For Quick Alerts
ALLOW NOTIFICATIONS  
For Daily Alerts

ಬಾಳೆಕಾಯಿ ಮಿಶ್ರಿತ ಮಿಕ್ಸ್ಡ್ ವೆಜ್ ಅವೀಲ್

Posted By:
|

ದೇಹದ ಆರೋಗ್ಯಕ್ಕೆ ಹಸಿರು ತರಕಾರಿಗಳ ಸೇವನೆ ಬಹಳ ಒಳ್ಳೆಯದು. ಆದರೆ ಪ್ರತಿದಿನ ಒಂದೇ ರೀತಿಯ ಅಡುಗೆ ಎಂತಹವರಿಗೂ ಕೂಡ ಬೋರ್ ಅನ್ನಿಸುತ್ತದೆ. ಆದಷ್ಟು ವೆರೈಟಿ ಅಡುಗೆಗಳ ಪರಿಚಯವಿದ್ದರೆ ನಿಜಕ್ಕೂ ಬಾಯಿಗೆ ಹಿತವೆನ್ನಿಸುತ್ತದೆ.

 Aviyal Recipe

ಭಾರತೀಯರ ಅಡುಗೆ ವಿಶೇಷ ಅನ್ನಿಸುವುದು ಅದೇ ಕಾರಣಕ್ಕೆ. ವಿದೇಶಿ ಕುಕ್ ಒಬ್ಬರು ಭಾರತೀಯರ ಅಡುಗೆಯನ್ನು ನಾನು ಏನೆಂದು ವರ್ಣಿಸಲಿ. ಆಲೂಗಡ್ಡೆ ಎಂಬ ಒಂದು ತರಕಾರಿಯಲ್ಲಿ ಅವರು 300 ವೆರೈಟಿಗೂ ಅಧಿಕ ಅಡುಗೆ ತಯಾರಿಸುತ್ತಾರೆ. ಹಾಗಾಗಿ ಅವರ ಅಡುಗೆ ವರ್ಣನೆಗೆ ನಿಲುಕದ್ದು ಎಂದು ಹುಬ್ಬೇರಿಸಿ ಹೊಗಳಿಸಿದ್ದನ್ನು ನಾವು ಯಾವಾಗಲೂ ನೆನಪಿಸಿಕೊಳ್ಳಲೇಬೇಕು.

ಎಲ್ಲರಿಗೂ ತಿಳಿದಿರುವಂತೆ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿಯೂ ಕೂಡ ಅಡುಗೆಗೆ ಪ್ರಶಸ್ತವಾಗಿದೆ. ಬಾಳೆಕಾಯಿಯನ್ನು ಉಪಯೋಗಿಸಿ ಅವೀಲ್ ತಯಾರಿಸುವುದು ಮಂಗಳೂರಿಗರ ಅಚ್ಚುಮೆಚ್ಚಿನ ಅಡುಗೆಗಳಲ್ಲಿ ಒಂದು. ಬಾಳೆಕಾಯಿಯ ಜೊತೆಗೆ ಇನ್ನಿತರೆ ಕೆಲವು ತರಕಾರಿಗಳನ್ನು ಸೇರಿಸಿ ಅಧ್ಬುತವಾಗಿ ಅಡುಗೆ ಮಾಡಬಹುದು. ಅವೀಲ್ ಎಂದು ಮಂಗಳೂರಿಗರು ಕರೆಯುವ ವಿಶೇಷ ಅಡುಗೆಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಏನಿದು ಅವೀಲ್. ಯಾವೆಲ್ಲಾ ತರಕಾರಿಗಳು ಬೇಕು? ಹೇಗಿರುತ್ತದೆ ಅವೀಲ್? ವಿಧಾನವನ್ನು ಗಮನಿಸಿ ಮನೆಯಲ್ಲಿ ಟ್ರೈ ಮಾಡಿ ಅಭಿಪ್ರಾಯ ತಿಳಿಸಿ. ಹೆಚ್ಚಿನ ವಿವರಗಳಿಗಾಗಿ ಮುಂದೆ ಓದಿ.

Aviyal Recipe/ ಮಿಕ್ಸ್ಡ್ ವೆಜ್ ಅವೀಲ್
Aviyal Recipe/ ಮಿಕ್ಸ್ಡ್ ವೆಜ್ ಅವೀಲ್
Prep Time
20 Mins
Cook Time
20M
Total Time
40 Mins

Recipe By: Sushma

Recipe Type: Aviyal

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಬಾಳೆಕಾಯಿ- ಎರಡು

    ಬೀನ್ಸ್- 100 ಗ್ರಾಂ

    ಆಲೂಗಡ್ಡೆ- ಎರಡು

    ಕ್ಯಾರೆಟ್- ಮೂರು

    ತೆಂಗಿನ ತುರಿ- ಅರ್ಧ ಕಡಿ

    ಜೀರಿಗೆ- ಒಂದು ಸ್ಪೂನ್

    ಉಪ್ಪು- ರುಚಿಗೆ ತಕ್ಕಷ್ಟು

    ಮೊಸರು- ಕಾಲು ಲೀಟರ್

    ಕೊತ್ತುಂಬರಿ ಸೊಪ್ಪು- ಮೂರರಿಂದ ನಾಲ್ಕು ಗಿಡ

    ಹಸಿಮೆಣಸು- ನಾಲ್ಕರಿಂದ ಐದು

    ಬೆಲ್ಲ- ನಾಲ್ಕರಿಂದ ಐದು ಗೋಲಿ ಗಾತ್ರದಷ್ಟು

    ಅರಿಶಿನ- ಚಿಟಿಕೆ

Red Rice Kanda Poha
How to Prepare
  • ಮಾಡುವ ವಿಧಾನ

    ಬಾಳೆಕಾಯಿಯ ಸಿಪ್ಪೆ ತೆಗೆದು ಕತ್ತರಿಸಿ ನೀರಿಗೆ ಹಾಕಿಕೊಳ್ಳಿ. ಒಂದೆರಡು ನಿಮಿಷದ ನಂತರ ಆ ನೀರನ್ನು ಎಸೆಯರಿ. ಆಗ ಬಾಳೆಕಾಯಿಯ ಚೊಗರಿನ ಅಂಶ ಹೊರಟು ಹೋಗುತ್ತದೆ ಮತ್ತು ಬಾಳೆಕಾಯಿ ಹೆಚ್ಚಿದ ಕೂಡಲೇ ಕಪ್ಪಾಗುವುದನ್ನು ಇದರಿಂದ ತಡೆಯಬಹುದು.

    ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಎಲ್ಲವನ್ನೂ ಚೆನ್ನಾಗಿ ತೊಳೆದು ನಿಮ್ಮ ಅನುಕೂಲದ ಗಾತ್ರಕ್ಕೆ ಹೆಚ್ಚಿಕೊಳ್ಳಿ.

    ಎಲ್ಲಾ ತರಕಾರಿಗಳನ್ನು ಸೇರಿಸಿ ಉಪ್ಪು ಹಾಕಿ ಬೇಯಿಸಿಕೊಳ್ಳಿ.

    ತೆಂಗಿನ ತುರಿಗೆ ಹಸಿ ಜೀರಿಗೆ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕೆಲವರು ಅವೀಲ್ ದಪ್ಪ ಬರಲು ಒಂದು ಸ್ಪೂನ್ ಕಡಲೆಬೇಳೆಯನ್ನು ಅರ್ಧ ಘಂಟೆ ನೆನಸಿ ರುಬ್ಬುವಾಗ ಸೇರಿಸಿಕೊಳ್ಳುತ್ತಾರೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಸೇರಿಸಿಕೊಳ್ಳದೇ ಇರುವುದು ಒಳಿತು.

    ನಂತರ ಬೇಯಿಸಿದ ತರಕಾರಿಗೆ ರುಬ್ಬಿದ ಮಿಶ್ರಣ ಸೇರಿಸಿ ಕುದಿಯಲು ಬಿಡಿ. ಕುದಿಯುವಾಗ ಬೆಲ್ಲ ಮತ್ತು ಅರಿಶಿನ ಸೇರಿಸಿ.( ಸಿಹಿ ಇಷ್ಟವಿಲ್ಲದೆ ಇರುವವರು ಬೆಲ್ಲ ಸೇರಿಸುವ ಅಗತ್ಯವಿಲ್ಲ)

    ನಾಲ್ಕರಿಂದ ಐದು ನಿಮಿಷ ಕುದಿಸಿದ ನಂತರ ಹೆಚ್ಚಿನ ಕೊತ್ತುಂಬರಿ ಸೊಪ್ಪು ಸೇರಿಸಿ. ಅರ್ಧ ಘಂಟೆ ತಣಿಯಲು ಬಿಡಿ.

    ಊಟಕ್ಕೆ ಕೂರುವಾಗ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಬಾಳೆಕಾಯಿ ಮಿಶ್ರಿತ ಮಿಕ್ಸ್ಡ್ ವೆಜ್ ಅವೀಲ್ ಸಿದ್ಧ.

    ಬೇಕಿದ್ದರೆ ಸಾಸಿವೆ ಒಗ್ಗರಣೆ ಹಾಕಬಹುದು. ನಾವಿಲ್ಲಿ ಒಗ್ಗರಣೆ ಮಾಡಿಲ್ಲ. ಸುಮ್ಮನೆ ಹೆಚ್ಚುವರಿ ಒಗ್ಗರಣೆ ಎಣ್ಣೆ ಸೇವನೆಯ ಅಗತ್ಯವಿಲ್ಲ ಎನ್ನುವ ಕಾರಣಕ್ಕೆ ಒಗ್ಗರಣೆಯನ್ನು ಮಾಡಿಲ್ಲ.

Instructions
  • ಖಾರವಿಲ್ಲದ ಅಡುಗೆಯಾಗಿರುವುದರಿಂದಾಗಿ ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಮಸಾಲೆಗಳ ಘಾಟು ಅತಿಯಾಗಿ ಇಲ್ಲದೆ ಇರುವುದರಿಂದಾಗಿ ಇದೊಂದು ರೀತಿಯ ಸಪ್ಪೆ ಅಡುಗೆ ಎಂದೇ ಹೇಳಬಹುದು. ಜೀರಿಗೆಯನ್ನು ಬಳಸುವುದರಿಂದಾಗಿ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಈ ಅಡುಗೆ ಸೇವನೆಯಿಂದ ಒಳಿತಾಗುತ್ತದೆ. ಬಾಳೆಕಾಯಿಯಲ್ಲಿರುವ ಪೋಷಕಾಂಶಗಳು ಎಲ್ಲಾ ವಯಸ್ಸಿನವರಿಗೂ ಕೂಡ ಬಹಳ ಒಳ್ಳೆಯದು. ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿಯ ಅಡುಗೆಯೂ ಕೂಡ ನಿಮ್ಮ ದೇಹಕ್ಕೆ ಉತ್ತಮವಾದದ್ದು. ಹಾಗಾಗಿ ಮಾರುಕಟ್ಟೆಯಲ್ಲಿ ಬಾಳೆಕಾಯಿ ಇದ್ದರೆ ಕೊಂಡು ತಂದು ಅಡುಗೆ ಮಾಡುವುದನ್ನು ಖಂಡಿತ ಮರೆಯಬೇಡಿ.
Nutritional Information
  • ಗಾತ್ರ - 100 ಗ್ರಾಂ
  • ಪೊಟಾಷಿಯಂ - 358 ಮಿಲಿಗ್ರಾಂ 8 %
  • ಕಬ್ಬಿಣಾಂಶ - 0.26 ಮಿಲಿಗ್ರಾಂ 1 %
  • ಪ್ರೊಟೀನ್ - 1.1ಗ್ರಾಂ 2 %
  • ಕ್ಯಾಲ್ಸಿಯಂ - 5.00 ಮಿಲಿಗ್ರಾಂ 0 %
  • ಸಕ್ಕರೆ - 12ಗ್ರಾಂ
  • ಕ್ಯಾಲೋರಿ - 89 ಗ್ರಾಂ 0
[ 4 of 5 - 75 Users]
X
Desktop Bottom Promotion