Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆರಳು ಚೀಪುವ ರುಚಿ.. ಈ ರೀತಿ ಹೋಟೆಲ್ ಶೈಲಿಯ ಚಿಲ್ಲಿ ಗಾರ್ಲಿಕ್ ದೋಸೆ ಮಾಡಿ! ಇಲ್ಲಿದೆ ಸುಲಭ ರೆಸಿಪಿ
ಬೆರಳು ಚೀಪುವ ರುಚಿ.. ಈ ರೀತಿ ರವಾ ದೋಸೆ ಮಾಡಿದರೆ ಎಲ್ಲರೂ ಬೆರಳು ಚೀಪುತ್ತಾ ತಿಂತಾರೆ! ಹೋಟೆಲ್ ಶೈಲಿಯ 'ಚಿಲ್ಲಿ ಗಾರ್ಲಿಕ್ ರವಾ ದೋಸೆ' (Chilli Garlic Rava Dosa) ಮಾಡುವ ಸೀಕ್ರೆಟ್ ಇಲ್ಲಿದೆ. ಹೌದು, ದಕ್ಷಿಣ ಭಾರತದ ತಿಂಡಿಗಳು ಅಂದ ತಕ್ಷಣ ಇಡ್ಲಿ ಮತ್ತು ದೋಸೆಗಳು ನೆನಪಿಗೆ ಬರುತ್ತವೆ. ಇವುಗಳಲ್ಲಿ ಗರಿಗರಿಯಾದ ರವಾ ದೋಸೆ ಹಲವರ ಅಚ್ಚುಮೆಚ್ಚಿನ ತಿನಿಸು.
ಸಾಂಪ್ರದಾಯಿಕ ರವಾ ದೋಸೆಗಿಂತ ಭಿನ್ನವಾಗಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸಿನಕಾಯಿಯ ಸುವಾಸನೆಯನ್ನು ಒಳಗೊಂಡಿರುವ 'ಚಿಲ್ಲಿ ಗಾರ್ಲಿಕ್ ರವಾ ದೋಸೆ' ಒಂದು ವಿಶಿಷ್ಟ ರುಚಿ ಹೊಂದಿದೆ. ಈ ದೋಸೆ ತಯಾರಿಸಲು ಹಿಟ್ಟು ಹುದುಗಿಸುವ ಗೋಜಿಲ್ಲ. ಕೇವಲ 20 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಗರಿಗರಿಯಾದ ಮತ್ತು ಖಾರವಾದ ಚಿಲ್ಲಿ ಗಾರ್ಲಿಕ್ ರವಾ ದೋಸೆಯನ್ನು ಮನೆಯಲ್ಲೇ ಸುಲಭವಾಗಿ ಸಿದ್ಧಪಡಿಸಬಹುದು. ಚಿಲ್ಲಿ ಗಾರ್ಲಿಕ್ ರವಾ ದೋಸೆ ತಯಾರಿಸಲು ಬೇಕಾದ ಸಾಮಗ್ರಿಗಳು ಮತ್ತು ಮಾಡುವ ವಿಧಾನ (Chilli Garlic Rava Dosa Recipe) ಇಲ್ಲಿದೆ.

ಚಿಲ್ಲಿ ಗಾರ್ಲಿಕ್ ರವಾ ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಹಿಟ್ಟಿಗೆ
• ಚಿರೋಟಿ ರವೆ (ಸೂಜಿ) - 1 ಕಪ್
• ಅಕ್ಕಿ ಹಿಟ್ಟು - ಅರ್ಧ ಕಪ್
• ಮೈದಾ ಹಿಟ್ಟು - ಅರ್ಧ ಕಪ್
• ಮೊಸರು - ಅರ್ಧ ಕಪ್
• ನೀರು - ಅಗತ್ಯಕ್ಕೆ ತಕ್ಕಂತೆ (ಹಿಟ್ಟು ತೆಳ್ಳಗಿರಲಿ)
• ಉಪ್ಪು - ರುಚಿಗೆ ತಕ್ಕಂತೆ
ಚಿಲ್ಲಿ ಗಾರ್ಲಿಕ್ ಮಿಶ್ರಣಕ್ಕಾಗಿ
• ಬೆಳ್ಳುಳ್ಳಿ ಎಸಳು - 6 ರಿಂದ 9
• ಹಸಿ ಮೆಣಸಿನಕಾಯಿ - 2 ರಿಂದ 3
• ಶುಂಠಿ - 1 ಸಣ್ಣ ತುಂಡು (ತುರಿದಿದ್ದು)
• ಜೀರಿಗೆ - 1ಚಮಚ
• ಕರಿಬೇವು - 8 ರಿಂದ 10 ಎಲೆಗಳು (ಸಣ್ಣಗೆ ಹೆಚ್ಚಿದ್ದು)
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಕಾಳುಮೆಣಸಿನ ಪುಡಿ - ಅರ್ಧ ಚಮಚ
ಚಿಲ್ಲಿ ಗಾರ್ಲಿಕ್ ರವಾ ದೋಸೆ ತಯಾರಿಸುವ ವಿಧಾನ
- ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ ರವೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಅರ್ಧ ಕಪ್ ಮೊಸರನ್ನು ಹಾಕಿ. ಗಂಟುಗಳಾಗದಂತೆ ನಿಧಾನವಾಗಿ ನೀರು ಸೇರಿಸುತ್ತಾ ದೋಸೆ ಹಿಟ್ಟನ್ನು ಮಜ್ಜಿಗೆಗಿಂತಲೂ ತೆಳ್ಳಗಿನ ಹದಕ್ಕೆ ಕಲೆಹಾಕಿ. ಈ ಹಿಟ್ಟನ್ನು ಸುಮಾರು 20 ನಿಮಿಷಗಳ ಕಾಲ ನೆನೆಯಲು ಬಿಡಿ.
- ಹಿಟ್ಟು ನೆನೆದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ತುರಿದ ಶುಂಠಿ, ಜೀರಿಗೆ, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರಿಂದ ದೋಸೆ ಹಿಟ್ಟಿಗೆ ಮಸಾಲೆಯ ಘಮ ಬರುತ್ತದೆ.
- ದೋಸೆ ಹಂಚನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕಾಯಿಸಿ. ರವಾ ದೋಸೆ ಮಾಡುವಾಗ ಹಂಚು ಅತಿ ಹೆಚ್ಚು ಕಾದಿರಬೇಕು. ಆಗಲೇ ದೋಸೆಯಲ್ಲಿ ರಂಧ್ರಗಳು ಬಂದು ಗರಿಗರಿಯಾಗಿ ಮೂಡಿಬರುತ್ತವೆ. ಹಂಚು ಬಿಸಿಯಾದ ಬಳಿಕ ಸ್ವಲ್ಪ ಎಣ್ಣೆಯನ್ನು ಸವರಿ.
- ಪ್ರತಿ ದೋಸೆ ಹಾಕುವ ಮೊದಲು, ಪಾತ್ರೆಯ ತಳದಲ್ಲಿ ರವೆ ಕುಳಿತಿರುವುದರಿಂದ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿಕೊಳ್ಳಿ.
- ಈಗ ಒಂದು ದೊಡ್ಡ ಸೌಟಿನ ಸಹಾಯದಿಂದ ಹಂಚಿನ ಹೊರಭಾಗದಿಂದ ಶುರು ಮಾಡಿ ಮಧ್ಯಭಾಗದವರೆಗೆ ಹಿಟ್ಟನ್ನು ತೆಳ್ಳಗೆ ಸುರಿಯಿರಿ. ರವಾ ದೋಸೆಯನ್ನು ಹರಡುವ ಬದಲು ಸುರಿಯಬೇಕು ಎಂಬುದು ಮುಖ್ಯ.
- ದೋಸೆಯ ಸುತ್ತಲೂ ಮತ್ತು ಅದರ ಮಧ್ಯದಲ್ಲಿ ಸ್ವಲ್ಪ ಎಣ್ಣೆ ಹಾಕಿ. ಉರಿಯನ್ನು ಮಧ್ಯಮ ಹಂತದಲ್ಲಿ ಇಟ್ಟು ದೋಸೆ ಕೆಂಪಗಾಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಬೇಯಿಸಿ. ಈ ದೋಸೆಯನ್ನು ಮಗುಚಿ ಹಾಕುವ ಅವಶ್ಯಕತೆಯಿಲ್ಲ.
- ಇಷ್ಟು ಮಾಡಿದರೆ ಸಾಕು ಚಿಲ್ಲಿ ಗಾರ್ಲಿಕ್ ರವಾ ದೋಸೆ (Garlic Dosa Recipe) ಸವಿಯಲು ಸಿದ್ಧ.
- ಈ ಬಿಸಿ ಬಿಸಿಯಾದ ಮತ್ತು ಘಮಘಮಿಸುವ ಚಿಲ್ಲಿ ಗಾರ್ಲಿಕ್ ರವಾ ದೋಸೆಯನ್ನು ಕಾಯಿ ಚಟ್ನಿ ಅಥವಾ ಖಾರ ಚಟ್ನಿಯೊಂದಿಗೆ ಬಡಿಸಿ ಸವಿಯಬಹುದು.



Click it and Unblock the Notifications