For Quick Alerts
ALLOW NOTIFICATIONS  
For Daily Alerts

ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ರುಚಿಕರ ರಾಗಿ ಉಪ್ಪಿಟ್ಟು

|

ನಮ್ಮ ದೈನಂದಿನ ಜೀವನದಲ್ಲಿ ಆಹಾರವು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆರೋಗ್ಯ ಪೂರ್ಣ ಆಹಾರವು ನಮ್ಮನ್ನು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ ಮತ್ತು ನಮ್ಮಲ್ಲಿ ಶಕ್ತಿಯನ್ನು ತುಂಬುತ್ತದೆ ಹಾಗಿದ್ದರೆ ಈ ಆರೋಗ್ಯಪೂರ್ಣ ಆಹಾರಗಳು ಹೇಗಿರಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಈ ಲೇಖನ ಖಂಡಿತ ಅದಕ್ಕೊಂದು ಉತ್ತರವಾಗುತ್ತದೆ.

ಇಂದಿನ ಲೇಖನದಲ್ಲಿ ನಿಮ್ಮ ದಿನವನ್ನು ಹೆಚ್ಚು ಸೊಗಸಾಗಿಸುವ ಒಂದು ಸ್ವಾದಿಷ್ಟಮಯ ಖಾದ್ಯದೊಂದಿಗೆ ನಾವು ಬಂದಿದ್ದು ಖಂಡಿತ ಇದು ನಿಮಗೆ ಆರೋಗ್ಯವನ್ನು ದಯಪಾಲಿಸುವುದರ ಜೊತೆಗೆ ನಿಮ್ಮ ದೇಹದ ತೂಕವನ್ನು ನಿಯಂತ್ರಿಸುತ್ತದೆ.

ರಾಗಿಯು ಹೆಚ್ಚು ತಂಪಾದ ಧಾನ್ಯವಾಗಿದ್ದು ಇದರ ಸೇವನೆಯು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ. ಹಳ್ಳಿಗಳಲ್ಲಿ ಈಗಲೂ ರಾಗಿ ರೊಟ್ಟಿ, ರಾಗಿ ಮುದ್ದೆಯನ್ನು ಸೇವಿಸಿಯೇ ತಮ್ಮ ದೈನಂದಿನ ಚಟುವಟಿಕೆಯನ್ನು ಆರಂಭಿಸುತ್ತಾರೆ. ದೇಹದ ತೂಕವನ್ನು ಈ ಧಾನ್ಯವು ನಿಯಂತ್ರಿಸುವುದರ ಜೊತೆಗೆ ನಿಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಇದು ವೃದ್ಧಿಸುತ್ತದೆ.

ಇಂದಿನ ಲೇಖನದಲ್ಲಿ ನಾವು ರಾಗಿ ಉಪ್ಪಿಟ್ಟಿನ ಅತಿ ಸರಳ ತಯಾರಿ ವಿಧಾನವನ್ನು ನೀಡಿದ್ದು ಇದು ನಿಜಕ್ಕೂ ರುಚಿಕರ ಮತ್ತು ಸ್ವಾದಿಷ್ಟವಾಗಿದೆ. ರಾಗಿ ಜೊತೆಗೆ ಬಳಸಲಾಗಿರುವ ಇತರ ಸಾಮಾಗ್ರಿಗಳೂ ಕೂಡ ದೇಹಕ್ಕೆ ಯಾವುದೇ ಮಾರಕವನ್ನು ಉಂಟುಮಾಡುವುದಿಲ್ಲ ಮತ್ತು ನಿಮ್ಮ ಮನೆಮಂದಿ ಕೂಡ ಈ ಉಪ್ಪಿಟ್ಟನ್ನು ಇಷ್ಟಪಡುವುದು ಖಂಡಿತ .

Light & Healthy Ragi Upma Recipe

ಇಡ್ಲಿ ಮತ್ತು ಕ್ಯಾರೆಟ್‌ನ ಸ್ವಾದಿಷ್ಟಕರ ಉಪ್ಪಿಟ್ಟು

ಪ್ರಮಾಣ: 3
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ರಾಗಿ ಹುಡಿ - 2 ಕಪ್
*ಮೊಸರು - 1/2 ಕಪ್
*ಈರುಳ್ಳಿ - 2 ಮಧ್ಯಮ ಗಾತ್ರದ್ದು
*ಹಸಿಮೆಣಸು - 6 ಅಥವಾ ರುಚಿಗೆ ತಕ್ಕಷ್ಟು
*ಉಪ್ಪು - ರುಚಿಗೆ
*ಉದ್ದಿನ ಬೇಳೆ - 1 ಚಮಚ
*ಕಡ್ಲೆ ಬೇಳೆ - 1 ಚಮಚ
*ಸಾಸಿವೆ - 1 ಚಮಚ
*ಸಕ್ಕರೆ - 1 ಚಮಚ
*ತೆಂಗಿನ ತುರಿ - 1/2 ಕಪ್
*ತಾಜಾ ಕೊತ್ತಂಬರಿ ಸೊಪ್ಪು

ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು

ಮಾಡುವ ವಿಧಾನ
1. ಮೊದಲಿಗೆ ರಾಗಿ ಹುಡಿ, ಉಪ್ಪು, ಸಕ್ಕರೆ, ಮೊಸರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಮತ್ತು ಮಿಶ್ರ ಮಾಡಿಕೊಳ್ಳಿ. ಇದು ಹೆಚ್ಚು ನೀರು ಆಗದಂತೆ ನೋಡಿಕೊಳ್ಳಿ. ತುಸು ದಪ್ಪಗೆ ಇರಬೇಕು.
2. ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ. ಇದಕ್ಕೆ ಸಾಸಿವೆ ಹಾಕಿ ಅದು ಸಿಡಿಯುತ್ತಿದ್ದಂತೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಮತ್ತು ಕರಿಬೇವಿನೆಸಳನ್ನು ಹಾಕಿ.
3. ಬೇಳೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಪಾತ್ರೆಗೆ ಕತ್ತರಿಸಲಾಗಿರುವ ಈರುಳ್ಳಿ ಮತ್ತು ಹಸಿಮೆಣಸನ್ನು ಹಾಕಿ, ಹಾಗೂ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಇದನ್ನು ಹುರಿಯಿರಿ.
4. ಈಗ ಮಿಶ್ರ ಮಾಡಿಕೊಂಡಿರುವ ರಾಗಿ ಹಿಟ್ಟನ್ನು ಪಾತ್ರೆಗೆ ಸೇರಿಸಿಕೊಳ್ಳಿ ಮತ್ತು ಮಂದ ಉರಿಯಲ್ಲಿ ಮಿಶ್ರ ಮಾಡಲು ಪ್ರಾರಂಭಿಸಿ.
5. ಇದಾದ ನಂತರ, ತುರಿದ ಕೊಬ್ಬರಿ ಮತ್ತು ಕೊತ್ತಂಬರಿ ಎಸಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6. ಪೂರ್ತಿ ಸಿದ್ಧಗೊಂಡ ನಂತರ, ಉರಿ ಆರಿಸಿ ಬಿಸಿ ಇದ್ದಾಗ ಬಡಿಸಿ

ನಿಮ್ಮ ರಾಗಿ ಉಪ್ಪಿಟ್ಟು ರೆಸಿಪಿ ಸವಿಯಲು ಸಿದ್ಧವಾಗಿದೆ. ಇನ್ನಷ್ಟು ರುಚಿಗಾಗಿ ಇದಕ್ಕೆ ತುಪ್ಪವನ್ನು ಕೂಡ ನಿಮಗೆ ಸೇರಿಸಬಹುದು.

English summary

Light & Healthy Ragi Upma Recipe

Ragi is one of the very few ingredients that only a handful of people enjoy. However, when it comes to eating healthy, there is no avoiding ragi. Upma is a common breakfast recipe that a lot of South Indians enjoy. Due to this, ragi is well known among the old folk. To make the ragi upma recipe, you need to follow this easy instructions. Take a look at this light & healthy ragi upma recipe:
X
Desktop Bottom Promotion