For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿದ್ದಾಗ ಬೀಳುವ ಸ್ಟ್ರೆಚ್‌ ಮಾರ್ಕ್ಸ್ ಹೋಗಲಾಡಿಸಬಹುದೇ?

|

ಹೆರಿಗೆಯ ಬಳಿಕ ಉಬ್ಬಿದ್ದ ಹೊಟ್ಟೆಯ ಚರ್ಮದಲ್ಲಿ ಸೆಳೆತದ ಗುರುತುಗಳು ಮೂಡಿರುತ್ತವೆ. ಇದಕ್ಕೆ ಕಾರಣವೇನು ಮತ್ತು ಇದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಮವೈದ್ಯರು ಏನು ಹೇಳುತ್ತಾರೆ, ಇದಕ್ಕೆ ಇರುವ ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ.

Truth About Pregnancy Stretch Marks | Boldsky Kannada

ಹೆರಿಗೆಯ ಬಳಿಕ ಹಿಂದಿನ ಅಂಗ ಸೌಷ್ಟವ ಮತ್ತು ಸೌಂದರ್ಯವನ್ನು ಹೊಂದುವುದು ಪ್ರತಿ ತಾಯಿಯ ಆಕಾಂಕ್ಷೆ ಆಗಿರುತ್ತದೆ. ಇದರಲ್ಲಿ ಹುಲಿಯ ಪಟ್ಟೆಗಳಂತೆ ಕಾಣುವ ಗುರುತುಗಳು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತವೆ. ಇವುಗಳು ಹೇಗೆ ಮೂಡುತ್ತವೆ ಮತ್ತು ಇದನ್ನು ಬರದಂತೆ ತಡೆಯಲು ಅಥವಾ ಈಗಾಗಲೇ ಬಂದಿದ್ದರೆ ಇವನ್ನು ಹೇಗೆ ಇಲ್ಲವಾಗಿಸಬಹುದು ಎಂಬುದರ ಬಗ್ಗೆ ಮುಂದೆ ತಿಳಿಯೋಣ.

ಹೆರಿಗೆಯ ಸೆಳೆತದ ಗುರುತುಗಳು ಏಕೆ ಮೂಡುತ್ತವೆ?

ಹೆರಿಗೆಯ ಸೆಳೆತದ ಗುರುತುಗಳು ಏಕೆ ಮೂಡುತ್ತವೆ?

ಗರ್ಭವಾಸ್ಥೆಯ ಎಲ್ಲಾ ಹಂತಗಳಲ್ಲೂ ಗರ್ಭವತಿಯ ದೇಹವನ್ನು ಹಲವಾರು ರಸದೂತಗಳು ನಿಯಂತ್ರಿಸುತ್ತವೆ. ದಿನ ಕಳೆದಂತೆ ಮಗುವಿನ ಬೆಳವಣಿಗೆಗೆ ಪೂರಕವಾಗಿ ಹೊಟ್ಟೆಯ ಗಾತ್ರವೂ ಹೆಚ್ಚುತ್ತದೆ. ಹೊಟ್ಟೆ ಉಬ್ಬುತ್ತಿದ್ದಂತೆ ಹೊಟ್ಟೆಯ ಚರ್ಮದ ನಾರಿನಂಶಗಳೂ ಸೆಳೆತಕ್ಕೆ ಒಳಗಾಗುತ್ತವೆ. ರಬ್ಬರ್ ಬ್ಯಾಂಡ್ ಎಳೆದು ಬಿಟ್ಟ ಬಳಿಕ ಮೂಡುವಂತಹ ಉದ್ದನೆಯ ಗೀರುಗಳು ಇಲ್ಲೂ ಮೂಡುತ್ತವೆ.

ಚರ್ಮದ ನಾರುಗಳು ರಬ್ಬರಿನಂತಹ ಗುಣ ಹೊಂದಿರದ ಕಾರಣ ಸೆಳೆತಕ್ಕೆ ಒಳಗಾದ ಬಳಿಕ ಪರಿಪೂರ್ಣವಾಗಿ ಮೊದಲ ಸ್ಥಿತಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಮೊದಲ ಸ್ಥಿತಿ ಪಡೆಯದೇ ಕೊಂಚವೇ ಹೆಚ್ಚು ಇರುತ್ತದೆ. ಮಗುವಿನ ಬೆಳವಣಿಗೆಯ ವೇಗ ಹೆಚ್ಚಿದಷ್ಟೂ ಸೆಳೆತಕ್ಕೊಳಗಾಗುವ ವೇಗವೂ ಹೆಚ್ಚುತ್ತದೆ. ಈ ಮಹಿಳೆಯರಿಗೆ ಹೆಚ್ಚು ಗಾಢವಾದ ಪಟ್ಟೆಗಳು ಕಾಣಿಸಿಕೊಳ್ಳಬಹುದು.

ಅಲ್ಲದೇ ಪ್ರತಿ ಮಹಿಳೆಯ ಚರ್ಮದ ನಾರುಗಳ ವಿನ್ಯಾಸದಲ್ಲಿಯೂ ಕೊಂಚ ವ್ಯತ್ಯಾಸವಿದ್ದು ಪ್ರತಿಯೊಬ್ಬರಿಗೂ ಬೇರೆಯೇ ಬಗೆಯ ಮತ್ತು ಗಾಢತೆಯ ಪಟ್ಟೆಗಳು ಮೂಡುತ್ತವೆ.

ಗರ್ಭಾವಸ್ಥೆಯ ಯಾವ ಹಂತದಲ್ಲಿ ಈ ಗುರುತುಗಳು ಮೂಡಲು ಪ್ರಾರಂಭವಾಗುತ್ತವೆ?

ಗರ್ಭಾವಸ್ಥೆಯ ಯಾವ ಹಂತದಲ್ಲಿ ಈ ಗುರುತುಗಳು ಮೂಡಲು ಪ್ರಾರಂಭವಾಗುತ್ತವೆ?

ಹೆಚ್ಚಿನ ಗರ್ಭವತಿಯರಲ್ಲಿ ಈ ಗುರುತುಗಳು ಎರಡನೆಯ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತವೆ. ಯಾವಾಗ ಚರ್ಮದ ಸೆಳೆತದ ಗರಿಷ್ಟ ಪ್ರಮಾಣ ಕಾಣಿಸಿಕೊಳ್ಳುತ್ತದೆ ಎಂಬುದು ಮಗುವಿನ ಬೆಳವಣಿಗೆಯ ವೇಗ ಮತ್ತು ಗರ್ಭವತಿ ಪಡೆದ ತೂಕ ಇವೆಲ್ಲವನ್ನೂ ಅವಲಂಬಿಸಿರುತ್ತದೆ.

ನೆರಿಗೆ ಮೂಡದಂತೆ ತಡೆಯುವುದು ಹೇಗೆ

ನೆರಿಗೆ ಮೂಡದಂತೆ ತಡೆಯುವುದು ಹೇಗೆ

ಪಟ್ಟೆಯಂತೆ ಮೂಡಿರುವ ಗುರುತುಗಳ ಮೇಲೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಬದಲಿಗೆ ಕೊಕೊ ಬೆಣ್ಣೆ ಅಥವಾ ತೆಂಗಿನ ಎಣ್ಣೆಯಂತಹ ಯಾವುದೇ ನೈಸರ್ಗಿಕ ಎಣ್ಣೆಯನ್ನು ಅವುಗಳ ಮೇಲೆ ಉಜ್ಜುವ ಮೂಲಕ ಚರ್ಮವನ್ನು ತೇವಗೊಳಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಎಲ್ಲಾ ತ್ವಚೆಯ ಉತ್ಪನ್ನಗಳು ಮಗುವಿಗೆ ಒಳ್ಳೆಯದಲ್ಲ.

ಚರ್ಮಕ್ಕೆ ಉರಿ ತರಿಸುವ ಅಥವಾ ಅದರಿಂದ ಹೀರಿಕೊಳ್ಳುವ ಮತ್ತು ಸಂಕೋಚನವನ್ನು ಉಂಟುಮಾಡುವ ಸಾರಭೂತ ತೈಲಗಳನ್ನು ಬಳಸದಿರಿ. ಗರ್ಭಾವಸ್ಥೆ, ಬಾಣಂತನ ಮತ್ತು ಸ್ತನ್ಯಪಾನ ಮಾಡುವಾಗ ರೆಟಿನ್-ಎ ನಂತಹ ರೆಟಿನಾಯ್ಡ್‌ಗಳನ್ನು ಸೇವಿಸಬಾರದು.

ಅಲ್ಲದೇ ಸಾಕಷ್ಟು ನೀರು ಕುಡಿಯುವುತ್ತಿರುವ ಮೂಲಕ ಚರ್ಮದ ಸ್ಥಿತಿಸ್ಥಾಪಕ ಗುಣ ಹೆಚ್ಚುತ್ತದೆ ಮತ್ತು ಚರ್ಮದ ನಾರುಗಳು ಹೆಚ್ಚು ಮೃದುವಾಗಿರಲು ಮತ್ತು ನಿಮ್ಮ ಚರ್ಮದಲ್ಲಿ ಹೆಚ್ಚು ಆರ್ದ್ರತೆ ಇರುವಂತೆ ಮಾಡಲು ಸಹಾಯ ಮಾಡುತ್ತದೆ.

ನೆರಿಗೆಯ ಗುರುತುಗಳು ಶಾಶ್ವತವಾಗಿರುತ್ತವೆಯೇ?

ನೆರಿಗೆಯ ಗುರುತುಗಳು ಶಾಶ್ವತವಾಗಿರುತ್ತವೆಯೇ?

ಹೆರಿಗೆಯ ಗುರುತುಗಳು ಪರಿಪೂರ್ಣವಾಗಿ ಹೋಗದೆ ಇದ್ದರೂ ಇದನ್ನು ಸಾಕಷ್ಟು ಮಟ್ಟಿಗೆ ಕುಂದಿಸಬಹುದು. ಬಾಣಂತನದ ಅವಧಿಯಲ್ಲಿ ಈ ಪಟ್ಟೆಗಳು ಸಹಜವರ್ಣದ ನಡುವೆ ಗುಲಾಬಿ ಬಣ್ಣದಂತೆ ಇದ್ದು ಹೆಚ್ಚು ಸ್ಪಷ್ಟವಾಗಿ ಎದ್ದು ಕಾಣುತ್ತವೆ. ದಿನ ಕಳೆದಂತೆ ಈ ಗುಲಾಬಿ ಬಣ್ಣ ಸಹಜವರ್ಣದ ಹತ್ತಿರ ಹತ್ತಿರ ಬರುತ್ತಾ ಎರಡನೇ ನಡುವಣ ವ್ಯತ್ಯಾಸ ಹೆಚ್ಚು ಗಮನಕ್ಕೆ ಬಾರದಷ್ಟು ಗಾಢವಾಗುತ್ತದೆ.

ಈ ಗುರುತುಗಳು ನಿಜವಾಗಿ ನೀವು ತಾಯಿಯಾಗಿ ಈ ಜೀವನದಲ್ಲಿ ಸಾರ್ಥಕತೆ ಅನುಭವಿಸಿದ ಗುರುತಾಗಿದೆ. ಇದು ನಿಮಗೆ ಹೆಮ್ಮೆಯ ವಿಷಯವಾಗಬೇಕೇ ವಿನಃ ಕೀಳರಿಮೆ ಸಲ್ಲದು. ಇನ್ನು ಇದನ್ನು ಕಡಿಮೆಗೊಳಿಸಲು ಕೆಲವಾರು ಚಿಕಿತ್ಸೆಗಳು ಲಭ್ಯವಿವೆ ಹಾಗೂ ಇವು ಸಾಕಷ್ಟು ಪರಿಣಾಮಕಾರಿಯಾಗಿಯೂ ಇವೆ. ಇವುಗಳನ್ನು ಅನುಸರಿಸುವ ಬಗ್ಗೆ ಯೋಚಿಸಬಹುದು.

ಈ ಬಗ್ಗೆ ನೀವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೇ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ನಿಮ್ಮ ಆರೋಗ್ಯದ ಮಾಹಿತಿಗಳನ್ನು ಪರಿಗಣಿಸಿ ವೈದ್ಯರೇ ಇದಕ್ಕೂ ಸೂಕ್ತ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಇದನ್ನು ಮಾತ್ರವೇ ಅನುಸರಿಸಿ.

English summary

Truth About Pregnancy Stretch Marks

Here we are discussing about truth about pregnancy stretch marks. Dermatologist explains what causes stretch marks and what you can do to minimize or prevent them. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X