For Quick Alerts
ALLOW NOTIFICATIONS  
For Daily Alerts

ಅತ್ಯಧಿಕ ಪೋಷಕಾಂಶವಿರುವ ಚಿಕ್ಕು ಮಿಲ್ಕ್ ಶೇಕ್

By Prasad
|
Delicious Chikoo milkshake
ಬೇಸಿಗೆ ಬಿಸಿಲಲ್ಲಿ ಆಟವಾಡುತ್ತಲೇ ಕೂಡಲೆ ಸುಸ್ತಾಗುವ ಅಥವಾ ಬಳಲುವ ಮಕ್ಕಳಿಗೆ ಏನೆಂದು ಸಲಹೆ ನೀಡುತ್ತೀರಾ? ಆಡಿದ್ದು ಸಾಕು, ಮನೆಗೆ ಬಂದು ರೆಸ್ಟ್ ತೊಗೊ ಅಂತಾನಾ? ಅಥವಾ ಸುಸ್ತಾಗ್ತೀಯಾ ಆಟ ಆಡಲೇಬೇಡ ಅಂತನಾ? ಅಂತಹ ತಪ್ಪು ಎಂದೂ ಮಾಡಬೇಡಿ. ಆಟ ಆಡಲು ಬಿಡಿ. ಆದರೆ ದಣಿವಾದಾಗ ಮತ್ತಷ್ಟು ಆಡುವ ಶಕ್ತಿ ಹೆಚ್ಚಿಸಲು ಎಂತಹ ಪಾನೀಯ ಕೊಡಬೇಕೆಂದು ತಿಳಿದಿರಿ.

ಚಿಕ್ಕು ಮಿಲ್ಕ್ ಶೇಕ್ ಅಂತಹ ಪ್ರೊಟೀನ್ ಯುಕ್ತ ಶಕ್ತಿವರ್ಧಕ ಪೇಯಗಳಲ್ಲೊಂದು. ಚಿಕ್ಕೂದಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಧಿಕವಾಗಿರುತ್ತವೆ. ಇದಲ್ಲದೆ ತಾಮ್ರ, ಕಬ್ಬಿಣ, ರಂಜಕ, ಮ್ಯಾಗ್ನೇಶಿಯಂ, ಜಿಂಕ್ ಮತ್ತು ಕ್ಯಾಲ್ಶಿಯಂ ಅಂಶಗಳು ಕೂಡ ಅಧಿಕವಾಗಿರುತ್ತವೆ. ಇಷ್ಟೆಲ್ಲ ಪೋಷಕಾಂಶ ಇರುವ ಚಿಕ್ಕು ಮಿಲ್ಕ್ ಶೇಕ್ ಇಷ್ಟಪಡದೇ ಇರಲು ನಿಮ್ಮ ಮಕ್ಕಳಿಗೆ ಸಾಧ್ಯವಾ? ನೋ ಚಾನ್ಸ್. ಈಗಲೇ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು

ಚೆನ್ನಾಗಿ ಹಣ್ಣಾದ ಚಿಕ್ಕು 2 ಅಥವಾ 3
ಕೆನೆ ತೆಗೆದ ಹಾಲು 1 ಕಪ್ ಅಥವಾ ವೆನಿಲ್ಲಾ ಐಸ್ ಕ್ರೀಂ
ಸಕ್ಕರೆ 1 ಬಟ್ಟಲು
ಏಲಕ್ಕಿ ಪುಡಿ ಚಿಟಿಕೆಯಷ್ಟು
ಐಸ್ ಕ್ಯೂಬ್ (ಬೇಕಿದ್ದರೆ)

ತಯಾರಿಸುವ ವಿಧಾನ

* ಚಿಕ್ಕು ಹಣ್ಣನ್ನು ಚೆನ್ನಾಗಿ ತೊಳೆದು, ಬೀಜ ತೆಗೆದು ಸಿಪ್ಪೆಯ ಸಮೇತ ಉಳಿದೆಲ್ಲ ಪದಾರ್ಥಗಳೊಂದಿಗೆ ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ಗರ್ರನೆ ತಿರುಗಿಸಿಬಿಡಿ. ದಟ್ಸಾಲ್. ರುಚಿರುಚಿಯಾದ ಸಪೋಟಾ ಮಿಲ್ಕ್ ಶೇಕ್ ರೆಡಿ.

* ಇದನ್ನು ಐಸ್ ಕ್ಯೂಬ್ ಜೊತೆ ಕೂಡಲೆ ಕುಡಿಯಲು ನೀಡಬಹುದು ಅಥವಾ ಫ್ರಿಜ್ ನಲ್ಲಿಟ್ಟು ಕೆಲ ಸಮಯದ ನಂತರ ಕುಡಿಯಲು ನೀಡಿ. ಬೇಸಿಗೆಯಲ್ಲಿ ಸೂಪರಾಗಿರುತ್ತದೆ.

English summary

Delicious Chikoo milkshake | Summer cool drinks | Sapota fruit milkshake | ಸಪೋಟಾ ಮಿಲ್ಕ್ ಶೇಕ್

Delicious chikoo milkshake to increase the energy of playing kis during summer. Chikoo or sapota has lots nutrients including vitamin A, B, C, copper, iron, phosphorus, magnesium, zinc and calcium. It is the best summer cool drink.
Story first published: Wednesday, May 11, 2011, 14:06 [IST]
X
Desktop Bottom Promotion