Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರುಚಿಯಲ್ಲಿ ಅಪ್ರತಿಮ, ಹೆಲ್ತ್‌ಗೆ ನಂ.1 ದೋಸೆ! ಹೆಸರುಕಾಳು ಬಳಸಿ ಮಾಡಿ ಈ ಗ್ರೀನ್ ದೋಸೆ.. ತೂಕವೂ ಇಳಿಯುತ್ತೆ
ರುಚಿಯಲ್ಲಿ ಅಪ್ರತಿಮ, ಆರೋಗ್ಯದಲ್ಲಿ ನಂಬರ್ 1 ದೋಸೆ! ಒಮ್ಮೆ ತಿಂದ್ರೆ ಪದೇ ಪದೆ ಬೇಕೆನ್ನುತ್ತೀರಿ ಈ ಗ್ರೀನ್ ದೋಸೆ. ಮಾಮೂಲಿ ದೋಸೆ (Dosa) ಬಿಟ್ಟು ಈ ಪೌಷ್ಟಿಕ ತಿಂಡಿ ಟ್ರೈ ಮಾಡಿ. ಹೌದು, ತೂಕ ಇಳಿಸಲು ಮತ್ತು ಎನರ್ಜಿ ಪಡೆಯಲು ಇದು ಬೆಸ್ಟ್ ಬ್ರೇಕ್‌ಫಾಸ್ಟ್. ಹೆಸರುಕಾಳು (Moong) ಮತ್ತು ಪಾಲಕ್ (Palak)ಬಳಸಿ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೆಳಗಿನ ಉಪಾಹಾರವು ದಿನದ ಅತ್ಯಂತ ಪ್ರಮುಖ ಊಟ ಎಂಬುದು ಸತ್ಯ. ಆದರೆ, ಪ್ರತಿದಿನ ಒಂದೇ ತೆರನಾದ ಇಡ್ಲಿ, ದೋಸೆಯನ್ನು ಸೇವಿಸಿ ಬೇಸರವಾಗಿದೆಯೇ? ಹೆಚ್ಚು ಪೌಷ್ಟಿಕಾಂಶವಿರುವ ತಿಂಡಿಯನ್ನು ಹುಡುಕುತ್ತಿದ್ದೀರಾ ನಿಮಗೆ ಮೂಂಗ್ ಪಾಲಕ್ ದೋಸೆ (Moong Palak Dosa) ಅದ್ಭುತ ಆಯ್ಕೆ. ಇದು ರುಚಿಯಲ್ಲಿ ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಾದ ಪ್ರೋಟೀನ್ ಹಾಗೂ ಕಬ್ಬಿಣಾಂಶವನ್ನು ಒದಗಿಸುತ್ತದೆ. ಈ ಹೆಸರುಕಾಳು ಪಾಲಕ್ ದೋಸೆಯ ವಿಶೇಷತೆ ತಿಳಿಯಲು ಮುಂದೆ ಓದಿ.
ದಕ್ಷಿಣ ಭಾರತೀಯ ತಿಂಡಿಗಳಲ್ಲಿ ದೋಸೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಆದರೆ, ಅಕ್ಕಿ ಮತ್ತು ಉದ್ದಿನಬೇಳೆಯಿಂದ ಮಾಡುವ ಸಾಂಪ್ರದಾಯಿಕ ದೋಸೆಗಿಂತಲೂ, ಹೆಸರುಕಾಳು ಮತ್ತು ಪಾಲಕ್ ಸೊಪ್ಪನ್ನು ಬಳಸುವ ಈ ದೋಸೆ ಹೆಚ್ಚು ಪ್ರಯೋಜನಕಾರಿ. ವಿಶೇಷವಾಗಿ ಚಳಿಗಾಲದ ಬೆಳಗುಗಳಲ್ಲಿ ಬಿಸಿಬಿಸಿಯಾದ, ಗರಿಗರಿಯಾದ ಈ ಹಸಿರು ದೋಸೆಯನ್ನು ಸವಿಯುವುದು ಮನಸ್ಸಿಗೆ ಮುದ ನೀಡುತ್ತದೆ.
ಆರೋಗ್ಯಕ್ಕೆ ಏನು ಲಾಭ?
- ಇದರಲ್ಲಿ ಫೈಬರ್ ಹೇರಳವಾಗಿರುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗಿ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ.
- ಬೆಳಗಿನ ಜಾವ ಈ ದೋಸೆ ಸೇವಿಸುವುದರಿಂದ, ದಿನವಿಡೀ ಚುರುಕಾಗಿರಲು ಬೇಕಾದ ತಕ್ಷಣದ ಚೈತನ್ಯ ದೇಹಕ್ಕೆ ಲಭಿಸುತ್ತದೆ.
- ಇದರ ಹಸಿರು ಬಣ್ಣವು ಮಕ್ಕಳಿಗೆ ಆಕರ್ಷಕವಾಗಿ ಕಾಣುತ್ತದೆ. ಇದರಿಂದ ಸೊಪ್ಪು ತಿನ್ನದ ಮಕ್ಕಳು ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.
- ಈ ದೋಸೆಯ ಹಿಟ್ಟನ್ನು ಹುದುಗಿಸುವ ಅಗತ್ಯವಿಲ್ಲ. ಹಾಗಾಗಿ, ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ಇದನ್ನು (Moong Palak Dosa Recipe) ತಕ್ಷಣವೇ ತಯಾರಿಸಬಹುದು.
ಈ ದೋಸೆಗೆ ಬೇಕಾಗುವ ಸಾಮಗ್ರಿಗಳು
• ಹೆಸರುಕಾಳು
• ಪಾಲಕ್ ಸೊಪ್ಪು
• ಹಸಿ ಮೆಣಸಿನಕಾಯಿ
• ಶುಂಠಿ
• ಜೀರಿಗೆ
• ಉಪ್ಪು
• ಎಣ್ಣೆ ಅಥವಾ ತುಪ್ಪ
• ನೀರು
ಈ ದೋಸೆ ತಯಾರಿಸುವ ವಿಧಾನ
- ಮೊದಲಿಗೆ, ಹೆಸರುಕಾಳನ್ನು ಚೆನ್ನಾಗಿ ತೊಳೆದು 4 ರಿಂದ 5 ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ನೆನೆಸಿಡಿ.
- ನಂತರ ಪಾಲಕ್ ಸೊಪ್ಪನ್ನು ಶುದ್ಧ ನೀರಿನಲ್ಲಿ ತೊಳೆದು, ದಪ್ಪನೆಯ ದಂಟನ್ನು ತೆಗೆದು ಎಲೆಗಳನ್ನು ಸಣ್ಣದಾಗಿ ಹೆಚ್ಚಿಸಿಕೊಳ್ಳಿ.
- ಮಿಕ್ಸಿ ಜಾರ್‌ಗೆ ನೆನೆಸಿದ ಹೆಸರುಕಾಳು, ಹೆಚ್ಚಿದ ಪಾಲಕ್ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ ಹಾಗೂ ಜೀರಿಗೆಯನ್ನು ಹಾಕಿ. ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ (ಹೆಚ್ಚು ತೆಳುವಾಗಬಾರದು). ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
- ದೋಸೆ ಹಂಚನ್ನು ಗ್ಯಾಸ್ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹಂಚಿಗೆ ಸ್ವಲ್ಪ ಎಣ್ಣೆ ಸವರಿ.
- ನಂತರ ಒಂದು ಚಮಚ ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ ವೃತ್ತಾಕಾರವಾಗಿ ತೆಳುವಾಗಿ ಹರಡಿ.
- ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ. ದೋಸೆ ಕೆಳಭಾಗದಲ್ಲಿ ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾದ ನಂತರ, ಅದನ್ನು ಮಗುಚಿ ಹಾಕಿ ಇನ್ನೊಂದು ಬದಿ ಕೂಡ ಸ್ವಲ್ಪ ಹೊತ್ತು ಬೇಯಿಸಿ.
ಸವಿಯುವ ವಿಧಾನ
ಈ ಪೌಷ್ಟಿಕಯುಕ್ತ ದೋಸೆಯನ್ನು ತಾಜಾ ತೆಂಗಿನಕಾಯಿ ಚಟ್ನಿ, ಬಿಸಿಬಿಸಿ ಶುಂಠಿ ಚಟ್ನಿ ಅಥವಾ ಸರಳ ಮೊಸರಿನ ಜೊತೆಗೆ ಸವಿಯಲು ಅತ್ಯಂತ ರುಚಿಕರವಾಗಿರುತ್ತದೆ. ಇದನ್ನು ಮಕ್ಕಳ ಲಂಚ್ ಬಾಕ್ಸ್‌ಗೆ ಸಹ ಕಳುಹಿಸಬಹುದು. ಇದು ರುಚಿ ಮತ್ತು ಆರೋಗ್ಯದ ಸಮತೋಲಿತ ಆಯ್ಕೆ.



Click it and Unblock the Notifications
