For Quick Alerts
ALLOW NOTIFICATIONS  
For Daily Alerts

ಡೋನರ್‌ನಿಂದ ಪಡೆದ ಅಂಡಾಣುವಿನಿಂದ ಗರ್ಭಧಾರಣೆ: ನೀವು ತಿಳಿಯಲೇಬೇಕಾದ ಸಂಗತಿಗಳಿವು

|

ಎಷ್ಟೋ ಮಹಿಳೆಯರಲ್ಲಿ ಅಂಡೋತ್ಪತ್ತಿ ಸರಿಯಾಗಿ ಬಿಡುಗಡೆಯಾಗುವುದಿಲ್ಲ, ಇಂಥವರಿಗೆ ಗರ್ಭಧಾರಣೆಯಾಗುವುದು ಕಷ್ಟ. ಅನೇಕ ಸಮಸ್ಯೆಗಳಿಂದಾಗಿ ಈ ರೀತಿಯಾಗುತ್ತದೆ.

ಪಿಒಐ(primary ovarian insufficiency) ಅಂದರೆ ಸಾಕಷ್ಟು ಅಂಡಾಣುಗಳು ಉತ್ಪತ್ತಿಯಾಗದಿರುವುದು ಅಥವಾ ಇನ್ನಿತರ ತೊಂದರೆಗಳಿಂದಾಗಿ ಗರ್ಭಧಾರಣೆ ಕಷ್ಟವಾಗುವುದು. ಆದರೆ ದಾನಿಗಳ ಅಂಡಾಣು ಬಳಸಿ ಗರ್ಭಧಾರಣೆಯಾಗಬಹುದು. ಡೋನರ್ ಎಗ್‌ ಅಥವಾ ದಾನಿಗಳ ಅಂಡಾಣುಗಳನ್ನು ಯಾರು ದಾನ ಪಡೆಯುತ್ತಾರೋ ಅವರ ಪತಿಯ ವೀರ್ಯಾಣುಗಳನ್ನು ಬಳಸಿ ಫಲವತ್ತತೆ ಮಾಡಿ ಆಕೆಯ ಗರ್ಭಕೋಶದೊಳಗೆ ಹಾಕಲಾಗುವುದು, ನಂತರ ಮಗು ಗರ್ಭಕೋಶದೊಳಗೆ ಆರೋಗ್ಯಕರವಾಗಿ ಬೆಳೆಯುತ್ತದೆ.

ಈ ವಿಧಾನ ಬಗ್ಗೆ ವಿವರವಾದ ಮಾಹಿತಿ ತಿಳಿಯಬಯಸುವುದಾದರೆ ಮುಂದೆ ಓದಿ:

ಡೋನರ್‌ ಎಗ್ ಎಂದರೇನು?

ಡೋನರ್‌ ಎಗ್ ಎಂದರೇನು?

ಡೋನರ್‌ ಎಗ್‌ ಎಂದರೆ ಬೇರೆ ಮಹಿಳೆ ದಾನ ಮಾಡಿದ ಅಂಡಾಣು. ಆ ಅಂಡಾಣುವಿನಲ್ಲಿ ಅವಳ ಡಿಎನ್‌ಎ ಇರುತ್ತದೆ, ಅದನ್ನು ಯಾರು ದಾನ ಪಡೆಯುತ್ತಾರೋ ಅವರ ಪತಿಯ ವೀರ್ಯಾಣು ಜೊತೆ ಸೇರಿಸಿ ಫಲವತ್ತತೆ ಮಾಡಲಾಗುವುದು.

ಈಗ ಉತ್ಪತ್ತಿಯಾದ ಭ್ರೂಣವನ್ನು ಈವಿಎಫ್‌ ಮೂಲಕ ದಾನ ಪಡೆದ ಮಹಿಳೆಯ ಗರ್ಭಕೋಶದೊಳಗೆ ಹಾಕಲಾಗುವುದು. ಯಾವ ಮಹಿಳೆ ಗರ್ಭಧರಿಸುತ್ತಾಳೋ ಅವಳು ಗರ್ಭಧಾರಣೆಯ ಸಂಪೂರ್ಣ ಅನುಭವ ಪಡೆಯುತ್ತಾರೆ.

ಯಾರು ಅಂಡಾಣುಗಳನ್ನು ದಾನ ಪಡೆಯುತ್ತಾರೋ ಅವರು ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಆರೋಗ್ಯವಂತ ಮಹಿಳೆಯರು ಅಂಡಾಣುಗಳನ್ನು ದಾನ ಮಾಡುತ್ತಾರೆ, ಆದ್ದರಿಂದ ಮಗು ಆರೋಗ್ಯಕರವಾಗಿರುತ್ತದೆ.

ಯಾರು ಅಂಡಾಣುಗಳನ್ನು ದಾನ ಪಡೆಯಬಹುದು?

ಯಾರು ಅಂಡಾಣುಗಳನ್ನು ದಾನ ಪಡೆಯಬಹುದು?

ನಿಮ್ಮ ಅಂಡಾಣುಗಳನ್ನು ಬಳಸಿ ಗರ್ಭಧಾರಣೆಯಾಗಲು ಸಾಧ್ಯವಾಗದೇ ಇದ್ದರೆ ದಾನಿಗಳ ಅಂಡಾಣು ಬಳಸಿ ಗರ್ಭಧರಿಸಬಹುದು. ಈ ಬಗೆಯ ಗರ್ಭಧಾರಣೆ ಹೆಚ್ಚಾಗುತ್ತಿದೆ.

ಅಂಡಾಣು ದಾನ ಪಡೆದು ಗರ್ಭಿಣಿಯಾಗುತ್ತಿರುವವರ ಸಂಖ್ಯೆ 2000ದಿಂದ 2010ಕ್ಕೆ ಹೋಲಿಸಿದರೆ ಶೇ. 69ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ಇದೀಗ ಇನ್ನೂ ಹೆಚ್ಚಾಗಿರಬಹುದು.

40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು, ಅಂಥವರು ಈ ವಿಧಾನದ ಮೂಲಕ ತಾಯಿಯಾಗಬಹುದು.

* ಯಾರಿಗೆ ಬೇಗನೆ ಮೆನೋಪಾಸ್ ಉಂಟಾಗಿದೆಯೋ ಅಥವಾ 40 ವರ್ಷ ಮೇಲ್ಪಟ್ಟ ಮಹಿಳೆಯರು ಅಂಡಾಣುಗಳನ್ನು ದಾನ ಪಡೆಯುವ ಮೂಲಕ ಗರ್ಭಧರಿಸಬಹುದು.

* ಕೆಲವರಿಗೆ ಜನಿಸಿದಾಗ ಅಂಡಾಶಯಗಳು ಇರುವುದಿಲ್ಲ.

* ಕೆಲವರಿಗೆ ಆರೋಗ್ಯ ಸಮಸ್ಯೆಯಿದ್ದರೆ ಅಂಡಾಣುಗಳು ಉತ್ಪತ್ತಿಯಾಗುವುದಿಲ್ಲ

* ಕೆಲವರಿಗೆ ಗುಣಮಟ್ಟದ ಅಂಡಾಣುಗಳು ಉತ್ಪತ್ತಿಯಾಗದಿದ್ದರೆ

 ಎಗ್‌ ಡೋನರ್‌ನ ಕಂಡು ಹಿಡಿಯುವುದು ಹೇಗೆ?

ಎಗ್‌ ಡೋನರ್‌ನ ಕಂಡು ಹಿಡಿಯುವುದು ಹೇಗೆ?

ಎಗ್‌ ಡೋನರ್‌ ಏಜೆನ್ಸಿ ಅಥವಾ ಫರ್ಟಿಲಿಟಿ ಕ್ಲಿನಿಕ್‌ನಲ್ಲಿ ಇವರ ಬಗ್ಗೆ ಮಾಹಿತಿ ಸಿಗುತ್ತದೆ.

ಅವರು ನಿಮಗೆ ಸೂಕ್ತ ಡೋನರ್ ಹುಡುಕುವಲ್ಲಿ ಸಹಾಯ ಮಾಡುತ್ತಾರೆ. ಆದರೆ ಅವರು ಯಾರು ಅಂಡಾಣುಗಳನ್ನು ದಾನ ಮಾಡಿದರು ಎಂದು ನಿಮಗೆ ತಿಳಿಸುವುದಿಲ್ಲ. ಕೆಲವೊಂದು ಕ್ಲಿನಿಕ್‌ನಲ್ಲಿ ಡೋನರ್ ಎಗ್‌ ಆಯ್ಕೆ ಮಾಡುವ ಮೊದಲು ಅವರ ಫೋಟೋಗಳನ್ನು ತೋರಿಸುತ್ತಾರರ, ಫೋಟೋ ನೋಡಿ ಆಯ್ಕೆ ಮಾಡಬಹುದು.

ಇದಲ್ಲದಿದ್ದರೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿ ಬಳಿ ಅಂಡಾಣುಗಳನ್ನು ದಾನ ಪಡೆಯಬಹುದು. ಆಗ ನೀವು ಬಯಸಿದ ಜೆನೆಟಿಕ್ ನಿಮ್ಮ ಮಗುವಿಗೆ ಸಿಗುವುದು. ನೀವು ಡೋನರ್‌ ಆಯ್ಕೆ ಮಾಡುವಾಗ 35 ವರ್ಷದೊಳಗೆ ಇರುವವರನ್ನು ಆಯ್ಕೆ ಮಾಡುವುದು ಒಳ್ಳೆಯದು.

ಅಂಡಾಣುಗಳನ್ನು ಪಡೆಯುವ ಮೊದಲು ದಾನಿಯಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಇದೆಯೇ, ಮಾನಸಿಕ ಸಮಸ್ಯೆ ಇದೆಯ? ಸೋಂಕು ಅಥವಾ ರಕ್ತ ಸಂಬಂಧಿ ಸಮಸ್ಯೆ ಇದೆಯೇ ಅಥವಾ ಇತರ ಆರೋಗ್ಯ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಿದ ಬಳಿಕವಷ್ಟೇ ಅಂಡಾಣುಗಳನ್ನು ದಾನ ಪಡೆಯಬೇಕು.

ಡೋನರ್‌ ಎಗ್‌ ಪ್ರೋಸೆಸ್‌ ಹೇಗಿರುತ್ತದೆ?

ಡೋನರ್‌ ಎಗ್‌ ಪ್ರೋಸೆಸ್‌ ಹೇಗಿರುತ್ತದೆ?

ನೀವು ಅಂಡಾಣುಗಳನ್ನು ದಾನ ಪಡೆಯುವುದಾದರೆ ಮೊದಲು ನಿಮ್ಮ ಚಕ್ರದ ಜೊತೆಗೆ ಸರಿಹೊಂದಿಸಬೇಕು. ನಿಮ್ಮ ಗರ್ಭಕೋಶ ಭ್ರೂಣವನ್ನು ಸ್ವೀಕರಿಸಲು ರೆಡಿ ಇದೆ ಎಂದಾಗ ಡೋನರ್ ಬಳಿಯಿಂದ ಅಂಡಾಣುಗಳನ್ನು ಪಡೆದು ನಂತರ ವೀರ್ಯಾಣುಗಳ ಜೊತೆ ಸೇರಿಸಿ ಫಲವತ್ತತೆ ಮಾಡಲಾಗುವುದು.

ನೀವು ಫ್ರೋಜನ್‌ ಎಗ್‌ ಅಂದರೆ ಮೊದಲೇ ಸಂಗ್ರಹಿಸಿಟ್ಟ ಅಂಡಾಣುಗಳನ್ನು ಮಾಡುವುದಾದರೆ ತೊಂದರೆಯಿಲ್ಲ, ಆದರೆ ಫ್ರೋಜನ್‌ ಎಗ್‌ ಬದಲಿಗೆ ತಾಜಾ ಅಂಡಾಣುಗಳನ್ನು ಪಡೆದರೆ ಗರ್ಭಧಾರಣೆಯಾಗುವ ಸಾಧ್ಯತೆ.

ನೀವು ಒಬ್ಬ ಡೋನರ್ ಬಳಿಯಿಂದ ಒಂದಕ್ಕಿಂತ ಹೆಚ್ಚು ಮಗುವನ್ನು ಪಡೆಯಲು ಬಯಸುವುದಾದರೆ ಎರಡು ಭ್ರೂಣವನ್ನು ಉತ್ಪತ್ತಿ ಮಾಡಿ ನಂತರ ಒಂದು ಭ್ರೂಣವನ್ನು ಫ್ರೋಜನ್ ಮಾಡಿ (ಶೈತಲೀಕರಣದಲ್ಲಿ ಇಡುವುದು) ನಂತರ ನಿಮಗೆ ಬೇಕಾದಾಗ ಬಳಸಬಹುದು.

ಅಂಡಾಣುಗಳನ್ನು ಪಡೆಯಲು ಕಾನೂನು ತೊಂದರೆಗಳಿವೆಯೇ?

ಅಂಡಾಣುಗಳನ್ನು ಪಡೆಯಲು ಕಾನೂನು ತೊಂದರೆಗಳಿವೆಯೇ?

ಹೌದು ಅಂಡಾಣುಗಳನ್ನು ಪಡೆಯುವಾಗ ಲಾಯರ್‌ ಮೂಲಕ ಒಪ್ಪಂದ ಮಾಡಬೇಕಾಗುತ್ತದೆ. ಅಂಡಾಣುಗಳನ್ನು ದಾನ ಮಾಡಿದವರಿಗೆ ಯಾವು ಪೋಷಕ ಹಕ್ಕು ಇರುವುದಿಲ್ಲ, ಅದರ ಕುರಿತು ವಿವರವಾಗಿ ಬರೆಯಲಾಗುವುದು. ಅಂಡಾಣುಗಳನ್ನು ದಾನ ಮಾಡಿದವರು ಮುಂದೆ ಇದು ನನ್ನ ಮಗು ಎಂದು ಬರಲು ಸಾಧ್ಯವಿಲ್ಲ.

ಅಂಡಾಣುಗಳನ್ನು ಪಡೆಯಲು ಎಷ್ಟು ಖರ್ಚಾಗುವುದು?

ಫ್ರೋಜನ್ ಅಂಡಾಣುಗಳಿಗಿಂತ ತಾಜಾ ಅಂಡಾಣುಗಳನ್ನು ಪಡೆಯಲು ಅಧಿಕ ಖರ್ಚಾಗುವುದು. ನೀವು ನಿಮ್ಮ ಸಂಬಂಧಿ ಅಥವಾ ಸ್ನೇಹಿತರಿಂದ ಅಂಡಾಣು ಪಡೆಯುವುದಾದರೆ ಅಂಡಾಣುಗಳಿಗೆ ಹಣ ನೀಡಬೇಕಾಗಿರುವುದಿಲ್ಲ, ಆದರೆ ಐವಿಎಫ್‌ ದುಬಾರಿ ಚಿಕಿತ್ಸೆಯಾಗಿದ್ದು 2 ಲಕ್ಷಗಿಂತ ಅಧಿಕ ಖರ್ಚಾಗಬಹುದು.

English summary

How Do I find An Egg Donor? How Does The Donor Egg Process Work? Explained in kannada

How Do I find An Egg Donor? How Does The Donor Egg Process Work, Read on.....
Story first published: Thursday, January 19, 2023, 17:11 [IST]
X
Desktop Bottom Promotion