Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
2 ಟೊಮ್ಯಾಟೊ ಇದ್ದರೆ ಸಾಕು! ರುಬ್ಬಂಗಿಲ್ಲ, ನೆನೆಸಂಗಿಲ್ಲ.. ಈ ಸೂಪರ್ ದೋಸೆ ರೆಡಿ; ಸಿಂಪಲ್ ರೆಸಿಪಿ ಇಲ್ಲಿದೆ
ಟೊಮ್ಯಾಟೊ ಇದ್ದರೆ ಸಾಕು, ಈ ಸೂಪರ್ ತಿಂಡಿ ರೆಡಿ! ರುಬ್ಬುವ ಕೆಲಸವಿಲ್ಲ, ನೆನೆಸುವ ಹಾಗಿಲ್ಲ.. ಮನೆಯಲ್ಲೇ ಮಾಡಿ ಈಗ ಹೋಟೆಲ್ ರುಚಿ. ಹೌದು, ಬೆಳಗಿನ ಗಡಿಬಿಡಿಯಲ್ಲಿ ರುಚಿಕರವಾದ ಹಾಗೂ ಆರೋಗ್ಯಕರ ಉಪಾಹಾರ (Quick Breakfast) ತಯಾರಿಸುವುದು ಹಲವರಿಗೆ ಸವಾಲು. ಇಂತಹ ಸಂದರ್ಭಗಳಲ್ಲಿ ಟೊಮ್ಯಾಟೊ ರವೆ ದೋಸೆ (Tomato Rava Dosa) ಅತ್ಯುತ್ತಮ ಆಯ್ಕೆ.
ಹಿಟ್ಟನ್ನು ರುಬ್ಬುವ ಅಥವಾ ಹುದುಗು ಬರಿಸುವ ಅಗತ್ಯವಿಲ್ಲದೆ, ಕೇವಲ ಹತ್ತೇ ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಗರಿಗರಿಯಾದ ದೋಸೆಯನ್ನು (Dosa Recipe) ಮನೆಯಲ್ಲೇ ಸಿದ್ಧಪಡಿಸಬಹುದು. ವಿಶೇಷವಾಗಿ, ಟೊಮ್ಯಾಟೊ ಬಳಕೆ ಇರುವುದರಿಂದ ಇದು ಮಕ್ಕಳ ಅಚ್ಚುಮೆಚ್ಚಿನ ತಿಂಡಿಯಾಗುತ್ತದೆ. ಈ ಸುಲಭ ಮತ್ತು ಖಾರವಾದ ರೆಸಿಪಿ ಬಗ್ಗೆ ತಿಳಿಯಲು ಮುಂದೆ ಓದಿ.
ದೋಸೆಯು ಹಲವರ ಅಚ್ಚುಮೆಚ್ಚಿನ ಉಪಾಹಾರ. ಸಾಮಾನ್ಯವಾಗಿ ಅಕ್ಕಿ-ಬೇಳೆ ನೆನೆಸಿ, ರುಬ್ಬಿ, ಹುದುಗು ಬರಿಸುವ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಗೆ ಇನ್‌ಸ್ಟಂಟ್ ರವೆ ದೋಸೆ ಪರಿಹಾರ ನೀಡುತ್ತದೆ. ಈಗ ಅದಕ್ಕೆ ಟೊಮ್ಯಾಟೊದ ವಿಶೇಷ ಸ್ಪರ್ಶ ನೀಡುವ ಮೂಲಕ ರುಚಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಈ ದೋಸೆ ನೋಡಲು ಆಕರ್ಷಕವಾಗಿ, ತಿನ್ನಲು ಅತ್ಯಂತ ರುಚಿಕರವಾಗಿರುತ್ತದೆ. ಈ ದೋಸೆ ಮಾಡುವ ಸುಲಭ ವಿಧಾನ (Tomato Rava Dosa Recipe) ಇಲ್ಲಿದೆ.
ಟೊಮ್ಯಾಟೊ ರವೆ ದೋಸೆಗೆ ಬೇಕಾಗುವ ಸಾಮಗ್ರಿಗಳು
• ರವೆ (ಚಿರೋಟಿ ಅಥವಾ ಸೂಜಿ ರವೆ)
• ಅಕ್ಕಿ ಹಿಟ್ಟು
• ಮೈದಾ ಹಿಟ್ಟು
• ಟೊಮ್ಯಾಟೊ
• ಒಣ ಕೆಂಪು ಮೆಣಸಿನಕಾಯಿ
• ಶುಂಠಿ
• ಈರುಳ್ಳಿ
• ಕೊತ್ತಂಬರಿ ಸೊಪ್ಪು
• ಜೀರಿಗೆ
• ರುಚಿಗೆ ತಕ್ಕಷ್ಟು ಉಪ್ಪು
• ನೀರು
• ಎಣ್ಣೆ
ಟೊಮ್ಯಾಟೊ ರವೆ ದೋಸೆ ತಯಾರಿಸುವ ವಿಧಾನ
- ಮೊದಲು ಟೊಮ್ಯಾಟೊ ಹಣ್ಣುಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ.
- ನಂತರ ಮಿಕ್ಸಿ ಜಾರ್‌ಗೆ ಹೆಚ್ಚಿದ ಟೊಮ್ಯಾಟೊ, ಒಣ ಕೆಂಪು ಮೆಣಸಿನಕಾಯಿ ಹಾಗೂ ಶುಂಠಿ ತುಂಡನ್ನು ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
- ಒಂದು ದೊಡ್ಡ ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಸೇರಿಸಿ. ಇದಕ್ಕೆ ರುಬ್ಬಿಟ್ಟ ಟೊಮ್ಯಾಟೊ ಪೇಸ್ಟ್, ಹೆಚ್ಚಿದ ಈರುಳ್ಳಿ, ಜೀರಿಗೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಈಗ ಮಿಶ್ರಣಕ್ಕೆ ಹದವಾಗಿ ನೀರನ್ನು ಸೇರಿಸಿ ದೋಸೆ ಹಿಟ್ಟನ್ನು ಸಿದ್ಧಪಡಿಸಿ. ರವೆ ದೋಸೆ ಹಿಟ್ಟು ಸಾಮಾನ್ಯ ದೋಸೆ ಹಿಟ್ಟಿಗಿಂತ ತೆಳುವಾಗಿ, ಮಜ್ಜಿಗೆಯ ಹದದಲ್ಲಿರಬೇಕು.
- ನಂತರ ಈ ಹಿಟ್ಟನ್ನು 10-15 ನಿಮಿಷಗಳ ಕಾಲ ನೆನೆಯಲು ಬಿಡಿ.
- ದೋಸೆ ಕಾವಲಿಯನ್ನು ಗರಿಷ್ಠ ಉರಿಯಲ್ಲಿ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹಿಟ್ಟು ತಳದಲ್ಲಿ ಕುಳಿತಿರುವುದರಿಂದ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಬಿಸಿ ಕಾವಲಿಯ ಸುತ್ತಲೂ ತೆಳುವಾಗಿ ಹಿಟ್ಟನ್ನು ಸುರಿಯಿರಿ (ಹಿಟ್ಟನ್ನು ಹರಡಬಾರದು, ಸುರಿಯಬೇಕು). ದೋಸೆಯ ತೂತುಗಳ ಮೇಲೆ ಸ್ವಲ್ಪ ಎಣ್ಣೆ ಹಾಕಿ.
- ದೋಸೆ ಕೆಂಪಗಾಗಿ ಮತ್ತು ಗರಿಗರಿಯಾದ ನಂತರ (ಒಂದು ಬದಿ ಬೆಂದರೆ ಸಾಕು), ಅದನ್ನು ನಿಧಾನವಾಗಿ ಮಡಚಿ ಪ್ಲೇಟ್‌ಗೆ ಹಾಕಿ.
- ಇಷ್ಟು ಮಾಡಿದರೆ ಸಾಕು, ಬಿಸಿಬಿಸಿಯಾದ ಈ ಟೊಮ್ಯಾಟೊ ರವೆ ದೋಸೆ ಸವಿಯಲು ಸಿದ್ದ. ಇದು ಬೆಳಗಿನ ಅತ್ಯುತ್ತಮ ಉಪಾಹಾರ.
ಈ ದೋಸೆಯ ವಿಶೇಷತೆಗಳು
- ಟೊಮ್ಯಾಟೊ ಬಳಕೆ ದೋಸೆಗೆ ನೈಸರ್ಗಿಕವಾಗಿ ಕೆಂಪು ಬಣ್ಣ ನೀಡುವುದರಿಂದ ಇದು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತದೆ. ಜೊತೆಗೆ, ಹುಳಿ-ಖಾರದ ಸಮತೋಲಿತ ರುಚಿ ವಾವ್ ಫೀಲ್ ನೀಡುತ್ತೆ.
- ಯಾವುದೇ ಪೂರ್ವ ಸಿದ್ಧತೆಯ ಅಗತ್ಯವಿಲ್ಲದೆ, ಕೇವಲ ಹತ್ತೇ ನಿಮಿಷಗಳಲ್ಲಿ ಈ ಗರಿಗರಿಯಾದ ದೋಸೆಯನ್ನು ತಯಾರಿಸಬಹುದು. ಇದು ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆಯ ತಿಂಡಿಗೆ ಸೂಕ್ತ.
- ಈ ದೋಸೆಯು ತೆಂಗಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ ಅಥವಾ ನಿಮ್ಮ ಅಚ್ಚುಮೆಚ್ಚಿನ ಯಾವುದೇ ಸಾಂಬಾರ್ ಜತೆಗೂ ಉತ್ತಮವಾಗಿ ಹೊಂದುತ್ತದೆ.



Click it and Unblock the Notifications


