಯಾದ ಬಿಸಿ ರಾಗಿ ಮುದ್ದೆ ಮತ್ತು ಬಿಸಿ ಬಿಸಿ ಸಾಂಬಾರು ಸವಿಯಲು ಸಿದ್ಧ.



Click it and Unblock the Notifications
