For Quick Alerts
ALLOW NOTIFICATIONS  
For Daily Alerts

ಆಹಾ ನಾಲಿಗೆಯ ಸ್ವಾದವನ್ನು ಹೆಚ್ಚಿಸುವ ಮೊಳಕೆ ಕಾಳು ರೆಸಿಪಿ

|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ ಪದ್ಧತಿಯನ್ನು ತಯಾರಿಸುವುದು ಕೂಡ ತುಸು ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ ವಾಲುವುದು ಸಾಮಾನ್ಯ.

ಆದರೂ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮತ್ತು ಆರೋಗ್ಯ ರುಚಿಯನ್ನು ಒದಗಿಸುವ ಒಂದು ಸರಳ ಉಪಹಾರ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಅಂತಹುದೇ ವಿಶೇಷ ಉಪಹಾರವಾದ ಮೊಳಕೆ ಬರಿಸಿದ ಕಾಳ ಬಗ್ಗೆ ನಿಮಗೆ ಪರಿಚಯಿಸುತ್ತಿದ್ದೇವೆ. ಮೊಳಕೆ ಬರಿಸಿದ ಕಾಳುಗಳಲ್ಲಿ ಪೌಷ್ಟಿಕಾಂಶ ಅಧಿಕವಿರುತ್ತದೆ ಅನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಕಾಳುಗಳನ್ನು ಹಾಗೇ ತಿನ್ನುವ ಬದಲು ಮೊಳಕೆ ಬರಿಸಿ ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚಿನ ಆರೋಗ್ಯಕರ ಲಾಭ ಪಡೆಯಬಹುದು. ಬನ್ನಿ ಇಂತಹ ಸರಳ ರೆಸಿಪಿ ಮಾಡುವ ವಿಧಾನ ಬಗ್ಗೆ ತಿಳಿಯೋಣ... ಉಲ್ಲಾಸದ ಮನಸ್ಸಿಗೆ ಮುದವನ್ನು ನೀಡುವ ಸೇಮಿಗೆ ಉಪ್ಪಿಟ್ಟು!

Tasty Sprouts Masala: Instant Breakfast Recipe

ಪ್ರಮಾಣ - ಎರಡು ಮಂದಿಗೆ ಸಾಕಾಗುವಷ್ಟು
ಸಮಯ - 15 ನಿಮಿಷ

ಬೇಕಾಗುವ ಸಾಮಗ್ರಿಗಳು
1. ಕಾಳುಗಳು- 1 ಕಪ್
2. ಈರುಳ್ಳಿ- 1/2 (ಸಣ್ಣದಾಗಿ ಹೆಚ್ಚಿಕೊಳ್ಳಿ)
3. ಹಸಿಮೆಣಸಿನಕಾಯಿ- 1 (ಕತ್ತರಿಸಿಕೊಳ್ಳಿ)
4. ಟೊಮೇಟೊ- 1/2 (ಕತ್ತರಿಸಿಕೊಳ್ಳಿ)
5. ನಿಂಬೆ ರಸ- 2 ಟೀ.ಚಮಚ
6. ಚಾಟ್ ಮಸಾಲ- 1 ಟೀ.ಚಮಚ
7. ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ
* ಮೊದಲು ಮೊಳಕೆ ಬರಿಸಿದ ಕಾಳುಗಳನ್ನು ಬಿಸಿನೀರಿನಲ್ಲಿ ತೊಳೆದುಕೊಳ್ಳಿ.
* ತದನಂತರ ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮೇಟೊ ಸೇರಿಸಿ ಚೆನ್ನಾಗಿ ಕಲಸಿ
* ಇನ್ನು ಉಪ್ಪು, ಚಾಟ್ ಮಸಾಲ ಹಾಕಿ ಚೆನ್ನಾಗಿ ಮಿಶ್ರ ಮಾಡಿ.
* ಕೊನೆಯಲ್ಲಿ ನಿಂಬೆ ರಸವನ್ನು ಸೇರಿಸಿ. ನಿಂಬೆ ರಸವನ್ನು ಹಾಕಿದ ನಂತರ ಹೆಚ್ಚು ಹೊತ್ತು ಇಡಬೇಡಿ. ಆರೋಗ್ಯಕ್ಕೆ ಬಹಳ ಒಳ್ಳೆಯದಾದ ಈ ಡಯೆಟ್ ಫುಡ್ ಈಗ ತಿನ್ನಲು ಸಿದ್ಧ.

English summary

Tasty Sprouts Masala: Instant Breakfast Recipe

We all know that green sprouts are very good for the health. They are easy to digest and also ease bowel movements. So, for a filling and healthy breakfast, you can try this quick recipe. Take a look at the recipe.
Story first published: Friday, January 23, 2015, 19:51 [IST]
X
Desktop Bottom Promotion