Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕನ್ನಡ ಹುಡುಗರ ಸಾಂಬಾರ್ ಸರೋಜ

ನಮ್ಮ ಫ್ಲ್ಯಾಟ್ ನ ಕೆಳಬದಿಯಲ್ಲಿ ಒಂದು ವಾಚ್ ಮನ್ ಶೆಡ್ ಇದೆ. ಅಲ್ಲಿ ಕಾವಲುಗಾರನ ಒಂದು ಸಂಸಾರ ಇದೆ. ಇವರು ಯೂನಿಫಾರಂ ಧರಿಸಿ, ಕೋಲು ಹಿಡಿದು ಕೆಲಸ ಮಾಡುವ ಸೆಕ್ಯೂರಿಟಿ ಟೈಪ್ ಅಲ್ಲ. ಕಟ್ಟಡ ನಿರ್ಮಾಣದ ಎಲ್ಲ ಕೆಲಸಗಳು ಮುಗಿದ ನಂತರ, ಫ್ಲಾಟ್ ಓನರ್ ಹೇಳಿದ ತಕ್ಷಣ ಜಾಗ ಖಾಲಿ ಮಾಡಬೇಕು. ಗಂಡನ ಹೆಸರು ವೇಲು, ಅವನ ಹೆಂಡತಿ ಸರೋಜ. ಮಕ್ಕಳಿಲ್ಲ. ತಾವೂ ಗಾರೆ ಕೆಲಸ ಮಾಡುವುದು ಮತ್ತು ನಿರ್ಮಾಣ ಸಾಮಗ್ರಿಗಳನ್ನು ದಿನರಾತ್ರಿ ಕಾಯುವುದು ಅವರ ಡ್ಯೂಟಿ. ಶನಿವಾರ ಸಂಬಳ. ಜಿಂಕ್ ಶೀಟ್ ರೂಮಿನಲ್ಲಿ ಹರಕ ಪುರುಕು ಸಾಮಾನು ಸರಂಜಾಮು, ಅಡುಗೆ, ಸ್ನಾನ, ನಿದ್ದೆ, ಎಲ್ಲ.
ಸರೋಜ ಯಾವಾಗಲೂ ಏನಾದರೊಂದು ಕೆಲಸ ಮಾಡುತ್ತಲೇ ಇರುವ ಮಹಿಳೆ. ಉಪಸಂಪಾದನೆಗಾಗಿ ನಮ್ಮ ಫ್ಲ್ಯಾಟ್ ನಲ್ಲಿರುವ ಎರಡು ಮನೆಯವರ ಬಟ್ಟೆಗಳನ್ನು ಒಗೆಯುವರು. ಇಬ್ಬರೂ ಹೆಚ್ಚು ಮಾತಾಡುವುದಿಲ್ಲ. ಕಾಂಪೌಂಡಿನಲ್ಲಿ ಬಟ್ಟೆ ತೊಳೆದು ತಂತಿಯ ದಾರದ ಮೇಲೆ ಒಣಗಿಹಾಕಿ, ಕ್ಲಿಪ್ ಹಾಕಿ ಒಣಗಿಸಿ ಆಮೇಲೆ ಮಡಿಚಿಕೊಡುವರು. ಇಸ್ತ್ರಿ ಮಾಡುವ ಬಟ್ಟೆಗಳನ್ನು ಅಲ್ಲೇ ಇರುವ ಗೋವಿಂದರಾಜು ಅಂಗಡಿಗೆ ಕೊಟ್ಟು ಇಸ್ತ್ರಿ ಮಾಡಿಸಿ ಮನೆಗೆ ತರುವುದು. ನಾವು ಮನೆಯಲ್ಲಿ ಇಲ್ಲದಿದ್ದರೆ ರಾತ್ರಿ ನಮ್ಮ ಬಟ್ಟೆಗಳನ್ನು ಅವರ ಮನೆಯಲ್ಲೇ ಇಟ್ಟುಕೊಂಡು ಮಾರನೆ ದಿನ ನಾವು ಎದ್ದ ನಂತರ ತಂದು ಒಪ್ಪಿಸುವರು.
ಸರೋಜ ಮತ್ತು ವೇಲು ಅವರಿಗೆ ನಮ್ಮ ಊಟ ತಿಂಡಿ ವ್ಯವಸ್ಥೆಯ ಬಗ್ಗೆ ಸದ್ದುಮಾಡದ ಕುತೂಹಲವಿದೆ. ನಮ್ಮ ಅಡುಗೆ ಸೆಟ್ ಹಾಗೂ ಖಾಲಿ ಪಾತ್ರೆಗಳನ್ನು ನೋಡಿ ಅವರಿಗೆ ಹೇಳಲಾಗದ ಬೇಸರ. "ಇಷ್ಟೆಲ್ಲ ಇದ್ದೂ ಇವರು ನಿತ್ಯ ಅಡುಗೆ ಮಾಡುವುದಿಲ್ಲ, ಊಟ ಹೇಗೆ ಮಾಡ್ತಾರೆ" ಎಂಬ ಕುತೂಹಲ ಅವರಿಗೆ ಇದ್ದೇಇತ್ತು. ಕಳೆದ ವಾರ ವಿಜಯದಶಮಿ ಹಬ್ಬದ ದಿವಸ ನಾವು ಊರಿಗೆ ಹೋಗದೆ ಫ್ಲಾಟ್ ನಲ್ಲೇ ಇಡೀ ದಿನ ಸೋಮಾರಿಗಳಾಗಿ ಇದ್ದೆವು. ಆಫೀಸಿನಲ್ಲಿ ಕೊಟ್ಟಿದ್ದ ಆಯುಧ ಪೂಜೆ ಸಿಹಿ ಖಾರಾ ತಿಂಡಿ ಪ್ಯಾಕೆಟ್ಟುಗಳನ್ನು ವೇಲುಗೆ ಕೊಟ್ಟೆವು.
ವಿಜಯದಶಮಿ ದಿವಸ ಮಧ್ಯಾನ್ಹ ಸರೋಜ ನಮ್ಮ ಮನೆಗೆ ಬಂದು ಇಸ್ತ್ರಿ ಮಾಡಿದ ಬಟ್ಟೆ ಕೊಟ್ಟರು. ಆಗ ನಮ್ಮ ಮನೆಯ ರೈಸ್ ಕುಕ್ಕರ್ ಕೂಗಿದ ಶಬ್ದ ಅವರಿಗೆ ಕೇಳಿಸಿತು. ಸಾಂಬಾರ್ ಪಣ್ಣಿಟ್ಟಿರಿಂಗಳಾ ಎಂದು ಕೇಳಿದರು. ನಾವು ಇಲ್ಲ ಎಂದು ಕೈಸನ್ನೆ ತಲೆ ಸನ್ನೆಯಲ್ಲಿ ಹೇಳಿ ಟಿವಿ ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಸರೋಜ ಅವರು ಒಂದು ಸ್ಟೀಲ್ ಕ್ಯಾರಿಯರ್ನಲ್ಲಿ ಸಾಂಬಾರ್ ತಂದು ಅಡುಗೆ ಕಟ್ಟೆ ಮೇಲಿಟ್ಟು ಸಾಪಾಟಂಗೋ ಸಾರ್ ಎಂದರು.
ನಮಗೆ ಏನು ಹೇಳಲು ಗೊತ್ತಾಗಲಿಲ್ಲ. ಥ್ಯಾಂಕ್ಯೂ ಅಂದುಬಿಟ್ಟೆವು. ಥ್ಯಾಂಕ್ಯೂ ಪದದ ಬದಲಾಗಿ ಬೇರೆ ಏನಾದರೂ ಹೇಳಬೇಕಾಗಿತ್ತು ಎಂದೆನಿಸಿತಾದರೂ ನಮಗೆ ತಮಿಳು ಭಾಷೆ ಬರದ ಕಾರಣ ಸುಮ್ಮನಾದೆವು. ವಿಜಯ ದಶಮಿಯ ದಿವಸ ಲಂಚ್ ಮತ್ತು ಡಿನ್ನರ್ರಿಗೆ ಸರೋಜ ವೇಲು ಮನೆಯ ಸಾಂಬಾರ್ ಸವಿಯುವ ಯೋಗ ನಮ್ಮ ಹಣೆಯಲ್ಲಿ ಬರೆದಿತ್ತು. ಮತ್ತೆ ಇನ್ನೊಂದು ಭಾನುವಾರ ಬಂದಾಗ ನಾವು ಕೆಳಗೆ ಹೋಗಿ ಸಾಂಬಾರು ತುಂಬಾ ತುಂಬಾ ಚೆನ್ನಾಗಿತ್ತು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿ ಸಾಂಬಾರು ಮಾಡುವ ವಿಧಾನ ಹೇಗೆ ಎಂದು ಕೇಳಿದೆವು. ಸರೋಜ ಅವರು ನಮಗೆ ತಿಳಿಸಿದ ಸಾಂಬಾರು ರೆಸಿಪಿ ಹೀಗಿದೆ .



Click it and Unblock the Notifications
