For Quick Alerts
ALLOW NOTIFICATIONS  
For Daily Alerts

ಮಗುವಿಗಾಗಿ ಪ್ರಯತ್ನಿಸುತ್ತಿರುವರು ಪಾಲಿಸಬೇಕಾದ ಪ್ರಮುಖವಾದ ಅಂಶವಿದು

|

ಮಗು ಬೇಕೆಂದು ಅಪೇಕ್ಷಿಸುವ ದಂಪತಿ ಯಾವಾಗ ಪ್ರಯತ್ನಿಸಿದರೆ ಹೆಚ್ಚು ಫಲಕಾರಿ ಎಂಬುವುದನ್ನು ತಿಳಿದರೆ ನೈಸರ್ಗಿಕವಾಗಿ ಮಗು ಪಡೆಯುವುದು ಸುಲಭವಾಗುವುದು. ಕೆಲವರಷ್ಟೇ ಗರ್ಭಧಾರಣೆಯ ಮುನ್ನ ಕೌನ್ಸಿಲಿಂಗ್‌ ಪಡೆಯುತ್ತಾರೆ. ಆಗ ವೈದ್ಯರು ಗರ್ಭದಾರಣೆಯ ಕಾರ್ಯವಿಧಾನ, ಅಂಡಾಣು ಉತ್ಪತ್ತಿ ಇವುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಿಂದ ನೈಸರ್ಗಿಕವಾಗಿ ಗರ್ಭಧರಿಸುವುದು ಸುಲಭವಾಗುವುದು.

ಅಂಡಾಣು ಬಿಡುಗಡೆಯ ಸಮಯ ಗೊತ್ತಿದ್ದರೆ ಆ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಹಾಗೂ ಆ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚು.

ಸ್ವಲ್ಪ ಸಮಯದಿಂದ ಮಗುವಿಗಾಗಿ ಪ್ರಯತ್ನಿಸಿ ಅದು ಸಕ್ಸಸ್ ಆಗದಿದ್ದರೆ ಅಥವಾ ಇತ್ತೀಚೆಗೆ ಗರ್ಭಪಾತವಾಗಿದ್ದರೆ ಓವ್ಯೂಲೇಷನ್ ಅಥವಾ ಅಂಡಾಣು ಉತ್ಪತ್ತಿ ಸಮಯದಲ್ಲಿ ಪ್ರಯತ್ನಿಸಿದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚುವುದು. ಎದೆಯಲ್ಲಿ ನೋವು, ಸ್ತನಗಳು ದಪ್ಪಗಾಗುವದು, ಕಿಬ್ಬೊಟ್ಟೆಯಲ್ಲಿ ಚಿಕ್ಕದಾಗಿ ನೋವು, ಬಿಳುಪು ಹೋಗುವುದು ಇವೆಲ್ಲಾ ಅಂಡಾಣು ಉತ್ಪತ್ತಿಯ ಲಕ್ಷಣಗಳಾಗಿವೆ.

ಅಂಡಾಣು ಉತ್ಪತ್ತಿ ತಿಳಿಯಲು ಕ್ಯಾಲೆಂಡರ್ ವಿಧಾನ

ಅಂಡಾಣು ಉತ್ಪತ್ತಿ ತಿಳಿಯಲು ಕ್ಯಾಲೆಂಡರ್ ವಿಧಾನ

ನಿಮ್ಮ ಮುಟ್ಟಿನ ಚಕ್ರ ಪ್ರತಿ ತಿಂಗಳು ಒಂದೇ ರೀತಿಯಿದ್ದರೆ ಅಂದ್ರೆ ನಿಯಮಿತ ಮುಟ್ಟಿನ ಚಕ್ರ ಹೊಂದಿದ್ದರೆ ಮುಟ್ಟಾದ 10-19 ದಿನವನ್ನು ಫಲವತ್ತತೆಯ ಸಮಯ ಎಂದು ಹೇಳಬಹುದು. ಈ ಸಮಯದಲ್ಲಿ ಪ್ರಯತ್ನಿಸಿದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು.

ಓವ್ಯೂಲೇಷನ್‌ ಪತ್ತೆ ಮಾಡುವ ಕಿಟ್ಸ್‌

ಓವ್ಯೂಲೇಷನ್‌ ಪತ್ತೆ ಮಾಡುವ ಕಿಟ್ಸ್‌

ಹೇಗೆ ಗರ್ಭಿಣಿ ಅಂತ ತಿಳಿಯಲು ಟೆಸ್ಟ್‌ ಮಾಡುತ್ತೇವೋ ಅದೇ ರೀತಿ ಯೂರಿನ್ ಟೆಸ್ಟ್‌ ಮಾಡಿ ಓವ್ಯೂಲೇಷನ್ ಬಗ್ಗೆ ತಿಳಿಯಬಹುದು. ನಿಮ್ಮ 12-36 ಗಂಟೆಯೊಳಗೆ ಅಂಡೋತ್ಪತ್ತಿ ಸಮಯವಾಗಿದ್ದರೆ ಅದರಲ್ಲಿರುವ ಬಣ್ಣ ವ್ಯತ್ಯಾಸದಿಂದ ತಿಳಿಯಬಹುದು.

ದೇಹದ ಉಷ್ಣತೆಯನ್ನು ಗಮನಿಸುವುದು

ದೇಹದ ಉಷ್ಣತೆಯನ್ನು ಗಮನಿಸುವುದು

ನಿಮ್ಮ ದೇಹದ ಉಷ್ಣತೆ ಸ್ವಲ್ಪ ಹೆಚ್ಚಾದರೆ ಅದು ಓವ್ಯೂಲೇಷನ್‌ ಸಮಯವಾಗಿದೆ, ಅಂಡಾಣುಗಳು ಬಿಡುಗಡೆಯಾಗುವಾಗ ದೇಹದಲ್ಲಿ ಕೆಲವೊಂದು ವ್ಯತ್ಯಾಸಗಳು ಕಂಡು ಬರುತ್ತದೆ. ಅವುಗಳನ್ನು ಗಮನಿಸಿದರೆ ನಿಮಗೆ ತಿಳಿದು ಬರುವುದು.

ಲೈಂಗಿಕವಾಗಿ ಚಟುವಟಿಕೆಯಿಂದ ಇರುವುದು

ಲೈಂಗಿಕವಾಗಿ ಚಟುವಟಿಕೆಯಿಂದ ಇರುವುದು

ನೀವು ಲೈಂಗಿಕವಾಗಿ ಚಟುವಟಿಕೆಯಿಂದ ಇದ್ದರೆ ಓವ್ಯೂಲೇಷನ್‌ ಕ್ಯಾಲೆಂಡರ್‌ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ವಾರದಲ್ಲಿ 2-3 ಬಾರಿ ಲೈಂಗಿಕ ಚಟುವಟಿಕೆ ನಡೆಸಿದರೂ ಅಂಡಾಣುಗಳು ಉತ್ಪತ್ತಿಯಾಗುವಾಗ ವೀರ್ಯಾಣುಗಳ ಜೊತೆ ಸೇರಿಕೊಂಡು ಭ್ರೂಣ ಉತ್ಪತ್ತಿಯಾಗುತ್ತದೆ.

ಬಂಜೆತನ ಎಂದರೇಣು?

ಬಂಜೆತನ ಎಂದರೇಣು?

ಹೆಚ್ಚಿನ ದಂಪತಿಗಳು ವರ್ಷಗಳಿಂದ ಗರ್ಭಧಾರಣೆಗೆ ಪ್ರಯತ್ನಿಸಿ, ಗರ್ಭಿಣಿಯಾಗದೇ ಹೋದಾಗ ವೈದ್ಯರನ್ನು ಭೇಟಿಯಾಗುತ್ತಾರೆ. ಇನ್ನು ಕೆಲವರು ವಯಸ್ಸಾದ ಮೇಲೆ ಮಗುವಿಗಾಗಿ ಪ್ರಯತ್ನಿಸುತ್ತಾರೆ. ವಯಸ್ಸು 35 ದಾಟಿದ ಮೇಲೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು. ಇನ್ನು ಕೆಲವರಿಗೆ ಆರೋಗ್ಯ ಸ್ಥಿತಿ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ, ಅತಿಯಾದ ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿಂದ ಬಂಜೆತನ ಉಂಟಾಗುವುದು.

ಬಂಜೆತನಕ್ಕೆ ಮಹಿಳೆಯರಲ್ಲಿನ ಸಮಸ್ಯೆ ಮಾತ್ರವಲ್ಲ, ಪುರುಷನ ಕಾರಣದಿಂದಲೂ ಬಂಜೆತನ ಉಂಟಾಗುವುದು. ಆದ್ದರಿಂದ ನಿಮ್ಮ ಫಲವತ್ತತೆ ಬಗ್ಗೆ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಮಗುವಿಗಾಗಿ ಪ್ರಯತ್ನಿಸುವ ಮುನ್ನ ಫರ್ಟಿಲಿಟಿ ಸ್ಕ್ರೀನಿಂಗ್‌ ಏಕೆ ಅವಶ್ಯಕ?

ಮಗುವಿಗಾಗಿ ಪ್ರಯತ್ನಿಸುವ ಮುನ್ನ ಫರ್ಟಿಲಿಟಿ ಸ್ಕ್ರೀನಿಂಗ್‌ ಏಕೆ ಅವಶ್ಯಕ?

ವೃತ್ತಿ, ಆರ್ಥಿಕ ಸ್ಥಿರತೆ ಎಂಬೆಲ್ಲಾ ಕಾರಣ ನೀಡಿ ಅನೇಕ ದಂಪತಿ ತಾವು ಮಗು ಪಡೆಯುವ ಪ್ಲ್ಯಾನಿಂಗ್‌ ಮುಂದೆ ಹಾಕುತ್ತಾರೆ. ಆದರೆ ಕೆಲ ವರ್ಷಗಳು ಕಳೆದ ಮೇಲೆ ನೋಡಿದರೆ ಅವರು ಸೂಕ್ತ ಸಮಯದಲ್ಲಿ ಮಗುವಿಗಾಗಿ ಪ್ರಯತ್ನಿಸದೇ ಇರುವುದೇ ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ಮದುವೆಯಾದ ಬಳಿಕ ದಂಪತಿ ಫರ್ಟಿಲಿಟಿ ಸ್ಕ್ರೀನಿಂಗ್‌ ಮಾಡಿಸುವುದು ಒಳ್ಳೆಯದು. ಇದರಿಂದ ತಮ್ಮ ಫಲವತ್ತತೆ ಹೇಗಿದೆ ಎಂದು ತಿಳಿಯುವುದು, ಏನಾದರೂ ಚಿಕಿತ್ಸೆ ಅಗ್ಯತವಿದ್ದರೆ ಬೇಗನೆ ಮಾಡಿಸಬಹುದು. ಇದರಿಂದ ಮಗು ಪಡೆಯುವ ಸಾಧ್ಯತೆ ಹೆಚ್ಚುವುದು.

English summary

Preparing For Pregnancy: Important Checklist, Steps and Guide in kannada

Preparing for Pregnancy: Important Checklist, Steps and Guide in kannada...
X
Desktop Bottom Promotion