Just In
Don't Miss
- Sports
ಈ ವಿಶಿಷ್ಟ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಧವನ್
- Finance
ಟೈರ್ ಮತ್ತು ಬ್ಯಾಟರಿಗಳನ್ನು ಪರಿಚಯಿಸಿದ ಮಾರುತಿ ಸುಜುಕಿ
- News
ಬೆಂಗಳೂರಲ್ಲಿ ನಕಲಿ ಕೋವಿಡ್ ಟೆಸ್ಟ್; ಇಬ್ಬರ ವಿರುದ್ಧ ಎಫ್ಐಆರ್
- Automobiles
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- Movies
'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್ಗೆ ಸೆಡ್ಡು ಹೊಡೆದ ಖ್ಯಾತ ನಟಿ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗರ್ಭಧಾರಣೆ ವೇಳೆ ತ್ವಚೆಯ ಬಣ್ಣ ಬದಲಾಗಲು ಕಾರಣ ಮತ್ತು ಪರಿಹಾರ
ಮಹಿಳೆಗೆ ಗರ್ಭಧಾರಣೆ ಎನ್ನುವುದು ಒಂದು ಅಗ್ನಿಪರೀಕ್ಷೆ ಇದ್ದಂತೆ, ಇಲ್ಲಿ ಆಕೆ ನಾನಾ ರೀತಿಯ ಬದಲಾವಣೆಗಳನ್ನು ಎದುರಿಸಬೇಕು. ಗರ್ಭಧಾರಣೆ ವೇಳೆ ಮಹಿಳೆಯರಲ್ಲಿ ಹೆಚ್ಚಿನ ಮಟ್ಟದಲ್ಲಿ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ತೂಕ ಹೆಚ್ಚಳ, ಕಾಲುಗಳು ಊದಿಕೊಳ್ಳುವುದು ಇತ್ಯಾದಿ. ಅದೇ ರೀತಿಯಾಗಿ ಭಾವನಾತ್ಮಕವಾಗಿಯೂ ಬದಲಾವಣೆಗಳು ಆಗುವುದು.
ಹೊಟ್ಟೆಯು ಪ್ರತೀ ತಿಂಗಳು ದೊಡ್ಡದಾಗುತ್ತಾ ಹೋಗುತ್ತಿರುವಂತೆ ಚರ್ಮದ ಬಣ್ಣವು ಬದಲಾಗುವುದು. ಹೀಗೆ ಬದಲಾವಣೆಗಳು ಪ್ರತಿಯೊಂದು ಅಂಗಾಂಗಗಳಲ್ಲಿ ಕಾಣಿಸಿಕೊಳ್ಳುವುದು. ನಾವು ನಿಮಗೆ ಈ ಲೇಖನದಲ್ಲಿ ಚರ್ಮದಲ್ಲಿ ಬಣ್ಣ ಬದಲಾವಣೆ ಆಗುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿಯಿರಿ.

ಗರ್ಭಧಾರಣೆಯ ವೇಳೆ ಯಾವ ಸಮಯದಲ್ಲಿ ಚರ್ಮದ ಬಣ್ಣವು ಬದಲಾಗುವುದು?
ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದ ಪ್ರಮುಖ ಘಟ್ಟ, ಇಲ್ಲಿ ಕೆಲವು ಬದಲಾವಣೆಗಳು ಸಹಜ. ಇಂತಹ ಸಮಯದಲ್ಲಿ ಶೇ.90ರಷ್ಟು ಮಹಿಳೆಯರಲ್ಲಿ ಚರ್ಮದ ಬಣ್ಣವು ಬದಲಾಗುವುದನ್ನು ಕಾಣಬಹುದು. ಗರ್ಭಧಾರಣೆಯ ಮೂರು ತ್ರೈಮಾಸಿಕದ ಯಾವುದೇ ಹಂತದಲ್ಲೂ ಬಣ್ಣ ಬದಲಾಗುವುದನ್ನು ಕಾಣಬಹುದು. ಆದರೆ ನೀವು ಗರ್ಭ ಧರಿಸಿದ ತಕ್ಷಣವೇ ಇದು ಕಂಡುಬರುವುದಿಲ್ಲ. ಗರ್ಭಧಾರಣೆಯ ಸಮಯವು ಸಾಗಿದಂತೆ ನಿಮಗೆ ಬದಲಾವಣೆ ಕಂಡುಬರಲು ಸಾಧ್ಯವಿದೆ.
ಬದಲಾಗುತ್ತಿರುವಂತಹ ಚರ್ಮದ ಬಣ್ಣವು ಕೆಲವೊಮ್ಮೆ ಬೇರೆ ಕಾರಣಗಳಿಂದಲೂ ಆಗಿರಬಹುದು. ಹೀಗಾಗಿ ನೀವು ಇದರ ಬಗ್ಗೆ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ. ಕೈಗಳು ಮತ್ತು ಪಾದಗಳಲ್ಲಿನ ಚರ್ಮವು ಕೆಂಪು ಬಣ್ಣಕ್ಕೆ ತಿರುಗುವುದು ಗರ್ಭಧಾರಣೆಯ ಸಾಧಾರಣ ಬದಲಾವಣೆಗಳಾಗಿವೆ. ಕಂಕುಳು ಹಾಗೂ ತೊಡೆಸಂಧಿನ ಭಾಗದ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಬಹುದು.
ಮಚ್ಚೆಗಳು ಕೂಡ ತುಂಬಾ ಕಡುಬಣ್ಣಕ್ಕೆ ತಿರುಗಿರುವುದನ್ನು ನೀವು ನೋಡಬಹುದು. ಕಪ್ಪು ಬಣ್ಣ ಹೊಂದಿರುವಂತಹ ಮಹಿಳೆಯರಲ್ಲಿ ಇಂತಹ ಬದಲಾವಣೆಗಳು ಹೆಚ್ಚಾಗಿ ಕಂಡುಬರುವುದು. ಏನೇ ಆದರೂ ಇಂತಹ ಬದಲಾವಣೆಗಳು ತಾತ್ಕಾಲಿಕವಾಗಿರುವುದು, ಯಾಕೆಂದರೆ ಹೆರಿಗೆ ಬಳಿಕ ಇದು ಮಾಯವಾಗುವುದು.

ಗರ್ಭಧಾರಣೆ ವೇಳೆ ಚರ್ಮವು ಬಣ್ಣ ಕಳೆದುಕೊಳ್ಳಲು ಕಾರಣಗಳೇನು?
ಗರ್ಭಧಾರಣೆ ವೇಳೆ ಹಾರ್ಮೋನ್ ಗಳಲ್ಲಿ ಬದಲಾವಣೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದೇ ರೀತಿಯಾಗಿ ಗರ್ಭಧಾರಣೆ ವೇಳೆ ಸೇವಿಸುವಂತಹ ಆಹಾರವು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.

ಗರ್ಭಿಣಿಯರು ಇದಕ್ಕೆ ಏನು ಮಾಡಬಹುದು?
ದೇಹದಲ್ಲಿ ಆಗುವಂತಹ ಹಾರ್ಮೋನ್ ಬದಲಾವಣೆ ತಡೆಯಲು ನಮ್ಮಿಂದ ಆಗದು. ಆದರೆ ಇದಕ್ಕೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬಹುದು. ಚರ್ಮಕ್ಕೆ ಬಿಸಿಲಿನ ಯುವಿ ಕಿರಣಗಳಿಂದ ಆಗುವ ಹಾನಿ ತಪ್ಪಿಸಲು ನೀವು ಹೀಗೆ ಮಾಡಬಹುದು.

ಬಿಸಿಲಿಗೆ ಮೈಯೊಡ್ಡಬೇಡಿ
ಬಿಸಿಲಿಗೆ ಮೈಯೊಡ್ಡುತ್ತಲಿದ್ದರೆ ಆಗ ಚರ್ಮವು ಕಪ್ಪಾಗುವುದು. ಇದಕ್ಕಾಗಿ ನೀವು ಬಿಸಿಲಿಗೆ ಹೋಗುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ. ಅಗತ್ಯವಿದ್ದರೆ ಹೋಗುವಾಗ ಸನ್ ಸ್ಕ್ರೀನ್ ಅಳವಡಿಸಿ. ಇದೇ ವೇಳೆ ಮನೆಯಿಂದ ಹೊರಗಡೆ ಹೋಗುವ ಸಮಯದಲ್ಲಿ ಮೈಮುಚ್ಚುವಂತಹ ಬಟ್ಟೆ ಧರಿಸಿ.
ಮೇಲಸ್ಮಾದ ಸಮಸ್ಯೆಯಿದ್ದರೆ ಆಗ ನೀವು ಎಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಕಿಟಕಿ ಮೂಲಕವು ಬಿಸಿಲಿನ ಕಿರಣಗಳು ಬರುವ ಕಾರಣದಿಂದಾಗಿ ನೀವು ಮನೆಯೊಳಗೆ ಇರುವ ವೇಳೆಯೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.
ಫಾಲಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಕಡಿಮೆ ಮಾಡಬಹುದು. ಚರ್ಮದಲ್ಲಿನ ಬಣ್ಣ ಕುಂದಲು ಫಾಲಿಕ್ ಆಮ್ಲವು ಕಾರಣವಾಗಿರುವುದು. ಹೀಗಾಗಿ ಗರ್ಭಿಣಿಯರು ಫಾಲಿಕ್ ಆಮ್ಲವು ಹೆಚ್ಚಾಗಿರುವಂತಹ ಆಹಾರ ಸೇವಿಸಬೇಕು.

ಬಣ್ಣ ಕುಂದದಂತೆ ತಡೆಯಬಹುದೇ?
ಬಿಸಿಲಿಗೆ ಹೊರಗಡೆ ಸುತ್ತಾಡಲು ಹೋಗದೆ ಇರುವುದು ಮತ್ತು ಮನೆಗೆ ಬರುವಂತಹ ಬಿಸಿಲಿನ ಕಿರಣಗಳನ್ನು ತಡೆಯಲು ಪರದೆ ಅಳವಡಿಸಿದರೆ ಉತ್ತಮ. ಹಾರ್ಮೋನ್ ಬದಲಾವಣೆಗಳಿಂದ ಆಗುವಂತಹ ಚರ್ಮದ ಬಣ್ಣ ಬದಲಾವಣೆ ತಡೆಯುವುದು ಸ್ವಲ್ಪ ಕಷ್ಟ.

ಚರ್ಮವು ಮತ್ತೆ ಮೊದಲಿನಂತಾಗುವುದು ಯಾವಾಗ?
ಹೆರಿಗೆ ಬಳಿಕ ಚರ್ಮದ ಬಣ್ಣವು ಕಪ್ಪಾಗಿರುವುದನ್ನು ಹಾಗೆ ಮೊದಲಿನ ಸ್ಥಿತಿಗೆ ಬರಲು ಆರಂಭವಾಗುವುದು. ಇದನ್ನು ನೀವು ಸೌಂದರ್ಯದ ಕಲೆಗಳು ಎಂದು ಭಾವಿಸಿ ಮತ್ತು ಹೆಚ್ಚು ಚಿಂತೆಯಾಗಿದ್ದರೆ ಆಗ ನೀವು ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ಚರ್ಮದ ಮೇಲೆ ಆಗುವಂತಹ ಬದಲಾವಣೆ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದು.