Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಊಟವಾದ ಕೂಡಲೇ ಹಣ್ಣು ತಿಂದೀರಿ ಜೋಕೆ!

ಈ ಸುಲಭ ಪ್ರಶ್ನೆಗೆ ಉತ್ತರ ಅನೇಕರಲ್ಲಿ ಒಂದೇ. ಅದು ಊಟವಾದ ನಂತರ ಅಂತ ಸುಲಿದ ಬಾಳೆಹಣ್ಣನ್ನು ಊಟವಾದನಂತರ ಹೊಟ್ಟೆಗಿಳಿಸಿದಂತೆ ಸುಲಭವಾಗಿ ಉತ್ತರ ನೀಡಿಬಿಡುತ್ತಾರೆ. ಇದು ತಪ್ಪು ಅಂತ ಹೇಳಿದರೆ ನೀವು ನಂಬಬೇಕು. ನಿಮ್ಮ ಮೇಲೆ ನಿಮಗೆ ಪ್ರೀತಿಯಿದ್ದರೆ ದಯವಿಟ್ಟು ಈ ಲೇಖನವನ್ನೊಮ್ಮೆ ಓದಿಬಿಡಿ.
ಹಸ್ತ ಹಲಸು ಉಂಡ ಮಾವು ಎಂಬ ಮಾತು ಚಾಲ್ತಿಯಲ್ಲಿದೆ. ಅಂದರೆ, ಹಸಿದ ಹೊಟ್ಟೆಯಲ್ಲಿ ಹಲಸಿನ ಹಣ್ಣು ತಿನ್ನಬೇಕು ಮತ್ತು ಉಂಡ ನಂತರ ಮಾವಿನ ಹಣ್ಣನ್ನು ತಿನ್ನಬೇಕು. ಇದು ಹಳೇ ಕಾಲದ ಮಾತು. ಇಂದಿನ ಕಾಲದಲ್ಲಿ ಪ್ರತಿಯೊಂದನ್ನೂ ನಿಯಮಗಳಿಗೆ ತಕ್ಕಂತೆ ಮಾಡಬೇಕು. ಇಷ್ಟೇ ತಿನ್ನಬೇಕು, ಇಷ್ಟೇ ಕುಡಿಯಬೇಕು, ಇಷ್ಟೊತ್ತೇ ಮಲಗಬೇಕು... ಹೀಗೆ ಖಾಲಿ ಹೊಟ್ಟೆಯಲ್ಲಿಯೇ ಹಣ್ಣನ್ನೂ ತಿನ್ನಬೇಕು ಎಂಬುದನ್ನೂ ನಿಯಮದಂತೆ ಪಾಲಿಸಬೇಕು.
ಇದು ನಮ್ಮ ಆರೋಗ್ಯದ ಮೇಲೆ, ನಮ್ಮ ದೈಹಿಕ ಸೌಂದರ್ಯದ ಮೇಲೆ, ನಮ್ಮ ಜೀವನಕ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕೆಲವರು ಊಟವಾದ ಕೂಡಲೆ ಸಿಕ್ಕಾಪಟ್ಟೆ ತೇಗಲು ಶುರು ಮಾಡುತ್ತಾರೆ, ಕೆಲವರು ವಾಂತಿ ಬಂದಂಗೆ ಆಗುತ್ತಿದೆ ಅಂತಾರೆ, ಕೆಲವರು ಯಾಕೋ ಟಾಯ್ಲೆಟ್ಟಿಗೆ ಹೋಗಬೇಕು ಅನ್ನಿಸುತ್ತಿದೆ ಅಂತಾರೆ. ಇದಕ್ಕೆ ಕಾರಣ, ಯರ್ರಾಬಿರ್ರಿ ಊಟ ಮಾಡಿದ ಮೇಲೆ ಸಖತ್ತಾಗಿ ಹಣ್ಣನ್ನು ಇಳಿಸಿರುತ್ತಾರೆ. ಇದಕ್ಕೆಲ್ಲ ಕಾರಣ ಊಟವಾದ ಕೂಡಲೆ ಹಣ್ಣು ತಿಂದದ್ದು.
ಜಠರದಲ್ಲಿ ಸೇರಿದ ಆಹಾರದ ಜೊತೆ ಹಣ್ಣು ಕೂಡ ಸೇರುತ್ತಿದ್ದಂತೆ ಹೆಚ್ಚಿನ ಆಮ್ಲ ಬಿಡುಗಡೆಯಾಗಿ ಮೇಲಿನ ತಳಮಳಗಳು ಪ್ರಾರಂಭವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ತಿಂದರೆ ಅದು ಜಠರದ ಮೂಲಕ ನೇರವಾಗಿ ಸಣ್ಣಕರುಳನ್ನು ಸೇರುತ್ತದೆ. ಊಟವಾದ ಮೇಲೆ ತಿಂದರೆ ಸಣ್ಣಕರುಳಿಗೆ ನೇರವಾಗಿ ಸೇರದೆ ಆಹಾರದೊಡನೆ ಕೂಡಿ ಹೊಟ್ಟೆಯೂ ಹಾಳು, ಆರೋಗ್ಯವೂ ಹಾಳು.
ಪ್ರಯೋಜನಗಳು : ಖಾಲಿ ಹೊಟ್ಟೆಯಲ್ಲಿ ತಿಂದರೆ ಅನೇಕ ಪ್ರಯೋಜನಗಳಿವೆ. ಹಣ್ಣುಗಳು ನಮ್ಮ ಪಚನಕ್ರಿಯೆಯನ್ನು ಸರಳವಾಗಿಸುತ್ತವೆ. ಜಠರದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ. ಚೈತನ್ಯದ ಚಿಲುಮೆಯನ್ನಾಗಿ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಕೂದಲು ಬೇಗನೆ ನೆರೆಯುವುದನ್ನು, ತಲೆ ಬೋಳಾಗುವುದನ್ನು, ಕಣ್ಣಿನ ಸುತ್ತ ಕಪ್ಪು ಕಲೆಗಳಾಗುವುದನ್ನು, ಬೇಗನೆ ಸುಸ್ತಾಗುವುದನ್ನು ತಪ್ಪಿಸುತ್ತದೆ.
ಈ ವಿಷಯ ಕುರಿತಂತೆ ಸಾಕಷ್ಟು ಸಂಶೋಧನೆ ಮಾಡಿರುವ ಡಾ. ಹರ್ಬರ್ಟ್ ಶೆಲ್ಟನ್ ಪ್ರಕಾರ, ಹಣ್ಣು ತಿನ್ನವುದು ಕೂಡ ಒಂದು ಕಲೆಯೆ. ಇಂಥದೇ ಸಮಯದಲ್ಲಿ ತನ್ನಬೇಕು, ಇಷ್ಟೇ ತಿನ್ನಬೇಕು, ಇಂತಿಂಥ ಪ್ರಕೃತಿಯವರು ಇಂತಿಂಥವೇ ಹಣ್ಣು ತಿನ್ನಬೇಕು ಎಂಬುದು ಕೂಡ ಒಂದು ನಿಯಮವೇ. ಈ ನಿಯಮವನ್ನು ಅತ್ಯಂತ ನಿಷ್ಠರಾಗಿ ಪಾಲಿಸಿದರೆ ಮನೋಕಾಂತಿ, ದೇಹಸೌಂದರ್ಯ, ಆರೋಗ್ಯಭಾಗ್ಯ ನಮ್ಮದಾಗುತ್ತದೆ. ದೇಹದ ತೂಕವನ್ನು ಕೂಡ ಹಣ್ಣುಗಳು ಸಮತೋಲನದಲ್ಲಿ ಇಡುತ್ತದೆ.
ಇನ್ನು ಹಣ್ಣುಗಳನ್ನು ಹೇಗೆ ತಿನ್ನಬೇಕು, ಯಾವ್ಯಾವ ಹಣ್ಣಿನಲ್ಲಿ ಏನೇನು ಗುಣಗಳಿರುತ್ತವೆ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡೋಣ.



Click it and Unblock the Notifications
