For Quick Alerts
ALLOW NOTIFICATIONS  
For Daily Alerts

ಅವಧಿ ಪೂರ್ವ ಮಗು ಜನಿಸಿದರೆ ಪೋಷಕರು ಏನು ಮಾಡಬೇಕು?

|

ಗರ್ಭ ಧರಿಸಿ 9 ತಿಂಗಳು ಕಳೆದ ಬಳಿಕ ಅಥವಾ 36 ವಾರಗಳು ಕಳೆದ ಬಳಿಕ ಹುಟ್ಟುವ ಮಕ್ಕಳಿಗಿಂತ ಅವಧಿ ಪೂರ್ವದಲ್ಲಿ ಹುಟ್ಟುವ ಮಕ್ಕಳ ಆರೋಗ್ಯ ಸ್ಥಿತಿ ತುಂಬಾನೇ ಸೂಕ್ಷ್ಮವಾಗಿರುತ್ತೆ. ಅವಧಿ ಪೂರ್ವ ಹುಟ್ಟಿದ ಮಗುವಿನ ಆರೋಗ್ಯ ಸ್ಥಿತಿ ಕುರಿತು ಕೆಲವೊಮ್ಮೆ ವೈದ್ಯರೇ ಭರವಸೆ ನೀಡುವುದಿಲ್ಲ, ಏಕೆಂದರೆ ಅಂಥ ಮಕ್ಕಳಲ್ಲಿ ಹಲವಾರು ಸಮಸ್ಯೆಗಳಿರಬಹುದು, ಆದ್ದರಿಂದ ಅವಧಿ ತುಂಬಿ ಹುಟ್ಟುವ ಮಗುವಿಗಿಂತ ಹೆಚ್ಚಿನ ಆರೈಕೆ ಈ ಮಗುವಿಗೆ ಅಗ್ಯತವಿರುತ್ತದೆ. ಅವಧಿ ಪೂರ್ವ ಮಗು ಜನನವಾದರೆ ಪೋಷಕರು ಈ ರೀತಿ ನೋಡಿಕೊಳ್ಳಬೇಕಾಗುತ್ತದೆ:

ಅವಧಿ ಪೂರ್ವ ಮಗು ಜನಿಸಿದ್ದರೆ

ಅವಧಿ ಪೂರ್ವ ಮಗು ಜನಿಸಿದರೆ ಮೈ ತೂಕ ತುಂಬಾನೇ ಕಡಿಮೆ ಇರುತ್ತದೆ, ಕೆಲವು ಮಕ್ಕಳು 2 ಕೆಜಿಗಿಂತಲೂ ಕಡಿಮೆ ಇರುತ್ತದೆ. ಮಗುವಿನ ತೂಕ ತುಂಬಾ ಕಡಿಮೆ ಇದ್ದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಕಡಿಮೆ ವೈದ್ಯಕೀಯ ಸಾಕಷ್ಟು ಮುಂದುವರೆದಿರುವುದರಿಂದ ಮಗು 1 ಕೆಜಿಗಿಂತ ಅಧಿಕ ತೂಕ ಹೊಂದಿದ್ದರೆ ನಿಯೋನೆಟಲ್‌ ಕೇರ್‌ನಲ್ಲಿಟ್ಟು ಆರೈಕೆ ಮಾಡಬಹುದು. ಅವಧಿ ಪೂರ್ವ ಮಗು ಗರ್ಭಧಾರಣೆಯಾಗಿ 30 ವಾರಗಳ ನಂತರ ಜನಿಸಿದರೂ ಆಗಲು ಅಪಾಯದ ಸಾಧ್ಯತೆ ಕಡಿಮೆ, ಆದರೆ 28 ವಾರಗಳಿಗಿಂತ ಮಗು ಜನಿಸಿದರೆ NICUನಲ್ಲಿಟ್ಟು ಆರೈಕೆ ಮಾಡಲಾಗುವುದು.

ಅವಧಿಪೂರ್ವ ಜನಿಸಿದ ಮಗುವಿನ ಶರೀರ ಹೇಗಿರುತ್ತೆ?

* ಅವಧಿ ಪೂರ್ವ ಮಗು ಜನಿಸಿದರೆ ಆ ಮಗು ತುಂಬಾ ಕೃಶವಾಗಿರುತ್ತೆ, ಅದರ ತ್ವಚೆ ಮುಟ್ಟಲು ಭಯವಾಗುತ್ತೆ, ಹಾಗೇ ಇರುತ್ತದೆ, ಚರ್ಮದ ಕೆಳಗಡೆ ರಕ್ತನಾಳಗಳು ಎದ್ದು ಕಾಣುತ್ತದೆ, ಕೆಲ ಮಕ್ಕಳಿಗೆ ತಲೆ ಕೂದಲು ಇರುತ್ತದೆ, ಕೆಲವರಿಗೆ ಕೂದಲು ಕೂಡ ಬೆಳೆದಿರುವುದಿಲ್ಲ, ಕೈಯಲ್ಲಿ ಹಿಡಿಯಲು ಭಯವಾಗುವುದು, ಆದರೆ ಹೆದರಬೇಕಾಗಿಲ್ಲ, ಕೆಲವು ತಿಂಗಳು ಕಳೆಯುತ್ತಿದ್ದಂತೆ ಆ ಮಗು ಕೂಡ ಇತರ ಮಗುವಿನಂತೆಯೇ ಆರೋಗ್ಯವಂತವಾಗಿರುತ್ತದೆ, ಆರಂಭದಲ್ಲಿ ತುಸು ಹೆಚ್ಚು ಆರೈಕೆ ಬೇಕಷ್ಟೇ...

ಅವಧಿ ಪೂರ್ವ ಮಗು ಜನಿಸಿದರೆ ತೊಂದರೆಗಳೇನು?

ಅವಧಿ ಪೂರ್ವ ಮಗು ಜನಿಸಿದರೆ ತೊಂದರೆಗಳೇನು?

ಅವಧಿ ಪೂರ್ವ ಮಗು ಜನಿಸಿದರೆ ಆ ಮಗು ಕಡಿಮೆ ಮೈ ತೂಕ ಹೊಂದಿರುತ್ತದೆ ಹಾಗೂ ಅಂಥ ಮಕ್ಕಳಲ್ಲಿ ಉಸಿರಾಟಕ್ಕೆ ತೊಂದರೆ ಕಾಣಿಸಿಕೊಳ್ಳುವುದು. ಆ ಮಗವನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಆರೈಕೆ ಮಾಡಬೇಕಾಗುತ್ತದೆ.

ಪೋಷಕರು ಏನು ಮಾಡಬೇಕು

ಪೋಷಕರು ಏನು ಮಾಡಬೇಕು

ಅವಧಿ ಪೂರ್ವ ಮಗು ಜನಿಸಿದರೆ ಆ ಮಗು ಬದುಕಿಳಿಯುವುದೋ? ಇಲ್ವೋ ಎಂಬ ಆತಂಕ ಇರುವುದರಿಂದ ಪೋಷಕರು ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ತಾಯಿಗೆ ತುಂಬಾನೇ ಮಾನಸಿಕ ಧೈರ್ಯ ತುಂಬುವ ಕಾರ್ಯ ಗಂಡ ಹಾಗೂ ಮನೆಯವರು ಮಾಡಬೇಕಾಗುತ್ತದೆ.

ಮಗುವಿಗೆ ಎದೆ ಹಾಲುಣಿಸಲು ಕೂಡ ಸಾಧ್ಯವಾಗುವುದಿಲ್ಲ, ದಾದಿಯರೇ ಸಿರೆಂಜ್‌ನಲ್ಲಿ ಎಳೆದು ತೆಗೆದು ಮಗುವಿಗೆ ಕೊಡುವ ಪ್ರಯತ್ನ ಮಾಡುತ್ತಾರೆ

ಇನ್ನು ಅವಧಿ ಪೂರ್ವ ಮಗುವಿನ ಆರೈಕೆ ಆಸ್ಪತ್ರೆಗಿಂತ ಮನೆಯಲ್ಲಿ ತುಂಬಾ ಸವಾಲಿನಿಂದ ಕೂಡಿರುತ್ತೆ.

ಮನೆಯಲ್ಲಿ ಮಗುವಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು

ಮಗುವನ್ನು ಬೆಚ್ಚನೆ ಮಲಗಿಸಬೇಕು, ಆದರೆ ಮಗುವಿನ ಮುಖದ ಮೇಲೆ ಬೆಡ್‌ಶೀಟ್‌ ಬೀಳದಂತೆ ತುಂಬಾನೇ ಎಚ್ಚರವಹಿಸಬೇಕು. ಈ ರೀತಿ ಮಗುವನ್ನು ಮಲಗಿಸಲು ಸರಿಯಾದ ವ್ಯವಸ್ಥೆ ಮಾಡಿದರೆ ಮಗು ನಿದ್ದೆ ಮಾಡುತ್ತೆ.

ಮಗುವನ್ನು ಸ್ನಾನ ಮಾಡಿಸುವುದು ಹೇಗೆ?

ಮಗುವನ್ನು ಸ್ನಾನ ಮಾಡಿಸುವುದು ಹೇಗೆ?

ಅವಧಿ ತುಂಬಿ ಜನಿಸಿದ ಮಗುವಾದರೆ ಪ್ರತಿದಿನ ಸ್ನಾನ ಮಾಡಿಸುತ್ತಾರೆ, ಆದರೆ ಅವಧಿಗೆ ಮುನ್ನ ಜನಿಸಿದ ಮಗುವಾದರೆ ಸ್ಪಾಂಜ್‌ ಬಾತ್‌ ಅಷ್ಟೇ ನೀಡಬಹುದು. ಕನಿಷ್ಠ ಎರಡು ತಿಂಗಳು ಹೀಗೆ ಮಾಡಬೇಕಾಗುವುದು.

ಅವಧಿಪೂರ್ವ ಜನಿಸಿದ ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಮಾಡಬೇಡಿ.

ಮಗುವನ್ನು SIDS (ಇದ್ದಕ್ಕಿದ್ದಂತೆ ಮಗು ಸಾವನ್ನಪ್ಪುವುದು)ನಿಂದ ಪಾರು ಮಾಡುವುದೇಗೆ?

ಮಗುವನ್ನು SIDS (ಇದ್ದಕ್ಕಿದ್ದಂತೆ ಮಗು ಸಾವನ್ನಪ್ಪುವುದು)ನಿಂದ ಪಾರು ಮಾಡುವುದೇಗೆ?

6 ತಿಂಗಳಿನ ಒಳಗಿನ ಮಗುವಿನಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತೆ, ಏಕೆ ಈ ರೀತಿಯಾಗುತ್ತದೆ ಎಂದು ನೋಡುವುದಾದರೆ ನಿದ್ದೆಯಲ್ಲಿ ತುಂಬಾನೇ ಗಮನಿಸಬೇಕು. ಮಗು ನಿದ್ದೆ ಮಾಡುವಾಗ ಮುಖದ ಮೇಲೆ ಬೆಡ್‌ಶೀಟ್‌, ಬಟ್ಟೆ ಬೀಳದಂತೆ, ಎಳೆದು ಹಾಕದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಉಸಿರುಕಟ್ಟಿ ಸಾವನ್ನಪ್ಪುವುದು.

6 ತಿಂಗಳ ಒಳಗಿನ ಮಗುವನ್ನು ಹೊಟ್ಟೆ ಮೇಲೆ ನಿದ್ರಿಸಲು ಬಿಡಬಾರದು, ಹಗೆ ಮಾಡಿದರೆ ಮೂಗುವಿನ ಮೂಲಕ ಉಸಿರಾಡಲು ಕಷ್ಟವಾಗ ಸಾವನ್ನಪ್ಪುವುದು. ಒಂಉ ಬದಿ ತಿರುಗಿ ಮಲಗುವುದು ಕೂಡ ಮಗಿವಿಗೆ ಸುರಕ್ಷಿತವಲ್ಲ.

ಮಗುವಿಗೆ ಹಾಲುಣಿಸುವಾಗ ನೀವು ಮಲಗಿ ಕೊಡಬೇಡಿ, ನೀವು ಕೂತು, ಮಗುವನ್ನು ಸ್ವಲ್ಪ ಕೂರುವ ಭಂಗಿಯಲ್ಲಿ ಇರಿಸಿ (ಸಂಪೂರ್ಣವಲ್ಲ) ನಂತರ ಹಾಲುಣಿಸಿ.

ಮಗುವಿನ ಜೊತೆ ಮಲುಗುವಾಗಲೂ ತುಂಬಾ ಎಚ್ಚರವಹಿಸಿ.

ಎಚ್ಚರಿಕೆವಹಿಸಿ

ಎಚ್ಚರಿಕೆವಹಿಸಿ

ಅವಧಿ ಪೂರ್ವ ಮಗು ಜನಿಸಿದರೆ ಮಗುವನ್ನು ನೋಡಲು ಸ್ವಲ್ಪ ಸಮಯ ಯಾರಿಗೂ ಅನುಮತಿಸಬೇಡಿ

ಮಗುವಾದರೆ ನೆಂಟರಿಷ್ಟರು ಬರುವುದು ಸಹಜ, ಆದರೆ ಒಂದೆರಡು ತಿಂಗಳವರೆಗೆ ಬಾರದಂತೆ ರಿಕ್ವೆಸ್ಟ್ ಮಾಡಿ.

ನಿಮ್ಮ ವೈದ್ಯರು ತುರ್ತು ಸಂದರ್ಭದಲ್ಲಿ ಸಿಗುವಂತಿರಬೇಕು?

ಸಮೀಪದ ಸುಸಜ್ಜಿತ ಆಸ್ಪತ್ರೆಯ ವೈದ್ಯರ ಪರಿಚಯ ನಿಮಗಿರಬೇಕು, ಏನಾದರೂ ತುರ್ತು ಪರಿಸ್ಥಿತಿ ಬಂದ್ರೆ ಕೂಡಲೇ ಕೊಂಡೊಯ್ಯುವಂತಿರಬೇಕು.

ಅವಧಿಪೂರ್ವ ಮಗ ಜನಿಸಿದಾಗ ತುಂಬಾ ಆತಂಕ ಪಡಬೇಡಿ, ತುಸು ಹೆಚ್ಚಿನ ಜಾಗ್ರತೆಯಿಂದ ನೋಡಿಕೊಳ್ಳಿಯಷ್ಟೇ....

English summary

Premature Baby Care : How To Take Care Premature Baby in kannada

Premature Baby Care: How to take care of a preterm baby at home read on....
Story first published: Friday, November 18, 2022, 17:24 [IST]
X
Desktop Bottom Promotion