Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ರುಚಿ ಬೇಕಾ? ನುಗ್ಗೆ ಸೊಪ್ಪಿನ ಪೂರಿ ಹೀಗೆ ಮಾಡಿ ನೋಡಿ! ಟೇಸ್ಟ್ & ಹೆಲ್ತ್ಗೆ ಫುಲ್ ಮಾರ್ಕ್ಸ್
ಹೊಸ ರುಚಿ ಬೇಕಾ? ಆರೋಗ್ಯದ ಗಣಿ.. ನುಗ್ಗೆ ಸೊಪ್ಪಿನ ಪೂರಿ ಮಾಡಿ ನೋಡಿ! ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಸಾಫ್ಟ್ ಮತ್ತು ಉಬ್ಬಿದ ನುಗ್ಗೆ ಸೊಪ್ಪಿನ ಪೂರಿ (Drumstick Leaves Puri) ರಹಸ್ಯ ಇಲ್ಲಿದೆ. ಹೌದು, ನುಗ್ಗೆ ಮರವನ್ನು 'ಅದ್ಭುತ ಮರ' (Miracle Tree) ಅಂತ ಕರೆಯಲಾಗುತ್ತೆ. ಇದರ ಕಾಯಿ ಮಾತ್ರವಲ್ಲ, ಹೂವು ಮತ್ತು ಸೊಪ್ಪು ಸಹ ಪೋಷಕಾಂಶಗಳ ಗಣಿಯಾಗಿದೆ.
ಸಾಮಾನ್ಯವಾಗಿ ಪಾಲಕ್ ಅಥವಾ ಮೆಂತ್ಯ ಸೊಪ್ಪಿನ ಪೂರಿ ಮಾಡುವುದು ರೂಢಿ. ಆದರೆ ನುಗ್ಗೆ ಸೊಪ್ಪಿನಿಂದ ಮಾಡುವ ಪೂರಿ (Moringa Leaves Puri) ರುಚಿಯ ಜೊತೆಗೆ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಇತ್ತೀಚಿನ ಆಹಾರ ಪದ್ಧತಿಯಲ್ಲಿ ಪೋಷಕಾಂಶಯುಕ್ತ ಆಹಾರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ನುಗ್ಗೆ ಸೊಪ್ಪು ಅಥವಾ ಮುಸಂಗೆ ಸೊಪ್ಪು (Moringa Leaves), ತನ್ನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ಗಳಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.
ಮಕ್ಕಳಿಗಾಗಲಿ ಅಥವಾ ಮನೆಯವರಿಗಾಗಲಿ, ವಿಭಿನ್ನ ಹಾಗೂ ಆರೋಗ್ಯಕರ ಉಪಹಾರ ತಯಾರಿಸಲು ಇದು ಅತ್ಯುತ್ತಮ ಆಯ್ಕೆ. ಸಾಮಾನ್ಯವಾಗಿ ಮಕ್ಕಳು ಸೊಪ್ಪು ಎಂದರೆ ಇಷ್ಟಪಡುವುದಿಲ್ಲ. ಆದರೆ ಪೂರಿಯ ರೂಪದಲ್ಲಿ ನುಗ್ಗೆ ಸೊಪ್ಪನ್ನು ನೀಡಿದಾಗ ಅವರು ಸಂತೋಷದಿಂದ ತಿನ್ನುತ್ತಾರೆ. ನುಗ್ಗೆ ಸೊಪ್ಪಿನ ಪೂರಿ ತಯಾರಿಸುವ ವಿಧಾನ (Moringa Leaves Puri Recipe) ಮತ್ತು ಬೇಕಾದ ಸಾಮಗ್ರಿಗಳ ಮಾಹಿತಿ ಇಲ್ಲಿದೆ.
ನುಗ್ಗೆ ಸೊಪ್ಪಿನ ಪೂರಿಯ ಲಾಭಗಳು
ಇದರಲ್ಲಿರುವ ವಿಟಮಿನ್ ಸಿ ಮತ್ತು ಎ ಸಮೃದ್ಧಿಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹಾಲಿನಂತೆಯೇ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅಲ್ಲದೆ, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ನುಗ್ಗೆ ಸೊಪ್ಪಿನ ಪೂರಿಗೆ ಬೇಕಾಗುವ ಸಾಮಗ್ರಿಗಳು
• ನುಗ್ಗೆ ಸೊಪ್ಪು
• ಗೋಧಿ ಹಿಟ್ಟು
• ಹಸಿ ಮೆಣಸಿನಕಾಯಿ
• ಶುಂಠಿ
• ಅಜವಾನ
• ಜೀರಿಗೆ
• ಅರಿಶಿನ ಪುಡಿ
• ಖಾರದ ಪುಡಿ
• ಉಪ್ಪು
• ಎಣ್ಣೆ
• ನೀರು
ಪೂರಿ ತಯಾರಿಸುವ ವಿಧಾನ
- ನುಗ್ಗೆ ಸೊಪ್ಪಿನ ಎಲೆಗಳನ್ನು ಕಾಂಡದಿಂದ ಬೇರ್ಪಡಿಸಿ, ಚೆನ್ನಾಗಿ ತೊಳೆದು ನೀರು ಬಸಿದು ಸಣ್ಣಗೆ ಹೆಚ್ಚಿ. ಸೊಪ್ಪು ಸಣ್ಣಗೆ ಹೆಚ್ಚಿದಷ್ಟೂ ಪೂರಿ ಚೆನ್ನಾಗಿ ಉಬ್ಬುತ್ತದೆ.
- ಒಂದು ದೊಡ್ಡ ಪಾತ್ರೆಗೆ ಗೋಧಿ ಹಿಟ್ಟು, ಹೆಚ್ಚಿದ ನುಗ್ಗೆ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ತುರಿ, ಅಜವಾನ, ಜೀರಿಗೆ, ಅರಿಶಿನ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
- ಮಿಶ್ರಣಕ್ಕೆ ಒಂದು ಟೀಸ್ಪೂನ್ ಬಿಸಿ ಎಣ್ಣೆ ಸೇರಿಸಿ ಕಲಸಿ. ಇದು ಪೂರಿಗಳು ಹೆಚ್ಚು ಮೃದುವಾಗಿ ಹಾಗೂ ಗರಿಗರಿಯಾಗಿರಲು ನೆರವಾಗುತ್ತದೆ.
- ಈಗ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ, ಗಟ್ಟಿಯಾದ ಹಿಟ್ಟನ್ನು ಕಲಸಿ (ಸಾಮಾನ್ಯ ಪೂರಿ ಹಿಟ್ಟಿನ ಹದಕ್ಕೆ). ಕಲಸಿದ ಹಿಟ್ಟನ್ನು ಬಟ್ಟೆಯಿಂದ ಮುಚ್ಚಿ ಹತ್ತು ನಿಮಿಷ ನೆನೆಯಲು ಬಿಡಿ.
- ನೆನೆದ ಹಿಟ್ಟನ್ನು ಮತ್ತೊಮ್ಮೆ ನಾದಿ ಸಣ್ಣ ಉಂಡೆಗಳನ್ನು ಮಾಡಿ. ಸ್ವಲ್ಪ ಎಣ್ಣೆ ಸವರಿ ಪೂರಿಯ ಆಕಾರದಲ್ಲಿ ಲಟ್ಟಿಸಿಕೊಳ್ಳಿ. ಪೂರಿ ಹೆಚ್ಚು ತೆಳುವಾಗಿ ಅಥವಾ ದಪ್ಪವಾಗಿ ಇರಬಾರದು.
- ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ ಲಟ್ಟಿಸಿದ ಪೂರಿಯನ್ನು ಹಾಕಿ. ಪೂರಿ ಮೇಲೆ ಎದ್ದ ತಕ್ಷಣ ಸೌಟಿನಿಂದ ಲಘುವಾಗಿ ಒತ್ತಿದರೆ ಚೆನ್ನಾಗಿ ಉಬ್ಬುತ್ತದೆ. ಹೊಂಬಣ್ಣ ಬರುವವರೆಗೆ ಕರಿದು ತಟ್ಟೆಗೆ ವರ್ಗಾಯಿಸಿ.
- ಬಿಸಿಬಿಸಿಯಾದ ಈ ನುಗ್ಗೆ ಸೊಪ್ಪಿನ ಪೂರಿಯನ್ನು ಆಲೂಗಡ್ಡೆ ಪಲ್ಯ, ತೆಂಗಿನಕಾಯಿ ಚಟ್ನಿ, ಮೊಸರು ಅಥವಾ ನಿಮ್ಮ ನೆಚ್ಚಿನ ಉಪ್ಪಿನಕಾಯಿಯೊಂದಿಗೆ ಸವಿಯಬಹುದು. ಪ್ರಯಾಣಕ್ಕೆ ಕೊಂಡೊಯ್ಯಲು ಸಹ ಇದು ಉತ್ತಮ ತಿಂಡಿ.
ಒಟ್ಟಾರೆ, ನುಗ್ಗೆ ಸೊಪ್ಪಿನ ಪೂರಿ ಆರೋಗ್ಯ ಮತ್ತು ರುಚಿಯ ಅಪೂರ್ವ ಸಂಗಮವಾಗಿದೆ. ವಾರಾಂತ್ಯದಲ್ಲಾಗಲಿ ಅಥವಾ ವಿಶೇಷ ಸಂದರ್ಭಗಳಲ್ಲಾಗಲಿ ಇದನ್ನು ತಯಾರಿಸಿ ಕುಟುಂಬದವರ ಮನ ಗೆಲ್ಲಿ!



Click it and Unblock the Notifications
