Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕುಕ್ಕರ್ನಲ್ಲಿ ಮಿಕ್ಸ್ ತರಕಾರಿ ಸಾಂಬಾರ್..! ಇಲ್ಲಿದೆ ಸಿಂಪಲ್ ರೆಸಿಪಿ!
ಮನೆಯಲ್ಲಿ ಊಟಕ್ಕೆ ಸಾಂಬಾರ್ ಮಾಡುವುದು ಅಂದ್ರೆ ಗೃಹಿಣಿಯರಿಗೆ ಒಂದು ಸವಾಲಿನ ಕೆಲಸ. ಯಾಕಂದ್ರೆ ಹತ್ತಾರು ತರಕಾರಿಗಳಲ್ಲಿ ಯಾವುದು ಬೆಸ್ಟ್ ಎಂದು ಆರಿಸಬೇಕು. ಆದ್ರೆ ಆವ ತರಕಾರಿಯನ್ನ ಹೇಗೆ ಸಾಂಬಾರ್ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಇನ್ನು ಮೂರ್ನಾಲ್ಕು ತರಕಾರಿಯನ್ನು ಸೇರಿಸಿ ಮಾಡುವ ಮಿಕ್ಸ್ ತರಕಾರಿ ಸಾಂಬಾರ್ ರುಚಿಕರವಾಗಿರಲಿದೆ.
ಮಿಕ್ಸ್ ತರಕಾರಿ ಸಾಂಬಾರ್ ಎಲ್ಲಾ ಸಾಂಬಾರ್ಗಿಂತಲೂ ರುಚಿಕರವಾಗಿರುತ್ತೆ. ಎಲ್ಲಾ ತರಕಾರಿಗಳು ಬೆರೆತಿರುವ ಕಾರಣ ಅತ್ಯುತ್ತಮ ರುಚಿ ಹಾಗೂ ಮಾಡುವುದು ಸಹ ತುಂಬಾನೆ ಸುಲಭವಾಗಿರುತ್ತದೆ. ಆದ್ರೆ ಈ ಸಾಂಬಾರ್ ಅನ್ನು ನೀವೇನಾದ್ರು ಕುಕ್ಕರ್ನಲ್ಲಿ ಮಾಡಿ ನೋಡಿದ್ದೀರಾ?

ಸಾಮಾನ್ಯವಾಗಿ ಸಾಂಬಾರ್ ಅನ್ನು ತೆರೆದ ಪಾತ್ರೆಯಲ್ಲಿ ಮಾಡಲಾಗುತ್ತದೆ. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ ಒಲೆಯ ಪಕ್ಕದಲ್ಲೇ ನಿಂತು ಈ ಸಾಂಬಾರ್ ಮಾಡಬೇಕಾಗುತ್ತದೆ. ಆದ್ರೆ ನಾವಿಂದು ಕುಕ್ಕರ್ನಲ್ಲಿ ಮಿಕ್ಸ್ ತರಕಾರಿ ಸಾಂಬಾರ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಮಿಕ್ಸ್ ತರಕಾರಿ ಸಾಂಬಾರ್ ಅನ್ನು ಕುಕ್ಕರ್ನಲ್ಲಿ ಮಾಡುವುದು ಹೇಗೆ? ಈ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದುವೆ ಮನೆ ರುಚಿಯ ಎಲೆ ಕೋಸಿನ ಪಲ್ಯ ಮಾಡಿ ನೋಡಿ..!
ಮಿಕ್ಸ್ ತರಕಾರಿ ಸಾಂಬಾರ್ ಮಾಡಲು ಬೇಕಾಗುವ ವಸ್ತುಗಳು
ಆಲೂಗಡ್ಡೆ - 2
ಟೊಮೆಟೋ- 3
ಈರುಳ್ಳಿ -5
ಕ್ಯಾರೇಟ್- 4
ಬೀನ್ಸ್ - 20
ಕರಿಬೇವು
ಕೊತ್ತಂಬರಿ ಸೊಪ್ಪು
ತೊಗರಿ ಬೇಳೆ
ಖಾರದ ಪುಡಿ
ಎಣ್ಣೆ
ಉಪ್ಪು
ಬೆಲ್ಲ
ತೆಂಗಿನ ಕಾಯಿ
ಹುಣಸೆ ಹುಳಿ
ಸಾಸಿವೆ
ಜೀರಿಗೆ ಒಣ ಮೆಣಸು
ಸಾಂಬಾರ್ ಮಸಾಲ
ಮಿಕ್ಸ್ ತರಕಾರಿ ಸಾಂಬಾರ್ ಮಾಡುವ ವಿಧಾನ
ಮೊದಲು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು 2 ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ಇದಕ್ಕೆ ಎಲ್ಲಾ ತರಕಾರಿಗಳು, ಈರುಳ್ಳಿ, ತೊಗರಿ ಬೇಳೆ, ಟೊಮೆಟೋ, ಕರಿಬೇವು, ಕೊತ್ತಂಬರಿ, ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಎಲ್ಲಾ ತರಕಾರಿ ಮುಳುಗುವಷ್ಟು ನೀರು ಹಾಕಿಕೊಂಡಿರಬೇಕು. ಬಳಿಕ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನ ಕಾಯಿ, ಖಾರದ ಪುಡಿ, ಉಪ್ಪು, ಹುಣಸೆ ಹುಳಿ, ಬೆಲ್ಲ, ಮಸಾಲಪುಡಿ ಹಾಗೂ ಸ್ವಲ್ಪವೇ ನೀರು ಹಾಕಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಂಡು ಬದಿಗಿಡಿ. ಈಗ ಕುಕ್ಕರ್ 2 ಸೀಟಿ ಹೊಡೆದ ಬಳಿಕ ಅದರ ಗ್ಯಾಸ್ ಹೋದ ಬಳಿಕ ಅದರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ತಿಂಗಳ ಕಾಲ ಇಡಬಹುದಾದ ಶೇಂಗಾ ಚಟ್ನಿ ಪುಡಿ ಮಾಡಿ..! ರೆಸಿಪಿ ಇಲ್ಲಿದೆ
ಈಗ ರುಬ್ಬಿಕೊಂಡು ಪೇಸ್ಟ್ ಮಾಡಲಾದ ಮಸಾಲೆಯನ್ನು ಅದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಒಲೆಯ ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ಸ್ವಲ್ಪ ನೀರು ಜಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. ಈಗ ಒಗ್ಗರಣೆ ಮಾಡಿಕೊಳ್ಳಿ.
ಸಣ್ಣ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ ಒಂದು ನಿಮಿಷ ಬಿಟ್ಟು ಅದನ್ನು ಕುಕ್ಕರ್ನಲ್ಲಿರುವ ಸಾಂಬಾರ್ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಒಂದು ಕುದಿ ಬಂದ ಬಳಿಕ ಟೆಸ್ಟ್ ನೋಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಮಿಕ್ಸ್ ತರಕಾರಿ ಸಾಂಬಾರ್ ರೆಡಿಯಾಗುತ್ತದೆ. ಇದರ ರುಚಿ ನೋಡಿದರೆ ನೀವು ಮತ್ತೆ ಮತ್ತೆ ಸವಿಯುತ್ತೀರಿ.
ಇದು ಊಟದ ಜೊತೆ ಇಡ್ಲಿ, ದೋಸೆಗೂ ಹೇಳಿ ಮಾಡಿಸಿದ ಸಾಂಬಾರ್ ಆಗಿರಲಿದೆ. ನೀವು ಬೇಕಾದರೆ ಮನೆಯಲ್ಲೇ ಮಾಡಿರುವ ಸಾಂಬಾರ್ ಮಸಾಲ ಹಾಕಿಕೊಂಡು ಇದನ್ನು ಮಾಡಬಹುದು.



Click it and Unblock the Notifications
