Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದ ತಟ್ಟೆಗೆ ಹೊಸ ಐಟಂ.. ಹೆಸರುಬೇಳೆ-ಪಾಲಕ್ ಬಳಸಿ ಮಾಡಿ ಹೊಸ ರುಚಿಯ ಪೂರಿ! ಸಿಂಪಲ್ ರೆಸಿಪಿ
ನಿಮ್ಮ ಊಟದ ತಟ್ಟೆಗೆ ಇರಲಿ ಸ್ಪೆಷಲ್ ಮೆರುಗು! ಹೆಸರುಬೇಳೆ ಮತ್ತು ಪಾಲಕ್ ಬಳಸಿ ಮಾಡಿ ಗರಿಗರಿಯಾದ ಪೂರಿ. ಮಕ್ಕಳ ಲಂಚ್ ಬಾಕ್ಸ್ಗೆ ಬೆಸ್ಟ್ ಐಡಿಯಾ. ಮೃದುವಾದ ಮತ್ತು ಉಬ್ಬಿದ ಪೂರಿ ಮಾಡುವ ರಹಸ್ಯ ಇಲ್ಲಿದೆ. ಹೌದು, ಸಾಮಾನ್ಯವಾಗಿ ಪಾಲಕ್ ಸೊಪ್ಪೆಂದರೆ ಪಾಲಕ್ ಪನೀರ್, ಆಲೂ ಪಾಲಕ್ ಅಥವಾ ಪಾಲಕ್ ಪರೋಟದ ನೆನಪು ಬರುವುದು ಸಹಜ. ಆದರೆ, ಹೆಸರು ಬೇಳೆ-ಪಾಲಕ್ ಪೂರಿ (Moong Dal Palak Puri) ಎಂದಾದರೂ ಟ್ರೈ ಮಾಡಿದ್ದೀರಾ?
ಹೆಸರು ಬೇಳೆ ಮತ್ತು ಪಾಲಕ್ ಸೊಪ್ಪಿನ ವಿಶಿಷ್ಟ ಸಂಯೋಜನೆಯಲ್ಲಿ ಪೂರಿ ತಯಾರಿಸುವುದು ವಿಭಿನ್ನ ಅನುಭವ ನೀಡುತ್ತದೆ. ಇದು ಸಾಧಾರಣ ಪೂರಿಗಿಂತ ಹೆಚ್ಚು ರುಚಿಕರ ಹಾಗೂ ಪೌಷ್ಟಿಕಾಂಶ ಭರಿತವಾಗಿದೆ. ಬೆಳಗಿನ ಉಪಹಾರಕ್ಕೆ, ಮಕ್ಕಳ ಡಬ್ಬಿಗೆ ಅಥವಾ ವಿಶೇಷ ಅತಿಥಿಗಳಿಗೆ ಸೂಕ್ತವಾದ ಈ ಮೂಂಗ್ ದಾಲ್ ಪಾಲಕ್ ಪೂರಿ ಬಣ್ಣದಲ್ಲಿ ಆಕರ್ಷಕವಾಗಿರುವುದು ವಿಶೇಷ. ಹೆಸರು ಬೇಳೆ-ಪಾಲಕ್ ಪೂರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಸುಲಭ ವಿಧಾನ (Healthy Moong Dal Palak Puri Recipe) ಇಲ್ಲಿದೆ.

ಪ್ರೋಟೀನ್, ವಿಟಮಿನ್ಗಳ ಆಗರ
ಹೆಸರುಬೇಳೆಯು ಪ್ರೋಟೀನ್ಗಳಿಂದ ತುಂಬಿದ್ದರೆ, ಪಾಲಕ್ ಸೊಪ್ಪು ಕಬ್ಬಿಣಾಂಶ ಮತ್ತು ವಿಟಮಿನ್ಗಳ ಆಗರ. ಈ ಪೋಷಕಾಂಶಗಳ ಸಮಾಗಮವು ಪೂರಿಗೆ ವಿಶೇಷ ಮೃದುತ್ವ ಮತ್ತು ರುಚಿ ನೀಡುತ್ತದೆ. ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ಫೈಬರ್ ಒದಗಿಸುವುದಲ್ಲದೆ, ರಕ್ತಹೀನತೆ ತಡೆಯಲು ಸಹಕಾರಿಯಾಗಿದೆ. ಇದು ಸಾಧಾರಣ ಪೂರಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ. ಬಿಸಿಬಿಸಿ ಆಲೂಗೆಡ್ಡೆ ಪಲ್ಯ, ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಇದನ್ನು ಸವಿದರೆ ರುಚಿ ದ್ವಿಗುಣವಾಗುತ್ತದೆ.
ಹೆಸರುಬೇಳೆ-ಪಾಲಕ್ ಪೂರಿಗೆ ಬೇಕಾಗುವ ಸಾಮಗ್ರಿಗಳು
• ಗೋಧಿ ಹಿಟ್ಟು
• ನೆನೆಸಿದ ಹೆಸರುಬೇಳೆ
• ತಾಜಾ ಪಾಲಕ್ ಸೊಪ್ಪು
• ಹಸಿ ಮೆಣಸಿನಕಾಯಿ
• ಶುಂಠಿ
• ಓಂಕಾಳು (ಅಜ್ವೈನ್)
• ಅರಿಶಿನ ಪುಡಿ
• ಕೆಂಪು ಮೆಣಸಿನ ಪುಡಿ
• ಉಪ್ಪು
• ಎಣ್ಣೆ
ಹೆಸರುಬೇಳೆ-ಪಾಲಕ್ ಪೂರಿ ಮಾಡುವ ವಿಧಾನ
- ಮೊದಲಿಗೆ, ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು, ಮೂರರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬೇಳೆ ಮೃದುವಾದ ನಂತರ ನೀರನ್ನು ಬಸಿದು, ಮಿಕ್ಸರ್ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
- ಇದೇ ರೀತಿ, ಪಾಲಕ್ ಸೊಪ್ಪನ್ನು ತೊಳೆದು, ಸ್ವಲ್ಪ ನೀರಿನಲ್ಲಿ ಸುಮಾರು ಎರಡು ನಿಮಿಷ ಕುದಿಸಿ ತಣ್ಣಗಾಗಿಸಿ. ಆನಂತರ ಅದೇ ಮಿಕ್ಸರ್ನಲ್ಲಿ ನುಣ್ಣಗಾದ ಪೇಸ್ಟ್ ಮಾಡಿಕೊಳ್ಳಿ.
- ದೊಡ್ಡ ಪಾತ್ರೆಗೆ 2 ಕಪ್ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು, 2 ಚಮಚ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ.
- ನಂತರ ರುಬ್ಬಿದ ಹೆಸರುಬೇಳೆ, ಪಾಲಕ್ ಪೇಸ್ಟ್ ಅನ್ನು ಹಾಕಿ. ಹೆಚ್ಚಿದ ಹಸಿ ಮೆಣಸಿನಕಾಯಿ, ತುರಿದ ಶುಂಠಿ, ಅರಿಶಿನ, ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ.
- ಈ ಪೇಸ್ಟ್ನಲ್ಲೇ ಹಿಟ್ಟು ಕಲಸಲು ಪ್ರಯತ್ನಿಸಿ. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಸೇರಿಸಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ಕಲಸಿದ ಹಿಟ್ಟನ್ನು 15 ನಿಮಿಷ ಮುಚ್ಚಿಡಿ.
- ಹಿಟ್ಟು ಚೆನ್ನಾಗಿ ಸೆಟ್ ಆದ ನಂತರ, ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಸ್ವಲ್ಪ ಎಣ್ಣೆ ಸವರಿ, ಪೂರಿಗಳನ್ನು ಸಮವಾಗಿ ಗುಂಡಾಗಿ ಲಟ್ಟಿಸಿಕೊಳ್ಳಿ.
- ಪೂರಿಗಳು ಹೆಚ್ಚು ತೆಳುವೂ ಇರಬಾರದು ಅಥವಾ ಅತಿ ದಪ್ಪವೂ ಇರಬಾರದು, ಮಧ್ಯಮ ಗಾತ್ರದಲ್ಲಿ ಲಟ್ಟಿಸಿಕೊಳ್ಳಬೇಕು.
- ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಉತ್ತಮವಾಗಿ ಬಿಸಿಯಾದ ಕೂಡಲೇ ಲಟ್ಟಿಸಿದ ಪೂರಿಯನ್ನು ಎಣ್ಣೆಗೆ ಹಾಕಿ.
- ಜಾಲರಿಯಿಂದ ಹಗುರವಾಗಿ ಒತ್ತಿದರೆ ಪೂರಿ ಚೆನ್ನಾಗಿ ಉಬ್ಬಿಬರುತ್ತದೆ. ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಕರಿದು, ನಂತರ ಎಣ್ಣೆಯಿಂದ ತೆಗೆಯಿರಿ. ಇಷ್ಟಾದ ಬಳಿಕ ಬಿಸಿಬಿಸಿಯಾದ ಹೆಸರು ಬೇಳೆ-ಪಾಲಕ್ ಪೂರಿ ಸವಿಯಲು ಸಿದ್ಧ.
- ಪೂರಿ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳಬಾರದು ಎಂದರೆ ಹಿಟ್ಟನ್ನು ಗಟ್ಟಿಯಾಗಿ ಕಲಸಬೇಕು. ಹಿಟ್ಟಿಗೆ ಒಂದು ಚಮಚ ರವೆಯನ್ನು ಸೇರಿಸಿದರೆ, ಪೂರಿ ದೀರ್ಘಕಾಲ ಗರಿಗರಿಯಾಗಿ ಉಳಿಯುತ್ತದೆ.



Click it and Unblock the Notifications