For Quick Alerts
ALLOW NOTIFICATIONS  
For Daily Alerts

ಸುಖ ಪ್ರಸವ, ಆರೋಗ್ಯವಂತ ಮಗುವಿಗೆ ಈ ಗರ್ಭರಕ್ಷಾ ಮಂತ್ರ ಪಠಿಸಿ

|

ಮಗುವಿಗೆ ಜನ್ಮ ನೀಡಿದರೆ ಹೆಣ್ಣಿನ ಜನ್ಮ ಸಾರ್ಥಕ ಎನ್ನುತ್ತಾರೆ, ಈ ಮಾತು ಅಕ್ಷರಶಃ ಸತ್ಯ. 9 ತಿಂಗಳು ಮಗುವನ್ನು ಗರ್ಭದಲ್ಲಿಟ್ಟು ಕಣ್ಣಿನ ರೆಪ್ಪೆಯಂತೆ ಸುರಕ್ಷಿತವಾಗಿ ಸಲುಹಿ ನಂತರ ಅದನ್ನು ಹೊರಪ್ರಪಂಚಕ್ಕೆ ತಂದ ಕ್ಷಣ ಪ್ರತಿ ಹೆಣ್ಣಿಗೂ ತನ್ನ ಜನ್ಮ ಸಾರ್ಥಕ ಎಂಬ ಭಾವನೆ ಬರದೇ ಇರಲಾರದು. ಆ ಅನುಭವವೇ ಬೇರೆ, ಅದನ್ನು ವರ್ಣಿಸಲಸಾಧ್ಯ.

Garbharaksha Mantra: Prayer for Safe Pregnancy And Normal Delivery in Kannada

ಹೀಗೆ ಗರ್ಭಿಣಿ ತನ್ನ ಮಗುವನ್ನು ನವಮಾಸ ಗರ್ಭದಲ್ಲಿ ಇರುವಾಗ ಪ್ರತಿಕ್ಷಣವನ್ನು ಎಚ್ಚರಿಕೆಯಿಂದ ಕಳೆಯುತ್ತಾಳೆ, ಮಗುವಿಗೆ ಆರೋಗ್ಯಕರ ಎನಿಸುವಂಥ ಆಹಾರ, ಅಭ್ಯಾಸಗಳನ್ನು ಮಾತ್ರ ರೂಢಿಸಿಕೊಳ್ಳುತ್ತಾಳೆ, ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುತ್ತಾಳೆ. ಆದರೆ ಮಗುವಿನ ಬೆಳವಣಿಗೆ ಕೇವಲ ದೈಹಿಕವಾಗಿ ಮಾತ್ರ ಆಗದೇ ಮಾನಸಿಕವಾಗಿಯೂ ನಮ್ಮ ಆಲೋಚನೆ, ಯೋಚನಾ ಲಹರಿಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ಇದಕ್ಕಾಗಿಯೇ ಹಲವು ಗರ್ಭಿಣಿಯರು ಸದಾ ಒಳ್ಳೆಯ ಆಲೋಚನೆ, ಉತ್ತಮ ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಹೀಗೆ ಹತ್ತು ಹಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.

ಆದರೆ ಇದರಾಚೆಗೂ ಪ್ರತಿ ತಾಯಿಗೂ ತನ್ನ ಮಗು ಗರ್ಭದಲ್ಲಿ ಸುರಕ್ಷಿತವಾಗಿದೆಯೇ, ಹೆರಿಗೆ ಯಾವುದೇ ಸಮಸ್ಯೆ ಇಲ್ಲದೆ ಆಗುತ್ತದೆಯೇ, ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲವೇ ಎಂಬ ಆತಂಕ ಆಗಾಗ ಕಾಡುವುದುಂಟು, ಇದಕ್ಕಾಗಿ ದೈವದ ಮೊರೆ ಹೋಗುವವರಿಗೇನೂ ಕಡಿಮೆ ಇಲ್ಲ. ಇದಕ್ಕಾಗಿಯೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಗರ್ಭ ರಕ್ಷಾ ಮಂತ್ರಗಳನ್ನು, ಮಗುವಿನ ಆರೋಗ್ಯ ಸುಧಾರಿಸಲು ಹಾಗೂ ಸಹಜ ಹೆರಿಗೆಯಾಗಲು ಕೆಲವು ಮಂತ್ರಗಳನ್ನು ರಚಿಸಲಾಗಿದೆ. ನಿತ್ಯ ಈ ಮಂತ್ರಗಳನ್ನು ಪಠಿಸುವುದರಿಂದ ಮಗು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುತ್ತದೆ ಎನ್ನಲಾಗುತ್ತದೆ.

ಗರ್ಭಿಣಿಯರು ತಮ್ಮ ಮಗುವಿನ ರಕ್ಷಣೆಗೆ ಯಾವೆಲ್ಲಾ ಮಂತ್ರಗಳನ್ನು ಪಠಿಸಿದರೆ ಸುರಕ್ಷಿತ ಎಂದು ಮುಂದೆ ನೋಡೋಣ:

 1. ಗರ್ಭ ರಕ್ಷಾ ಮಂತ್ರ

1. ಗರ್ಭ ರಕ್ಷಾ ಮಂತ್ರ

ಶ್ಲೋಕ: ಶ್ರೀ ಮಾಧವಿ ಕಾನನಸ್ಯೆ ಗರ್ಭ

ರಕ್ಷಾಂಭಿಕೆ ಪಾಹಿ ಭಕ್ತಂ ಸ್ಥುವಂತಂ.

ಅರ್ಥ: ಪವಿತ್ರ ಮಲ್ಲಿಗೆಯ ಕಾಡಿನಲ್ಲಿ, ಭಕ್ತರು ಪ್ರಾರ್ಥಿಸುತ್ತಾರೆ,

ನಮ್ಮನ್ನು ರಕ್ಷಿಸು ಗರ್ಭಧಾರಣೆಯ ರಕ್ಷಕಿ

ಶ್ಲೋಕ: ವಾಪಿ ತಥೇ ವಾಮಾ ಭಾಗೇ, ವಾಮಾ

ದೇವಸ್ಯ ದೇವಿ ಸ್ಥಿತ ತ್ವಮ್

ಮನ್ಯಾ ವರೇಣ್ಯಾ ವದನ್ಯಾ ಪಾಹಿ

ಗರ್ಭಸ್ಯ ಜಂತುನ್ ತಥಾ ಭಕ್ತ ಲೋಕಾನ್

ಅರ್ಥ: ದೇವರ ಎಡಭಾಗದಲ್ಲಿ ಕೊಳದ ತೀರ ಇದೆ,

ಓ ಗೌರವಾನ್ವಿತ ದೇವತೆ, ವರಗಳನ್ನು ಕೊಡುವವಳು,

ಕೃಪೆಯಿಂದ ಮಾತನಾಡುವ ದೇವತೆ,

ಗರ್ಭಾವಸ್ಥೆಯಲ್ಲಿ ಎಲ್ಲಾ ಪ್ರಾಣಿಗಳು ಮತ್ತು ಭಕ್ತರನ್ನು ರಕ್ಷಿಸು

ಶ್ಲೋಕ: ಶ್ರೀ ಗರ್ಭ ರಕ್ಷಾ ಶುದ್ಧ ಯಾ ದಿವ್ಯಾ

ಸೌಂದರ್ಯಯುಕ್ತ, ಸುಮಾಂಗಲ್ಯ ಗಾತ್ರಿ

ಧಾತ್ರೇಏ, ಜನಿತ್ರಿ ಜನಾನಾಮ್ ದಿವ್ಯಾ

ರೂಪಾಮ್ ದಯಾರ್ದ್ರಾಮ್ ಮನೋಜ್ಞಾಮ್ ಭಜೆ ತಾಮ್

ಅರ್ಥ: ಓ ಗರ್ಭಧಾರಣೆಯ ರಕ್ಷಣೆಯ ಪಟ್ಟಣದ ದೇವತೆ,

ಯಾರು ದೈವಿಕ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟಿದ್ದಾರೆ, ಮಾಂಗಲ್ಯವನ್ನು ಧರಿಸಿದವರು

ಪ್ರತಿಯೊಬ್ಬರಿಗೂ ಯಾರು ಕೊಡುತ್ತಾರೋ, ಎಲ್ಲರ ತಾಯಿ ಯಾರೋ,

ಯಾರು ಸುಂದರ, ಯಾರು ಕರುಣೆಯಿಂದ ಕರಗುತ್ತಾರೋ ಅವರೇ ನೀನು

ನಾನು ನಿಮ್ಮ ಬಗ್ಗೆ ಹಾಡುತ್ತೇನೆ

ಶ್ಲೋಕ: ಆಶಾಢ ಮಾಸೇ ಸುಪುಣ್ಯೆ ಶುಕ್ರ

ವಾರೇ ಸುಗಂಧೇನ ಗಂಧೇನ ಲಿಪ್ತ

ದಿವ್ಯಾಂಬರ ಕಲ್ಪ ವೇಶ ವಾಜ

ಪೇಯಾದಿ ಯಾಗಸ್ತ ಭಕ್ತಿ ಸುದ್ರುಷ್ಟಾ

ಅರ್ಥ: ಆಶಾಡಾ ತಿಂಗಳಿನ ಶುಕ್ರವಾರದಂದು

ಪರಿಮಳಯುಕ್ತ ಗಂಧದಿಂದ ನಿನ್ನನ್ನು ಶೃಂಗರಿಸಲಾಗಿದೆ

ಮತ್ತು ಶುಭ್ರವಾದ ವಸ್ತ್ರವನ್ನು ಧರಿಸಿದವಳು ನೀನು

ಭಕ್ತರಿಂದ ವಜಪೇಯ ಯಾಗ ನಿನಗೆ

ಶ್ಲೋಕ: ಕಾಯಾನ ಧಾತ್ರಿಮ್ ನಮಸ್ಯೆ ವೇದಿ

ಕಂಚ ಸ್ತ್ರೀಯಾ ಗರ್ಭ ರಕ್ಷಾ ಕರೀಮ್ ತ್ವಾಮ್

ಬಾಲೈ ಸದಾ ಸೇವಿತಾಂಗ್ರಿ ಗರ್ಭ

ರಕ್ಷಾರ್ಥ ಮಾರಾ ಧೂಪೇ ತೈ ಪೇತಾಮ್

ಅರ್ಥ: ಒಳ್ಳೆಯದನ್ನು ನೀಡುವ ಅವಳಿಗೆ ನಾನು ವಂದಿಸುತ್ತೇನೆ

ವೇದೋಪನಿಷತ್ತು ಮಹಿಳೆಯರ ಗರ್ಭಧಾರಣೆಯನ್ನು ರಕ್ಷಿಸುತ್ತದೆ

ಅವಳು ಯಾವಾಗಲೂ ಗರ್ಭಧಾರಣೆಯಲ್ಲಿ ಮಕ್ಕಳನ್ನು ರಕ್ಷಿಸುತ್ತಾಳೆ

ಮಗು ಹೆರಿಗೆ ಆಗುವ ಸಮಯದಲ್ಲೂ ಸಹ

ಶ್ಲೋಕ: ಬ್ರಹ್ಮೋತ್ಸವ ವಿಪ್ರ ವೇದ್ಯಾಮ್‌ ವಾದ್ಯ

ಗೋಶೀನ ತುಷ್ಟಾಮ್ ರಾಧೇನಾ ಸನ್ನಿವಿಷ್ಟಂ,

ಸರ್ವರ್ಥಾ ಧಾತ್ರಿಮ್ ಭಜೇಹಮ್ ದೇವ

ವೃಂದೈರ ಪೀಡಾಯಾಂ ಜಗನ್ ಮಾತರಂ ತ್ವಮ್

ಅರ್ಥ: ಬ್ರಹ್ಮೋತ್ಸವ ಸಮಯದಲ್ಲಿ, ಸಂಗೀತದ ಧ್ವನಿಯೊಂದಿಗೆ,

ರಥದ ಮೇಲೆ ಕುಳಿತು ನೀವು ಬ್ರಾಹ್ಮಣರ ಬೀದಿಗಳಲ್ಲಿ ಸುತ್ತಾಡುತ್ತೀರಿ,

ಒಳ್ಳೆಯದನ್ನು ಕೊಡುವವನು ಯಾರು ಎಂದು ನಾನು ಪ್ರಾರ್ಥಿಸುತ್ತೇನೆ

ದೇವರುಗಳ ಗುಂಪುಗಳ ಸಮಸ್ಯೆಗಳನ್ನು ಯಾರು ತೆಗೆದುಹಾಕುತ್ತಾರೆ,

ಮತ್ತು ಇಡೀ ಬ್ರಹ್ಮಾಂಡದ ತಾಯಿ

ಶ್ಲೋಕ: ಯೇತದ್‌ ಕೃತಾಮ್‌ ಸ್ತೋತ್ರ ರತ್ನಂ ದೀಕ್ಷಿತಾ

ಅನಂತ ರಾಮೇನ ದೇವ್ಯಾ ತುಶ್ಟಚ್ಯೈ

ನಿತ್ಯಂ ಪಠೇತ್ಯಸ್ತು ಭಕ್ತ್ಯ ಪುತ್ರ

ಪೋತ್ರದಿ ಭಾಗ್ಯಂ ಭವೇತಸ್ಯ ನಿತ್ಯಂ

ಅರ್ಥ: ಈ ಪ್ರಾರ್ಥನೆಯನ್ನು ಅನಂತ ರಾಮ ದೀಕ್ಷಿತರು ಸಂಯೋಜಿಸಿದ್ದಾರೆ

ದೇವಿಯನ್ನು ಮೆಚ್ಚಿಸುವ ಸಲುವಾಗಿ, ಪ್ರತಿದಿನ ಭಕ್ತಿಯಿಂದ ಓದಿದರೆ,

ಉತ್ತಮ ಮಕ್ಕಳು ನಮ್ಮದಾಗುವಂತೆ ದೇವರು ಆಶೀರ್ವದಿಸುತ್ತಾರೆ

ಶ್ಲೋಕ: ಇತಿ ಬ್ರಹ್ಮ ಶ್ರೀ ಅನಂತರಾಮ ದೀಕ್ಷಿತ ವಿರಚಿತಂ

ಗರ್ಭ ರಕ್ಷಾಂಬಿಕಾ ಸ್ತೋತ್ರಂ ಸಂಪೂರ್ಣಂ

ಅರ್ಥ: ಶ್ರೀ ಅನಂತರಾಮ ದೀಕ್ಷಿತರು ಬರೆದ

ಗರ್ಭ ರಕ್ಷಾಂಬಿಕಾ ಸ್ತ್ರೋತ್ರ ಹೀಗೆ ಕೊನೆಗೊಳ್ಳುತ್ತದೆ

2. ಚೇತನಾ ಮಂತ್ರ

2. ಚೇತನಾ ಮಂತ್ರ

ಗರ್ಭದಲ್ಲಿರುವ ಮಗುವಿಗೆ ಚೇತನಾ ಮಂತ್ರ

"ಓಂ ಹ್ರೀಮ್ ಗರ್ಭಸ್ಥೆ ಸುಚೇತನಾಯ ಫಟ್"

3. ಸುಖ ಪ್ರಸವಕ್ಕೆ

3. ಸುಖ ಪ್ರಸವಕ್ಕೆ

ಆಸ್ತಿ ಗೋದಾವರಿ ತೀರೆ ಜಂಭಲಾ ನಾಮ ರಾಕ್ಷಸೀ

ತಸ್ಯಾಃ ಸ್ಮರಣ ಮಾತ್ರೇಣ ವಿಶಲ್ಯಾ ಗರ್ಬಿಣಿ ಭವೇತ್‌

ಹಿಮವತ್ಯುತ್ತರೇ ಪಾರ್ಶ್ವೇ ಚಪಲಾ ನಾಮಯಕ್ಷಿಣೇ

ತಸ್ಯಾಃ ನೂಪುರ ಶಬ್ದೇನ ವಿಶಲ್ಯಾ ಗರ್ಭಿಣಿ ಭವೇತ್‌

4. ಸಂತಾನಲಕ್ಷ್ಮೀ ಶ್ಲೋಕ

4. ಸಂತಾನಲಕ್ಷ್ಮೀ ಶ್ಲೋಕ

ಆಯಿಖಗವಾಹಿನಿ ಮೋಹಿನಿ ಚಕ್ರಿಣಿ

ರಾಗವಿವರ್ದಿನಿ ಜ್ಞಾನಮಯೇ

ಗುಣಗಣವಾರಿಧಿ ಲೋಕಹಿತೈಷಿಣಿ

ಸ್ವರ ಸಪ್ತ ಭೂಷಿತ ಗಾನನುತೇ

ಸಕಲ ಸುರಾಸುರ ದೇವ ಮುನೀಶ್ವರ ಮಾನವ ವಂದಿತ ಪಾದಯುತೇ

ಜಯ ಜಯ ಹೇ ಮಧುಸೂದನ ಕಾಮಿನಿ

ಸಂತಾನಲಕ್ಷ್ಮೀ ಸದಾಪಾಲಯಮಾಂ

5. ಸುಖ ಪ್ರಸವಕ್ಕೆ ಪ್ರಾರ್ಥನೆ

5. ಸುಖ ಪ್ರಸವಕ್ಕೆ ಪ್ರಾರ್ಥನೆ

ಮಾತ್ರುಭೂತೇಶ್ವರ ಸ್ತುತಿಃ

ಮಾತೃ ಭೂತೇಶ್ವರೋ ದೇವೋ ಭಕ್ತಾನಾಮ್ ಇಷ್ಟ ದಾಯಕ |

ಸುಗನ್ಧ ಕುನ್ತಳಾ ನಾಥ ಸುಖ ಪ್ರಸವಮೃಚ್ಚನ್ತುಃ ||

ಹೇ ಶಙ್ಕರ ಸ್ಮರಹರ ಪ್ರಮಥಾಧಿನಾಥ

ಮನ್ನಾಥ ಸಾಮ್ಬ ಶಶಿಚೂಡ ಹರ ತ್ರಿಶೂಲಿನ್ |

ಶಮ್ಬೋ ಸುಖ ಪ್ರಸವಕೃತ್ ಭವಮೇ ದಯಾಳೋ

ಶ್ರೀ ಮಾತೃಭೂತ ಶಿವ ಪಾಲಯಮಾಮ್ ನಮಸ್ತೇ ||


6. ಗರ್ಭ ರಕ್ಷಾ ಮಂತ್ರವನ್ನು ಪಠಿಸುವುದು ಹೇಗೆ?

English summary

Garbharaksha Mantra: Prayer for Safe Pregnancy And Normal Delivery in Kannada

Here we are discussing about Garbharaksha Mantra: Prayer for Safe Pregnancy And Normal Delivery in Kannada. Read more.
X
Desktop Bottom Promotion