Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಔದುಂಬರ ಎಲೆಗಳ ತಂಬುಳಿ ತಿಂದರೆ ಆರೋಗ್ಯಕ್ಕೆ ಅನೇಕ ಬಳುವಳಿ
ಔದುಂಬರ ವೃಕ್ಷ ಅಥವಾ ಅತ್ತಿ ಎಲೆಗಳ ಹೆಸರನ್ನು ನೀವು ಕೇಳಿರಬಹುದು. ದೇವರ ಪೂಜಾ ಕೈಂಕರ್ಯಗಳಲ್ಲಿ ಸಮಿತ್ತಾಗಿ ಇದನ್ನು ಬಳಕೆ ಮಾಡುತ್ತಾರೆ. ಹಾಗಂತ ಇದು ಕೇವಲ ದೇವರ ಕಾರ್ಯಕ್ಕೆ ಮಾತ್ರವೇ ಸೀಮಿತವಲ್ಲ. ಬದಲಾಗಿ ಸದಾ ಹಸಿರಾಗಿರುವ ಈ ಮರವು ಔಷಧಿಗಳ ಆಗರ. ಮರದಲ್ಲಿರುವ ಎಲೆಗಳನ್ನು ಕೀಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಅಲ್ಲಲ್ಲಿ ಈ ವೃಕ್ಷದ ಚಿಗುರೆಲೆಗಳು ಹುಟ್ಟಿಕೊಂಡಿರುತ್ತದೆ. ಎಲೆಗಳನ್ನು ಕಿತ್ತಾಗ ಬಿಳಿಯ ವರ್ಣದ ದ್ರಾವಣ ದಂಟಿನಿಂದ ಹೊರಬರುತ್ತದೆ. ಇದು ಅತ್ತಿ ಗಿಡದ ವಿಶೇಷತೆ. ಔದುಂಬರ ವೃಕ್ಷವನ್ನು ಇಂಗ್ಲೀಷ್ ನಲ್ಲಿ ಫಿಗ್ ಟ್ರೀ ಎಂತಲೂ ಕರೆಯುತ್ತಾರೆ.
ಹಳ್ಳಿಗಳಲ್ಲಿ ಸದಾ ಲಭ್ಯವಿರುವ ಈ ಚಿಗುರೆಲೆಗಳು ಮಾರುಕಟ್ಟೆಯಲ್ಲಿ ಸಿಗುವುದು ಸ್ವಲ್ಪ ಅಪರೂಪವೇ ಆಗಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಔದುಂಬರ ವೃಕ್ಷದ ಎಲೆಗಳಿಂದ ರುಚಿರುಚಿಯಾದ ಅಡುಗೆಯನ್ನೂ ಮಾಡಬಹುದು. ಮಲೆನಾಡು ಭಾಗದ ಮಂದಿ ಆಗಾಗ ಈ ಅಡುಗೆಯನ್ನು ಮಾಡುತ್ತಾರೆ. ಅಂತಹ ಒಂದು ರುಚಿರುಚಿಯಾದ ರೆಸಿಪಿ ಔದುಂಬರ ಎಲೆಯ ತಂಬುಳಿ ಮಾಡುವ ವಿಧಾನವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಮಾಡುವುದು ಹೇಗೆ ಎಂಬುದು ಮಾತ್ರವಲ್ಲ ಬದಲಾಗಿ ಈ ರೆಸಿಪಿಯ ಸೇವನೆಯಿಂದ ನೀವು ಏನೆಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬ ಬಗ್ಗೆಯೂ ಕೂಡ ತಿಳಿಸಿಕೊಡುತ್ತೇವೆ.

Recipe By: Sushma chatra
Recipe Type: Sides
Serves: 4
-
ರುಚಿಕರವಾದ ಅತ್ತಿ ಎಲೆ ತಂಬುಳಿ ಆರೋಗ್ಯದ ಜತೆಗೆ ನಾಲಿಗೆಗೂ ರುಚಿಯನ್ನು ನೀಡುತ್ತದೆ. ಮೊದಲಿಗೆ ಅತ್ತಿ ಎಲೆಯ ತಂಬುಳಿ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ನೋಡೋಣ.
1. ಅತ್ತಿ ಮರದ ಚಿಗುರೆಲೆಗಳು - 20 ರಿಂದ 30
2. ಕಾಳುಮೆಣಸು - ಮೂರರಿಂದ ನಾಲ್ಕು ಕಾಳು
3. ಜೀರಿಗೆ - ಕಾಲು ಟೀ ಸ್ಪೂನ್
4. ಬಿಳಿ ಎಳ್ಳು - ಕಾಲು ಟೀ ಸ್ಪೂನ್
5. ಬೆಲ್ಲ - 50 ಗ್ರಾಂ
6. ಬೆಣ್ಣೆ ಅಥವಾ ತುಪ್ಪ - ಮೂರು ಟೇಬಲ್ ಸ್ಪೂನ್
7. ಬ್ಯಾಡಗಿ ಮೆಣಸು - 2
8. ಕಡೆದ ಮಜ್ಜಿಗೆ - ಅರ್ಧ ಲೀಟರ್
9. ಉಪ್ಪು - ರುಚಿಗೆ ತಕ್ಕಷ್ಟು
10. ತೆಂಗಿನ ತುರಿ- ಅರ್ಧ ಕಪ್ (ಬಳಸದೇ ಇದ್ದರೂ ಆದೀತು)
-
- ಒಂದು ಸ್ಪೂನ್ ತುಪ್ಪಕ್ಕೆ ಚಿಟಿಕೆ ಜೀರಿಗೆ ಮತ್ತು ಎಳ್ಳು ಹಾಕಿ ಹುರಿಯಿರಿ
- ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಕಾಳುಮೆಣಸು ಹಾಕಿ ನಂತರ ಸಣ್ಣಗೆ ಹೆಚ್ಚಿದ ಅತ್ತಿಎಲೆ ಅಥವಾ ಔದುಂಬರದ ಎಲೆಗಳನ್ನು ಹಾಕಿ ಬಾಡಿಸಿ
- ನಂತರ ಇದನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.(ತೆಂಗಿನ ತುರಿ ಬಳಸಲು ಇಚ್ಛಿಸುವವರು ಅದನ್ನೂ ಸೇರಿಸಿ ರುಬ್ಬಿ ಮತ್ತು ರುಬ್ಬಿದ ನಂತರ ಸೋಸಿಕೊಳ್ಳಿ)
- ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ, ಕಡೆದ ಮಜ್ಜಿಗೆಯನ್ನು ಸೇರಿಸಿ
- ನಂತರ ತುಪ್ಪ ಅಥವಾ ಬೆಣ್ಣೆಗೆ ಜೀರಿಗೆ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿದರೆ ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತದೆ
- ಖಾರದ ತಂಬುಳಿ ಇಷ್ಟಪಡುವವರು ಹಸಿಮೆಣಸನ್ನು ರುಬ್ಬುವಾಗ ಹಾಕಿಕೊಂಡು ಬೆಲ್ಲ ಸೇರಿಸದೆಯೂ ತಂಬುಳಿ ಮಾಡಿಕೊಳ್ಳಬಹುದು. ಬಿಸಿಬಿಸಿ ಅನ್ನದ ಜೊತೆಗೆ ಕಲಸಿ ಉಣ್ಣುವುದಕ್ಕೆ ಬಹಳ ರುಚಿಯಾಗಿರುತ್ತದೆ.
- ಒಗ್ಗರಣೆ ಮಾಡದೆ ಸಿಹಿಸಿಹಿಯಾದ ಪಾನಕದಂತೆಯೂ ಕೂಡ ಇದನ್ನು ಸೇವನೆ ಮಾಡಬಹುದು. ಈ ರೆಸಿಪಿ ತಯಾರಿಕೆಗೆ ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಹೆಚ್ಚೆಂದರೆ 8 ರಿಂದ 10 ನಿಮಿಷದಲ್ಲಿ ತಂಬುಳಿ ಸಿದ್ಧಪಡಿಸಿ ಬಿಡಬಹುದು. ಕೆಲಸಕ್ಕೆ ಹೋಗುವ ಮಹಿಳೆಯರು ಇಂತಹ ಅಡುಗೆಗಳನ್ನು ಕಲಿತರೆ ಬೇಗಬೇಗ ಅಡುಗೆ ಕೆಲಸ ಮುಗಿಸುವುದಕ್ಕೆ ಅನುಕೂಲವಾಗುತ್ತದೆ.
ಮಾಡುವ ವಿಧಾನ
ಮೊದಲಿಗೆ ಒಂದು ಸ್ಪೂನ್ ತುಪ್ಪಕ್ಕೆ ಚಿಟಿಕೆ ಜೀರಿಗೆ ಮತ್ತು ಎಳ್ಳು ಹಾಕಿ ಹುರಿಯಿರಿ
ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಕಾಳುಮೆಣಸು ಹಾಕಿ ನಂತರ ಸಣ್ಣಗೆ ಹೆಚ್ಚಿದ ಅತ್ತಿಎಲೆ ಅಥವಾ ಔದುಂಬರದ ಎಲೆಗಳನ್ನು ಹಾಕಿ ಬಾಡಿಸಿ

ನಂತರ ಇದನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.(ತೆಂಗಿನ ತುರಿ ಬಳಸಲು ಇಚ್ಛಿಸುವವರು ಅದನ್ನೂ ಸೇರಿಸಿ ರುಬ್ಬಿ ಮತ್ತು ರುಬ್ಬಿದ ನಂತರ ಸೋಸಿಕೊಳ್ಳಿ. ಸೋಸದೆ ಹಾಗೆಯೂ ಬಳಸಬಹುದು. ಆದರೆ ಸ್ವಲ್ಪ ತಂಬುಳಿ ಜರಿಜರಿ ಅನ್ನಿಸಬಹುದು.)

ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ, ಕಡೆದ ಮಜ್ಜಿಗೆಯನ್ನು ಸೇರಿಸಿ

ನಂತರ ತುಪ್ಪ ಅಥವಾ ಬೆಣ್ಣೆಗೆ ಜೀರಿಗೆ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿದರೆ ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತದೆ

ಖಾರದ ತಂಬುಳಿ ಇಷ್ಟಪಡುವವರು ಹಸಿಮೆಣಸನ್ನು ರುಬ್ಬುವಾಗ ಹಾಕಿಕೊಂಡು ಬೆಲ್ಲ ಸೇರಿಸದೆಯೂ ತಂಬುಳಿ ಮಾಡಿಕೊಳ್ಳಬಹುದು. ಬಿಸಿಬಿಸಿ ಅನ್ನದ ಜೊತೆಗೆ ಕಲಸಿ ಉಣ್ಣುವುದಕ್ಕೆ ಬಹಳ ರುಚಿಯಾಗಿರುತ್ತದೆ.
ಉಪಯೋಗಗಳು
• ಬಾಯಿ ಹುಣ್ಣಿನ ನಿವಾರಣೆಗೆ ಈ ತಂಬುಳಿ ಸೇವಿಸಬಹುದು
• ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ ಈ ತಂಬುಳಿ ಮಾಡಿ ಸೇವಿಸಿ
ನೋಡಿ
• ಬಾಯಿಯ ದುರ್ವಾಸನೆ ನಿವಾರಣೆಗೆ ಇದು ಸಹಕಾರಿ
• ಬಾಣಂತಿಯವರಿಗೆ ಅತ್ತಿ ಎಲೆಯ ತಂಬುಳಿ ನೀಡುವುದರಿಂದ ಎದೆಹಾಲು
ಹೆಚ್ಚಿಸಬಹುದು
• ಮೂಲವ್ಯಾಧಿ ಸಮಸ್ಯೆ ಇರುವವರು ಅತ್ತಿಕುಡಿ ತಂಬುಳಿ ಸೇವಿಸುವುದರಿಂದಾಗಿ ಸಮಸ್ಯೆ
ನಿವಾರಣೆಯಾಗುತ್ತದೆ
• ಬೇಸಿಗೆಯಲ್ಲಿ ಈ ತಂಬುಳಿ ಸೇವನೆಯಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ
ಇಡಬಹುದು
• ಅತಿಯಾದ ಬಾಯಾರಿಕೆ ಆಗಿರುವಾಗ ಈ ತಂಬುಳಿ ಸೇವಿಸಿದರೆ ಬಾಯಾರಿಕೆ ತಣಿಯುತ್ತದೆ.
ಪದೇ ಪದೇ ಬಾಯಾರಿಕೆ ಆಗುವುದು ನಿಲ್ಲುತ್ತದೆ
• ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ವಾರಕ್ಕೆ ಒಂದು ದಿನವಾದರೂ ಇದನ್ನು
ಸೇವಿಸುವುದರಿಂದಾಗಿ ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು



Click it and Unblock the Notifications