For Quick Alerts
ALLOW NOTIFICATIONS  
For Daily Alerts

ಏನಿದು ಗರ್ಭಾವಸ್ಥೆಯಲ್ಲಿ ಕಾಡುವ ಮೆಲಸ್ಮಾ ಸಮಸ್ಯೆ?

|

ಮೆಲಾಸ್ಮಾ ಅಥವಾ ಕ್ಲೋವಾಸ್ಮಾ (Melasma or chloasma) ಎಂಬ ಸ್ಥಿತಿ ಮುಖದ ಮೇಲೆ ಮೇಲೆ ಗಾಢವರ್ಣದಿಂದ ಹಿಡಿದು ಬೂದು-ಕಂದು ಬಣ್ಣದ ಮಚ್ಚೆಗಳನ್ನು ಮೂಡಿಸುತ್ತದೆ. ಇವು ಸಾಮಾನ್ಯವಾಗಿ ಹಣೆ, ಮೂಗು, ಗದ್ದ, ಮೇಲ್ತುಟಿ ಮತ್ತು ಗಲ್ಲಗಳಲ್ಲಿ ಕಾಣಬರುತ್ತವೆ. ಮುಖದ ಮೇಲೆ ಇವು ಕಾಣಬರುವುದರಿಂದಲೇ ಇದಕ್ಕೆ "ಗರ್ಭಾವಸ್ಥೆಯ ಮುಖವಾಡ" ("mask of pregnancy") ಎಂಬ ಅನ್ವರ್ಥನಾಮ ನೀಡಲಾಗಿದೆ. ಆದರೆ ಈ ಮಚ್ಚೆಗಳು ದೇಹದ ಇತರ ಭಾಗಗಳಲ್ಲಿಯೂ ಕಂಡುಬರಬಹುದು. ಮೊಣಕೈ, ಎದೆ, ಕುತ್ತಿಗೆ ಮೊದಲಾದ ಸೂರ್ಯನಿಗೆ ಒಡ್ಡಿಕೊಳ್ಳುವ ಚರ್ಮದ ಭಾಗದಲ್ಲಿ ಕಂಡುಬರಬಹುದು.

Why Melasma In Pregnancy

ಇಂದಿನ ಲೇಖನದಲಿ ಮೆಲಾಸ್ಮಾ ಏಕೆ ಬರುತ್ತದೆ ಮತ್ತು ಇದಕ್ಕೇನು ಮಾಡಬಹುದು ಎಂಬುದನ್ನು ನೋಡೋಣ:

ಗರ್ಭಾವಸ್ಥೆಯ ಮೆಲಾಸ್ಮಾ ಈ ಸಮಯದಲ್ಲಿ ಸಾಮಾನ್ಯವೇ?

ಗರ್ಭಾವಸ್ಥೆಯ ಮೆಲಾಸ್ಮಾ ಈ ಸಮಯದಲ್ಲಿ ಸಾಮಾನ್ಯವೇ?

ಕ್ರೋಯೇಶಿಯಾದ ಮಾಧ್ಯಮ Collegium Antropologicum ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಶೇಖಡಾ ಐವತ್ತರಿಂದ ಎಪ್ಪತ್ತರಷ್ಟು ಗರ್ಭವತಿಯರಲ್ಲಿ ಈ ತೊಂದರೆ ಎದುರಾಗುತ್ತದೆ. ಇದಕ್ಕೆ ಕಾರಣ ಗರ್ಭಾವಸ್ಥೆಯಲ್ಲಿ ಹೆಚ್ಚುವ ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಮೆಲನೋಸೈಟುಗಳನ್ನು ಹೆಚ್ಚಿಸುವ ರಸದೂತಗಳ (melanocyte-stimulating hormone (MSH)) ಮಟ್ಟಗಳು, ಸಾಮಾನ್ಯವಾಗಿ ಈ ರಸದೂತಗಳ ಪ್ರಭಾವ ಹೆಚ್ಚಾಗುವ ಮೂರನೆಯ ತ್ರೈಮಾಸಿಕದಲ್ಲಿಯೇ ಇವು ಎದುರಾಗುತ್ತವೆ. ಈ ಮಚ್ಚೆಗಳಲ್ಲಿ ನೋವೇನೂ ಇರುವುದಿಲ್ಲ ಅಥವಾ ಗರ್ಭಾವಸ್ಥೆಯ ಮೇಲೂ ಪ್ರಭಾವವನ್ನೇನೂ ಬೀರುವುದಿಲ್ಲ. ಆದರೆ ತ್ವಚೆಯ ಸೌಂದರ್ಯವನ್ನು ಮಾತ್ರ ಕಸಿಯುತ್ತದೆ.

ಈ ಸ್ಥಿತಿಗೆ ಕಾರಣಗಳೇನು?

ಈ ಸ್ಥಿತಿಗೆ ಕಾರಣಗಳೇನು?

ಇದುವರೆಗೆ ಈ ಸ್ಥಿತಿಗೆ ಸ್ಪಷ್ಟ ಕಾರಣಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಚರ್ಮಕ್ಕೆ ಬಣ್ಣ ನೀಡುವ ಮೆಲನೋಸೈಟುಗಳು ಸೂರ್ಯನ ಬೆಳಕು ಹೆಚ್ಚು ಬೀಳುವಲ್ಲಿ ಕೊಂಚ ಹೆಚ್ಚು ವರ್ಣದ್ರವ್ಯಗಳನ್ನು ಉತ್ಪಾದಿಸುತ್ತವೆ. ಇದು ಹೆಚ್ಚಾದಷ್ಟೂ ಸಹಜವರ್ಣ ಗಾಢಗೊಳ್ಳುತ್ತದೆ ಹಾಗೂ ಮೆಲಾಸ್ಮಾ ಎದುರಾಗುತ್ತದೆ. ಈಗಾಗಲೇ ಗಾಢವರ್ಣ ಹೋಂದಿರುವ ಗರ್ಭವತಿಯರಲ್ಲಿ ಇದು ಅಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳದೇ ಇದ್ದರೂ ಗೌರವರ್ಣದ ಗರ್ಭವತಿಯರಲ್ಲಿ ಅತಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ.

ಮೆಲಾಸ್ಮಾ ಎದುರಾಗಲು ಸಾಮಾನ್ಯ ಪ್ರಚೋದಕಗಳೆಂದರೆ:

ಸೂರ್ಯನ ಅತಿನೇರಳೆ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವುದು. ಇದರಿಂದ ಮೆಲನೋಸೈಟುಗಳು ಪ್ರಚೋದನೆ ಪಡೆಯುತ್ತವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಸ್ಥಿತಿ ಹೆಚ್ಚು ಉಲ್ಬಣಿಸುತ್ತದೆ.

ರಸದೂತಗಳ ಬದಲಾವಣೆ ಇನ್ನೊಂದು ಕಾರಣ. ಗರ್ಭಾವಸ್ಥೆಯ ಮೂರನೆಯ ತ್ರೈಮಾಸಿಕದಲ್ಲಿ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು MSH ನಂತಹ ರಸದೂತಗಳ ಮಟ್ಟಗಳು ಹೆಚ್ಚುವ ಕಾರಣ ಮೆಲಸ್ಮಾ ರೋಗಲಕ್ಷಣಗಳನ್ನು ಪ್ರಚೋದಿಸುವ ಸಾಧ್ಯತೆಯಿದೆ .

ಇತರ ಅಂಶಗಳಲ್ಲಿ ಗರ್ಭವತಿಯ ಆನುವಂಶಿಕ ಇತಿಹಾಸ (ಕುಟುಂಬದಲ್ಲಿ ಬೇರೊಬ್ಬರು ಅದರಿಂದ ಬಳಲುತ್ತಿದ್ದರೆ), ಚರ್ಮದ ರಕ್ಷಣೆಯ ಪ್ರಸಾದನಗಳು, ಕೆಲವು ಔಷಧಿಗಳ ಅಡ್ಡಪರಿಣಾಮ, ಹಲವು ಗರ್ಭಧಾರಣೆಗಳು ಮತ್ತು ಗರ್ಭವತಿಯ ಹೆಚ್ಚುತ್ತಿರುವ ವಯಸ್ಸು ಮೊದಲಾದವೂ ಕಾರಣವಾಗಬಹುದು. ಸಾಮಾನ್ಯವಾಗಿ ಹೆರಿಗೆಯ ನಂತರ ಬಾಣಂತನದ ಅವಧಿಯಲ್ಲಿ ರಸದೂತಗಳ ಪ್ರಭಾವ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆಯೇ ಈ ಸ್ಥಿತಿಯೂ ಹಿಮ್ಮೆಟ್ಟುವ ಮೂಲಕ ಚರ್ಮ ಮೊದಲ ವರ್ಣ ಪಡೆಯುತ್ತದೆ.

ಮೆಲಾಸ್ಮಾ ಲಕ್ಶಣಗಳನ್ನು ಕಡಿಮೆಗೊಳಿಸಲು ಕೆಲವು ಕ್ರಮಗಳು:

ಮೆಲಾಸ್ಮಾ ಲಕ್ಶಣಗಳನ್ನು ಕಡಿಮೆಗೊಳಿಸಲು ಕೆಲವು ಕ್ರಮಗಳು:

ಸಾಮಾನ್ಯವಾಗಿ ಬಾಣಂತನದ ಅವಧಿಯಲ್ಲಿ ಕಣ್ಮರೆಯಾಗುತ್ತಿದ್ದರೂ, ನಿಮ್ಮ ಚರ್ಮದಲ್ಲಿ ಹೆಚ್ಚು ಸ್ಪಷ್ಟವಾಗಿರುವ ಈ ಮಚ್ಚೆಗಳ ಪ್ರಭಾವವನ್ನು ಕಡಿಮೆ ಮಾಡಲು ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳಬಹುದು.

ಸೂರ್ಯನ ಕಿರಣಗಳನ್ನು ತಪ್ಪಿಸಿ: ಮೊದಲ ಕ್ರಮವೆಂದರೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ಚರ್ಮದ ಹಾನಿಯನ್ನು ತಡೆಗಟ್ಟುವುದು. ನಿಮ್ಮ ಉದ್ಯೋಗಕ್ಕಾಗಿ ಬಿಸಿಲಿಗೆ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ವಿಶಾಲ-ಸ್ಪೆಕ್ಟ್ರಮ್ ಇರುವ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೋಗಬೇಕು.. ಮೆಲಾಸ್ಮಾವ ಉಲ್ಬಣಗೊಳಿಸುವುದನ್ನು ತಡೆಯಲು ಸಹಾಯ ಮಾಡುವ ಎಸ್‌ಪಿಎಫ್ 25 ಅಥವಾ ಹೆಚ್ಚಿನ ಗುಣಾಂಕವನ್ನು ಹೊಂದಿರುವ ಸನ್‌ಸ್ಕ್ರೀನ್‌ಗಳು ಅಥವಾ ಬ್ಲಾಕ್‌ಗಳನ್ನು ಆರಿಸಿಕೊಳ್ಳಬೇಕು. ಅಲ್ಲದೆ, ಅಗಲವಾದ ಅಂಚಿ ಇರುವ ದೊಡ್ಡ ಟೋಪಿ, ಉದ್ದನೆಯ ತೋಳು ಮತ್ತು ತಂಪು ಕನ್ನಡಕ ಧರಿಸಿ ಹೋಗಬೇಕು. ಚರ್ಮದ ಬಣ್ಣ ಬಿಳಿಚಿಸುವ ಸೌಂದರ್ಯ ಮಳಿಗೆಗಳಿಗೆ ಹೋಗದಿರಿ.

ಚರ್ಮದ ರಕ್ಷಣೆಯ ಪ್ರಸಾದನಗಳನ್ನು ಉಪಯೋಗಿಸದಿರಿ:

ಚರ್ಮದ ರಕ್ಷಣೆಯ ಪ್ರಸಾದನಗಳನ್ನು ಉಪಯೋಗಿಸದಿರಿ:

ಮುಖದ ಕ್ಲೆನ್ಸರ್, ಸ್ಕಿನ್ ಕ್ರೀಮ್ ಮತ್ತು ಮೇಕಪ್ ಉತ್ಪನ್ನಗಳು ನಿಮ್ಮ ಮೆಲಸ್ಮಾ ಈಗಾಗಲೇ ಚಿಕ್ಕಮಟ್ಟದಲ್ಲಿ ಎದುರಾಗಿದ್ದರೆ ಹೆಚ್ಚು ಪ್ರಚೋದಿಸಿ ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಹೆರಿಗೆಯಾಗುವವರೆಗೂ ಮತ್ತು ತಾನಾಗಿಯೇ ಇಲ್ಲವಾಗುವವರೆಗೂ ಇವುಗಳ ಬಳಕೆ ಬೇಡ.

ವ್ಯಾಕ್ಸಿಂಗ್ ಮಾಡಬೇಡಿ: ಕೂದಲನ್ನು ತೆಗೆಯಲು ಬಳಸುವ ವ್ಯಾಕ್ಸಿಂಗ್ ಮೆಲಸ್ಮಾವನ್ನು ಇನ್ನಷ್ಟು ಹದಗೆಡಿಸಬಹುದು ಏಕೆಂದರೆ ಇದು ಚರ್ಮದ ಉರಿಯೂತಕ್ಕೆ ಕಾರಣವಾಗಬಹುದು. ವಿಶೇಷವಾಗಿ ವರ್ಣದ್ರವ್ಯದಿಂದ ಪೀಡಿತ ಚರ್ಮದ ಭಾಗದಲ್ಲಿ ಇದರ ಪ್ರಭಾವ ಹೆಚ್ಚಾಗಬಹುದು.

ಗರ್ಭಾವಸ್ಥೆಯ ಮೆಲಾಸ್ಮಾಕ್ಕೆ ಚಿಕಿತ್ಸೆ ಇದೆಯೇ?

ಗರ್ಭಾವಸ್ಥೆಯ ಮೆಲಾಸ್ಮಾಕ್ಕೆ ಚಿಕಿತ್ಸೆ ಇದೆಯೇ?

ಸಹಜವರ್ಣ ಗಾಢಗೊಳ್ಳುವುದನ್ನು ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರ ಜೊತೆಗೇ, ನೀವು ಚರ್ಮರೋಗ ವೈದ್ಯರೊಂದಿಗೆ ಈ ಮಚ್ಚೆಗಳನ್ನು ಕಡಿಮೆ ಮಾಡಲು ಲಭ್ಯವಿರುವ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಸಲಹೆ ಪಡೆಯಬಹುದು. ಆದರೂ ಗರ್ಭವತಿಯರಿಗೆ ಚಿಕಿತ್ಸೆಯ ಆಯ್ಕೆಗಳು ಸೀಮಿತವಾಗಿವೆ.

ರೆಟಿನಾಯ್ಡ್ಸ್ ಮತ್ತು ಹೈಡ್ರೊಕ್ವಿನೋನ್ ನಂತಹ ಚರ್ಮದ ಮೇಲೆ ಹಚ್ಚಿಕೊಳ್ಳುವಂತಹ ಔಷಧಿಗಳನ್ನು ಸಾಮಾನ್ಯವಾಗಿ ವೈದ್ಯರು ಚಿಕಿತ್ಸೆಯ ರೂಪದಲ್ಲಿ ಸೂಚಿಸುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಅವುಗಳ ಸುರಕ್ಷತೆಯ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲದ ಕಾರಣ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಸಸ್ಯಜನ್ಯ ಉತ್ಪನ್ನಗಳನ್ನು ಹೊಂದಿದ್ದು, ವಿಟಮಿನ್ ಸಿ, ಗ್ಲೈಕೋಲಿಕ್ ಆಮ್ಲ, ಅರ್ಬುಟಿನ್, ಅಜೆಲೈಕ್ ಆಮ್ಲ, ಲೈಕೋರೈಸ್ ಸಾರ, ಅಥವಾ ಸೋಯಾಬೀನ್ ಸಾರಗಳನ್ನು ಹೊಂದಿರುವ ಪ್ರಸಾದನಗಳನ್ನು ಬಳಸಬಹುದು. ಆದರೆ ಯಾವುದೇ ಉತ್ಪನ್ನಗಳಲ್ಲಿ ಅಡ್ಡ ಪರಿಣಾಮಗಳಿಲ್ಲದೇ ಇರುವ ಕಾರಣ ಅಗತ್ಯವೆನಿಸಿದರೆ ಮಾತ್ರವೇ ಬಳಸಬೇಕು. ಹೆಚ್ಚಿನ ಗರ್ಭವತಿಯರಿಗೆ ಎದುರಾದ ಲಕ್ಷಣಗಳು ಬಾಣಂತನದಲ್ಲಿ ಹೆಚ್ಚೂ ಕಡಿಮೆ ಇಲ್ಲವಾಗುತ್ತವೆ. ಒಂದು ವೇಳೆ ನೀವು ಹೆರಿಗೆಯ ಬಳಿಕ ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಗರ್ಭಾವಸ್ಥೆಯಲ್ಲಿ ನೀವು ಮೆಲಸ್ಮಾ ಬಾರದಂತೆ ತಡೆಯಲು ಸಾಧ್ಯವೇ?

ಗರ್ಭಾವಸ್ಥೆಯಲ್ಲಿ ನೀವು ಮೆಲಸ್ಮಾ ಬಾರದಂತೆ ತಡೆಯಲು ಸಾಧ್ಯವೇ?

ಹಾರ್ಮೋನುಗಳ ಬದಲಾವಣೆಗಳು ಅಥವಾ ಅನುವಂಶಿಕ ಕಾರಣದಿಂದಾಗಿ ಈ ಸ್ಥಿತಿಯು ಗರ್ಭಾವಸ್ಥೆಯಲ್ಲಿ ಮೆಲಸ್ಮಾವನ್ನು ತಡೆಗಟ್ಟುವುದು ಸಾಧ್ಯವಾಗುವುದಿಲ್ಲ. ಆದರೂ ಈ ಮಚ್ಚೆಗಳು ಮತ್ತಷ್ಟು ಗಾಢಗುವುದನ್ನು ತಡೆಯಲು ನೀವು ಮೇಲೆ ಚರ್ಚಿಸಿದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ಮೆಲಸ್ಮಾ ಮಗುವಿನ ಲಿಂಗದ ಬಗ್ಗೆ ಏನಾದರೂ ಹೇಳುತ್ತದೆಯೇ?

ಗರ್ಭಾವಸ್ಥೆಯಲ್ಲಿ ಮೆಲಸ್ಮಾ ಮಗುವಿನ ಲಿಂಗದ ಬಗ್ಗೆ ಏನಾದರೂ ಹೇಳುತ್ತದೆಯೇ?

ಇಲ್ಲ. ಗರ್ಭಿಣಿ ಮಹಿಳೆಯಲ್ಲಿ ವರ್ಣದ್ರವ್ಯವು ಮಗುವಿನ ಲಿಂಗವನ್ನು ಸೂಚಿಸುತ್ತದೆ ಎಂಬುದು ಕೇವಲ ಕಟ್ಟುಕಥೆಯಾಗಿದೆ. ಇದನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮೆಲಸ್ಮಾ ಗುಣವಾಗಲು ಸಮಯ ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಅಲ್ಲದೆ, ಚಿಕಿತ್ಸೆಗೆ ಬಳಸುವ ಔಷಧಿಗಳಿಗೆ ರೋಗಲಕ್ಷಣಗಳನ್ನು ನಿವಾರಿಸಲು ಸಮಯ ಬೇಕಾಗುತ್ತದೆ. ಭಯಪಡದಿರಿ. ಪ್ರಭಾವ ಬೀರದ ಉತ್ಪನ್ನಗಳ ಬಳಕೆ ಅಥವಾ ಚರ್ಮದ ವರ್ಣದ್ರವ್ಯವನ್ನು ಉಲ್ಬಣಗೊಳಿಸುತ್ತಿದ್ದರೆ ಅಥವಾ ಬೇರಾವುದೇ ಅಸ್ವಸ್ಥತೆ ಎದುರಾದರೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

Read more about: skin face
English summary

Why Melasma In Pregnancy

During pregnancy time most of the women face skin problem, this called mmelasma, here are more information about that.
X
Desktop Bottom Promotion