Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಮ್ಮಿ ಯಮ್ಮಿ ದಾಸವಾಳ ಸೊಪ್ಪಿನ ಕಡುಬು
ನಮ್ಮ ನಡುವೆ ಪ್ರಕೃತಿಯಲ್ಲಿ ಅನೇಕ ರೀತಿಯ ಆಯುರ್ವೇದ ಸಸ್ಯಗಳಿವೆ. ಆದರೆ ಅದರ ಉಪಯೋಗವನ್ನು ನಾವು ತಿಳಿದಿಲ್ಲ ಅಥವಾ ಮರೆತು ಬಿಟ್ಟಿದ್ದೇವೆ. ಕೆಲವು ಸಸ್ಯಗಳಲ್ಲಿ ಅದರ ಹೂವು,ಎಲೆಗಳು ಸೇರಿದಂತೆ ಎಲ್ಲವೂ ಕೂಡ ಬಹುಪಯೋಗಿ.
ಈಗಾಗಲೇ ನಿಮಗೆ ತಿಳಿದಿರುವಂತೆ ದಾಸವಾಳವು ಬಹುಪಯೋಗಿ ಆಯುರ್ವೇದೀಯ ಸಸ್ಯ. ಅದರ ಉಪಯೋಗಗಳು ಹತ್ತುಹಲವು.

ದಾಸವಾಳವನ್ನು ಸೌಂದರ್ಯವರ್ಧಕವಾಗಿ ಉಪಯೋಗಿಸುವುದರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ದಾಸವಾಳದ ಎಲೆಗಳಿಂದ ಖಾಧ್ಯವನ್ನು ಕೂಡ ತಯಾರಿಸಬಹುದು.




Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ಅಕ್ಕಿ ..3 ಪಾವು
ಉದ್ದು.. ಅರ್ಧ ಪಾವು
ದಾಸವಾಳ ಸೊಪ್ಪು.. ಎರಡು ಮುಷ್ಠಿ
ಬೆಲ್ಲ.. ಒಂದೆರಡು ಗೋಲಿಗಾತ್ರ(optional)
ಉಪ್ಪು .. ರುಚಿಗೆ ತಕ್ಕಷ್ಟು
-
ಮಾಡುವ ವಿಧಾನ..
*ಕಡುಬು ತಯಾರಿಸುವ ಹಿಂದಿನ ದಿನ ಅಕ್ಕಿಯನ್ನು ಮತ್ತು ಉದ್ದಿನ ಕಾಳುಗಳನ್ನು ನೆನೆಸಿಡಿ. ಎರಡು ಘಂಟೆಗಳ ಕಾಲ ನೆನೆಯಲಿ.
*ಮೊದಲಿಗೆ ದಾಸವಾಳ ಸೊಪ್ಪುಗಳನ್ನು ಒಂದೆರಡು ಮುಷ್ಠಿ ಅಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿ ಸೇರಿಸುವುದರಿಂದ ಸೊಪ್ಪನ್ನು ಅಧಿಕ ನುಣಿಗೊಳಿಸುವುದಕ್ಕೆ ಸಾಧ್ಯವಾಗುತ್ತದೆ.
* ಅದಕ್ಕೆ ಉದ್ದು ಸೇರಿಸಿ ನುಣ್ಣಗೆ ರುಬ್ಬಿ.
* ನಂತರ ಅಕ್ಕಿಯನ್ನು ರವೆರವೆಯಾಗುವಂತೆ ರುಬ್ಬಿ ಮೇಲಿನ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ.
*ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ಸೇರಿಸಿ ಚೆನ್ನಾಗಿ ಕೈಯಾಡಿ. ( ಸಿಹಿ ಕಡುಬು ಮಾಡುವುದಾದರೆ ಹೆಚ್ಚು ಬೆಲ್ಲವನ್ನು ಸೇರಿಸಿಕೊಳ್ಳಬಹುದು)
*ಈ ಮಿಶ್ರಣವನ್ನು ಒಂದು ರಾತ್ರಿ ಹುದುಗಲು ಬಿಡಿ.
*ಹುದುಗಿದ ಮಿಶ್ರಣವನ್ನು ಕಡುಬಿನ ಅಟ್ಟದಲ್ಲಿ ಅಥವಾ ಇಡ್ಲಿ ತಟ್ಟೆಯಲ್ಲಿ ಹಾಕಿ 30 ರಿಂದ ,35 ನಿಮಿಷ ಹಬೆಯಲ್ಲಿ ಬೇಯಿಸಿ.
*ಬೇಯಿಸಿದ ಕಡುಬನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಚಟ್ನಿಯ ಜೊತೆ, ಸಾಂಬಾರಿನ ಜೊತೆ ಸವಿಯಲು ನೀಡಿ.
*ಇಡ್ಲಿ ತಟ್ಟೆಯಲ್ಲಿ ಬೇಯಿಸಿದರೆ ಮಾಮೂಲಿ ಇಡ್ಲಿಯಂತೆಯೆ ಹಸಿರು ಬಣ್ಣದಲ್ಲಿ ಆಗುತ್ತದೆ.
- ಇದನ್ನುರುಬ್ಬುವುದಕ್ಕೆ ಗ್ರೈಂಡರ್ ಬಳಸಿದರೆ ಸೊಪ್ಪು ಸಂಪೂರ್ಣ ನುಣಿಯಾಗುವುದಿಲ್ಲ. ಮಿಕ್ಸಿ ಬಳಸಿದರೆ ಸೊಪ್ಪು ಸಂಪೂರ್ಣ ನುಣಿಯಾಗುವುದರಿಂದಾಗಿ ಕಡುಬು ಸಂಪೂರ್ಣ ಹಸಿರಾಗುತ್ತದೆ. ಈ ಕಡುಬು ಬೇಸಿಗೆಗೆ ಹೇಳಿ ಮಾಡಿಸಿದ್ದು. ಯಾಕೆಂದರೆ ದಾಸವಾಳದ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ನಾರಿನಂಶ ದೇಹಕ್ಕೆ ಲಭ್ಯವಾಗುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಇದರಿಂದ ಸರಿಯಾಗುತ್ತದೆ. ದಾಸವಾಳ ಸೊಪ್ಪಿನ ಕಡುಬು ಉರಿಮೂತ್ರ ಸಮಸ್ಯೆ ಆಗಾಗ ಎದುರಿಸುವವರಿಗೆ ಉತ್ತಮ ಆಹಾರವಾಗಿದೆ.
- ಕ್ಯಾಲೋರಿ - 100 ಗ್ರಾಂ



Click it and Unblock the Notifications