Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಗಲಕಾಯಿ-ಬಿಂಬಲುಕಾಯಿ ಉಪ್ಪಿನಕಾಯಿ ರೆಸಿಪಿ
ಉಪ್ಪಿನಕಾಯಿ ಇಲ್ಲದ ಊಟ ಅದೊಂದು ಊಟವೇ ಎಂಬ ಮಾತೇ ಇದೆ. ಉಪ್ಪಿನಕಾಯಿ ಅಂದ ಕೂಡಲೇ ಹೆಚ್ಚಿನವರಿಗೆ ಮಾವಿನಕಾಯಿ,ನಿಂಬೆಕಾಯಿ ನೆನಪಾಗುತ್ತದೆ. ಉಪ್ಪಿನಕಾಯಿ ಎಂದಾಕ್ಷಣ ಬಾಯಲ್ಲಿ ನೀರೂರುವುದು ಕೂಡ ಸಹಜ. ಹಾಗಂತ ಉಪ್ಪಿನಕಾಯಿಗೆ ಕೇವಲ ಮಾವಿನಕಾಯಿ ಅಥವಾ ನಿಂಬೆಕಾಯಿಯೇ ಬೇಕೆಂದೇನೂ ಇಲ್ಲ. ಹೌದು ನಾವಿವತ್ತು ನಿಮಗೆ ಹೊಸ ರೆಸಿಪಿಯೊಂದನ್ನು ತಿಳಿಸಿಕೊಡುತ್ತಿದ್ದೇವೆ. ಈ ಉಪ್ಪಿನಕಾಯಿ ಕೈಗೆಟುಕುವ ಬೆಲೆಯಲ್ಲಿ ತಯಾರಿಸಬಹುದಾದ ದಿಢೀರ್ ಉಪ್ಪಿನಕಾಯಿ. ಇದಕ್ಕೆ ಮಾವಿನಕಾಯಿಯೂ ಬೇಡ, ನಿಂಬೆಕಾಯಿಯೂ ಬೇಡ. ಹಾಗಾದ್ರೆ ಬೇಕಾಗಿರುವುದು ಏನು ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

Recipe By: Sushma chatra
Recipe Type: Sides
Serves: 4
-
ಬೇಕಾಗುವ ಸಾಮಗ್ರಿಗಳು
1. ಹಾಗಲಕಾಯಿ - ಒಂದು ಬೌಲ್ ನಷ್ಟು ಹಾಗಲಕಾಯಿ ಹೋಳುಗಳು (ಅಥವಾ ಮಧ್ಯಮ ಗಾತ್ರದ ಎರಡು ಹಾಗಲಕಾಯಿ)
2. ಬಿಂಬಲುಕಾಯಿ - 10 ರಿಂದ 12
3. ಉಪ್ಪು - ರುಚಿಗೆ ತಕ್ಕಷ್ಟು
4. ಎಳೆಯ (ಬಲಿಯದ) ಹಸಿರು ಕಾಳುಮೆಣಸು - 25 ರಿಂದ 30 ಕಾಳುಗಳು
5. ಜೀರಿಗೆ ಮೆಣಸು- 20
6. ಸಾಸಿವೆ - ಒಂದು ಸ್ಪೂನ್
7. ಮೆಂತ್ಯೆ - ಒಂದು ಸ್ಪೂನ್
8. ಅರಿಶಿನ ಪುಡಿ- ಚಿಟಿಕೆ
9. ಇಂಗು- ಚಿಟಿಕೆ
10. ಕೊಬ್ಬರಿ ಎಣ್ಣೆ- ಎರಡರಿಂದ ಮೂರು ಸ್ಪೂನ್
-
ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್ ನಷ್ಟು ಹಾಗಲಕಾಯಿಯನ್ನು ಉದ್ದುದ್ದು ಹೋಳುಗಳಂತೆ ಹೆಚ್ಚಿಕೊಳ್ಳಿ.
ಅದಕ್ಕೆ ಎಳೆಯ ಅಥವಾ ಬಲಿಯದ ಹಸಿರು ಕಾಳುಮೆಣಸನ್ನು ಸೇರಿಸಿ.
ಇದಕ್ಕೆ ಉಪ್ಪು ಹಾಕಿ ಒಂದು ಗಂಟೆ ನೆನೆಸಿಡಿ.
ನಂತರ ಬಿಂಬಲುಕಾಯಿಯನ್ನು ಮಿಕ್ಸಿ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ಒಗ್ಗರಣೆ ತಯಾರಿಸಿ.
ಕೊಬ್ಬರಿ ಎಣ್ಣೆ ಹಾಕಿ ಮೆಂತೆ ಸಾಸಿವೆ ಹುರಿಯಿರಿ.
ಚಟಿಪಟಿ ಅಂದಾಗ ಸೂಜಿಮೆಣಸನ್ನು ಜಜ್ಜಿಕೊಂಡು ಹಾಕಿ. ಸೂಜಿಮೆಣಸು ಇಲ್ಲದೆ ಇರುವವರು ಹಸಿಮೆಣಸನ್ನು ಕೂಡ ಬಳಸಬಹುದು. ಉದ್ದಗೆ ಹೆಚ್ಚಿಕೊಂಡ ಹಸಿಮೆಣಸನ್ನೂ ಕೂಡ ಬಳಸಬಹುದು.
ಸೂಜಿಮೆಣಸು ಸ್ವಲ್ಪ ಹುರಿದಾಗ ಅದಕ್ಕೆ ಇಂಗು, ಅರಿಶಿನ ಸೇರಿಸಿ.
ನಂತರ ರುಬ್ಬಿಕೊಂಡ ಬಿಂಬಲುಕಾಯಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ.
ಒಂದು ಐದು ನಿಮಿಷ ಕುದಿಸಿದ ನಂತರ ನೀರು ಆರುತ್ತದೆ. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ಮಿಶ್ರಣಕ್ಕೆ ನೀವು ಮ್ಯಾರಿನೇಟ್ ಮಾಡಿಟ್ಟುಕೊಂಡ ಹಾಗಲಕಾಯಿ ಉಪ್ಪು ಮತ್ತು ಕಾಳುಮೆಣಸಿನ ಮಿಶ್ರಣವನ್ನು ಇದಕ್ಕೆ ಸೇರಿಸಿ.
ನಂತರ ಚೆನ್ನಾಗಿ ಕೈಯಾಡಿದರೆ ರುಚಿರುಚಿಯಾದ ಹಾಗಲಕಾಯಿ ಉಪ್ಪಿನಕಾಯಿ ರೆಸಿಪಿ ತಯಾರಾಗುತ್ತದೆ. ಎರಡು ದಿನದ ನಂತರ ಹಾಗಲಕಾಯಿ ಉಪ್ಪು-ಹುಳಿಯನ್ನೆಲ್ಲಾ ಹೀರಿಕೊಂಡು ರುಚಿರುಚಿಯಾಗುತ್ತದೆ. ಹಾಗಾಗಿ ಉಪ್ಪಿನಕಾಯಿ ತಯಾರಿಸಿದ ಎರಡನೇ ದಿನಕ್ಕೆ ಅತ್ಯಧ್ಬುತವಾಗುತ್ತದೆ.
- ಪ್ರಯೋಜನ . ಕಡಿಮೆ ಬೆಲೆಯಲ್ಲಿ ಸಿದ್ಧವಾಗುವ ಉಪ್ಪಿನಕಾಯಿ ಅಂದರೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ . ದಿಢೀರ್ ತಯಾರಿಸಬಹುದು. ಹೆಚ್ಚು ಸಮಯ ವ್ಯಯಿಸುವ ಅಗತ್ಯವಿಲ್ಲ . ಹಾಗಲಕಾಯಿ ಉಪ್ಪಿನಕಾಯಿ ಆಗಿರೋದ್ರಿಂದ ಶುಗರ್ ಇರುವವರು ಕೂಡ ಬಳಸಬಹುದು . ಮಾವಿನಕಾಯಿ ಇಲ್ಲದ ಸೀಸನ್ ನಲ್ಲೂ ತಯಾರಿಸಬಹುದು. ಎಲ್ಲಾ ಸೀಸನ್ ನಲ್ಲೂ ತಯಾರಿಸಬಹುದಾದ ಉಪ್ಪಿನಕಾಯಿ. . ಕಾಳುಮೆಣಸು ಇರೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆ ವೃದ್ಧಿಸುತ್ತದೆ.



Click it and Unblock the Notifications