Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಿಹಿ ಸಿಹಿಯಾದ ಸಂಕ್ರಾಂತಿ ಕಾಳು ಮನೆಯಲ್ಲೇ ಮಾಡಿ! ಬಹಳ ಸುಲಭದ ರೆಸಿಪಿ ಇಲ್ಲಿದೆ
ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿಯು ಸಿಹಿ ತಿನಿಸುಗಳಿಂದ ಶುರುವಾಗುವ ಹಬ್ಬ. ರೈತ ಬಾಂಧವರು ಬಹಳ ವಿಜೃಂಭಣೆಯಿಂದ ಆಚರಿಸುವಂತಹ ಹಬ್ಬ ಇದಾಗಿದೆ. ಹಾಗೆ ಸಂಕ್ರಾಂತಿಯಲ್ಲಿ ವಿವಿಧ ರೀತಿಯ ಸಿಹಿ ತಿಂಡಿ ಸವಿಯುವುದು ನೋಡಬಹುದು. ಅಲ್ಲದೆ ಸಂಕ್ರಾಂತಿ ಕಾಳುಗಳು ಈ ಸಮಯದಲ್ಲಿ ಎಲ್ಲರ ಮನೆಯಲ್ಲೂ ಸಿಗುವ ಸಾಮಾನ್ಯ ಸಿಹಿ ತಿಂಡಿ ಆಗಿರಲಿದೆ. ಹಾಗೆ ನೀವಿದನ್ನು ಸಂಕ್ರಾಂತಿಗೆ ಖರೀದಿಸಿ ತಂದು ಸವಿಯೋದು ಕಾಮನ್.
ಇನ್ನು ಖರೀದಿ ಮಾಡಿ ತರುವ ಈ ಸಂಕ್ರಾಂತಿ ಕಾಳುಗಳು ನಿಮಿಷದಲ್ಲಿ ಖಾಲಿ ಆಗುತ್ತೆ. ಮನೆಯಲ್ಲಿ ಮಕ್ಕಳಿದ್ದರೆ ಈ ಕಾಳುಗಳನ್ನು ತಿನ್ನಲು ಬಹಳ ಇಷ್ಟಪಡುತ್ತಾರೆ. ಹಾಗೆ ಇದನ್ನು ನೀವು ಮನೆಯಲ್ಲೇ ಸುಲಭವಾಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಹೌದು ಈ ಸಂಕ್ರಾಂತಿ ಕಾಳನ್ನು ನೀವು ಮನೆಯಲ್ಲೇ ಸುಲಭವಾಗಿ ಮಾಡಬಹುದು.

ಹಾಗಾದ್ರೆ ಈ ರುಚಿ ರುಚಿಯ ಸಂಕ್ರಾಂತಿ ಕಾಳು ಮನೆಯಲ್ಲೇ ಮಾಡುವುದು ಹೇಗೆ? ನೀವು ಮನೆಮಂದಿಗೆಲ್ಲಾ ಸಿಹಿ ಹಂಚಿ, ನೆರೆ ಹೊರೆಯವರು, ಸ್ನೇಹಿತರುಗೂ ಇದನ್ನು ತಾವೇ ಮಾಡಿರುವ ಕಾಳು ಎಂದು ನೀಡಬಹುದು. ಈ ಸಂಕ್ರಾಂತಿ ಕಾಳು ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಮಾಡಲು ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.
ಸಂಕ್ರಾಂತಿ ಕಾಳು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಕ್ಕರೆ
- ಬಿಳಿ ಎಳ್ಳು
- ಅಡುಗೆ ಕಲರ್
ಸಂಕ್ರಾಂತಿ ಕಾಳು ಮಾಡುವ ವಿಧಾನವೇನು?
ಮೊದಲಿಗೆ ಸಂಕ್ರಾಂತಿ ಕಾಳಿಗೆ ಸಕ್ಕರೆ ಪಾಕ ಮಾಡಬೇಕು. ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಬೌಲ್‌ನಲ್ಲಿ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಅರ್ಧ ಕಪ್ ಹಾಲು ಹಾಕಿ ಮಿಕ್ಸ್ ಮಾಡಿಕೊಂಡು ಕರಗಲು ಬಿಡಿ. ಚೆನ್ನಾಗಿ ಕುದಿಬಂದು ಒಂದು ಎಳೆ ಪಾಕ ಬಂದರೆ ಸಾಕಾಗುತ್ತದೆ, ಈ ಸಮಯದಲ್ಲಿ ಒಲೆ ಆಫ್ ಮಾಡಿಕೊಂಡು ಮತ್ತೊಂದು ಪಾತ್ರೆಗೆ ಸೋಸಿಕೊಂಡು ಇಟ್ಟುಕೊಳ್ಳಿ.
ಈಗ ಒಲೆಯಲ್ಲಿ ಬಾಣಲೆ ಇಟ್ಟು ಅದಕ್ಕೆ ಬಿಳು ಎಳ್ಳು ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಇದಕ್ಕೆ 1 ಚಮಚ ಸಕ್ಕರೆ ಪಾಕ ಹಾಕಿ ಮಿಕ್ಸ್ ಮಾಡಿ. ತಿರುಗಿಸುತ್ತಾ ಹೋದಂತೆ ಅದು ಬಿಡಿ ಬಿಡಿಯಾಗುತ್ತದೆ. ಪಾತ್ರೆ ಬಿಸಿಯಾಗಲು ಬಿಡಬೇಡಿ. ಆಗಾಗ ಒಲೆ ಆಫ್ ಮಾಡಿಕೊಳ್ಳಿ. ಮತ್ತೆ 1 ಚಮಚ ಸಕ್ಕರೆ ಪಾಕ ಹಾಕಿ ಮತ್ತೆ ಮಿಕ್ಸ್ ಮಾಡುತ್ತಾ ಇರಿ.
ಅದೇ ರೀತಿ ಎಳ್ಳನ್ನು 4 ನಿಮಿಷ ಪಾಕ ಹಾಕಿಕೊಳ್ಳುತ್ತಾ ಹುರಿದುಕೊಳ್ಳಿ. ಮೇಲೆ ಮೇಲೆ ಒಂದೊಂದೇ ಸ್ಪೂನ್ ಸಕ್ಕರೆ ಪಾಕ ಹಾಕಿಕೊಳ್ಳುತ್ತಾ ಈ ಎಳ್ಳನ್ನು ತಿರುಗಿಸುತ್ತಾ ಇರಬೇಕು, ಈ ಎಳ್ಳು ನಿಧಾನವಾಗಿ ದೊಡ್ಡದಾಗುತ್ತಾ ಬರುತ್ತದೆ. ಪಾತ್ರೆ ಹೆಚ್ಚು ಬಿಸಿಯಾಗಲು ಬಿಡಬೇಡಿ. ಬಿಸಿಯಾದರೆ ಮತ್ತೆ ಸಕ್ಕರೆ ಕರಗಲು ಆರಂಭಿಸುತ್ತದೆ.
ಈಗ ಮೂರು ಬೌಲ್ ತೆಗೆದುಕೊಂಡು ಎಲ್ಲಾ ಬೌಲ್‌ಗೂ ಸಕ್ಕರೆ ಪಾಕ ಹಾಕಿಕೊಳ್ಳಿ. ಹಾಗೆ ನಿಮ್ಮ ಬಳಿ ಯಾವ ಬಣ್ಣವಿದೆಯೋ ಆ ಬಣ್ಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸಂಕ್ರಾಂತಿಯನ್ನು ಈ ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ. ಅನಂತರ ಪಾಕದಿಂದ ತೆಗೆದು ಬಾಣಲೆಗೆ ಹಾಕಿ 1 ನಿಮಿಷ ಹುರಿದುಕೊಳ್ಳಿ. ನಂತರ ಅದನ್ನು ತೆಗೆದಿಡಿ. ಈಗ ಉಳಿದ ಕಾಳುಗಳನ್ನು ಉಳಿದ ಬಣ್ಣದೊಂದಿಗೆ ಇದೇ ವಿಧಾನ ಬಳಸಿ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಸಂಕ್ರಾಂತಿ ಕಾಳು ಸಿದ್ದವಾಗುತ್ತೆ. ಮನೆಯಲ್ಲೇ ಮಾಡಿದ ಕಾಳುಗಳು ಮತ್ತಷ್ಟು ರುಚಿ ನೀಡುವುದು ಖಚಿತ.



Click it and Unblock the Notifications
