Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬೆಳಗಿನ ಅವಸರಕ್ಕೆ ಮೆಂತ್ಯದೋಸೆ
Breakfast
oi-Staff

ಕುಸುಬುಲ ಅಕ್ಕಿ ಒಂದು ಕಪ್
ಉದ್ದಿನಕಾಳು ಅಕ್ಕಿಯ ಕಾಲು ಭಾಗದಷ್ಟು
ಮೆಂತ್ಯ 5 ಟೀ ಚಮಚ
ರುಚಿಗೆ ಉಪ್ಪು, ಅಡುಗೆ ಎಣ್ಣೆ
ಇಂಗು ಚಿಟಿಕೆ, ಜೀರಿಗೆ ಒಂದು ಚಮಚ
ತಯಾರಿಸುವ ವಿಧಾನ :
ಕುಸುಬಲ ಅಕ್ಕಿ , ಮೆಂತ್ಯ ಮತ್ತು ಉದ್ದಿನ ಕಾಳನ್ನು ಬೆಳಗ್ಗೆ 6 ಗಂಟೆಗೆ ನೆನೆ ಹಾಕಿದರೆ 8 ಗಂಟೆ ಹೊತ್ತಿಗೆ ನೆಂದಿರುತ್ತದೆ. ಸರಸರ ಮಿಕ್ಸಿಗೆ ಹಾಕಿದರೆ ಭರಭರ ರುಬ್ಬಿ ಹಿಟ್ಟು ರೆಡಿ ಆಗುತ್ತದೆ. ಹಿಟ್ಟಿಗೆ ಚೂರು ಎಣ್ಣೆಯಲ್ಲಿ ಬಿಸಿ ಮಾಡಿದ ಜೀರಿಗೆ, ಇಂಗು ಒಗ್ಗರಣೆ ಬೆರೆಸಿ. ಉಪ್ಪು ಹಾಕಿ. ಒಲೆಯ ಮೇಲೆ ಕಾವಲಿ ಸಿದ್ಧವಾಗಿರಲಿ. ಕಾವಲಿಗೆ ಹಿಡಿ ನೀರು ಎಸೆದರೆ ಚುಂಯ್! ಇವತ್ತಿನ ತಿಂಡಿ ಏನೆಂದು ಮನೆ ಮಂದಿ ಮತ್ತು ಪಕ್ಕದ ಮನೆಗೆ ಟಾಂಟಾಂ ಆಗುತ್ತದೆ. ಆಗಲಿ.
ಹಿಟ್ಟು ರೆಡಿ ಆದ ತಕ್ಷಣ ದೋಸೆ ಹುಯ್ಯಲು ಆರಂಭಿಸಬೇಕು. ತೆಳ್ಳಗೆ, ರವೆ ದೋಸೆ ರೀತಿಯಲ್ಲಿ ಕಾವಲಿ ಮೇಲೆ ದೋಸೆ ರಂಗೋಲಿ ಬಿಡಿಸಬೇಕು. ಚಟ್ನಿ ಮಾಡುವುದಕ್ಕೆ ಟೈಂ ಇರಲ್ಲವಾದ್ದರಿಂದ ಚಟ್ನಿಪುಡಿ, ಉಪ್ಪಿನಕಾಯಿಯಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ. ಕಚೇರಿಗೆ ಹೊರಡಲು ಸಿದ್ಧರಾಗಿ.
Comments
Read more about: menthya dose breakfast vegetarian cuisine karnataka recipe sharada bhat ಮೆಂತ್ಯ ದೋಸೆ ಬೆಳಗಿನ ತಿಂಡಿ ಬ್ರೆಕ್ಫಾಸ್ಟ್ ಕರ್ನಾಟಕ ಅಡುಗೆಮನೆ ತಿಂಡಿ ಶಾರದಾ ಭಟ್
Story first published: Wednesday, October 7, 2009, 12:21 [IST]
Other articles published on Oct 7, 2009



Click it and Unblock the Notifications
