Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ?
ಕ್ಯಾಪ್ಸಿಕಂನಿಂದ ಈ ರೀತಿ ಮಸಾಲಾ ಸಬ್ಜಿ ಮಾಡಿ ನೋಡಿ! ಲಂಚ್ ಬಾಕ್ಸ್ಗೆ ಇದುವೇ ಬೆಸ್ಟ್. ದೊಣ್ಣೆ ಮೆಣಸಿನಕಾಯಿ ಇಷ್ಟಪಡದವರೂ ಫಿದಾ ಆಗ್ತಾರೆ. ಅತೀ ಸುಲಭ ರೆಸಿಪಿ ಇಲ್ಲಿದೆ. ಹೌದು, ಮಧ್ಯಾಹ್ನದ ಊಟ ಅಥವಾ ಲಂಚ್ ಬಾಕ್ಸ್ಗೆ ಚಟಪಟ ಹಾಗೂ ರುಚಿಕರವಾದ ಖಾದ್ಯ ಬೇಕಾಗಿದೆಯೇ? ಹಾಗಿದ್ದರೆ ಕ್ಯಾಪ್ಸಿಕಂ-ಟೊಮೆಟೊ ಸಬ್ಜಿ (Capsicum Tomato Sabji) ಅತ್ಯುತ್ತಮ ಆಯ್ಕೆಯಾಗಬಹುದು.
ಕಡಿಮೆ ಸಮಯದಲ್ಲಿ, ಅತಿ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಈ ಮಸಾಲೆಯುಕ್ತ ಪಲ್ಯವು ಚಪಾತಿ, ರೊಟ್ಟಿ, ಅಥವಾ ಬಿಸಿ ಅನ್ನದ ಜೊತೆಗೆ ಅದ್ಭುತವಾಗಿ ಹೊಂದಿಕೆಯಾಗುತ್ತದೆ. ಕೇವಲ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಕರಿ ಅಥವಾ ಸಬ್ಜಿಯನ್ನು ಮನೆಯಲ್ಲೇ ಸಿದ್ಧಪಡಿಸಬಹುದು.
ದೊಣ್ಣೆ ಮೆಣಸಿನಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೆ, ಟೊಮೆಟೊ ಈ ಪಲ್ಯಕ್ಕೆ ಹಿತವಾದ ಹುಳಿ ಹಾಗೂ ಮಸಾಲೆಯುಕ್ತ ರುಚಿಯನ್ನು ನೀಡುತ್ತದೆ. ಈ ಕ್ಯಾಪ್ಸಿಕಂ ಮತ್ತು ಟೊಮೆಟೊ ಸಬ್ಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ಸಿಂಪಲ್ ವಿಧಾನ (Shimla Mirch Tamatar Sabji recipe) ಇಲ್ಲಿದೆ.
ಕ್ಯಾಪ್ಸಿಕಂ & ಟೊಮೆಟೊ ಸಬ್ಜಿಗೆ ಬೇಕಾಗುವ ಸಾಮಗ್ರಿಗಳು
• ಕ್ಯಾಪ್ಸಿಕಂ
• ಟೊಮೆಟೊ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಅರಿಶಿನ ಪುಡಿ
• ಕೆಂಪು ಮೆಣಸಿನ ಪುಡಿ
• ಧನಿಯಾ ಪುಡಿ
• ಗರಂ ಮಸಾಲಾ
• ಜೀರಿಗೆ
• ಅಡುಗೆ ಎಣ್ಣೆ
• ರುಚಿಗೆ ತಕ್ಕಷ್ಟು ಉಪ್ಪು
• ಕೊತ್ತಂಬರಿ ಸೊಪ್ಪು
ಕ್ಯಾಪ್ಸಿಕಂ & ಟೊಮೆಟೊ ಸಬ್ಜಿ ತಯಾರಿಸುವ ವಿಧಾನ
- ಮೊದಲು, ಬಾಣಲೆಗೆ ಎರಡು ದೊಡ್ಡ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆ ಸೇರಿಸಿ ಚಟಪಟ ಎಂದಾಕ್ಷಣ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ಈರುಳ್ಳಿ ಬೆಂದ ನಂತರ ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಹಸಿ ವಾಸನೆ ಹೋಗಲಾಡಿಸಿ. ಬಳಿಕ ಕತ್ತರಿಸಿದ ಟೊಮೆಟೊಗಳನ್ನು ಹಾಕಿ, ಅವು ಮೃದುವಾಗುವವರೆಗೆ ಬೇಯಿಸಿ.
- ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ಅರಿಶಿನ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಮಸಾಲೆಗಳು ಎಣ್ಣೆ ಬಿಟ್ಟುಕೊಳ್ಳುವವರೆಗೆ ಸುಮಾರು ಎರಡು ನಿಮಿಷಗಳ ಕಾಲ ಕೈಯಾಡಿಸಿ.
- ಸಿದ್ಧವಾದ ಮಸಾಲೆಗೆ ಕತ್ತರಿಸಿದ ಕ್ಯಾಪ್ಸಿಕಂ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಚಿಮುಕಿಸಿ, ಬಾಣಲೆಯ ಮೇಲೆ ಮುಚ್ಚಳ ಮುಚ್ಚಿ ಐದು ಅಥವಾ ಎಂಟು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಕ್ಯಾಪ್ಸಿಕಂ ಅತಿಯಾಗಿ ಬೇಯದೆ, ಸ್ವಲ್ಪ ಗರಿಗರಿಯಾಗಿದ್ದರೆ ತಿನ್ನಲು ಹೆಚ್ಚು ರುಚಿ.
- ಪಲ್ಯ ಸಿದ್ಧವಾದ ನಂತರ, ಅರ್ಧ ಚಮಚ ಗರಂ ಮಸಾಲಾ ಸೇರಿಸಿ ಕಲಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಒಲೆಯಿಂದ ಇಳಿಸಿ. ಬಿಸಿಬಿಸಿಯಾದ ಕ್ಯಾಪ್ಸಿಕಂ-ಟೊಮೆಟೊ ಸಬ್ಜಿ (Capsicum Masala Curry) ಈಗ ಸಿದ್ಧ!
ಈ ಸಬ್ಜಿಯ ವಿಶೇಷತೆಗಳು
ಕೇವಲ ಹತ್ತು ಅಥವಾ ಹದಿನೈದು ನಿಮಿಷಗಳಲ್ಲಿ ಸಿದ್ಧವಾಗುವುದರಿಂದ, ಇದು ಬೆಳಗ್ಗೆ ಕಚೇರಿಗೆ ಅಥವಾ ಶಾಲೆಗೆ ಹೋಗುವವರಿಗೆ ವರದಾನವಾಗಿದೆ. ಸಮಯ ಉಳಿಸಲು ಇದು ಉತ್ತಮ ಆಯ್ಕೆ.
ಕಡಿಮೆ ಎಣ್ಣೆಯ ಬಳಕೆಯಿಂದಾಗಿ, ಇದು ಡಯಟ್ ಮಾಡುವವರಿಗೂ ಸೂಕ್ತ. ಇದರ ಬಹುಮುಖಿ ಗುಣದಿಂದಾಗಿ ಚಪಾತಿ (Side dish for Chapati), ರೊಟ್ಟಿ, ಫುಲ್ಕಾ ಮಾತ್ರವಲ್ಲದೆ, ದಾಲ್-ಅನ್ನದ ಜೊತೆಗೂ ಸೈಡ್ ಡಿಶ್ ಆಗಿ ಸವಿಯಬಹುದು.



Click it and Unblock the Notifications
