Latest Updates
-
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ!
ಬೆರಳು ಚೀಪುವಷ್ಟು ರುಚಿ.. ಹೀಗೆ ಮಾಡಿ ಸೋರೆಕಾಯಿ ಆಲೂ ಮಸಾಲಾ ಸಬ್ಜಿ! ನೀವೊಮ್ಮೆ ಟ್ರೈ ಮಾಡಿ
ರಾತ್ರಿಯ ಊಟಕ್ಕೆ ಸಖತ್ ರುಚಿ.. ಹೀಗೆ ಮಾಡಿ ಸೋರೆಕಾಯಿ ಆಲೂಗಡ್ಡೆ ಮಸಾಲಾ ಸಬ್ಜಿ! ಈ ರೀತಿ ಸಬ್ಜಿ ಮಾಡಿದ್ರೆ ಸೋರೆಕಾಯಿ ಅಂದ್ರೆ ಇಷ್ಟ ಇಲ್ದವರು ಕೂಡ ಬೆರಳು ಸಪರಿಸಿ ತಿಂತಾರೆ. ಹೌದು, ರಾತ್ರಿಯ ಊಟಕ್ಕೆ ರುಚಿಕರವಾದ ಮತ್ತು ಆರೋಗ್ಯಕರವಾದ ಪಲ್ಯ ಹುಡುಕುತ್ತಿದ್ದೀರಾ? ಹಾಗಿದ್ದರೆ ಸೋರೆಕಾಯಿ ಆಲೂಗಡ್ಡೆ ಮಸಾಲಾ ಸಬ್ಜಿ (Lauki Aloo Sabji) ಒಂದು ಅತ್ಯುತ್ತಮ ಆಯ್ಕೆ.
ಸೋರೆಕಾಯಿ ಎಂದರೆ ಸಾಮಾನ್ಯವಾಗಿ ಹಿಂಜರಿಯುವವರಿಗೆ ಈ ರೆಸಿಪಿ ಖಂಡಿತವಾಗಿಯೂ ಇಷ್ಟವಾಗಲಿದೆ. ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಲಿದೆ. ಪ್ರತಿದಿನ ಡಿನ್ನರ್ಗೆ ಏನು ಮಾಡೋದು? ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಅದರಲ್ಲೂ ರೊಟ್ಟಿ ಅಥವಾ ಪರೋಟದ ಜೊತೆಗೂಡಿಸಲು ಆರೋಗ್ಯಕರ ಹಾಗೂ ಸುವಾಸನಾಭರಿತ ಪಲ್ಯ ಬೇಕು ಎನಿಸಿದಾಗ, ಸೋರೆಕಾಯಿ ಆಲೂಗಡ್ಡೆ ಸಬ್ಜಿ ಸೂಕ್ತ ಪರಿಹಾರ. ಇದು ಕೇವಲ ಬಾಯಿರುಚಿಯನ್ನಷ್ಟೇ ಹೆಚ್ಚಿಸದೆ, ಜೀರ್ಣಕ್ರಿಯೆಗೂ ಸಹಕಾರಿ.
ಬೇಸಿಗೆಯಲ್ಲಿ ದೇಹ ತಂಪು
ಸೋರೆಕಾಯಿಯಲ್ಲಿ ನೀರಿನಂಶ ಹೇರಳವಾಗಿದ್ದು, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಇದು ಅತ್ಯಂತ ಉಪಯುಕ್ತ. ಆದರೆ, ಇದರ ಸಪ್ಪೆ ರುಚಿಯಿಂದಾಗಿ ಮಕ್ಕಳು ಮಾತ್ರವಲ್ಲದೆ ಯುವಜನರೂ ಇದನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ, ಈ ಮಸಾಲೆಯುಕ್ತ ಸಬ್ಜಿ ನಿಮ್ಮ ಮನೆಯವರ ಸೋರೆಕಾಯಿ ಕುರಿತಾದ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಿಸಬಲ್ಲದು. ಸೋರೆಕಾಯಿ ಆಲೂಗಡ್ಡೆ ಸಬ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ (Lauki Aloo Sabji Recipe) ಇಲ್ಲಿದೆ.
ಸೋರೆಕಾಯಿ ಆಲೂಗಡ್ಡೆ ಸಬ್ಜಿಗೆ ಬೇಕಾಗುವ ಸಾಮಗ್ರಿಗಳು
• ಸೋರೆಕಾಯಿ (ಸಿಪ್ಪೆ ಸುಲಿದು ಹೆಚ್ಚಿದ್ದು)
• ಆಲೂಗಡ್ಡೆ
• ಈರುಳ್ಳಿ
• ಟೊಮೆಟೊ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಹಸಿ ಮೆಣಸಿನಕಾಯಿ
• ಧನಿಯಾ ಪುಡಿ
• ಅಚ್ಚಖಾರದ ಪುಡಿ
• ಅರಿಶಿನ ಪುಡಿ
• ಜೀರಿಗೆ
• ಎಣ್ಣೆ
• ರುಚಿಗೆ ತಕ್ಕಷ್ಟು ಉಪ್ಪು
• ಕೊತ್ತಂಬರಿ ಸೊಪ್ಪು
ಸಬ್ಜಿ ತಯಾರಿಸುವ ವಿಧಾನ
- ಮೊದಲಿಗೆ, ದಪ್ಪ ತಳದ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ. ಅದು ಚಟಪಟ ಎಂದಾಗ ಹೆಚ್ಚಿದ ಈರುಳ್ಳಿ ಸೇರಿಸಿ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿ.
- ಬಾಡಿಸಿದ ನಂತರ ಹೆಚ್ಚಿದ ಟೊಮೆಟೊಗಳನ್ನು ಹಾಕಿ ಮೃದುವಾಗುವವರೆಗೆ ಬೇಯಿಸಿ. ಮಸಾಲೆಯ ಆಚೀಚೆ ಎಣ್ಣೆ ಬಿಡಲು ಆರಂಭಿಸಿದಾಗ, ಅದು ಹದವಾಗಿದೆ ಎಂದು ತಿಳಿಯಿರಿ.
- ಈಗ ಉರಿಯನ್ನು ಕಡಿಮೆ ಮಾಡಿ. ನಂತರ ಅರಿಶಿನ, ಧನಿಯಾ ಪುಡಿ, ಕೆಂಪು ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
- ಈಗ ಸಿದ್ಧವಾದ ಮಸಾಲೆಗೆ ಹೆಚ್ಚಿದ ಆಲೂಗಡ್ಡೆ ಮತ್ತು ಸೋರೆಕಾಯಿ ತುಂಡುಗಳನ್ನು ಹಾಕಿ. ಸುಮಾರು ಐದು ನಿಮಿಷಗಳ ಕಾಲ ಮಸಾಲೆಯಲ್ಲೇ ಚೆನ್ನಾಗಿ ಹುರಿಯಿರಿ. ಇದು ಮಸಾಲೆ ರುಚಿ ತರಕಾರಿಗಳ ಒಳಗೆ ಹಿಡಿಯಲು ಸಹಾಯ ಮಾಡುತ್ತದೆ.
- ನಂತರ ಅರ್ಧ ಕಪ್ ನೀರನ್ನು ಸೇರಿಸಿ. ನಿಮಗೆ ಹೆಚ್ಚು ಗ್ರೇವಿ ಬೇಕಿದ್ದರೆ, ಇನ್ನಷ್ಟು ನೀರು ಸೇರಿಸಬಹುದು. ತಕ್ಷಣ ಕಡಾಯಿಯನ್ನು ಮುಚ್ಚಳದಿಂದ ಮುಚ್ಚಿ.
- ಮುಚ್ಚಳದಿಂದ ಮುಚ್ಚಿದ ನಂತರ, ಹನ್ನೆರಡರಿಂದ ಹದಿನೈದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
- ತರಕಾರಿಗಳು ಸಂಪೂರ್ಣವಾಗಿ ಬೆಂದ ನಂತರ, ಸ್ಟವ್ ಆಫ್ ಮಾಡಿ, ಅದರ ಮೇಲೆ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ರುಚಿಕರವಾದ ಸಬ್ಜಿ ಸಿದ್ಧ.
- ಈ ಬಿಸಿಬಿಸಿ ಸೋರೆಕಾಯಿ ಆಲೂಗಡ್ಡೆ ಸಬ್ಜಿ ಪರೋಟ, ಚಪಾತಿ ಅಥವಾ ಫುಲ್ಕಾದೊಂದಿಗೆ ಅತ್ಯುತ್ತಮವಾಗಿ ಸವಿಯಬಹುದು.
- ಬಿಸಿ ಅನ್ನದ ಜೊತೆಗೆ ಪಕ್ಕಪಲ್ಯವಾಗಿ ಕೂಡ ಇದು ಅದ್ಭುತ ರುಚಿ ನೀಡುತ್ತದೆ. ಸೋರೆಕಾಯಿ ಬೇಗ ಬೇಯುತ್ತದೆ. ಹಾಗಾಗಿ, ಹೆಚ್ಚು ನೀರು ಸೇರಿಸಬೇಡಿ. ಸಣ್ಣ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಸಬ್ಜಿ ಹೆಚ್ಚು ರುಚಿಯಾಗಿರುತ್ತದೆ.



Click it and Unblock the Notifications
