Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಕ್ರಾಂತಿಗೆ ಮನೆಯಲ್ಲೇ ಮಾಡಿ ಎಳ್ಳು-ಬೆಲ್ಲದ ಚಿಕ್ಕಿ! ತಿಂಗಳುಗಟ್ಟಲೆ ಇಡಬಹುದು.. ಅತೀ ಸುಲಭದ ರೆಸಿಪಿ
ಮಕರ ಸಂಕ್ರಾಂತಿಗೆ ಬೆಲ್ಲದ ಎಳ್ಳು ಚಿಕ್ಕಿ! ಒಮ್ಮೆ ಮಾಡಿದರೆ ತಿಂಗಳುಗಟ್ಟಲೆ ಸ್ಟೋರ್ ಮಾಡಬಹುದು. ಮನೆಯಲ್ಲೇ ಅತೀ ಸುಲಭವಾಗಿ ಮಾಡಿ ಗರಿಗರಿಯಾದ ಮಿಠಾಯಿ. ಹೌದು, ಮಕರ ಸಂಕ್ರಾಂತಿ (Makar Sankranti 2026) ಬಂತೆಂದರೆ ಸಾಕು, ಎಳ್ಳು-ಬೆಲ್ಲದ (Ellu Bella) ಸಿಹಿ ನೆನಪಾಗುತ್ತದೆ. ಈ ಹಬ್ಬಕ್ಕೆ ಮನೆಯಲ್ಲೇ ಕಡಿಮೆ ಕರ್ಚಿನಲ್ಲಿ, ಹಲ್ಲುಗಳಿಗೆ ಅಂಟಿಕೊಳ್ಳದ ಗರಿಗರಿಯಾದ ಎಳ್ಳು-ಬೆಲ್ಲದ ಚಿಕ್ಕಿ (Ellu Bella Chikki) ತಯಾರಿಸುವುದು ಹೇಗೆ ಎಂಬುವುದನ್ನು ಈ ಲೇಖನದಲ್ಲಿ ತಿಳಿಯೋಣ.
ಇದು ಕೇವಲ ರುಚಿಕರವಷ್ಟೇ ಅಲ್ಲ, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಉಷ್ಣತೆ ಮತ್ತು ಶಕ್ತಿ ನೀಡುವ ದೇಸಿ 'ಸೂಪರ್‌ಫುಡ್' ಹೌದು. ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಉಷ್ಣತೆ ಬೇಕು. ಎಳ್ಳು ಮತ್ತು ಬೆಲ್ಲದ ಸಮ್ಮಿಲನವು ಇಂತಹ ಸಮಯದಲ್ಲಿ ಅದ್ಭುತ 'ಸೂಪರ್‌ಫುಡ್' ಆಗಿ ಕಾರ್ಯನಿರ್ವಹಿಸುತ್ತದೆ. ಹಬ್ಬದ ಸಂಭ್ರಮದಲ್ಲಿ ಮನೆಯವರೆಲ್ಲರೂ ಕುಳಿತು ಸವಿಯಲು ಈ ಕ್ರಿಸ್ಪಿ ಎಳ್ಳು ಬೆಲ್ಲದ ಚಿಕ್ಕಿ ಉತ್ತಮ ಆಯ್ಕೆ.
ಎಳ್ಳು-ಬೆಲ್ಲದ ಚಿಕ್ಕಿಯ ಆರೋಗ್ಯ ಗುಣಗಳು
ಮಾರುಕಟ್ಟೆ ಚಿಕ್ಕಿಗಳ ಬದಲಿಗೆ, ಮನೆಯಲ್ಲೇ ಶುದ್ಧವಾಗಿ, ಕಡಿಮೆ ವೆಚ್ಚದಲ್ಲಿ ಇದನ್ನು ತಯಾರಿಸುವುದು ಆರೋಗ್ಯಕರ. ಎಳ್ಳಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೇರಳವಾಗಿದೆ. ಬೆಲ್ಲವು ಕಬ್ಬಿಣಾಂಶದ ಉತ್ತಮ ಮೂಲ. ಈ ಮಿಶ್ರಣವು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಮೂಳೆಗಳನ್ನು ಬಲಪಡಿಸಿ, ಇಡೀ ದಿನ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಎಳ್ಳು ಬೆಲ್ಲದ ಚಿಕ್ಕಿ ತಯಾರಿಸುವ ವಿಧಾನ (Gud Til Chikki Recipe) ಇಲ್ಲಿದೆ.
ಎಳ್ಳು ಬೆಲ್ಲದ ಚಿಕ್ಕಿಗೆ ಬೇಕಾಗುವ ಸಾಮಗ್ರಿಗಳು
• ಬಿಳಿ ಎಳ್ಳು (ಅಥವಾ ಕಪ್ಪು ಎಳ್ಳು)
• ಪುಡಿ ಮಾಡಿದ ಬೆಲ್ಲ
• ತುಪ್ಪ (ತಟ್ಟೆಗೆ ಹಚ್ಚಲು)
• ಅಗತ್ಯಕ್ಕೆ ತಕ್ಕಷ್ಟು ನೀರು
ಎಳ್ಳು ಬೆಲ್ಲದ ಚಿಕ್ಕಿ ತಯಾರಿಸುವ ವಿಧಾನ
- ಮೊದಲಿಗೆ, ಒಂದು ಬಾಣಲೆಯಲ್ಲಿ ಎಳ್ಳನ್ನು ಸಣ್ಣ ಉರಿಯಲ್ಲಿ ಲಘುವಾಗಿ ಹುರಿಯಿರಿ. ಎಳ್ಳು ಚಟಪಟನೆ ಶಬ್ದ ಮಾಡಿ, ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ. ಎಳ್ಳು ಸೀದು ಹೋಗದಂತೆ ಜಾಗ್ರತೆ ವಹಿಸಿ.
- ಈಗ ಬೆಲ್ಲದ ಪಾಕ ಸಿದ್ಧಪಡಿಸುವುದು. ಅದೇ ಬಾಣಲೆಗೆ ಪುಡಿ ಮಾಡಿದ ಬೆಲ್ಲ ಮತ್ತು ಎರಡು ಚಮಚ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕರಗಿಸಿರಿ.
- ಬೆಲ್ಲ ಸಂಪೂರ್ಣವಾಗಿ ಕರಗಿ ನೊರೆ ಬರಲು ಪ್ರಾರಂಭವಾದಾಗ, ಒಂದು ಬಟ್ಟಲು ನೀರಿಗೆ ಸ್ವಲ್ಪ ಪಾಕ ಹಾಕಿ ಪರೀಕ್ಷಿಸಿ. ಅದು ಗಟ್ಟಿಯಾಗಿ 'ಟಕ್' ಎಂದು ಮುರಿಯುತ್ತಿದ್ದರೆ, ಅದೇ ಚಿಕ್ಕಿಗೆ ಸರಿಯಾದ ಹದ.
- ಬಳಿಕ ಮಿಶ್ರಣ ಮಾಡುವುದು. ಬೆಲ್ಲದ ಪಾಕ ಸಿದ್ಧವಾದ ಕೂಡಲೇ ಹುರಿದ ಎಳ್ಳನ್ನು ಪಾಕಕ್ಕೆ ಸೇರಿಸಿ ವೇಗವಾಗಿ ಬೆರೆಸಿ. ಈ ಹಂತದಲ್ಲಿ ವಿಳಂಬ ಮಾಡಿದರೆ ಮಿಶ್ರಣವು ಬೇಗನೆ ಗಟ್ಟಿಯಾಗಿಬಿಡುತ್ತದೆ ಎಂಬುದನ್ನು ನೆನಪಿಡಿ.
- ಈಗಾಗಲೇ ತುಪ್ಪ ಸವರಿ ಸಿದ್ಧಪಡಿಸಿದ ತಟ್ಟೆ ಅಥವಾ ಬಟರ್ ಪೇಪರ್ ಮೇಲೆ ಈ ಬಿಸಿ ಮಿಶ್ರಣವನ್ನು ಹಾಕಿ.
- ಲಟ್ಟಣಿಗೆಗೆ ಸ್ವಲ್ಪ ತುಪ್ಪ ಸವರಿ ತೆಳುವಾಗಿ ಲಟ್ಟಿಸಿ. ಮಿಶ್ರಣವು ಸಂಪೂರ್ಣ ತಣ್ಣಗಾಗುವ ಮೊದಲು, ಬಿಸಿಯಿರುವಾಗಲೇ ಚಾಕು ಬಳಸಿ ನಿಮಗೆ ಬೇಕಾದ ಆಕಾರಕ್ಕೆ (ಚೌಕ ಅಥವಾ ಆಯತ) ಗೀರು ಹಾಕಿ ಇಡಿ.
- ಚಿಕ್ಕಿಯು ಪೂರ್ತಿಯಾಗಿ ತಣ್ಣಗಾದ ನಂತರ (ಸುಮಾರು ಮೂವತ್ತು ನಿಮಿಷ), ಅದನ್ನು ಮೊದಲೇ ಹಾಕಿದ ಗೀರುಗಳ ಮೂಲಕ ಚೂರುಗಳನ್ನಾಗಿ ಬೇರ್ಪಡಿಸಿ.
- ಇಷ್ಟು ಮಾಡಿದರೆ ಸಾಕು, ಮನೆಯಲ್ಲೇ ತಯಾರಿಸಿದ ಗರಿಗರಿಯಾದ ಎಳ್ಳು ಬೆಲ್ಲದ ಚಿಕ್ಕಿ ಸವಿಯಲು ಸಿದ್ಧ.
ಈ ಟಿಪ್ಸ್ ಫಾಲೋ ಮಾಡಿ
ಚಿಕ್ಕಿ ಹಲ್ಲುಗಳಿಗೆ ಅಂಟಿಕೊಳ್ಳದಿರಲು ಬೆಲ್ಲದ ಪಾಕ ಸರಿಯಾದ ಹದಕ್ಕೆ ಬರುವುದು ಬಹಳ ಮುಖ್ಯ. ಪಾಕಕ್ಕೆ ಒಂದು ಚಮಚ ತುಪ್ಪ ಸೇರಿಸಿದರೆ ಚಿಕ್ಕಿ ಚೆನ್ನಾಗಿ ಹೊಳೆಯುತ್ತದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ಒಂದು ತಿಂಗಳ ಕಾಲ ಕೆಡುವುದಿಲ್ಲ.



Click it and Unblock the Notifications
