Just In
Don't Miss
- Movies
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಟ್ಟು ವಿಳಂಬವಾಗುತ್ತಿದೆಯೇ? ಈ ಕಾರಣಗಳಿರಬಹುದು
ಮುಟ್ಟಾಗಿ 26-28 ದಿನಕ್ಕೆ ಅಥವಾ ಒಂದು ತಿಂಗಳಿಗೆ ಸರಿಯಾಗಿ ಮತ್ತೆ ಮುಟ್ಟಿನ ಚಕ್ರ ಪ್ರಾರಂಭವಾಗುವುದು. ಕೆಲವೊಮ್ಮೆ ಮುಟ್ಟು ವಿಳಂಬವಾಗುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆ ತುಂಬಾ ಜನರನ್ನು ಕಾಡುತ್ತಿದೆ. ಏಕೆ ಮುಟ್ಟು ವಿಳಂಬವಾಗುತ್ತಿದೆ ಎಂದು ನೀವು ಯೋಚಿಸುತ್ತಿದ್ದರೆ ಈ ಕಾರಣಗಳಲ್ಲಿ ಒಂದಾಗಿರಬಹುದು:
ಮಾನಸಿಕ ಒತ್ತಡ
ಅತಿಯಾದ ಮಾನಸಿಕ ಒತ್ತಡ ದೇಹದ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು. ಇದರಿಂದ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು. ತುಂಬಾ ಅಧಿಕ ಮಾನಸಿಕ ಒತ್ತಡದಲ್ಲಿದ್ದರೆ ನಿಮ್ಮ ಮುಟ್ಟು ವಿಳಂಬವಾಗುವುದು ನಿಮ್ಮ ಗಮನಕ್ಕೆ ಬರುವುದು.
ಒತ್ತಡದಿಂದಾಗಿ ನಿಮ್ಮ ಮುಟ್ಟು ವಿಳಂಬವಾಗುತ್ತಿದ್ದರೆ ನೀವು ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಬೇಗನೆ ಮೆನೋಪಾಸ್ ಪ್ರಾರಂಭವಾಗಿರಬಹುದು
ಸಾಮಾನ್ಯವಾಗಿ ಮೆನೋಪಾಸ್ 50ರ ನಂತರ ಪ್ರಾರಂಭವಾಗುವುದು. ಅದು ವಯಸ್ಸಿನ ಸಹಜ ಪ್ರಕ್ರಿಯೆ, ಆದರೆ ಕೆಲವರಿಗೆ 30 ಹರೆಯದಲ್ಲಿ ಮೆನೋಪಾಸ್ ಪ್ರಾರಂಭವಾಗುವುದು. ಇದನ್ನು ಪ್ರೀಮೆನೋಪಾಸ್ ಎಂದು ಕರೆಯಲಾಗುವುದು. ಈಸ್ಟ್ರೋಜಿನ್ ಪ್ರಮಾಣದಲ್ಲಿ ವ್ಯತ್ಯಾಸದಿಂದಾಗಿ ಪ್ರೀಮೆನೋಪಾಸ್ ಉಂಟಾಗುವುದು. ಕೆಲವರಿಗೆ ಈ ಸಮಸ್ಯೆ ವಂಶವಾಹಿಯಾಗಿ ಕೂಡ ಕಂಡು ಬರುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುತ್ತಿದ್ದರೆ ಅಥವಾ ಮುಟ್ಟಾಗಿ 6 ತಿಂಗಳು ಕಳೆದಿದ್ದರೆ ಅದು ಪ್ರೀ ಮೆನೋಪಾಸ್ ಲಕ್ಷಣವಾಗಿರಬಹುದು.
ತುಂಬಾ ಕಡಿಮೆ ತೂಕ
ತುಂಬಾ ಕಡಿಮೆ ತೂಕ ಹೊಂದಿದ್ದರೂ ಅನಿಯಮಿತ ಮುಟ್ಟು ಉಂಟಾಗುವುದು. ಮೈ ತೂಕ ತುಂಬಾ ಕಡಿಮೆಯಿದ್ದರೆ ಸಂತಾನೋತ್ಪತ್ತಿ ಹಾರ್ಮೋನ್‌ಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ, ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ, ಈ ಕಾರಣದಿಂದ ಮುಟ್ಟು ವಿಳಂಬವಾಗಲು ಪ್ರಾರಂಭವಾಗುವುದು.
ಮೈ ತೂಕ ತುಂಬಾ ಕಡಿಮೆಯಾದರೆ ವಿಟಮಿನ್‌ಗಳು, ಪೋಷಕಾಂಶ, ಖನಿಜಾಂಶಗಳ ಕೊರತೆ ಉಂಟಾಗುತ್ತದೆ. ತುಂಬಾ ಕಡಿಮೆ ಮೈ ತೂಕ ಹೊಂದಿದ್ದರೆ ವೈದ್ಯರನ್ನು ಭೇಟಿಯಾಗಿ, ಅವರು ನಿಮಗೆ ಸಪ್ಲಿಮೆಂಟ್ಸ್ ಕೊಡುತ್ತಾರೆ, ಇದರ ಜೊತೆಗೆ ವ್ಯಾಯಾಮ ಮಾಡಿ, ಅತ್ಯುತ್ತಮ ಆಹಾರಗಳು ಅದರಲ್ಲೂ ಅತ್ಯುತ್ತಮ ಕೊಬ್ಬಿನಂಶವಿರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ಮೈ ತೂಕ ಹೆಚ್ಚಾದರೆ ನಿಮ್ಮ ಮುಟ್ಟಿನ ಚಕ್ರ ಸರಿಯಾಗುವುದು.
ಒಬೆಸಿಟಿ
ಅತೀ ಹೆಚ್ಚು ಮೈ ತೂಕ ಹೊಂದಿದ್ದರೂ ಮುಟ್ಟು ವಿಳಂಬವಾಗುವುದು. ಅತಿಯಾದ ಮೈ ತೂಕ ಹೊಂದಿದವರಲ್ಲಿ ಹೆಚ್ಚಿನವರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ ಇರುತ್ತದೆ. ಇವರಿಗೆ ಪಿಸಿಒಎಸ್ ಕೂಡ ಬರುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಾಗಿ ಮುಟ್ಟು ವಿಳಂಬವಾಗುವುದು.
ಪಿಸಿಒಎಸ್, ಮುಟ್ಟು ವಿಳಂಬವಾಗುವುದು ಇವೆಲ್ಲಾ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಒಬೆಸಿಟಿ ಮೈ ತೂಕ ಹೊಂದಿದವರು ಮೈ ತೂಕ ಕಡಿಮೆ ಮಾಡಿದರೆ ಪಿಸಿಒಎಸ್, ಅನಿಯಮಿತ ಮುಟ್ಟಿನ ಸಮಸ್ಯೆ ಕಡಿಮೆಯಾಗಬಹುದು.
ಗರ್ಭ ನಿರೋಧಕ ಮಾತ್ರೆಗಳು
ಗರ್ಭ ನಿರೊಧಕ ಮಾತ್ರೆಗಳು ದೇಹದ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಕೂಡ ಮುಟ್ಟು ವಿಳಂಬವಾಗಬಹುದು.
ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದು ಈ ಬಗೆಯ ಸಮಸ್ಯೆ ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ.
ಹಾರ್ಮೋನ್‌ಗಳ ಅಸಮತೋಲನ
ಥೈರಾಯ್ಡ್ ಹಾರ್ಮೋನ್‌ಗಳ ಅಸಮತೋಲನದಿಂದ ಮುಟ್ಟು ವಿಳಂಬವಾಗುವುದು, ಹಾರ್ಮೋನ್‌ಗಳ ಅಸಮತೋಲನದಿಂದ ಹಲವು ಬಗೆಯ ಸಮಸ್ಯೆ ಉಂಟಾಗುವುದು. ಇನ್ನು ಕೆಲವೊಂದು ಬಗೆಯ ಹಾರ್ಮೋನ್‌ಗಳ ಅಸಮತೋಲನದಿಂದ ಮುಟ್ಟು ನಿಧಾನವಾಗುವುದು. ವಂಶವಾಹಿಯಾಗಿ ಕೂಡ ಕೆಲವರಿಗೆ ಹಾರ್ಮೋನ್‌ಗಳ ಅಸಮತೋಲನ ಉಂಟಾಗುವುದು.
ಪಿಸಿಒಎಸ್
ಪಿಸಿಒಎಸ್ ಅತೀ ಹೆಚ್ಚಿನವರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಅಧಿಕ ಮೈ ತೂಕ, ಅತಿಯಾದ ಮಾನಸಿಕ ಒತ್ತಡ ಈ ಎಲ್ಲಾ ಕಾರಣದಿಂದಾಗಿ ಪಿಸಿಒಎಸ್ ಸಮಸ್ಯೆ ಉಂಟಾಗುವುದು. ಅಸಹಜ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಸಿಸ್ಟ್, ಮೊಡವೆ, ಮೈ ಮೇಲೆ ತುಂಬಾ ಕೂದಲು ಬರುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಪಿಸಿಒಎಸ್ ಸಮಸ್ಯೆಯಿದ್ದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಯೋಗ, ಆರೋಗ್ಯಕರ ಆಹಾರಶೈಲಿ, ಒತ್ತಡ ಮುಕ್ತ ಜೀವನ ಈ ಬಗೆಯ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಗರ್ಭಿಣಿ
ಇನ್ನು ಮುಟ್ಟು ಆಗದೇ ಇದ್ದಾಗ ನಿಮಗೆ ಗರ್ಭಿಣಿಯಾಗಿರಬಹುದೇ ಎಂಬ ಸಂದೇಹವಿದ್ದರೆ ನೀವು ಪರೀಕ್ಷೆ ಮಾಡಿಸಿ. ಮನೆಯಲ್ಲಿಯೇ ಪ್ರೆಗ್ನೆನ್ಸಿ ಕಿಟ್ ಬಳಸಿ ನೋಡಬಹುದು.