Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ ರೆಸಿಪಿ
ಮಳೆಗಾಲದಲ್ಲಿ ಶೀತ, ಗಂಟಲು ಕೆರೆತ, ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಇಂಥ ಸಮಸ್ಯೆ ಕಂಡು ಬಂದರೆ ಅದಕ್ಕೆ ಕಷಾಯ ಮಾಡಿ ಕುಡಿದರೆ ಆರಾಮ ಅನಿಸುವುದು. ಅಲ್ಲದೆ ಈ ರೀತಿಯ ಕಷಾಯ ಎರಡು ವರ್ಷದ ಮೇಲಿನ ಮಕ್ಕಳಿಗೂ ಮಾಡಿ ಕೊಡಬಹುದು. ಇನ್ನು ಕೆಮ್ಮು, ಶೀತ ಏನೂ ಇಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿ ಈ ರೀತಿ ಕಷಾಯ ಮಾಡಿ ಕುಡಿದರೆ ದೇಹ ಬೆಚ್ಚಗೆ ಇರುತ್ತದೆ.

ಕಷಾಯವನ್ನು ಹಲವು ಬಗೆಯಲ್ಲಿ ಮಾಡಬಹುದು, ಇಲ್ಲಿ ತುಳಸಿ ಹಾಕಿ ಮಾಡುವ ಕಷಾಯ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Drinks
Serves: 2
-
ಬೇಕಾಗುವ ಸಾಮಗ್ರಿ
2 ಕಪ್ ನೀರು
1 ತುಳಸಿ
1/2 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಕಲ್ಲು ಸಕ್ಕರೆ (1 ತುಂಡು)
-
ಮಾಡುವುದು ಹೇಗೆ?
* ಈ ಕಷಾಯ ಮಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿ ರೆಡಿಯಾಗಿ ಇಟ್ಟುಕೊಳ್ಳಿ.
*ಈಗ ಪಾತ್ರೆಗೆ ತುಳಸಿ ಎಲೆ ಹಾಕಿ ಕುದಿಸಿ.
* ತುಳಸಿ ಹಾಕಿದಾಗ ನೀರಿನ ಬಣ್ಣ ಬದಲಾದಾಗ ಅದಕ್ಕೆ ಶುಂಠಿ ಪುಡಿ (ಜಜ್ಜಿದ ಶುಂಠಿ), ಕಾಳು ಮೆಣಸಿನ ಪುಡಿ, ಕಲ್ಲು ಸಕಕ್ರೆ ಹಾಕಿ ಚೆನ್ನಾಗಿ ಕುದಿಸಿ.
* ನಂತರ ಸೋಸಿ ಬಿಸಿ ಬಿಸಿ ಕಷಾಯ ಕುಡಿಯಿರಿ.
ದಿನದಲ್ಲಿ ಮೂರು ಬಾರಿ ಈ ಕಷಾಯ ಕುಡಿದರೆ ಗಂಟಲು ಕೆರೆತ, ಕೆಮ್ಮು, ಶೀತ ಇವು ಕಡಿಮೆಯಾಗಿ ಆರಾಮ ಅನಿಸುವುದು.
- ನೀವು ಬೇಕಿದ್ದರೆ ಈ ಕಷಾಯಕ್ಕೆ ಕಲ್ಲು ಸಕ್ಕರೆ ಬದಲಿಗೆ ಸ್ವಲ್ಪ ಜೇನು ಸೇರಿಸಿಯೂ ಕುಡಿಯಬಹುದು.



Click it and Unblock the Notifications
