Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
1 ತಿಂಗಳು ಇಟ್ಟು ಸವಿಯಬಹುದು ಮಸಾಲ ಶೇಂಗಾ..! ಮಾಡೋದು ಹೇಗೆ?
ಸಂಜೆ ವೇಳೆ ಸ್ನ್ಯಾಕ್ಸ್ ತಿನ್ನೋದು ಹಲವರ ಹವ್ಯಾಸ ಆಗಿರುತ್ತೆ. ಹೀಗಾಗಿ ಬಹುಪಾಲು ಮಂದಿ ಸಂಜೆ ವೇಳೆ ರಸ್ತೆ ಬದಿ ತಿಂಡಿ ತಿನ್ನುವ ಅಭ್ಯಾಸ ಸಹ ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ಮನೆಯಲ್ಲೇ ಮಾಡಿ ಸವಿಯಲು ಮುಂದಾಗುತ್ತಾರೆ. ಮತ್ತೆ ಕೆಲವರು ಅಂಗಡಿ, ಬೇಕರಿಯಲ್ಲಿ ಸಿಗುವ ಕರಿದ ತಿಂಡಿಗಲ ಸವಿಯಲು ಇಷ್ಟಪಡುತ್ತಾರೆ.
ಅದರಲ್ಲೂ ಮಕ್ಕಳಂತು ಈ ಕರಿದ ತಿಂಡಿಗಳ ಇಷ್ಟಪಡುತ್ತಾರೆ. ಮನೆಯಲ್ಲಿ ಮಾಡುವ ತಿಂಡಿಯನ್ನ ಊಟ ಮಾಡದೆ ಅದನ್ನೇ ಸವಿಯುತ್ತಾರೆ. ಅದ್ರಲ್ಲೂ ಕರಿದ ಮಸಾಲೆ ಶೇಂಗಾ ಅಂದ್ರೆ ಎಲ್ಲಾ ವಯಸ್ಸಿನವರಿಗೂ ಅಚ್ಚುಮೆಚ್ಚು. ಖಾರ ಖಾರವಾಗಿ ಸಂಜೆ ವೇಳೆ ಸವಿಯಲು ಇದ್ದರೆ ತಿನ್ನುತ್ತಲೇ ಇರುತ್ತಾರೆ.

ಈ ಮಸಾಲೆ ಶೇಂಗಾ ಬೇಕರಿಯಲ್ಲಿ ಹಾಗೂ ಅಂಗಡಿಯಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತದೆ. ಇದರ ರುಚಿಗೆ ಫಿದಾ ಆಗದವರೇ ಇಲ್ಲ. ಹಾಗಾದ್ರೆ ಈ ಮಸಾಲೆಯುಕ್ತ ಶೇಂಗಾವನ್ನ ಮನೆಯಲ್ಲಿ ಮಾಡುವುದು ಹೇಗೆ? ಮಸಾಲೆ ಶೇಂಗಾ ಮಾಡಲು ಬೇಕಾಗುವ ಪದಾರ್ಥಗಳು, ಮಸಾಲೆ ಶೇಂಗಾ ಮಾಡುವ ವಿಧಾನವೇನು ಎಂಬುದನ್ನು ನೋಡಿ.
ಮಸಾಲೆ ಶೇಂಗಾ ಮಾಡಲು ಬೇಕಾಗುವ ಪದಾರ್ಥಗಳು
- ಶೇಂಗಾ -250 ಗ್ರಾಮ್
- ಎಣ್ಣೆ
- ಕರಿಬೇವು
- ಖಾರದ ಪುಡಿ
- ಗರಂ ಮಸಾಲ
- ಉಪ್ಪು
ಮಸಾಲೆ ಶೇಂಗಾ ಮಾಡುವುದು ಹೇಗೆ ?
ಮೊದಲು ಒಂದು ಪಾನ್ ಅಥವಾ ಪಾತ್ರೆಯಲ್ಲಿ ಶೇಂಗಾವನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಸಿಪ್ಪೆ ಬಿಡುವಷ್ಟು ಹದದಲ್ಲಿ ಅದನ್ನು ಹುರಿದುಕೊಳ್ಳಬೇಕು. 2 ರಿಂದ 3 ನಿಮಿಷ ಹುರಿದರೆ ಸಾಕಾಗುತ್ತದೆ. ಬಳಿಕ ಒಲೆ ಆಫ್ ಮಾಡಿ ಶೇಂಗಾ ಬೀಜ ತಣ್ಣಗಾಗಲು ಬದಿಗಿಡಿ.
ಕುಕ್ಕರ್ನಲ್ಲಿ ಮಿಕ್ಸ್ ತರಕಾರಿ ಸಾಂಬಾರ್..! ಇಲ್ಲಿದೆ ಸಿಂಪಲ್ ರೆಸಿಪಿ!
ಈಗ ಒಂದು ಬೌಲ್ನಲ್ಲಿ ಖಾರದ ಪುಡಿ ತೆಗೆದುಕೊಳ್ಳಿ, 2 ಸ್ಪೂನ್ ಖಾರದ ಪುಡಿಗೆ ಉಪ್ಪು, ಗರಂ ಮಸಾಲ ಪುಡಿ ಹಾಕಿಕೊಂಡು ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಿ. ಮೀನು ಫ್ರೈ ಮಾಡುವ ಖಾರದಂತೆ ಹದ ಬರುವಷ್ಟು ಪೇಸ್ಟ್ ಮಾಡಿಕೊಳ್ಳಿ. ಈಗ ಹುರಿದ ಶೇಂಗವನ್ನು ಒಂದು ಪ್ಲೇಟ್ಗೆ ಹಾಕಿಕೊಳ್ಳಿ.
ಈಗ ರೆಡಿ ಮಾಡಿಕೊಂಡ ಖಾರವನ್ನು ಶೇಂಗಕ್ಕೆ ಹಾಕಿಕೊಂಡಿ ಚೆನ್ನಾಗಿ ಎಲ್ಲಾ ಶೇಂಗಾ ಖಾರದಲ್ಲಿ ಮುಳುಗುವಂತೆ ಕಲಸಿಕೊಳ್ಳಿ. ಕಲಸಿಕೊಂಡ ಬಳಿಕ ಖಾರ ಒಣಗಲು ಒಂದು 5 ನಿಮಿಷಗಳ ಕಾಲ ಬಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ನಿಮಿಷ ಬಿಟ್ಟು ಎಲ್ಲಾ ಶೇಂಗಾವನ್ನು ಅದಕ್ಕೆ ಹಾಕಿಕೊಳ್ಳಿ. ಉರಿ ಸಣ್ಣದಾಗಿರಲಿ. ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ 5 ರಿಂದ 8 ನಿಮಿಷದ ವರೆಗೂ ಚೆನ್ನಾಗಿ ಹುರಿದುಕೊಳ್ಳಿ.
ಬಳಿಕ ರೆಡಿಯಾದ ಶೇಂಗಾವನ್ನು ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಮಸಲಾ ಶೇಂಗಾ ಸವಿಯಲು ಸಿದ್ಧವಾಗುತ್ತದೆ. ನಿಮಗೆ ಎಷ್ಟು ಬೇಕೋ ಅಷ್ಟು ಖಾರ ಹಾಕಿಕೊಂಡು ಸವಿಯಬಹುದು. ಇದನ್ನು ಸಂಜೆಯ ಸ್ನ್ಯಾಕ್ಸ್ ವೇಳೆ ಸವಿಯಲು ರೆಡಿಯಾಗಿರುತ್ತದೆ. ಇದನ್ನು ಒಳ್ಳೆಯ ಸ್ಟೀಲ್ ಪಾತ್ರೆಯಲ್ಲಿ ಗಾಳಿಯಾಡದಂತೆ ಇಟ್ಟರೆ ಸುಮಾರು 1 ತಿಂಗಳ ಕಾಲ ಇಟ್ಟು ಸವಿಯಬಹುದು.
ಮದುವೆ ಮನೆ ರುಚಿಯ ಎಲೆ ಕೋಸಿನ ಪಲ್ಯ ಮಾಡಿ ನೋಡಿ..!
ಜೊತೆಗೆ ಮನೆಗೆ ಯಾರಾದರು ಅತಿಥಿಗಳು ಬಂದಾಗಲು ಇದನ್ನು ಸಿಹಿ ತಿಂಡಿಯ ಜೊತೆಗೆ ನೀಡಬಹುದು. ಅಂಗಡಿ, ಬೇಕರಿಯಿಂದ ತಂದಿರುವ ತಿಂಡಿಗಿಂತ ನೀವೆ ಮನೆಯಲ್ಲಿ ಮಾಡಿದ ಈ ಮಸಾಲೆ ಶೇಂಗಾ ಅವರಿಗೆ ರುಚಿ ನೀಡಲಿದೆ. ಜೊತೆಗೆ ತಿನ್ನಲು ಬಯಸುತ್ತಾರೆ. ಕೆಲವರು ಇದನ್ನು ಎಣ್ಣೆಯಲ್ಲಿ ಹುರಿದುಕೊಂಡು ಸಹ ಮಾಡುತ್ತಾರೆ. ಆದರೆ ಈ ರೀತಿ ಡ್ರೈ ಮಾಡುವುದು ಹೆಚ್ಚು ರುಚಿ ನೀಡಲಿದೆ. ಅದರಲ್ಲೂ ಈ ಶೇಂಗಾ ಆರೋಗ್ಯಕ್ಕೂ ಬಹಳ ಉತ್ತಮ ಅಂಶವಾಗಿದೆ.



Click it and Unblock the Notifications