For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಬೇಬಿ ಬಂಪ್ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳಿವು

|

ಒಬ್ಬ ಮಹಿಳೆಗೆ ತಾನು ಗರ್ಭಿಣಿ ಎಂದು ತಿಳಿದ ತಕ್ಷಣ ಉಂಟಾಗುವ ಆನಂದ ಮತ್ತು ರೋಚಕತೆಯ ಅನುಭವಕ್ಕೆ ಪಾರವೇ ಇರುವುದಿಲ್ಲ. ಮನಸ್ಸಿನಲ್ಲಿ ಬಗೆಬಗೆಯ ಕನಸುಗಳು, ಮಗು ಹುಟ್ಟುವುದಕ್ಕೆ ಮುಂಚೆಯೇ ಮಗುವಿಗಾಗಿ ಏನೆಲ್ಲಾ ಮಾಡಬೇಕು ಎಂಬ ಆಲೋಚನೆಗಳು, ಗಂಡನ ಮನೆಯಲ್ಲಿ ಹಾಗೂ ತವರು ಮನೆಯಲ್ಲಿ ಈ ಸಂತೋಷಕರ ವಿಷಯ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಗ್ಗೆ ಲೆಕ್ಕಾಚಾರ ಎಲ್ಲವೂ ಒಮ್ಮೆಲೆ ನಡೆಯುತ್ತಿರುತ್ತದೆ. ಹಾಗಾಗಿ ಇಂತಹ ಖುಷಿಯನ್ನು ವರ್ಣಿಸಲು ಬಾಯಿಂದ ಮಾತುಗಳೇ ಹೊರಡುವುದಿಲ್ಲ. ಅದರಲ್ಲೂ ಮೊದಲ ಬಾರಿಗೆ ತಾಯ್ತನದ ಸುಖವನ್ನು ಅನುಭವಿಸಲು ಹೊರಟಿರುವ ಮಹಿಳೆಯರಿಗೆ ಇದಕ್ಕಿಂತಲೂ ದುಪ್ಪಟ್ಟಾದ ಖುಷಿ ಇರುತ್ತದೆ.

ಸಾಮಾನ್ಯವಾಗಿ ಯಾವುದೇ ಮಹಿಳೆ ತಾನು ಗರ್ಭಿಣಿ ಎನ್ನುವ ವಿಷಯವನ್ನು ಮೊದಲು ತನ್ನ ಗಂಡನಿಗೆ ಅಥವಾ ತನ್ನ ತಾಯಿಗೆ ತಿಳಿಸಲು ಹವಣಿಸುತ್ತಾಳೆ. ಏಕೆಂದರೆ ಮಾನಸಿಕವಾಗಿ ಇಬ್ಬರೂ ಆಕೆಗೆ ತುಂಬಾ ಹತ್ತಿರವಾಗಿರುತ್ತಾರೆ ಮತ್ತು ಭಾವನಾತ್ಮಕವಾಗಿ ವಿಷಯ ತಿಳಿದ ತಕ್ಷಣ ಅಷ್ಟೇ ಖುಷಿಯಿಂದ ಪ್ರತಿಕ್ರಿಯೆ ನೀಡಿ ಶುಭ ಹಾರೈಸುತ್ತಾರೆ. ಮನೆಗೆ ಒಬ್ಬ ಹೊಸ ಅತಿಥಿ ಆಗಮನವಾಗುತ್ತಿದೆ ಎಂದು ತಿಳಿದ ತಕ್ಷಣ ಗಂಡ ಕೂಡ ನನ್ನ ಹೆಂಡತಿಗೆ ಬೇಕಾದ ಎಲ್ಲಾ ಸೌಕರ್ಯ ಸವಲತ್ತುಗಳನ್ನು ಮಾಡಿಕೊಡಲು ಮುಂದಾಗುತ್ತಾನೆ. ಇನ್ನು ತವರು ಮನೆಯಲ್ಲಿ ತಾಯಿಗೆ ತನ್ನ ಮಗಳ ಮುಂದಿನ 9 ತಿಂಗಳ ಸಂಪೂರ್ಣ ಚಿತ್ರಣ ಕಣ್ಣ ಮುಂದೆ ಅದಾಗಲೇ ಬಂದಿರುತ್ತದೆ. ಮೊದಲು ನನ್ನ ಮಗಳನ್ನು ಕಣ್ತುಂಬಾ ನೋಡಬೇಕು ಎನ್ನುವ ಆಸೆ ಸಹಜವಾಗಿ ಎಲ್ಲಾ ತಾಯಂದಿರಿಗೂ ಇದ್ದೇ ಇರುತ್ತದೆ. ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೂಕ್ತವಾದ ಆಹಾರಗಳ ಕಡೆಗೆ ಹೆಚ್ಚು ಗಮನ ಕೊಟ್ಟು ಕಷ್ಟ ಪಟ್ಟು ಹೇಗೋ ಎಲ್ಲವನ್ನು ವಂಚಿಕೊಂಡು ಮಗಳ ಮನೆ ತಲುಪುತ್ತಾರೆ.

ತಾನು ಗರ್ಭಿಣಿ ಆಗುತ್ತಿದ್ದೇನೆ ಎನ್ನುವ ಭಾವನೆ ಒಂದು ಕಡೆ ಆದರೆ, ಇನ್ನೊಂದು ಕಡೆಯಿಂದ ತನಗಾಗಿ ತನ್ನ ಗಂಡನ ಮನೆಯಿಂದ ಹಾಗೂ ತವರು ಮನೆಯಿಂದ ವ್ಯಕ್ತವಾಗುತ್ತಿರುವ ಖುಷಿಯಾದ ಪ್ರತಿಕ್ರಿಯೆಗಳು ಒಬ್ಬ ಮಹಿಳೆಯ ಆನಂದವನ್ನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮಾಡುತ್ತವೆ. ಇಷ್ಟಾದರೂ ಯಾವುದೇ ಒಬ್ಬ ತಾಯಿ ತಾನು ಗರ್ಭಿಣಿ ಆದ ನಂತರ ತನ್ನ ಮಗುವಿನ ಮೊದಲ ಪ್ರತಿಕ್ರಿಯೆಗೆ ಕಾತುರದಿಂದ ಕಾಯುತ್ತಿರುತ್ತಾಳೆ. ತನ್ನ ಗರ್ಭದಲ್ಲಿ ಮಗು ಎಂದು ತನ್ನ ಮೊದಲ ಚಲನೆ ಆರಂಭಿಸುತ್ತದೆ ಎಂಬ ಬಗ್ಗೆ ಎಲ್ಲಾ ಗರ್ಭಿಣಿ ಮಹಿಳೆಯರಿಗೂ ಒಂದು ಕಾಳಜಿ ಇದ್ದೇ ಇರುತ್ತದೆ. ಆದರೆ ಮಗು ಮಾತ್ರ ಕೆಲವು ವಾರಗಳ ನಂತರವೇ ಕನ್ನ ಕೈ ಕಾಲುಗಳನ್ನು ಅತ್ತಿತ್ತ ಆಡಿಸುವುದರ ಮೂಲಕ ಸರ್ಪ್ರೈಸ್ ಕೊಡುತ್ತದೆ. ಈ ಸಮಯದಲ್ಲಿ ನಿಜಕ್ಕೂ ಒಬ್ಬ ತಾಯಿಯ ಆನಂದವನ್ನು ವರ್ಣಿಸಲಾಗದು.

ಗರ್ಭಾವಸ್ಥೆಯ ಇನ್ನೂ ಕೆಲವು ಅನುಭವಗಳೆಂದರೆ

1 ಆರಂಭಿಕ ದಿನಗಳು ಸ್ವರ್ಗವೇ ಸರಿ

1 ಆರಂಭಿಕ ದಿನಗಳು ಸ್ವರ್ಗವೇ ಸರಿ

ಗರ್ಭಾವಸ್ಥೆಯ ದಿನಗಳು ಎಂದರೆ ಸಾಮಾನ್ಯವಲ್ಲ. ಮಹಿಳೆಯರಿಗೆ ತುಂಬಾ ಖುಷಿಯ ಅನುಭವವನ್ನು ಉಂಟು ಮಾಡುವ ಸಂದರ್ಭ ಮತ್ತು ಅಷ್ಟೇ ಜಾಗರೂಕತೆಯಿಂದ ಇರಬೇಕಾದ ಕಾಲ ಇದು ಹೇಳಬಹುದು. ಆಸ್ಪತ್ರೆಯಲ್ಲಿ ಒಮ್ಮೆ ವೈದ್ಯರು ಗರ್ಭಾವಸ್ಥೆಯನ್ನು ಕನ್ಫರ್ಮ್ ಮಾಡಿದ ನಂತರ ಒಬ್ಬ ಮಹಿಳೆಗೆ ಮುಖದಲ್ಲಿ ಮೂಡುವ ಮಂದಹಾಸ ಹೆರಿಗೆ ಆಗುವವರೆಗೂ ಹಾಗೇ ಉಳಿಯುತ್ತದೆ. ತನ್ನ ತಾಯ್ತನದ ಸುಖವನ್ನು ಕಂಡುಕೊಳ್ಳಲು ಒಬ್ಬ ಗರ್ಭಿಣಿ ಮಹಿಳೆಗೆ ಆಕೆಯ ಜೀವನದಲ್ಲಿ ಒದಗಿ ಬಂದಿರುವ ಒಂದು ತುಂಬಾ ವಿಶೇಷವಾದ ಸಂದರ್ಭ.

ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಸಹಜವಾದ ಜೀವನವೇ ನಿಮ್ಮದಾಗಿರುತ್ತದೆ. ಆದರೂ ಕೂಡ ಗರ್ಭಿಣಿ ಎನ್ನುವ ಭಾವನೆಯಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚು ಖುಷಿಯಾದ ಕಾಲ ಕಳೆಯುವಿರಿ. ಸಂಪೂರ್ಣವಾಗಿ ಆಹಾರ ಪದ್ಧತಿ ಒಂದು ಹತೋಟಿಗೆ ಬಂದು ಹೆಚ್ಚು ಪೌಷ್ಟಿಕಾಂಶಭರಿತ ಮತ್ತು ನೀವು ಬಯಸಿದ ಆಹಾರಗಳು ಈ ಸಮಯದಲ್ಲಿ ನಿಮ್ಮದಾಗುತ್ತವೆ. ಒಮ್ಮೆ ನೀವು ಗರ್ಭಿಣಿ ಎಂದು ಮನೆಯಲ್ಲಿ ತಿಳಿದ ತಕ್ಷಣ ಮನೆ ಮಂದಿ, ನೆಂಟರು - ಇಷ್ಟರು, ಸ್ನೇಹಿತರು, ಬಂಧು - ಬಳಗ ಎಲ್ಲರೂ ನಿಮ್ಮ ಖುಷಿಯಲ್ಲಿ ಭಾಗಿಯಾಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಹೊಸ ರೀತಿಯ ತುಂಬಾ ಆನಂದದಾಯಕ ಮತ್ತು ಜೀವನದಲ್ಲಿ ಮರೆಯಲಾರದ ಸಂದರ್ಭವಾಗಿ ಮಾರ್ಪಾಡಾಗುವುದಂತೂ ಖಚಿತ.

2 ಮಗುವಿನ ಬೆಳವಣಿಗೆಯೇ ಒಂದು ರೋಚಕ ಅನುಭವ

2 ಮಗುವಿನ ಬೆಳವಣಿಗೆಯೇ ಒಂದು ರೋಚಕ ಅನುಭವ

ಗರ್ಭಾವಸ್ಥೆಯ ದಿನಗಳಲ್ಲಿ ನೀವು ಸೇವಿಸುವ ಆಹಾರ ಕೇವಲ ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಮಗುವಿನ ಪೋಷಣೆ ಕೂಡ ಮಾಡುತ್ತದೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಅಂದರೆ ಮೊದಲ ಒಂದು ತಿಂಗಳ ಅವಧಿಯಲ್ಲಿ ನಿಮ್ಮ ಗರ್ಭದೊಳಗಿನ ಮಗು ಕೇವಲ ಒಂದು ಸಾಸಿವೆ ಕಾಳಿನಷ್ಟು ಮಾತ್ರ ಬೆಳವಣಿಗೆ ಹೊಂದಿರುತ್ತದೆ ಎಂದರೆ ನಿಮಗೆ ಕೇಳಲು ನಿಜವಾಗಲು ಖುಷಿಯಾಗುತ್ತದೆ. ಆದರೆ ಒಮ್ಮೆ ನೀವು ಮೂರು ತಿಂಗಳ ಅವಧಿಗೆ ಬಂದು ತಲುಪಿದಾಗ ಸಾಸಿವೆ ಕಾಳಿನ ಗಾತ್ರದಿಂದ ನಿಧಾನವಾಗಿ ಒಂದು ಮೀಡಿಯಂ ಗಾತ್ರದ ನಿಂಬೆ ಹಣ್ಣಿನ ಗಾತ್ರಕ್ಕೆ ನಿಮ್ಮ ಮಗುವಿನ ಬೆಳವಣಿಗೆ ಆಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಹೊಟ್ಟೆ ಸ್ವಲ್ಪ ಸ್ವಲ್ಪವಾಗಿ ಉಬ್ಬಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಚರ್ಮದ ಮೇಲೆ ಅಲ್ಲಲ್ಲಿ ಸುಕ್ಕುಗಳು ಕಂಡು ಬರುವುದು ಸಾಮಾನ್ಯ. ಆದರೆ ಮಹಿಳೆಯರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮಗೆ ಹೆರಿಗೆ ಆದ ನಂತರ ಚರ್ಮದ ಸುಕ್ಕುಗಳು ಮಾಯವಾಗುತ್ತವೆ ಮತ್ತು ನಿಮ್ಮ ದೈಹಿಕ ಸ್ಥಿತಿ ಮತ್ತೊಮ್ಮೆ ಮೊದಲಿನ ರೀತಿಗೆ ಮರಳುತ್ತದೆ ಎಂದು ಹೇಳುತ್ತಾರೆ. ಆದರೆ ನಿಮ್ಮ ಗರ್ಭಾಶಯದಲ್ಲಿ ನೀವು ಇನ್ನೊಂದು ಜೀವಕ್ಕೆ ಪರೋಕ್ಷವಾಗಿ ಪೋಷಣೆ ನೀಡುತ್ತಿದ್ದೀರಿ ಎಂಬುದೇ ನಿಮಗೆ ಹೆಚ್ಚು ಖುಷಿದಾಯಕ ವಿಚಾರವಾಗಿರುತ್ತದೆ. ಹಾಗಾಗಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಅಥವಾ ಚರ್ಮದ ಮೇಲೆ ಉಂಟಾಗುವ ಸುಕ್ಕುಗಳ ವಿಚಾರ ಅಷ್ಟಾಗಿ ನಿಮ್ಮ ಮನಸ್ಸನ್ನು ಕಾಡುವುದಿಲ್ಲ.

3 ನಿಮ್ಮ ಮಗು ಸ್ವತಃ ನಿಮಗೆ ಗರ್ಭಿಣಿಯ ಸರ್ಟಿಫೀಕೆಟ್ ಕೊಡುತ್ತದೆ

3 ನಿಮ್ಮ ಮಗು ಸ್ವತಃ ನಿಮಗೆ ಗರ್ಭಿಣಿಯ ಸರ್ಟಿಫೀಕೆಟ್ ಕೊಡುತ್ತದೆ

ನೀವು ಗರ್ಭಿಣಿ ಎನ್ನುವ ನಿಜವಾದ ಅನುಭವ ನಿಮಗೆ ಆಗುವುದು ನೀವು ನಾಲ್ಕರಿಂದ ಐದು ತಿಂಗಳ ಗರ್ಭಾವಸ್ಥೆಯ ಅವಧಿಗೆ ತಲುಪಿದಾಗ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಗರ್ಭದೊಳಗಿನ ಮಗು ನಿಧಾನವಾಗಿ ತನ್ನ ಚಲನೆ ಶುರು ಮಾಡಿರುತ್ತದೆ ಮತ್ತು ಇದು ನಿಮ್ಮ ಅನುಭವಕ್ಕೆ ಬರುತ್ತದೆ. ಆ ಸಮಯದಲ್ಲಿ ನಿಮಗೆ ಉಂಟಾಗುವ ಆನಂದಕ್ಕೆ ಪಾರವೇ ಇರುವುದಿಲ್ಲ. ವೈದ್ಯರು ಹಿಂದೊಮ್ಮೆ ನೀವು ಗರ್ಭಿಣಿ ಎಂದು ಕನ್ಫರ್ಮ್ ಮಾಡಿದ್ದರೂ, ನೀವು ಭಾವನಾತ್ಮಕವಾಗಿ ಕೇವಲ ಒಂದು ಮಾನಸಿಕ ಕಲ್ಪನೆಯ ಮೇಲೆ ದಿನಗಳನ್ನು ಕಳೆಯುತ್ತಿರುತ್ತೀರಿ. ಆದರೆ ಈಗ ಸ್ವತಃ ನಿಮ್ಮ ಮಗುವೇ ನಿಮ್ಮನ್ನು ಗರ್ಭಿಣಿಯೆಂದು ತನ್ನ ಭಾಷೆಯಲ್ಲಿ ಹೇಳುತ್ತದೆ. ಗರ್ಭಾವಸ್ಥೆಯ ಆರು ತಿಂಗಳು ಕಳೆದ ನಂತರ ಮಗುವಿನ ಕಾಲುಗಳು ನಿಮ್ಮನ್ನು ಒದೆಯುತ್ತಿರುವ ಅನುಭವ ನಿಮಗಾಗುತ್ತದೆ. ವೈದ್ಯರು ಕೂಡ ಇದನ್ನೇ ದೃಢೀಕರಿಸುವುದರಿಂದ ಆರೋಗ್ಯಕರವಾದ ಗರ್ಭಾವಸ್ಥೆ ನಿಮ್ಮದಾಗಿದೆ ಎಂದು ನಿಮಗೆ ಸಹಜವಾಗಿ ಅನಿಸುವುದರಲ್ಲಿ ಎರಡು ಮಾತಿಲ್ಲ.

4 ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳಿಗೆ ಬೇಸರಿಸಿಕೊಳ್ಳಬೇಡಿ

4 ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳಿಗೆ ಬೇಸರಿಸಿಕೊಳ್ಳಬೇಡಿ

ನಿಮ್ಮ ಗರ್ಭಾವಸ್ಥೆಯ ದಿನಗಳಲ್ಲಿ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಬಹುದು. ಕೆಲವೊಂದು ಬದಲಾವಣೆಗಳು ನಿಮ್ಮ ದೇಹದ ಚರ್ಮದ ವಿವಿಧ ಭಾಗಗಳಲ್ಲಿ ಕಂಡು ಬರಬಹುದು. ಗರ್ಭಾವಸ್ಥೆಗೆ ಸಂಬಂಧ ಪಟ್ಟ ಹಾರ್ಮೋನುಗಳ ವ್ಯತ್ಯಾಸದಿಂದ ಇಂತಹ ಬದಲಾವಣೆಗಳು ನಿಮಗೆ ಸಾಮಾನ್ಯ. ಮುಖದ ಮೇಲೆ ಇದ್ದಕ್ಕಿದ್ದಂತೆ ಸಣ್ಣ ಸಣ್ಣ ಕಲೆಗಳು ಕಂಡು ಬರುವುದು, ಸ್ತನಗಳ ಭಾಗದಲ್ಲಿ ಬದಲಾವಣೆ ಕಾಣುವುದು ಎಲ್ಲವೂ ಈ ಸಮಯದಲ್ಲಿ ಸಹಜ. ಹೆರಿಗೆಯ ನಂತರ ಚರ್ಮದ ಮೇಲಿನ ಕಲೆಗಳು ಕ್ರಮೇಣವಾಗಿ ಮಾಯವಾಗುತ್ತವೆ. ಆದರೆ ಈ ಸಮಯದಲ್ಲಿ ಹೆಚ್ಚು ಬಿಸಿಲಿನಲ್ಲಿ ಓಡಾಡಬಾರದು ಎಂದು ಹೇಳುತ್ತಾರೆ. ತುಂಬಾ ಗಾಢವಾದ ಬಿಸಿಲಿನಲ್ಲಿ ಸೂರ್ಯನ ಕಿರಣಗಳ ಬಲವಾದ ಪ್ರಭಾವದಿಂದ ಚರ್ಮದ ಮೇಲೆ ಕಪ್ಪು ಕಲೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕೇವಲ ಬೆಳಗಿನ ಹಾಗೂ ಸಂಜೆಯ ಎಳೆ ಬಿಸಿಲಿನಲ್ಲಿ ಗರ್ಭಿಣಿಯರು ವಾಕಿಂಗ್ ಮಾಡಿದರೆ ಆರೋಗ್ಯಕ್ಕೆ ತುಂಬಾ ಅನುಕೂಲಕರ. ಏಕೆಂದರೆ ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ' ಡಿ ' ಅಂಶ ದೇಹಕ್ಕೆ ಲಭ್ಯವಾಗುತ್ತದೆ ಮತ್ತು ಇದು ಮಗುವಿನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ಬೀರುತ್ತದೆ.

5 ಆರೋಗ್ಯದ ಬಗ್ಗೆ ಮಿತವಾದ ಜಾಗೃತಿ ಇರಲಿ

5 ಆರೋಗ್ಯದ ಬಗ್ಗೆ ಮಿತವಾದ ಜಾಗೃತಿ ಇರಲಿ

ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಈಗಾಗಲೇ 26 ವಾರಗಳನ್ನು ಕಳೆದಿದ್ದರೆ ಈ ಸಂದರ್ಭದಲ್ಲಿ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಕಾರಣದಿಂದ ಹೊಟ್ಟೆಯ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಹೊಕ್ಕಳು ಮುಂಭಾಗಕ್ಕೆ ಉಬ್ಬಿಕೊಂಡಿರುವಂತೆ ಕಾಣಿಸಬಹುದು. ಇದಕ್ಕೆ ಗಾಬರಿಯಾಗುವ ಅವಶ್ಯಕತೆ ಏನಿಲ್ಲ ಮತ್ತು ತಕ್ಷಣವೇ ಹೊಕ್ಕುಳಿಗೆ ಸಿಕ್ಕಿಸಿದ ರಿಂಗ್ ತೆಗೆದು ಬಿಡುವ ಅನಗತ್ಯ ಆಲೋಚನೆ ಮಾಡುವುದೇನೂ ಬೇಡ. ಒಂದು ವೇಳೆ ಅಪ್ಪಿತಪ್ಪಿ ಹೊಕ್ಕುಳ ಭಾಗದಲ್ಲಿ ಚರ್ಮ ಕೆಂಪು ಬಣ್ಣಕ್ಕೆ ತಿರುಗಿ ತುಂಬಾ ನೋವು ತರುತ್ತಿರುವ ಸೂಚನೆ ಸಿಕ್ಕಿದರೆ ಆಗ ಹೊಕ್ಕುಳ ರಿಂಗ್ ತೆಗೆಯುವುದು ಒಳ್ಳೆಯದು. ಗರ್ಭಾವಸ್ಥೆಯ ಅವಧಿ ಸಂಪೂರ್ಣವಾಗಿ ಮುಗಿದ ಬಳಿಕ ಮತ್ತೊಮ್ಮೆ ನಿಮ್ಮ ದೇಹ ಸಹಜ ಸ್ಥಿತಿಗೆ ಮರಳುತ್ತದೆ ಎಂಬುದು ನೆನಪಿರಲಿ.

6. ಗರ್ಭದಲ್ಲಿರುವಾಗಲೇ ಮಗು ಮ್ಯೂಸಿಕ್ ಎಂಜಾಯ್ ಮಾಡುತ್ತದೆ

6. ಗರ್ಭದಲ್ಲಿರುವಾಗಲೇ ಮಗು ಮ್ಯೂಸಿಕ್ ಎಂಜಾಯ್ ಮಾಡುತ್ತದೆ

ದಿನ ಕಳೆದಂತೆ ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಉಂಟಾಗುವ ಬದಲಾವಣೆಗಳಲ್ಲಿ ಹೊಟ್ಟೆಯ ಭಾಗ ಬೆಚ್ಚಗಾಗುವ ಅನುಭವ ಕೂಡ ಒಂದು. ಇದಕ್ಕೆ ಕಾರಣ ಗರ್ಭಕೋಶದಲ್ಲಿರುವ ಮಗು ನಿಧಾನವಾಗಿ ತನ್ನ ದೈಹಿಕ ಬೆಳವಣಿಗೆಯಲ್ಲಿ ಅಭಿವೃದ್ಧಿ ಹೊಂದುತ್ತಾ ಇರುತ್ತದೆ. ಮಗುವಿನ ದೇಹದಲ್ಲಿ ರಕ್ತ ಸಂಚಾರ ಬಹುತೇಕ ಆರಂಭವಾಗಿರುತ್ತದೆ. ಅದಾಗಲೇ ಕೆಲವೊಂದು ಅಂಗಾಂಗಗಳು ಅಭಿವೃದ್ಧಿ ಗೊಂಡಿರುತ್ತವೆ. ಗರ್ಭಾವಸ್ಥೆಯಲ್ಲಿ ನಿಮಗೆ ಈಗಾಗಲೇ 16 ವಾರಗಳು ಪೂರ್ಣಗೊಂಡಿದ್ದರೆ ಗರ್ಭಕೋಶದಲ್ಲಿರುವ ನಿಮ್ಮ ಮಗುವಿಗೆ ತಲೆಯ ಎರಡೂ ಬದಿಯಲ್ಲಿ ಕಿವಿಗಳು ಬೆಳವಣಿಗೆ ಹೊಂದಿ ತಮ್ಮ ಕಾರ್ಯ ಚಟುವಟಿಕೆಯನ್ನು ಪ್ರಾರಂಭ ಮಾಡಿರುತ್ತವೆ ಎಂದು ಹೇಳುತ್ತಾರೆ. ನೀವು ಗರ್ಭಾವಸ್ಥೆಯಲ್ಲಿ 26 ವಾರಗಳ ಅವಧಿಗೆ ಬಂದು ತಲುಪಿದಾಗ ಅಂದರೆ ಸುಮಾರು ಆರೂವರೆ ತಿಂಗಳಿನಲ್ಲಿ ನೀವು ಕಾಲ ಕಳೆಯುತ್ತಿರುವಾಗ ನಿಮ್ಮ ಮಗುವಿನ ಮೆದುಳು ಕೆಲಸ ಮಾಡಲು ಪ್ರಾರಂಭ ಆಗುತ್ತದೆ. ಗರ್ಭದಲ್ಲಿರುವ ಮಗುವಿಗೆ ಬಾಹ್ಯ ಪ್ರಪಂಚದ ಚಟುವಟಿಕೆಗಳಿಗೆ ಮತ್ತು ಶಬ್ದಗಳಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುವಂತಹ ಶಕ್ತಿ ಈ ಸಮಯದಲ್ಲಿ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಹೊರಗಿನ ಕ್ರಿಯೆಗಳಿಗೆ ತಕ್ಕುನಾದ ಪ್ರತಿಕ್ರಿಯೆಗಳನ್ನು ಮಗು ತನ್ನ ಕೈ ಕಾಲು ಆಡಿಸುವ ಮೂಲಕ ವ್ಯಕ್ತ ಪಡಿಸುತ್ತದೆ. ಈ ಸಮಯದಲ್ಲಿ ಬಹಳಷ್ಟು ತಾಯಂದಿರು ಗರ್ಭದಲ್ಲಿರುವ ಮಗುವಿಗೆ ಸುಮಧುರವಾದ ಹಾಡುಗಳನ್ನು ಕೇಳಿಸಲು ಪ್ರಯತ್ನಿಸುವುದು, ನಯವಾದ ಸಂಗೀತ ವಾದ್ಯಗಳನ್ನು ನುಡಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ. ಕೆಲವು ಪೋಷಕರು ಇಂತಹ ಚಟುವಟಿಕೆಗಳಿಂದ ಮಗುವಿನ ಬುದ್ಧಿ ಶಕ್ತಿ ಮತ್ತು ಚುರುಕುತನ ಹೆಚ್ಚಾಗುತ್ತದೆ ಎಂದು ನಂಬಿದ್ದಾರೆ.

7. ಮಗುವಿಗೆ ತಾಯಿ ಹಾಗು ಬೇರೆಯವರ ಸ್ಪರ್ಶಜ್ಞಾನದ ಅರಿವಿರುತ್ತದೆ

7. ಮಗುವಿಗೆ ತಾಯಿ ಹಾಗು ಬೇರೆಯವರ ಸ್ಪರ್ಶಜ್ಞಾನದ ಅರಿವಿರುತ್ತದೆ

ಗರ್ಭದಲ್ಲಿರುವ ನಿಮ್ಮ ಮಗು ಅದಾಗಲೇ ನಿಮ್ಮ ಸಹಯೋಗವನ್ನು ಬಯಸುತ್ತಿರುತ್ತದೆ. ತಾಯಿಯ ಪ್ರೀತಿ ಏನೆಂಬುದು ಅದಕ್ಕೆ ಬಹುಷಃ ಗೊತ್ತಿರುವಂತೆ ಕಾಣುತ್ತದೆ. ಹಾಗಾಗಿಯೇ ನಿಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ನೀವು ಕೈ ಆಡಿಸಿದರೆ ಗರ್ಭದಲ್ಲಿರುವ ನಿಮ್ಮ ಮಗು ಅದಕ್ಕೆ ತಕ್ಕಂತಹ ಪ್ರತಿಕ್ರಿಯೆ ನೀಡುತ್ತದೆ. ಸಂಶೋಧನೆಗಳು ಕೂಡ ಇದನ್ನೇ ಬಹಿರಂಗ ಪಡಿಸಿವೆ. ಬೇರೆ ಯಾರೋ ಒಬ್ಬ ಗರ್ಭಿಣಿ ತಾಯಿಯ ಹೊಟ್ಟೆಯ ಮೇಲೆ ಮುಟ್ಟಿದಾಗ ಗರ್ಭದಲ್ಲಿರುವ ಮಗು ಅಷ್ಟು ಸಲೀಸಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದೇ ಮಗುವಿನ ಸ್ವಂತ ತಾಯಿ ಹೊಟ್ಟೆಯ ಮೇಲೆ ಸುಮ್ಮನೆ ಹಾಗೆ ಕೈ ಇಟ್ಟುಕೊಂಡು ಕುಳಿತಿದ್ದಾಗ ಅಥವಾ ಹೊಟ್ಟೆ ಸವರಿಕೊಂಡಾಗ ಬಹಳ ಬೇಗನೆ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತದೆ. ಇದರಿಂದ ಮಗುವಿಗೆ ತನ್ನ ಸ್ವಂತ ತಾಯಿ ಆಗಾಗ ಹೊಟ್ಟೆಯ ಮೇಲೆ ಟಚ್ ಮಾಡಿಕೊಳ್ಳುವುದು ತುಂಬಾ ಇಷ್ಟವಾದಂತೆ ಕಾಣುತ್ತದೆ. ತಾಯಿಗೂ ಕೂಡ ಮಗುವಿನ ಜೊತೆ ಸಂವಹನ ನಡೆಸಲು ಇದೊಂದು ಉತ್ತಮ ಮಾರ್ಗ ಎಂದು ಹೇಳಬಹುದು. ಮಗುವಿನ ಜೊತೆ ಅದಾಗಲೇ ತಾಯಿಗೆ ಭಾವನಾತ್ಮಕವಾಗಿ ಒಂದು ನಂಟು ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದು ಊಹಿಸಬಹುದು.

8 ಗರ್ಭಾವಸ್ಥೆಯ ಕೊನೆಯ ಅವಧಿಯಲ್ಲಿ ವೈದ್ಯರ ಪಾತ್ರ

8 ಗರ್ಭಾವಸ್ಥೆಯ ಕೊನೆಯ ಅವಧಿಯಲ್ಲಿ ವೈದ್ಯರ ಪಾತ್ರ

ಗರ್ಭಿಣಿಯರ ವಿಚಾರದಲ್ಲಿ ಸ್ತ್ರೀ ರೋಗ ತಜ್ಞರ ಪಾತ್ರ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಸ್ತ್ರೀ ರೋಗ ತಜ್ಞರು ಗರ್ಭಿಣಿ ಮಹಿಳೆಯ ಹೊಟ್ಟೆಯ ಮೇಲ್ಭಾಗದಲ್ಲಿ ಒಂದು ಟೇಪ್ ಹಿಡಿದು ಗರ್ಭಕೋಶದ ಅಭಿವೃದ್ಧಿಯ ಕುರಿತಾದ ಅಳತೆ ಕೈಗೊಳ್ಳುತ್ತಾರೆ. ಇದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಯ ಮಾಹಿತಿ ಸಿಗುತ್ತದೆ. ಅಷ್ಟೇ ಅಲ್ಲದೆ ಸ್ತ್ರೀ ರೋಗ ತಜ್ಞರು ಬಳಸುವ ಟೇಪ್ ನಲ್ಲಿ ಗರ್ಭಕೋಶದ ಅಳತೆ ಎಷ್ಟು ಸೆಂಟಿಮೀಟರ್ ಇರುತ್ತದೆ ಅದಕ್ಕೆ ಸಮನಾಗಿ ಅಷ್ಟು ವಾರಗಳ ಗರ್ಭಾವಸ್ಥೆಯನ್ನು ಒಬ್ಬ ಗರ್ಭಿಣಿ ಮಹಿಳೆ ಕಳೆದಿರುತ್ತಾಳೆ ಎಂದು ನಂಬಲಾಗಿದೆ. ಒಂದೆರಡು ಸೆಂಟಿಮೀಟರ್ ಆಚೆ - ಈಚೆ ಆದರೆ ಗಾಬರಿ ಪಟ್ಟುಕೊಳ್ಳುವ ಹಾಗೇನಿಲ್ಲ. ಈ ರೀತಿಯ ಗರ್ಭಕೋಶದ ಅಳತೆ ಮಾಡುವುದರಿಂದ ಹೆರಿಗೆಯ ದಿನಾಂಕವನ್ನು ಸ್ತ್ರೀ ರೋಗ ತಜ್ಞರು ಪೂರ್ವ ನಿರ್ಧಾರ ಮಾಡಲು ಕೂಡ ಸಹಾಯ ಆಗುತ್ತದೆ. ಗರ್ಭಿಣಿಯರಿಗೆ ಆಹಾರ ಪದ್ಧತಿಯಲ್ಲಿ ಹಾಗೂ ಜೀವನ ಶೈಲಿಯಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತಂದುಕೊಂಡು ಹೆರಿಗೆಯ ಸಮಯಕ್ಕೆ ಮಾನಸಿಕವಾಗಿ ಹೇಗೆ ಸಿದ್ಧವಾಗಬೇಕು ಎಂಬುದರ ಅರಿವನ್ನು ತಜ್ಞರು ಈ ಸಮಯದಲ್ಲಿ ತುಂಬಾ ಜವಾಬ್ದಾರಿಯುತವಾಗಿ ಮೂಡಿಸುತ್ತಾರೆ.

9 ಹೆರಿಗೆ ಎಂದರೆ ಅದು ನಿಮ್ಮ ಮಗುವಿನ ಜೊತೆ ನಿಮ್ಮ ಮೊದಲ ಭೇಟಿ

9 ಹೆರಿಗೆ ಎಂದರೆ ಅದು ನಿಮ್ಮ ಮಗುವಿನ ಜೊತೆ ನಿಮ್ಮ ಮೊದಲ ಭೇಟಿ

ಸಂಪೂರ್ಣ ಗರ್ಭಾವಸ್ಥೆಯ ಸಮಯವೇ ತುಂಬಾ ಸೂಕ್ಷ್ಮ ಎಂದು ಹೇಳುತ್ತಾರೆ. ಅದರಲ್ಲೂ ಎರಡನೇ ಹಾಗೂ ಮೂರನೇ ತ್ರೈಮಾಸಿಕ ಸಮಯದಲ್ಲಿ ಗರ್ಭಿಣಿ ಮಹಿಳೆಯರು ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ತಮ್ಮ ಹಾಗು ತಮ್ಮ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಿ ಮಗುವಿನ ಅಭಿವೃದ್ಧಿಗೆ ತೊಂದರೆ ಆಗುವಂತಹ ಯಾವುದೇ ಕೆಲಸಗಳನ್ನು ಮಾಡದೆ ಆದಷ್ಟು ಆರಾಮವಾಗಿ ಈ ಸಮಯವನ್ನು ಕಳೆಯಬೇಕು. ಗರ್ಭಕೋಶದಲ್ಲಿ ಮಗು ದಿನ ಕಳೆದಂತೆ ತನ್ನ ಗಾತ್ರ ಹೆಚ್ಚಿಸಿಕೊಳ್ಳುತ್ತಾ ಹೋಗುವುದರಿಂದ ಕೆಲವೊಂದು ಆರೋಗ್ಯದ ಅಸ್ವಸ್ಥತೆಗಳು ಗರ್ಭಿಣಿ ಮಹಿಳೆಗೆ ಎದುರಾಗುವ ಸಾಧ್ಯತೆಯಿದೆ. ಅದೂ ಅಲ್ಲದೆ ಗರ್ಭಕೋಶ ಹೊಟ್ಟೆಗೆ ಒತ್ತಿಕೊಂಡು ಇರುವುದರಿಂದ ಸರಿಯಾಗಿ ಊಟ ಮಾಡಲು ಸಾಧ್ಯವಿರುವುದಿಲ್ಲ. ಕೆಲವೊಮ್ಮೆ ಸೇವಿಸಿದ ಆಹಾರ ವಾಂತಿಯಾಗಿ ಹೋಗುತ್ತದೆ. ಬೆಳಗಿನ ಸಮಯದಲ್ಲಿ ವಾಕರಿಕೆ, ಎದೆಯುರಿ ಸಾಮಾನ್ಯವಾಗಿ ಕಂಡು ಬರುತ್ತದೆ. ಗರ್ಭಕೋಶದಲ್ಲಿ ಮಗುವಿನ ಚಲನೆ ಕೂಡ ದಿನ ಕಳೆದಂತೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ ಗರ್ಭಾವಸ್ಥೆಯ ಮಧ್ಯಭಾಗದಲ್ಲಿ ದಿನದಲ್ಲಿ ಕೇವಲ ಕೆಲವು ಬಾರಿ ಮಾತ್ರ ಮಗುವಿನ ಚಲನೆ ಗೊತ್ತಾಗುತ್ತಿದ್ದ ಸಂದರ್ಭಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕದ ಅಂತ್ಯದಲ್ಲಿ ಗರ್ಭಕೋಶದಲ್ಲಿ ಮಗುವಿನ ಚಲನೆ ಸದಾ ಇದ್ದೇ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಮನಸ್ಸಿಗೆ ಅಷ್ಟು ಖುಷಿ ನೀಡುವ ವಿಚಾರಗಳು ಕಂಡು ಬರದಿದ್ದರೂ ಹೆರಿಗೆ ಸಮಯಕ್ಕೆ ಹತ್ತಿರವಾಗುತ್ತಿರುವುದರಿಂದ ಗರ್ಭದಲ್ಲಿರುವ ಮಗುವಿನ ಜೊತೆ ನೇರವಾದ ಭೇಟಿಯ ಸಮಯ ಹತ್ತಿರ ಬರುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳುವುದು ಒಳ್ಳೆಯದು.

10 ಹೆರಿಗೆಯ ನಂತರ ನಿಮ್ಮ ದೇಹ ಸಹಜ ಸ್ಥಿತಿಗೆ ಮರಳುತ್ತದೆ

10 ಹೆರಿಗೆಯ ನಂತರ ನಿಮ್ಮ ದೇಹ ಸಹಜ ಸ್ಥಿತಿಗೆ ಮರಳುತ್ತದೆ

ಗರ್ಭಿಣಿಯರು ಹೆರಿಗೆಯ ನಂತರ ತಮ್ಮ ದೇಹದಲ್ಲಿ ಉಂಟಾದ ಬದಲಾವಣೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಪ್ರಾರಂಭ ಮಾಡುತ್ತಾರೆ. ತಮ್ಮ ಮುಖದ ಭಾಗದಲ್ಲಿ ಮೂಡಿಬಂದ ಕಲೆಗಳು ಹೊಟ್ಟೆಯ ಭಾಗದಲ್ಲಿ ಉಂಟಾದ ಸ್ಟ್ರೆಚ್ ಮಾರ್ಕ್ ಗಳು ಜೊತೆಗೆ ಗ್ಲಾಮರ್ ಹಾಳಾದ ಬಗ್ಗೆಯೂ ಚಿಂತೆ ಮಾಡಿ ಬಹಳ ಬೇಗನೆ ಎಲ್ಲವನ್ನು ಮತ್ತೆ ಸಹಜ ಸ್ಥಿತಿಗೆ ತಂದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ನಿಮ್ಮ ದೇಹದಲ್ಲಿ ಉಂಟಾದ ಎಲ್ಲಾ ರೀತಿಯ ಬದಲಾವಣೆಗಳು ನೈಸರ್ಗಿಕವಾಗಿ ಆಗಿರುವುದರಿಂದ ಮತ್ತು ಈಗಾಗಲೇ ಹೆಚ್ಚು ಸಮಯ ತೆಗೆದುಕೊಂಡಿರುವುದರಿಂದ ನಿಮ್ಮ ದೇಹ ತಾನಾಗಿಯೇ ಇನ್ನು ಸ್ವಲ್ಪ ಸಮಯ ತೆಗೆದುಕೊಂಡು ಮೊದಲು ತಾನಿದ್ದ ಸ್ಥಿತಿಗೆ ನಿಧಾನವಾಗಿ ಮರಳುತ್ತದೆ. ಉದಾಹರಣೆಗೆ ನಿಮ್ಮ ಹೊಟ್ಟೆಯ ಭಾಗದಲ್ಲಿ ಉಂಟಾದ ಸ್ಟ್ರೆಚ್ ಮಾರ್ಕ್ ಗಳು ನಿಮಗೆ ಹೆರಿಗೆಯಾದ ತಕ್ಷಣ ಮಾಯವಾಗುವುದಿಲ್ಲ. ಕೆಲವು ತಿಂಗಳುಗಳ ಸಮಯ ತೆಗೆದುಕೊಂಡು ನಂತರ ಕ್ರಮೇಣವಾಗಿ ಇಲ್ಲವಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ಆತುರ ಬಿದ್ದು ಬೇರೆ ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ನಿಮ್ಮ ಆರೋಗ್ಯಕ್ಕೆ ಅಹಿತವಾದ ಕ್ರಮಗಳನ್ನು ಕೈಗೊಂಡು ನಿಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ.

English summary

Things to Know About Your Baby Bump in Kannada

Here we are discussing about Things to Know About Your Baby Bump in Kannada. Here are few fun facts about your ever-expanding baby bump. Read more.
X