Just In
Don't Miss
- News
2021ರಲ್ಲಿ ಭಾರತದ ಆರ್ಥಿಕತೆ ಶೇ. 11.5ರಷ್ಟು ಏರಿಕೆಯಾಗಲಿದೆ: ಐಎಂಎಫ್
- Automobiles
ಹ್ಯುಂಡೈ ಹೊಸ ಕ್ರೆಟಾ 7 ಸೀಟರ್ ಎಸ್ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Movies
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಯಿಯಲ್ಲಿ ನೀರೂರಿಸುವ ರುಚಿಯಾದ ಈರುಳ್ಳಿ ಚಟ್ನಿ
ಚಟ್ನಿಯು ಬಹುತೇಕ ಎಲ್ಲಾ ಬಗೆಯ ತಿಂಡಿ ತಿನಿಸುಗಳ ಜೊತೆಯಲ್ಲಿ ಸೇವಿಸಬಹುದಾದ ಖಾದ್ಯವಾಗಿರುತ್ತದೆ. ಭಾರತೀಯ ಚಟ್ನಿಯು ಸಿಹಿ, ಹುಳಿ ಮತ್ತು ಮಸಾಲೆಗಳಿಂದ ಕೂಡಿದ್ದು, ತನ್ನ ವಿಭಿನ್ನ ಶೈಲಿಯ ರುಚಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರು ಚಟ್ನಿಯನ್ನು ರೋಟಿ, ಅನ್ನ, ಚಾಟ್ ಮತ್ತು ಬಜ್ಜಿ, ವಡೆ ಮುಂತಾದವುಗಳ ಜೊತೆಯಲ್ಲಿ ಸೇವಿಸುತ್ತಾರೆ. ಚಟ್ನಿಯ ಮತ್ತೊಂದು ವಿಶೇಷತೆಯೇನೆಂದರೆ ಇದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.
ಒಂದು ವೇಳೆ ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ನಿಮ್ಮ ಸಂಬಂಧಿಕರು ಅಥವಾ ನೆಂಟರು ಆಗಮಿಸಿದರೆ, ಆಗ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನೆಲ್ಲ ಸೇರಿಸಿ, ಒಂದಿಷ್ಟು ಚಟ್ನಿಯನ್ನು ನೀವು ರುಬ್ಬಿಕೊಳ್ಳಬಹುದು. ಅದನ್ನು ಊಟದಲ್ಲಿ ಸಹ ಬಡಿಸಬಹುದು. ಬನ್ನಿ ಇಂದು ನಾವು ವಿಶೇಷವಾದ ಈರುಳ್ಳಿ ಚಟ್ನಿಯನ್ನು ಮಾಡುವುದನ್ನು ತಿಳಿದುಕೊಳ್ಳೋಣ. ಅದು ದೋಸೆಯಾಗಿರಲಿ, ಪರೋಟವಾಗಿರಲಿ, ಅಥವಾ ಬಜ್ಜಿಯಾಗಿರಲಿ ಈ ಚಟ್ನಿ ಅದರ ಜೊತೆಗೆ ಸುಮ್ಮನೆ ಸೇರಿಕೊಂಡು ನಿಮ್ಮ ನಾಲಿಗೆಗೆ ರುಚಿಯನ್ನು ನೀಡುತ್ತದೆ. ಬನ್ನಿ ಇಂದು ರಾತ್ರಿಗೆ ಖಾರವಾದ ಈರುಳ್ಳಿ ಚಟ್ನಿಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ.
*ಪ್ರಮಾಣ: 4-5 ಜನರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ : 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 10 ನಿಮಿಷಗಳು
ನಿಮಗೆ ಬೇಕಾದ ಪದಾರ್ಥಗಳು
*ಈರುಳ್ಳಿಗಳು - 3 (ಕತ್ತರಿಸಿದಂತಹುದು)
*ಕೆಂಪು ಒಣ ಮೆಣಸಿನಕಾಯಿಗಳು- 7-8
*ಹುರಿದ ಕಡಲೆ ಹಿಟ್ಟು - 1 ಟೇ.ಚಮಚ
*ಹುಣಸೆ ತಿರುಳು - 1 ಟೀ.ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಬೆಲ್ಲ - 1 ಟೀ. ಚಮಚ
*ಎಣ್ಣೆ - 1 ಟೀ. ಚಮಚ
ಪೇರಳೆ ಹಣ್ಣು ಮತ್ತು ಒಣದ್ರಾಕ್ಷಿಯ ಚಟ್ನಿ
ಮಾಡುವ ವಿಧಾನ
1. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಮೆಣಸಿನ ಕಾಯಿಗಳನ್ನು ಸ್ವಲ್ಪ ಸಮಯ ಉರಿಯಿರಿ.
2. ನಂತರ ಅದಕ್ಕೆ ಈರುಳ್ಳಿ ಚೂರುಗಳನ್ನು ಹಾಕಿ, ಹೊಂಬಣ್ಣಕ್ಕೆ ಬರುವವರೆಗೆ ಉರಿಯಿರಿ.
3. ಇದಕ್ಕೆ ಹುರಿದ ಕಡಲೆ ಹಿಟ್ಟು, ಉಪ್ಪು, ಹುಣಸೆ ತಿರುಳು ಮತ್ತು ಬೆಲ್ಲವನ್ನು ಹಾಕಿ. 4-5 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿಯಿರಿ. ಬೆಲ್ಲವು ಸಂಪೂರ್ಣವಾಗಿ ಕರಗಬೇಕು ಎಂಬುದನ್ನು ಗಮನದಲ್ಲಿಡಿ.
4. ಈಗ ಹುರಿಯನ್ನು ಆರಿಸಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.
5. ಈಗ ಮಿಶ್ರಣವನ್ನು ದಪ್ಪನಾದ ಪೇಸ್ಟ್‌ನಂತೆ ಕಲೆಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ.
6. ಈಗ ಈ ಖಾರವಾದ ಚಟ್ನಿಯನ್ನು ದೋಸೆ ಅಥವಾ ಇಡ್ಲಿಗಳ ಜೊತೆಯಲ್ಲಿ ಬಡಿಸಿ. ಇದು ಇಡ್ಲಿ ಮತ್ತು ದೋಸೆಗಳ ಜೊತೆಯಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
ಪೋಷಕಾಂಶಗಳ ಪ್ರಮಾಣ
ಈರುಳ್ಳಿ ಚಟ್ನಿಯಲ್ಲಿ ಕ್ಯಾಲೊರಿಗಳ ಪ್ರಮಾಣ ಕಡಿಮೆಯಿರುತ್ತದೆ. ಈರುಳ್ಳಿಗಳಲ್ಲಿ ವಿಟಮಿನ್ ಸಿ ಪ್ರಮಾಣ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ರೋಮಿಯಂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಸಲಹೆ
ನಿಮಗೆ ಹುಣಸೆ ತಿರುಳು ಇಷ್ಟವಾಗದಿದ್ದಲ್ಲಿ, ನಿಂಬೆ ರಸವನ್ನು ಇದಕ್ಕಾಗಿ ಬಳಸಬಹುದು.