For Quick Alerts
ALLOW NOTIFICATIONS  
For Daily Alerts

ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್‌ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್

|

ಮಂಗಳಮುಖಿಯರಾದ ಜಿಯಾ ಹಾಗೂ ಜಾಹದ್‌ ಬದುಕಿನಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ, ಹೌದು ಈ ದಂಪತಿ ಗರ್ಭಿಣಿಯಾಗಿದ್ದಾರೆ. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಗರ್ಭಿಣಿಯಾಗಿರುವ ಮಂಗಳಮುಖಿಯೆಂದರೆ ಅದು ಜಿಹಾದ್. ನಾನು ತಂದೆಯೂ ಹೌದು, ತಾಯಿಯೂ ಹೌದು ಜಿಹಾದ್‌ ಖುಷಿಯಿಂದ ಹೇಳಿಕೊಂಡಿದ್ದಾರೆ.

Zahad Transman become Pregnant

ಗರ್ಭಿಣಿಯಾಗಿರುವ ಮೊದಲ ಪುರುಷ ಮಂಗಳಮುಖಿ
ಜಿಯಾ ಹಾಗೂ ಜಿಹಾದ್‌ ಕೇರಳ ಮೂಲದವರು. ಇಬ್ಬರು ಲಿಂಗ ಬದಲಾಯಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಜಿಯಾ ಹುಟ್ಟುವಾಗ ಗಂಡು ಆಗಿದ್ದ ನಂತರ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾದರು. ಜಿಹಾದ್‌ ಹೆಣ್ಣಾಗಿದ್ದರು, ಲಿಂಗ ಬದಲಾಯಿಸಿಕೊಂಡು ಗಂಡಾಗಿ ಬದಲಾಗಿದ್ದಾರೆ. ಇದೀಗ ಈ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಜಿಹಾದ್‌ ಭಾರತದಲ್ಲಿಯೇ ಗರ್ಭಿಣಿಯಾಗಿರುವ ಮೊದಲ ಪುರುಷ ಮಂಗಳಮುಖಿ ಆಗಿದ್ದಾರೆ.

ಸ್ವಂತ ಮಗುವನ್ನು ಪಡೆಯಲಿರುವ ಮಂಗಳಮುಖಿ

ಸ್ವಂತ ಮಗುವನ್ನು ಪಡೆಯಲಿರುವ ಮಂಗಳಮುಖಿ

ಕಾನೂನು ಅಡಚಣೆಯಿಂದಾಗಿ ಮಗುವನ್ನು ದತ್ತು ತೆಗೆದುಕೊಳ್ಳುವ ವಿಚಾರ ಕೈ ಬಿಟ್ಟ ದಂಪತಿ

ಮಂಗಳಮುಖಿಯರು ದತ್ತು ತೆಗೆದುಕೊಳ್ಳಬೇಕೆಂದರೆ ಕಾನೂನು ಅಷ್ಟು ಸುಲಭವಾಗಿಲ್ಲ, ಅವರ ಮುಂದೆ ಹಲವಾರು ಸವಾಲುಗಳಿವೆ, ಹಾಗಾಗಿ ಮಗುವನ್ನು ದತ್ತು ತೆಗೆದುಕೊಳ್ಳುವ ಆಲೋಚನೆ ಕೈ ಬಿಡುತ್ತಾರೆ. ನಂತರ ನಮ್ಮದೇ ಸ್ವಂತ ಮಗು ಪಡೆದರೆ ಹೇಗೆ ಎಂದು ಆಲೋಚಿಸುತ್ತಾರೆ.

ಹೆಣ್ತನ ಬೇಡವೆಂದು ಗಂಡಾಗಿದ್ದ ಜಿಹಾದ್‌ಗೆ ತಾಯಿಯಾಗುವುದು ಅಷ್ಟು ಸುಲಭವಿರಲಿಲ್ಲ

ಹೆಣ್ಣಾಗಿ ಹುಟ್ಟಿ ಗಂಡಿನ ಭಾವನೆಗಳನ್ನು ಹೊಂದಿದ್ದ ಜಿಹಾದ್‌ ಗಂಡಾಗಿ ಲಿಂಗ ಬದಲಾಯಿಸಿಕೊಂಡಿದ್ದರು, ಇದೀಗ ಮಗು ಪಡೆಯಲು ಮತ್ತೆ ಹೆಣ್ತನ ಒಪ್ಪಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ, ಅದಲ್ಲದೆ ಈ ಸಮಾಜದ ಕೊಂಕು ಮಾತುಗಳ ಬಗ್ಗೆ ಅಳುಕು ಕೂಡ ಅವರಲ್ಲಿತ್ತು. ಆದರೆ ಜಿಯಾಗೆ ಮಗು ಪಡೆಯಬೇಕೆಂಬ ಆಸೆ ತುಂಬಾನೇ ಇತ್ತು, ಹೀಗಾಗಿ ಜಿಹಾದ್‌ ಗರ್ಭಧರಿಸಲು ಯೋಚಿಸುತ್ತಾರೆ.

 ಗಂಡಾಗಿದ್ದರೂ ಗರ್ಭಕೋಶ ತೆಗೆದಿರಲಿಲ್ಲ

ಗಂಡಾಗಿದ್ದರೂ ಗರ್ಭಕೋಶ ತೆಗೆದಿರಲಿಲ್ಲ

ಜಿಹಾದ್‌ ಗಂಡಾಗಲು ಬಯಸಿ ಗಂಡಾಗಿದ್ದರು, ಲಿಂಗ ಪರಿವರ್ತನೆ ಕೂಡ ಮಾಡಿದ್ದರು, ಆದರೆ ಗರ್ಭಕೋಶ ತಗೆದುಹಾಕಿರುವುದಿಲ್ಲ, ಈ ಕಾರಣದಿಂದಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿದೆ.

ಕೋಯಿಕೋಡು ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ದಂಪತಿ

ಇವರು ಮಗು ಪಡೆಯುವ ಹಂಬಲದಿಂದ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಜಿಯಾಳಿಂದ ಜಿಹಾದ್‌ ಮಗುವನ್ನು ಪಡೆಯಲು ಯಾವುದೇ ತೊಂದರೆಯಿಲ್ಲ ಎಂಬುವುದನ್ನು ಖಚಿತ ಪಡಿಸುತ್ತಾರೆ. ಜಿಹಾದ್‌ ಜಿಯಾಳ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಾರೆ.

ತಮಗೆ ಜನಿಸಲಿರುವ ಮಗುವಿನ ಕುರಿತು ನೂರಾರು ಕನಸುಗಳನ್ನು ಹೊಂದಿದ್ದಾರೆ ಈ ದಂಪತಿ.

ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಮಗುವಿಗೆ ಜನನ

8 ತಿಂಗಳ ಗರ್ಭಿಣಿಯಾಗಿರುವ ಜಿಹಾದ್‌ ಮಾರ್ಚ್‌ ತಿಂಗಳಿನ 4ನೇ ತಾರೀಕಿಗೆ ಮಗುವಿಗೆ ಜನ್ಮ ನೀಡಬಹುದು ಎಂದು ವೈದ್ಯರು ಎಡೇಟ್‌ ನೀಡಿದ್ದಾರೆ. ಸಿ ಸೆಕ್ಷನ್ ಮೂಲಕ ಮಗುವನ್ನು ತೆಗೆಯಲಾಗುವುದು.

 ಜನಿಸಿದ ಮಗುವಿಗೆ ಮಿಲ್ಕ್‌ ಬ್ಯಾಂಕಿನಿಂದ ಹಾಲು ನೀಡಲಾಗುವುದು

ಜನಿಸಿದ ಮಗುವಿಗೆ ಮಿಲ್ಕ್‌ ಬ್ಯಾಂಕಿನಿಂದ ಹಾಲು ನೀಡಲಾಗುವುದು

ಜಿಹಾದ್‌ ಸ್ತನಗಳನ್ನು ತೆಗೆದಿರುವುದರಿಂದ ಮಗುವಿಗೆ ಹಾಲು ಕುಡಿಸಲು ಸಾಧ್ಯವಿಲ್ಲ, ಆದ್ದರಿಂದ ಮಗುವಿಗೆ ಸ್ತನ ಹಾಲನ್ನು ಮಿಲ್ಕ್‌ ಬ್ಯಾಂಕ್‌ನಿಂದ ಪಡೆಯುವ ನಿರ್ಧಾರ ಮಾಡಿದ್ದಾರೆ ದಂಪತಿ.

ಸ್ತನಹಾಲು ದೊರೆಯದಿರುವ ಎಷ್ಟೋ ಮಕ್ಕಳಿಗೆ ವರದಾನವಾಗಿದೆ ಈ ಮಿಲ್ಕ್‌ ಬ್ಯಾಂಕ್‌. ಅಧಿಕ ಎದೆಹಾಲು ಹೊಂದಿರುವ ತಾಯಂದಿರು ಎದೆಹಾಲನ್ನು ದಾನ ಮಾಡುತ್ತಾರೆ.

ಜಿಯಾ ಪ್ರಸಿದ್ಧ ಡ್ಯಾನ್ಸರ್

ಜಿಯಾ ಕೇರಳದ ಪ್ರಸಿದ್ಧ ಡ್ಯಾನ್ಸರ್, ಇವರ ಸಂಗಾತಿ ಜಿಹಾದ್‌ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮಂಗಳಮುಖಿ ಗರ್ಭಧರಿಸುವುದು ಅಷ್ಟು ಸುಲಭವಲ್ಲ, ದೈಹಿಕವಾಗಿ ಹಲವು ಸಮಸ್ಯೆಗಳಿರುತ್ತದೆ ಜೊತೆಗೆ ಸಮಾಜ ಅವರನ್ನು ಹಾಗೂ ಅವರಿಗೆ ಜನಿಸಿದ ಮಗುವನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಭಯ ಕೂಡ ಇರುತ್ತದೆ, ಆದರೆ ಧೈರ್ಯ ಮಾಡಿ ಮಗು ಪಡೆಯಲು ಮುಂದಾಗಿದ್ದಾರೆ. ಇವರಿಗೆ ಮುದ್ದಾದ ಮಗು ಜನಿಸಲಿ.

ಸಮಾಜ ತುಂಬಾ ಬದಲಾಗಿದೆ, ಮಂಗಳಮುಖಿಯರನ್ನು ಒಂದು ಕಾಲದಲ್ಲಿ ಕುಟುಂಬದಿಂದ ದೂರ ಇಡಲಾಗಿತ್ತು, ಆದರೆ ಈಗ ತುಂಬಾ ಕುಟುಂಬಗಳು ತಮ್ಮ ಮಕ್ಕಳನ್ನು ಒಪ್ಪಿಕೊಂಡಿದ್ದಾರೆ. ಮಂಗಳಮುಖಿಯರು ಕೂಡ ಮನುಷ್ಯರೇ, ಆದರೆ ಅವರ ಭಾವನೆಗಳು ಅವರು ಜನಿಸಿದ ಲಿಂಗಕ್ಕೆ ವಿರುದ್ಧವಾಗಿರುತ್ತದೆ. ತಮ್ಮ ಭಾವನೆಗೆ ತಕ್ಕಂತೆ ಬದುಕಲು ಮಂಗಳಮುಖಿಯರಾಗಿ ಬದಲಾಗುತ್ತಾರೆ.

ಇವರು ಕೂಡ ನಮ್ಮಂತೆಯೇ ಮನುಷ್ಯರೇ, ಅವರನ್ನು ನಮ್ಮಲ್ಲಿ ಒಬ್ಬರಾಗಿ ಕಂಡರೆ ಮಂಗಳಮುಖಿಯರ ನರಕ ಜೀವನ ಕೊನೆಯಾಗುವುದು.

English summary

Zahad Would Be The First Transman Father in India: Zahhad is Eight Months Pregnant

Zahad Would Be The First Transman Father in India, read on..
X
Desktop Bottom Promotion