For Quick Alerts
ALLOW NOTIFICATIONS  
For Daily Alerts

ರೆಸಿಪಿ: ತುಂಬಾ ಟೇಸ್ಟ್ ಆಗಿದೆ ದಾಸವಾಳದ ಮೊಸರು ಗೊಜ್ಜು

Posted By:
|

ದಾಸವಾಳ ಹೂವು ಭಾರತದ ಪ್ರತಿಯೊಂದು ಪ್ರದೇಶದಲ್ಲಿಯೂ ಬೆಳೆಯುವ ಪುಷ್ಪ. ಹೆಚ್ಚಿನ ಆರೈಕೆಯನ್ನು ಬೇಡದೆ ಸುಲಭವಾಗಿ ಬೆಳೆಯುವ ಗಿಡ ಇದು. ಕೇವಲ ದೇವರ ಪೂಜೆಗೆ ಮಾತ್ರವಲ್ಲ ಬದಲಾಗಿ ದಾಸವಾಳದ ಆರೋಗ್ಯ ಲಾಭಗಳು ಹತ್ತು ಹಲವು. ಕೂದಲಿನ ಆರೈಕೆಯಲ್ಲಿ ಇದರದ್ದು ಬಹಳ ಮುಖ್ಯವಾದ ಪಾತ್ರ. ಶಾಂಪೂ, ಕಂಡೀಷನರ್ ಗಳಲ್ಲಿ ಇದನ್ನು ಬಳಕೆ ಮಾಡುವುದು ಎಲ್ಲರಿಗೂ ತಿಳಿದಿದೆ. ಆದರೆ ದಾಸವಾಳ ಹೂವಿನಿಂದ ರುಚಿರುಚಿಯಾದ ಅಡುಗೆಯನ್ನು ತಯಾರಿಸಬಹುದು.

ಬಿಳಿ ದಾಸವಾಳ ಹೂವಿನಿಂದ ಗರಿಗರಿಯಾದ ಬೊಂಡಾ ತಯಾರಿಸುವುದನ್ನು ನೀವು ಕೇಳಿರಬಹುದು. ಇವತ್ತು ನಾವು ಮತ್ತೊಂದು ಹೊಸ ರೆಸಿಪಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ. ಅದುವೇ ಕೆಂಪು ದಾಸವಾಳ ಹೂವಿನ ಮೊಸರು ಗೊಜ್ಜು.

Hibiscus raita recipe step by step
Prep Time
5 Mins
Cook Time
5M
Total Time
10 Mins

Recipe By:

Recipe Type:

Serves:

Ingredients
  • • ಕೆಂಪು/ಬಿಳಿ ದಾಸವಾಳದ ಹೂವುಗಳು (ನಾವಿಲ್ಲಿ ಕೆಂಪು ದಾಸವಾಳದ ಹೂವುಗಳನ್ನು ಬಳಸಿದ್ದೇವೆ - 10 ರಿಂದ 12 ಹೂವುಗಳು)

    • ಮಧ್ಯಮ ಗಾತ್ರದ ಎರಡು ಈರುಳ್ಳಿ

    • ಉದ್ದಿನಕಾಳು - ಕಾಲು ಟೀ ಸ್ಪೂನ್

    • ಸಾಸಿವೆ ಕಾಳು - ಕಾಲು ಟೀ ಸ್ಪೂನ್

    • ಬ್ಯಾಡಗಿ ಒಣ ಮೆಣಸು - ಒಂದರಿಂದ ಎರಡು

    • ಇಂಗು - ಚಿಟಿಕೆ

    • ಮೊಸರು - ಕಾಲು ಲೀಟರ್

    • ಉಪ್ಪು - ರುಚಿಗೆ ತಕ್ಕಷ್ಟು

    • ಖಾರ ಬಯಸುವವರು ಒಂದೆರಡು ಹಸಿ ಮೆಣಸನ್ನು ಬಳಸಬಹುದು

    • ಕೊಬ್ಬರಿ ಎಣ್ಣೆ (ಅಡುಗೆ ಎಣ್ಣೆ) - ಎರಡು ಟೇಬಲ್ ಸ್ಪೂನ್

Red Rice Kanda Poha
How to Prepare
  • ಮೊದಲಿಗೆ ದಾಸವಾಳದ ಹೂವುಗಳನ್ನು ಚೆನ್ನಾಗಿ ತೊಳೆದು ಅದರ ಪಕಳೆ (ದಳ)ಗಳನ್ನು ಮಾತ್ರವೇ ಸಣ್ಣದಾಗಿ ಹೆಚ್ಚಿಕೊಳ್ಳಿ.

    ಪರಾಗದ ಭಾಗಗಳನ್ನು ಕತ್ತರಿಸಿ ತೆಗೆಯಿರಿ.

    ಪರಾಗದ ಭಾಗದ ದಂಟನ್ನು ಬಳಕೆ ಮಾಡಿದರೆ ಗೊಜ್ಜು ಸ್ವಲ್ಪ ಅಂಟಂಟಾಗುವ ಸಾಧ್ಯತೆ ಇರುತ್ತದೆ.

    ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಹಸಿ ಈರುಳ್ಳಿಯನ್ನು ಸೇರಿಸಿ.

    ನಂತರ ಎರಡು ಟೇಬಲ್ ಸ್ಪೂನ್ ಎಣ್ಣೆ, ಸಾಸಿವೆಕಾಳು, ಉದ್ದಿನಕಾಳು, ಚಿಟಿಕೆ ಇಂಗಿನ ಪುಡಿ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿ.

    ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

    ಊಟದ ಸಮಯಕ್ಕೆ ಸರಿಯಾಗಿ ಈ ಮಿಶ್ರಣಕ್ಕೆ ಮೊಸರು ಸೇರಿಸಿಕೊಂಡರೆ ರುಚಿರುಚಿಯಾದ ದಾಸವಾಳ ಹೂವಿನ ಮೊಸರು ಗೊಜ್ಜು ರೆಡಿ.

    ಬಿಸಿಬಿಸಿ ಅನ್ನಕ್ಕೆ ಕಲಸಿಕೊಂಡು ಸವಿಯಲು ಬೊಂಬಾಟ್ ಆಗಿರುತ್ತದೆ.

Instructions
  • ಊಟದ ಹೊತ್ತಿಗೆ ಮೊಸರನ್ನು ಸೇರಿಸಿ.
  • ಒಗ್ಗರಣೆಯನ್ನೇ ಮೊದಲು ಮಾಡಿಕೊಳ್ಳಬೇಕು.
  • ಊಟಕ್ಕಿಂತ ತುಂಬಾ ಮುಂಚೆಯೇ ಮೊಸರು ಸೇರಿಸಿ ಒಗ್ಗರಣೆ ಮಾಡಿಕೊಂಡರೆ ಅಷ್ಟೇನು ರುಚಿ ಅನ್ನಿಸುವುದಿಲ್ಲ, ಲೋಳೆಯಾಗುವ ಸಾಧ್ಯತೆ ಇರುತ್ತದೆ.
Nutritional Information

ಮಾಡುವ ವಿಧಾನ

ಮೊದಲಿಗೆ ದಾಸವಾಳದ ಹೂವುಗಳನ್ನು ಚೆನ್ನಾಗಿ ತೊಳೆದು ಅದರ ಪಕಳೆ (ದಳ)ಗಳನ್ನು ಮಾತ್ರವೇ ಸಣ್ಣದಾಗಿ ಹೆಚ್ಚಿಕೊಳ್ಳಿ.ಪರಾಗದ ಭಾಗಗಳನ್ನು ಕತ್ತರಿಸಿ ತೆಗೆಯಿರಿ.

Hibiscus raita

ಪರಾಗದ ಭಾಗದ ದಂಟನ್ನು ಬಳಕೆ ಮಾಡಿದರೆ ಗೊಜ್ಜು ಸ್ವಲ್ಪ ಅಂಟಂಟಾಗುವ ಸಾಧ್ಯತೆ ಇರುತ್ತದೆ.ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಹಸಿ ಈರುಳ್ಳಿಯನ್ನು ಸೇರಿಸಿ.

Hibiscus raita

ನಂತರ ಎರಡು ಟೇಬಲ್ ಸ್ಪೂನ್ ಎಣ್ಣೆ, ಸಾಸಿವೆಕಾಳು, ಉದ್ದಿನಕಾಳು, ಚಿಟಿಕೆ ಇಂಗಿನ ಪುಡಿ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿ.ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

Hibiscus raita

ಊಟದ ಸಮಯಕ್ಕೆ ಸರಿಯಾಗಿ ಈ ಮಿಶ್ರಣಕ್ಕೆ ಮೊಸರು ಸೇರಿಸಿಕೊಂಡರೆ ರುಚಿರುಚಿಯಾದ ದಾಸವಾಳ ಹೂವಿನ ಮೊಸರು ಗೊಜ್ಜು ರೆಡಿ.

Hibiscus raita

ಬಿಸಿಬಿಸಿ ಅನ್ನಕ್ಕೆ ಕಲಸಿಕೊಂಡು ಸವಿಯಲು ಬೊಂಬಾಟ್ ಆಗಿರುತ್ತದೆ.

ದಾಸವಾಳದ ಗೊಜ್ಜಿನ ಆರೋಗ್ಯ ಲಾಭಗಳು

ಈ ರೆಸಿಪಿ ಸೇವಿಸಿದರೆ ದೇಹಕ್ಕೆ ತಂಪಾಗುತ್ತದೆ. ಉರಿಮೂತ್ರದಂತ ಸಮಸ್ಯೆಗೆ ಈ ರೆಸಿಪಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದಾಸವಾಳದ ಹೂವು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಬೇಸಿಗೆಯ ಕಾಲದಲ್ಲಿ ಈ ರೆಸಿಪಿ ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿ ಆರೋಗ್ಯವಾಗಿರುವುದಕ್ಕೆ ಸಹಾಯಕ. ಮಧುಮೇಹಿಗಳಿಗೂ ಕೂಡ ಇದು ಅತ್ಯುತ್ತಮ ರೆಸಿಪಿ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ದಾಸವಾಳದ ಹೂವು ಅತ್ಯುತ್ತಮವಾಗಿರುವುದರಿಂದಾಗಿ ಈ ಗೊಜ್ಜನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಹೊರಹಾಕಲ್ಪಡುತ್ತದೆ.

ರಕ್ತ ಹೀನತೆಯಿಂದ ಬಳಲುತ್ತಿರುವವರು ದಾಸವಾಳ ಹೂವಿನ ಮೊಸರು ಗೊಜ್ಜು ಸೇವಿಸುವುದರಿಂದಾಗಿ ರಕ್ತಕಣಗಳ ಸಂಖ್ಯೆಯಲ್ಲಿ ಅಧಿಕವಾಗುವುದನ್ನು ಗಮನಿಸಬಹುದು. ಮೂತ್ರನಾಳದ ಸೋಂಕು ಆಗಿದ್ದಲ್ಲಿ ಈ ರೆಸಿಪಿ ಸಹಾಯಕ. ಹೃದಯದ ಆರೋಗ್ಯ ಹೆಚ್ಚಿಸುವುದಕ್ಕೂ ಕೂಡ ನೆರವಾಗುತ್ತದೆ.

[ 3.5 of 5 - 82 Users]
X
Desktop Bottom Promotion