Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯ ಬಿಸಿಗೆ ಗಣಕೆ ಹಣ್ಣಿನ ಪಾನಕ
ಇದು ರಣರಣ ಬೇಸಿಗೆ ದಿನಗಳು. ದೇಹಕ್ಕೆ ತಂಪು ಮಾಡಿಕೊಳ್ಳಲೇಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಜ್ಯೂಸ್ ಸೇವಿಸಬೇಕು. ವೆರೈಟಿ ಹಣ್ಣುಗಳು ದೇಹಕ್ಕೆ ತಂಪು ಮಾಡುವುದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ.

ನಾವಿಲ್ಲಿ ಗಣಕೆ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಗಣಕೆ ಸೊಪ್ಪನ್ನು ನಾವು ಮಾರುಕಟ್ಟೆಯಲ್ಲಿ ಗಮನಿಸಿರುತ್ತೇವೆ. ಆದರೆ ಹಣ್ಣುಗಳು ಮಾರಾಟವಾಗುವುದಿಲ್ಲ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಹಣ್ಣುಗಳು ಲಭ್ಯವಿದ್ದರೆ ಖಂಡಿತ ಪಾನಕ ಮಾಡಿ ಸೇವಿಸುವುದನ್ನು ಮರೆಯಬೇಡಿ.
ಯುರೋಪಿಯನ್ ನೈಟ್ ಶೇಡ್,ಬ್ಲಾಕ್ ನೈಟ್ ಶೇಡ್, ಬ್ಲಾಕ್ ಬೆರ್ರೀ ನೈಟ್ ಶೇಡ್, ಸೋಲಾನಮ್ ನಿಗ್ರಮ್ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುವ ಈ ಹಣ್ಣಿಗೆ ಕನ್ನಡದಲ್ಲಿ ಕಾಕೆ ಹಣ್ಣು, ಗಣಕೆ ಹಣ್ಣು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗಾದ್ರೆ ಈ ಹಣ್ಣಿನಿಂದ ಪಾನಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Juice
Serves: 1
-
ಬೇಕಾಗುವ ಸಾಮಗ್ರಿಗಳು
. ಗಣಕೆ ಹಣ್ಣು - 40 ರಿಂದ 50 ಹಣ್ಣುಗಳು
. ಸಕ್ಕರೆ - ಮೂರೂ ಚಮಚ
. ಉಪ್ಪು - ಚಿಟಿಕೆ
. ಕಾಳುಮೆಣಸು - ಎರಡು
. ಜೀರಿಗೆ - 10 ಕಾಳುಗಳು
-
ಮಾಡುವ ವಿಧಾನ
ಚೆನ್ನಾಗಿ ತೊಳೆದ ಗಣಕೆ ಹಣ್ಣುಗಳು, ಸಕ್ಕರೆ, ಉಪ್ಪು, ಕಾಳುಮೆಣಸು, ಜೀರಿಗೆ ಯನ್ನು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಜ್ಯೂಸರ್ ನಲ್ಲಿ ಕೂಡ ಮಾಡಬಹುದು.
ನಂತರ ಸೋಸಿಕೊಂಡರೆ ಗಣಕೆ ಹಣ್ಣಿನ ಪಾನಕ ಸಿದ್ಧವಾಗುತ್ತದೆ.
- ಗಣಕೆ ಹಣ್ಣುಗಳ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ . ರಕ್ತದ ಕಣಗಳನ್ನು ಹೆಚ್ಚಿಸುವುದಕ್ಕೆ ಇದು ಸಹಕಾರಿ . ದೇಹದ ಟಾಕ್ಸಿಕ್ ಅಂಶವನ್ನು ಹೊರಹಾಕುವುದಕ್ಕೆ ಸಹಕಾರಿ. . ಹೊಟ್ಟೆ ನೋವಿರುವವರು ಇದನ್ನು ಸೇವಿಸುವುದು ಒಳ್ಳೆಯದು. . ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. . ಹಲ್ಲುನೋವಿರುವವರು ಈ ಹಣ್ಣುಗಳನ್ನು ಸೇವಿಸುವುದು ಒಳಿತು



Click it and Unblock the Notifications