For Quick Alerts
ALLOW NOTIFICATIONS  
For Daily Alerts

ಶೀತ-ಕೆಮ್ಮು ಹೋಗಲಾಡಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಅಜ್ವೈನ್ ಕಷಾಯ

Posted By:
|

ವಾಯುಭಾರತ ಕುಸಿತದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಸುರಿಯುತ್ತಿದೆ, ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಜನರಲ್ಲಿ ಕೆಮ್ಮು, ಶೀತದ ಸಮಸ್ಯೆ ಹೆಚ್ಚಾಗುತ್ತಿದೆ. ನಾವಿಲ್ಲಿ ಸಾಮಾನ್ಯ ಶೀತ ಕೆಮ್ಮು ತಡೆಯಲು ಎರಡು ಅಜ್ವೈನ್‌ ಕಷಾಯ ನೀಡಿದ್ದೇವೆ. ಈ ಕಷಾಯಗಳು ನಿಮಗೆ ಚಳಿಗಾಲವಾಗಿರಲಿ, ಮಳೆಗಾಲವಾಗಿರಲಿ ಸಾಮಾನ್ಯ ಶೀತ-ಕೆಮ್ಮು, ಜ್ವರ ತಡೆಗಟ್ಟಲು ಸಹಾಯ ಮಾಡುತ್ತದೆ, ಅಲ್ಲದೆ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ajwain kashaya

ಕಷಾಯ 1

ಬೇಕಾಗುವ ಸಾಮಗ್ರಿ
1/2 ಚಮಚ ಕರಿಮೆಣಸಿನ ಪುಡಿ
1/2 ಚಮಚ ಜೀರಿಗೆ
1/2 ಚಮಚ ಕೊತ್ತಂಬರಿ ಬೀಜ
1 ಚಮಚ ಅಜ್ವೈನ್
2 ಚಿಕ್ಕ ವೀಳ್ಯೆದೆಲೆ
ಸ್ವಲ್ಪ ಬೆಲ್ಲ
2 ಕಪ್ ನೀರು (1/2 ಲೀಟರ್)
ಸ್ವಲ್ಪ ಶುಂಠಿ (ಹಸಿ ಅಥವಾ ಒಣಗಿದ್ದು, ಪೌಡರ್‌ ಯಾವುದು ಬೇಕಾದರೂ ಬಳಸಬಹುದು.

1/4 ಚಮಚ ಅರಿಶಿಣ ಪುಡಿ , ಅರಿಶಿಣ ಕೊಂಬು ಆದರೆ ಜಜ್ಜಿ ಹಾಕಿ.

ಮಾಡುವುದು ಹೇಗೆ?
* ಈ ಎಲ್ಲಾ ಸಾಮಗ್ರಿ ಒಂದು ಪಾತ್ರೆಗೆ ಹಾಕಿ ಕುದಿಸಿ.
* ನಂತರ ಸೋಸಿ ಬಿಸಿ- ಬಿಸಿ ಇರುವಾಗಲೇ ಮೆಲ್ಲ-ಮೆಲ್ಲನೆ ಸವಿಯಿರಿ.

ಪ್ರಯೋಜನಗಳು
* ನೀವು ಈ ಕಷಾಯ ಮಾಡಿ ಕುಡಿದರೆ ಗಂಟಲು ಕೆರೆತ, ಕೆಮ್ಮು ಕಡಿಮೆಯಾಗುವುದು.
* ಚಳಿಯಿಂದ ದೇಹವನ್ನು ರಕ್ಷಣೆ ಮಾಡುತ್ತದೆ.

ಈ ಕಷಾಯ ಮಕ್ಕಳಿಗೆ ಕೊಡಬಹುದೇ?
* 1 ವರ್ಷದಿಂದ-5 ವರ್ಷದೊಳಗಿನ ಮಕ್ಕಳಿಗಾದರೆ 2 ಚಮಚ ಕುಡಿಸಿ.
* 5 ವರ್ಷ ಮೇಲ್ಪಟ್ಟ ಮಕ್ಕಳಾದರೆ 1 ಲೋಟ ಕುಡಿಯಬಹುದು.

ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ ರೆಸಿಪಿ

ದಿನದಲ್ಲಿ ಎಷ್ಟು ಬಾರಿ ತೆಗೆದುಕೊಳ್ಳಬೇಕು?

ಬೆಳಗ್ಗೆ ಎದ್ದಾಗ ರಾತ್ರಿ ಮಲಗುವಾಗ ತೆಗೆದುಕೊಳ್ಳಿ, ಕೆಮ್ಮು ತುಂಬಾ ಇದ್ದರೆ ಸಂಜೆ ಹೊತ್ತಿಗೆ ಒಮ್ಮೆ ತೆಗೆದುಕೊಳ್ಳಿ. ಜೇನು ಸೇರಿಸಿದರೆ ಇನ್ನೂ ಒಳ್ಳೆಯದು.

********

ajwain kashaya
ಕಷಾಯ 2
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತೊಂದು ಅಜ್ವೈನ್ ಕಷಾಯ
* ಬೇಕಾಗುವ ಸಾಮಗ್ರಿ
* 2 ತುಂಡು ಅಮೃತಬಳ್ಳಿ
* 2 ದೊಡ್ಡಪತ್ರೆ (Optional)
* 3 ಏಲಕ್ಕಿ
* ಸ್ವಲ್ಪ ತುಳಸಿ ಎಲೆ
* 2 ಇಂಚಿನಷ್ಟು ಉದ್ದದ ಶುಂಠಿ
* 1 ಚಮಚ ಅಜ್ವೈನ್
* 1 ಇಂಚಿನಷ್ಟು ಉದ್ದದ ಚಕ್ಕೆ
* ಅರ್ಧ ಚಮಚ ಕಾಳು ಮೆಣಸು
* ಅರ್ಧ ಕಪ್ ಬೆಲ್ಲ
* ನೀರು 3 ಕಪ್
* ಜೇನು

ಮಾಡುವ ವಿಧಾನ
ಚಿಕ್ಕ ಕಲ್ಲಿನಲ್ಲಿ ಕಾಳು ಮೆಣಸು ಹಾಗೂ ಅಜ್ವೈನ್‌ ಕುಟ್ಟಿ ಪುಡಿ ಮಾಡಿ.
* ಶುಂಠಿಯನ್ನು ಕೂಡ ಜಜ್ಜಿ.
* ಈಗ ಜೇನು ಬಿಟ್ಟು ಉಳಿದೆಲ್ಲಾ ಸಾಮಗ್ರಿ ನೀರಿಗೆ ಹಾಕಿ ಕುದಿಸಿ.
* 3 ಕಪ್‌ ನೀರು 2 ಕಪ್‌ ಆಗುವವವರೆಗೆ ಕುದಿಸಿ.
* ನಂತರ ಸೋಸಿ ಸ್ವಲ್ಪ ಜೇನು ಸೇರಿಸಿ ಬಿಸಿ-ಬಿಸಿ ಕಷಾಯ ಕುಡಿಯಿರಿ.

ಸೂಚನೆ : ಇಷ್ಟು ಸಾಮಗ್ರಿ ಹಾಕಿದರೆ 2 ಲೋಟ ಕಷಾಯ ತಯಾರಿಸಬಹುದು. ನಿಮ್ಮ ಮನೆಯಲ್ಲಿ ಜನ ಅಧಿಕವಿದ್ದರೆ ಸಾಮಗ್ರಿ ಅಧಿಕ ಹಾಕಿ, ಅಧಿಕ ನೀರು ಸೇರಿಸಿ ಕಷಾಯ ತಯಾರಿಸಿ.

* ಇದನ್ನು ಪ್ರತಿದಿನ ಒಂದು ಲೋಟ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಪ್ರಯೋಜನಗಳು:
ಚಳಿಗಾಲ ಹಾಗೂ ಮಳೆಗಾಲದಲ್ಲಿ ಈ ರೀತಿಯ ಕಷಾಯ ಮಾಡಿ ಕುಡಿಯುವುದರಿಂದ ಸಾಮಾನ್ಯವಾಗಿ ಕಾಡುವ ಕೆಮ್ಮು-ಶೀತ, ವೈರಲ್ ಸೋಂಕು, ಜ್ವರ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಕಷಾಯವನ್ನು ಯಾವ ಸಮಯದಲ್ಲಿ ತೆಗೆದುಕೊಂಡರೆ ಒಳ್ಳೆಯದು?
ಕಷಾಯವನ್ನು ಬೆಳಗ್ಗೆ ಹೊತ್ತಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಹಲ್ಲುಜ್ಜಿ 20 ನಿಮಿಷದ ಬಳಿಕ ಊಟಕ್ಕಿಂತ ಮೊದಲು ತೆಗೆದುಕೊಳ್ಳಬೇಕು. ಕಷಾಯ ತೆಗೆದುಕೊಂಡು 30 ನಿಮಿಷದ ಬಳಿಕ ಬ್ರೇಕ್‌ಫಾಸ್ಟ್ ಮಾಡಿ.
* ಇದಲ್ಲದೆ ಹೋದರೆ ಕಷಾಯವನ್ನು ಸಂಜೆ ಹೊತ್ತಿನಲ್ಲೂ ತೆಗೆದುಕೊಳ್ಳಬಹುದು.
* ಇನ್ನು ರಾತ್ರಿ ಊಟ ಮಾಡಿ 39 ನಿಮಿಷದ ಬಳಿಕ ಕೂಡ ತೆಗೆದುಕೊಳ್ಳಬಹುದು.

ಕಷಾಯದಿಂದ ಅಡ್ಡಪರಿಣಾಮವಿದೆಯೇ?
ಕಷಾಯದಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಅತಿಯಾದರೆ ಅಮೃತವೂ ವಿಷವಾಗುವುದು, ಆದ್ದರಿಂದ ಕಷಾಯವನ್ನು ಒಂದು ಲೋಟ ಸೇವಿಸಿ. ಕೆಮ್ಮು -ಶೀತವಿದ್ದಾಗ ಎರಡು ಲೋಟ ಸೇವಿಸಿ... ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ 1 ಲೋಟ ಅಥವಾ ಅರ್ಧ ಲೋಟ ಸೇವಿಸಿದರೆ ಸಾಕು. ಪ್ರತಿದಿನ ಕಷಾಯ ತೆಗೆದುಕೊಳ್ಳುತ್ತಿದ್ದರೆ ಕೆಲವೇ ತಿಂಗಳುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಸೂಚನೆ: ನೀವು ಇತರ ಔಷಧ ತೆಗೆದುಕೊಳ್ಳುತ್ತಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕಷಾಯ ತೆಗೆದುಕೊಳ್ಳಿ.

[ of 5 - Users]
X
Desktop Bottom Promotion