Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ..! ಒಮ್ಮೆ ರುಚಿ ನೋಡಿ..!
ಊಟ, ತಿಂಡಿ ಯಾವುದೇ ಇರಲಿ ಅಲ್ಲಿ ಸೈಡ್ ಡಿಶ್ ಪಲ್ಯ ಇರಲೇ ಬೇಕು. ಪಲ್ಯ ಇಲ್ಲದಿದ್ದರೆ ಊಟದ ರುಚಿಯೇ ಗೊತ್ತಾಗುವುದಿಲ್ಲ. ಹೀಗಾಗಿ ಯಾವುದಾದರೊಂದು ತರಕಾರಿ ಅಥವಾ ಕಾಳಿನ ಪಲ್ಯ ಮಾಡಿದರೆ ಊಟ ಮತ್ತಷ್ಟು ರುಚಿ ನೀಡುತ್ತದೆ. ಜೊತೆಗೆ ಆ ಊಟ ಸಂಪೂರ್ಣ ಆಗಿರುವ ಭಾವನೆ ಮೂಡುತ್ತದೆ.
ಒಂದೆ ಪಲ್ಯ ಊಟಕ್ಕೆ, ತಿಂಡಿಗೆ, ಚಪಾಟಿ, ಪರೋಟ, ದೋಸೆ ಹೀಗೆ ಎಲ್ಲಾ ಖಾದ್ಯಗಳಿಗೂ ರುಚಿ ನೀಡಬೇಕು ಎನಿಸಿದರೆ ನೀವು ಉತ್ತರ ಕರ್ನಾಟಕ ಶೈಲಿಯಲ್ಲಿ ಹೆಸರು ಕಾಳಿನ ಪಲ್ಯ ಮಾಡಿ ನೋಡಿ. ನಾವು ಈ ಮೊದಲೇ ಹಲವು ರೀತಿಯಲ್ಲಿ ಹೆಸರು ಕಾಳಿನಿಂದ ಮಾಡಬಹುದಾದ ಪಲ್ಯವನ್ನು ತಿಳಿಸಿದ್ದೇವೆ. ಅದರೆ ಇಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಈ ಕಾಳಿನ ಪಲ್ಯ ಮಾಡುವುದು ಹೇಗೆ ಎಂದು ತಿಳಿಯೋಣ.

ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡುವ ಈ ಹೆಸರು ಕಾಳಿನ ಪಲ್ಯವು ತುಂಬಾನೆ ರುಚಿ ನೀಡಲಿದೆ. ಹಾಗಾದ್ರೆ ಈ ಪಲ್ಯ ಮಾಡಲು ಬೆಕಾಗುವ ಪದಾರ್ಥಗಳು ಏನು? ಯಾವ ವಸ್ತುಗಳ ಬಳಸಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಳಿದ ಅನ್ನದಿಂದ ಮೃದುವಾದ ವಡೆ ಮಾಡಿ ನೋಡಿ..! 10 ನಿಮಿಷ ಸಾಕು..!
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಹೆಸರು ಕಾಳು
- ಸಬ್ಬಸಿಗೆ ಸೊಪ್ಪು
- ಜೀರಿಗೆ
- ಬೆಳ್ಳುಳ್ಳಿ-1
- ಮೆಣಸಿನಕಾಯಿ-5
- ಸಾಸಿವೆ - 1/2 ಟೀಸ್ಪೂನ್
- ಈರುಳ್ಳಿ - 2
- ಕರಿಬೇವಿನ ಎಲೆಗಳು - 1 ಚಮಚ
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1 ಚಮಚ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ ಮಾಡುವ ವಿಧಾನ
ಮೊದಲು ಈ ಹೆಸರು ಕಾಳನ್ನು ರಾತ್ರಿಯೇ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಪಲ್ಯ ಮಾಡುವ ವೇಳೆ ನೀರು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಹೆಸರು ಕಾಳು ಹಾಕಿಕೊಂಡು ಬೇಯಿಸಿಕೊಳ್ಳಿ.
ಬಳಿಕ ಇದಕ್ಕೆ ಸಬ್ಬಸಿಗೆ ಸೊಪ್ಪು ಹಾಕು ಉಪ್ಪು ಹಾಕಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಿ. ಒಟ್ಟು 15 ನಿಮಿಷ ಬೇಯಿಸಿದರೆ ಹೆಸರು ಕಾಳು ಬೇಯುತ್ತದೆ. ಇನ್ನೊಂದು ಕಡೆ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ. ಮೊದಲು ಒಂದು ಸಣ್ಣ ಮಿಕ್ಸಿ ಜಾರ್ಗೆ ಜೀರಿಗೆ, ಉಪ್ಪು, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿಕೊಂಡು ರುಬ್ಬಿಕೊಳ್ಳಿ ತರಿತರಿಯಾಗಿ ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡು ವಸ್ತುಗಳನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಕುಕ್ಕರ್ನಲ್ಲಿ ಮಿಕ್ಸ್ ತರಕಾರಿ ಸಾಂಬಾರ್..! ಇಲ್ಲಿದೆ ಸಿಂಪಲ್ ರೆಸಿಪಿ!
ಈಗ ಒಲೆ ಮೇಲೆ ಇಟ್ಟು ಬೇಯಿಸಿಕೊಂಡಿರುವ ಹೆಸರುಕಾಳನ್ನು ಬಸಿದುಕೊಂಡು ನೀರು ಬೇರೆ ಮಾಡಿಕೊಳ್ಳಿ. ಈಗ ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ ಹಾಕಿಕೊಳ್ಳಿ ಬಳಿಕ ಅದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡ ವಸ್ತುಗಳ ಹಾಕಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ಅರಶಿನ ಸಹ ಹಾಕಿಕೊಳ್ಳಿ.
ಎರಡು ನಿಮಿಷದ ವರೆಗೂ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಬಸಿದುಕೊಂಡಿರುವ ಹೆಸರು ಕಾಳನ್ನು ಹಾಕಿ ಮಿಕ್ಸ್ ಮಾಡಿ. 2 ನಿಮಿಷಗಳ ಕಾಲ ಮಿಕ್ಸ್ ಮಾಡಿದರೆ ಸಾಕಾಗುತ್ತದೆ. ಅದರಲ್ಲಿರುವ ನೀರು ಡ್ರೈ ಆಗುವವರೆಗೂ ಫ್ರೈ ಮಾಡಿದರೆ ಸಾಕು. ಈಗ ನಿಮ್ಮ ಮುಂದೆ ಹೆಸರು ಕಾಳಿನ ಪಲ್ಯ ರೆಡಿಯಾಗಿರುತ್ತದೆ. ಇದು ಊಟ, ಚಪಾತಿಗೆ ಹೇಳಿ ಮಾಡಿಸಿದ ಪಲ್ಯ ಆಗಿರಲಿದೆ.



Click it and Unblock the Notifications