For Quick Alerts
ALLOW NOTIFICATIONS  
For Daily Alerts

ಬೇಬಿಮೂನ್ ಎಂದರೇನು? ಇದು ಏಕೆ ಒಳ್ಳೆಯದು?

|

ತಾಯ್ತನದಲ್ಲಿ ಎಷ್ಟು ಖುಷಿ ಇರುತ್ತದೋ ಅಷ್ಟೇ ಸವಾಲುಗಳು ಕೂಡ ಇರುತ್ತದೆ. ಮಗು ಜನಿಸಿದ ಬಳಿಕ ಅದನ್ನು ನೋಡಿಕೊಳ್ಳುವುದರಲ್ಲಿಯೇ ನಮ್ಮನ್ನು ನಾವು ಮರೆತು ಬಿಡುತ್ತೇವೆ. ಅಯ್ಯೋ ಚೆನ್ನಾಗಿ ಡ್ರೆಸ್‌ ಮಾಡಿ, ಮೇಕಪ್ ಮಾಡಿ ಎಷ್ಟು ದಿನ ಆಯ್ತಲ್ಲಾ ಎಂದು ಅಂದುಕೊಳ್ಳುತ್ತೇವೆ.

ಮಗು ಹುಟ್ಟಿ ಅದು ಸ್ವಲ್ಪ ದೊಡ್ಡದಾಗುವವರೆಗೆ ನಿದ್ದೆ ದೂರನೇ ಹೋಗಿರುತ್ತದೆ. ಕಣ್ಣಿಗೆ ನಿದ್ದೆ ಹತ್ತಬೇಕು ಅಷ್ಟೊತ್ತಿಗೆ ಮಗು ಅಳಲಾರಂಭಿಸಿರುತ್ತದೆ. ಇನ್ನು ಮಗುವನ್ನು ಕರಕ್ಕೊಂಡು ಹೊರಗೆ ಹೋಗಿ ಬರೋಣ ಎಂದು ಹೊರಟರೆ ಯಾವಾಗಪ್ಪಾ ಮನೆ ಸೇರುವುದು ಎಂದು ಅನಿಸುವಷ್ಟರ ಮಟ್ಟಿಗೆ ಸಾಕೋ ಸಾಕಾಗಿರುತ್ತದೆ. ಹಾಗಾಗಿ ಇದಕ್ಕೆಲ್ಲಾ ಪ್ರಿಪೇರ್ ಆಗುವ ಮುನ್ನ ಬೇಬಿ ಹನಿಮೂನ್ ಹೋಗಿ ಬಂದರೆ ಆ ನೆನಪು ಸದಾ ಇರುತ್ತದೆ.

ಏನಿದು ಬೇಬಿಮೂನ್?

ಏನಿದು ಬೇಬಿಮೂನ್?

ಹನಿಮೂನ್ ಸರಿ, ಇದೇನೆಪ್ಪಾ ಬೇಬಿ ಹನಿಮೂನ್ ಎಂದು ಕೇಳುವುದಾದರೆ, ಗರ್ಭಿಣಿಯಾಗಿದ್ದಾಗ ಪತಿ ಜೊತೆ ಒಂದು ರೊಮ್ಯಾಂಟಿಕ್ ಟ್ರಿಪ್ ಹೋಗಿ ಬರುವುದು. ಈ ಟ್ರೆಂಡ್‌ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಮಗು ಹುಟ್ಟುವ ಮುನ್ನ ಒಂದು ಟ್ರಿಪ್ ಹೋಗಿ ಬರಲು ಹಲವಾರು ಜೋಡಿಗಳು ಪ್ಲ್ಯಾನ್‌ ಮಾಡುತ್ತಾರೆ. ಏಕೆಂದರೆ ಆ ರೀತಿಯ ಟ್ರಿಪ್ ಅದೇ ಕೊನೆಯಾಗಿರುತ್ತದೆ, ನಂತರ ಏನಿದ್ದರೂ ಪೋಷಕರು ಎಂಬ ಜವಾಬ್ದಾರಿ ಇದ್ದೇ ಇರುತ್ತದೆ. ಕೆಲವು ದಿನಗಳ ಮಟ್ಟಿಗೆ ಪ್ಲ್ಯಾನ್ ಮಾಡಿ ಯಾವುದಾದರೂ ಸ್ಥಳಕ್ಕೆ ಹೋಗಿ ಎಂಜಾಯ್ ಮಾಡಿ ಬರುವುದೇ ಬೇಬಿ ಹನಿಮೂನ್.

ಬೇಬಿಮೂನ್‌ಗೆ ಯಾವಾಗ ಹೋಗಬೇಕು

ಬೇಬಿಮೂನ್‌ಗೆ ಯಾವಾಗ ಹೋಗಬೇಕು

ಬೇಬಿಮೂನ್‌ಗೆ ಯಾವಾಗ ಹೋಗಬೇಕು ಎಂಬುವುದು ಆ ಜೋಡಿಯ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಗರ್ಭಿಣಿಯಾದ ಬಳಿಕ ಮಗು ಹುಟ್ಟುವುದರ ಒಳಗೆ ಯಾವಾಗ ಬೇಕಾದರೆ ಬೇಬಿಮೂನ್ ಪ್ಲ್ಯಾನ್ ಮಾಡಬಹುದು.

ಸಾಮಾನ್ಯವಾಗಿ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಬೇಬಿ ಹನಿಮೂನ್ ಹೋಗುತ್ತಾರೆ. ಏಕೆಂದರೆ ಮೊದಲ ತ್ರೈಮಾಸಿಕದಲ್ಲಿ ಕೆಲವರಿಗೆ ಸುಸ್ತು, ವಾಂತಿ ಈ ಸಮಸ್ಯೆ ಇರುತ್ತದೆ, ಇನ್ನು ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಪ್ರಯಾಣ ಮಾಡದಿರುವುದು ಗರ್ಭದಲ್ಲಿರುವ ಭ್ರೂಣದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಎರಡನೇ ತ್ರೈಮಾಸಿಕ ಬೇಬಿಮೂನ್‌ಗೆ ಹೆಚ್ಚು ಸುರಕ್ಷಿತವಾಗಿದೆ.

ಇನ್ನು ಮೂರನೇ ತ್ರೈಮಾಸಿಕದಲ್ಲಿ ಸುಸ್ತು ಅಧಿಕವಿರುತ್ತದೆ, ಈ ಸಮಯದಲ್ಲಿ ಪ್ರಯಾಣ ಸ್ವಲ್ಪ ಕಷ್ಟ ಅನಿಸಬಹುದು. ಒಟ್ಟಿನಲ್ಲಿ ನಿಮ್ಮ ಆರೋಗ್ಯ ಪರಿಸ್ಥಿತಿ ನೋಡಿ ಬೇಬಿಮೂನ್ ಪ್ಲ್ಯಾನ್ ಮಾಡಬಹುದು.

ಬೇಬಿಮೂನ್ ಎಲ್ಲಿಗೆ ಹೋಗಬಹುದು?

ಬೇಬಿಮೂನ್ ಎಲ್ಲಿಗೆ ಹೋಗಬಹುದು?

ಬೇಬಿ ಹನಿಮೂನ್ ಟ್ರಿಪ್ ನಿಮಗೆ ಇಷ್ಟ ಬಂದ ಸ್ಥಳಕ್ಕೆ ಹೋಗಬಹುದು. ವಿದೇಶ ಟ್ರಿಪ್ ಕೂಡ ಹೋಗಿ ಬರಬಹುದು. ಆದರೆ ನೀವು ಹೋಗುವ ಸ್ಥಳ ಎಲ್ಲಾ ರೀತಿಯಿಂದಲೂ ಸುರಕ್ಷಿತವಾಗಿರಬೇಕು. ಇನ್ನು ಸ್ವಲ್ಪ ರಿಸ್ಕಿ ಪ್ರೆಗ್ನೆನ್ಸಿ ಇರುವವರಿಗೆ ವೈದ್ಯರು ದೂರ ಹೋಗಬೇಡಿ, ಸಮೀಪ ಎಲ್ಲಾದರೂ ಹೋಗಿ ಬನ್ನಿ ಎಂದು ಸೂಚಿಸಬಹುದು.

ಉಳಿದುಕೊಳ್ಳುವ ಸ್ಥಳ, ತಿನ್ನುವ ಆಹಾರ ಎಲ್ಲದರ ಕಡೆ ಗಮನ ಕೊಡಬೇಕು. ಇನ್ನು ಪ್ರಯಾಣಿಸುವ ಮುನ್ನ ಅಲ್ಲಿಯ ಸ್ಥಳೀಯ ವೈದ್ಯರ ಅಥವಾ ಆಸ್ಪತ್ರೆಯ ಕಾಂಟ್ಯಾಕ್ಟ್ ನಂಬರ್‌ ನಿಮ್ಮ ಬಳಿ ಇರಲಿ.

ಬೇಬಿಮೂನ್‌ ಏಕೆ ಒಳ್ಳೆಯದು?

ಬೇಬಿಮೂನ್‌ ಏಕೆ ಒಳ್ಳೆಯದು?

ಜೀವನ ಮಗು ಹುಟ್ಟುವ ಮೊದಲು ಇರುವಂತೆ ನಂತರ ಇರುವುದಿಲ್ಲ. ಪೋಷಕರು ಆಗುತ್ತಿದ್ದಂತೆ ನಾವು ಸಂಪೂರ್ಣ ಬದಲಾಗುತ್ತೇವೆ. ಆಗ ನಮ್ಮ ಮೊದಲ ಆದ್ಯತೆ ಮಗು ಆಗಿರುತ್ತದೆ. ನಮಗಾಗಿ ಸಮಯ ಕಳೆಯುವುದು ಕಡಿಮೆಯಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ಮಗುವನ್ನು ನೋಡಿಕೊಳ್ಳುವುದರಲ್ಲಿಯೇ ಬ್ಯುಸಿಯಾಗುತ್ತಾರೆ.

ಗರ್ಭಿಣಿ ಎಂದು ಗೊತ್ತಾದ ಕ್ಷಣದಿಂದ ಗಂಡ-ಹೆಂಡತಿ ಒಬ್ಬರೂ ಮಗುವಿನ ನಿರೀಕ್ಷೆಯಲ್ಲಿರುತ್ತಾರೆ, ಆ ಮಗುವನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗುತ್ತಾರೆ. ಈ ಸಮಯದಲ್ಲಿ ತಮಗಾಗಿ ಸ್ವಲ್ಪ ರಸಮಯ ಸಮಯ ಕಳೆಯಲು ಈ ಬೇಬಿಹನಿಮೂನ್‌ ಸಹಕಾರಿ. ಅಲ್ಲದೆ ಮಹಿಳೆಗೆ ಈ ಟ್ರಿಪ್ ಮತ್ತಷ್ಟು ಸ್ಪೆಷಲ್ ಅನಿಸುವುದು.

 ಬೇಬಿಮೂನ್‌ಗೆ ಟಿಪ್ಸ್

ಬೇಬಿಮೂನ್‌ಗೆ ಟಿಪ್ಸ್

ತುಂಬಾ ಹೊತ್ತು ವಿಮಾನದಲ್ಲಿ ಇರುವುದರಿಂದ ಸುಸ್ತು ಅನಿಸುವುದು. ಆದ್ದರಿಂದ ವಿಮಾನದಲ್ಲಿ ಪ್ರಯಾಣ ಮಾಡುವುದಾದರೆ: ನಾನ್‌ಸ್ಟಾಪ್ ವಿಮಾನ ಬುಕ್ ಮಾಡಿ.

ದೇಶದ ಒಳಗಡೆ ಪ್ರಯಾಣಿಸುವುದಾದರೆ

ನಿಮ್ಮ ಇನ್ಸ್ಯೂರೆನ್ಸ್ ಚೆಕ್‌ ಮಾಡಿ, ದೇಶದಲ್ಲಿ ಎಲ್ಲೆಲ್ಲಿ ನೀವು ಅದರ ಸೌಲಭ್ಯ ಪಡೆಯಬಹುದು ಎಂದು ತಿಳಿದುಕೊಳ್ಳಿ. ಒಂದು ವೇಳೆ ತುರ್ತಾಗಿ ಆಸ್ಪತ್ರೆಗೆ ದಾಖಲಾಗ ಬೇಕಾದರೆ ಪ್ರಯಾಣ ಮಾಡುವ ಮುನ್ನ ಆ ಸ್ಥಳ, ಅಲ್ಲಿಯ ಉತ್ತಮ ಆಸ್ಪತ್ರೆ ಇವುಗಳ ಮಾಹಿತಿ ನಿಮ್ಮ ಬಳಿ ಇರಲಿ.

ಆಗಾಗ ವಿಶ್ರಾಂತಿ ತೆಗೆದುಕೊಳ್ಳಿ

ತುಂಬಾ ಪ್ರಯಾಣ ಮಾಡಬೇಡಿ, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.

ಬಜೆಟ್ ಪ್ಲ್ಯಾನ್ ಮಾಡಿ

ಬಜೆಟ್ ಪ್ಲ್ಯಾನ್ ಮಾಡಿ

ನೀವು ಬೇಬಿ ಹನಿಮೂನ್‌ಗೆ ಬೇಕಾದಷ್ಟು ಬಜೆಟ್‌ ಪ್ಲ್ಯಾನ್ ಮಾಡಿ. ನಂತರ ಸ್ವಲ್ಪ ಹಣ ಜಾಸ್ತಿಯೇ ಕೈಯಲ್ಲಿ ಇರಲಿ. ಏನಾದರೂ ತುರ್ತು ಅವಶ್ಯಕತೆ ಬಂದರೆ ಹಣಕ್ಕಾಗಿ ಪರದಾಡುವಂತೆ ಆಗಬರದು.

ನೀವು ಮೊದಲ ಬಾರಿಗೆ ಗರ್ಭಿಣಿಯಾಗಿದ್ದರೆ ಒಂದು ಬೇಬಿಮೂನ್ ಪ್ಲ್ಯಾನ್ ಮಾಡಿ, ವಿದೇಶಕ್ಕೇ ಹೋಗಬೇಕೆಂದು ಇಲ್ಲ, ನಿಮ್ಮ ಸಮೀಪದ ಸ್ಥಳಕ್ಕೂ ಹೋಗಿಬರಬಹುದು. ರಿಲ್ಯಾಕ್ಸ್ ಅನಿಸುವುದು ಜೊತೆಗೆ ತುಂಬಾ ಸ್ಪೆಷಲ್ ಆಗಿರುತ್ತೆ.

English summary

What's a Babymoon and How Do You Plan One in Kannada

What's a Babymoon and How Do You Plan One, Here is a details, read on.
X
Desktop Bottom Promotion