Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಾವಸ್ಥೆಯ ಹಲವು ಸಮಸ್ಯೆಗಳನ್ನು ತಪ್ಪಿಸುತ್ತದೆ ಪ್ಲಮ್ ಹಣ್ಣು
ಗರ್ಭಾವಸ್ಥೆ ಎನ್ನುವುದು ಮಹಿಳೆಗೆ ತಾನು ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಸಾಕಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ, ಜೀವನ ಶೈಲಿಯಿಂದ ಹಿಡಿದು, ಸೇವಿಸುವ ಆಹಾರ ಪದಾರ್ಥಗಳವರೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೇವಲ ತಾಯಿಯ ಆರೋಗ್ಯ ಮಾತ್ರವಲ್ಲದೇ ಮಗುವಿನ ಆರೋಗ್ಯಕ್ಕೂ ಸಂಬಂಧಿಸಿದಂತೆ ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಸೇವಿಸುವ ಆಹಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.

ಗರ್ಭಾವಸ್ಥೆಯಲ್ಲಿ, ತಾಯಂದಿರು ತಾವು ಯಾವ ಹಣ್ಣುಗಳನ್ನು ಸೇವಿಸಬೇಕು ಮತ್ತು ಯಾವ ಹಣ್ಣುಗಳನ್ನು ಸೇವಿಸಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನು ಸೇವಿಸುವುದು ಅದರಲ್ಲೂ ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಅತ್ಯಂತ ಮುಖ್ಯವಾಗಿದೆ ಏಕೆಂದರೆ ಆ ಸಮಯದಲ್ಲಿ ಹೆಚ್ಚಿನ ತಾಯಂದಿರು ಬೆಳಿಗಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಭ್ರೂಣವು ಬೆಳವಣಿಗೆಯ ಪ್ರಮುಖ ಹಂತದಲ್ಲಿರುತ್ತದೆ.
ಮೊದಲ ತ್ರೈಮಾಸಿಕದಲ್ಲಿ, ಭ್ರೂಣದ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಬೇಕಾಗುತ್ತವೆ. ಪ್ಲಮ್ ನಂತಹ ಹಣ್ಣುಗಳನ್ನು ಸೇವಿಸುವುದರಿಂದ ಬೆಳಗಿನ ಕಾಯಿಲೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಲು ಜೊತೆಗೆ ಅದೇ ಸಮಯದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ಅದ್ಭುತವಾದ ಸೇವನೆಯಾಗಿದೆ.
ಪ್ಲಮ್, ಪ್ರುನಸ್ ವರ್ಗಕ್ಕೆ ಸೇರಿದ್ದು. ಇದು ಪೀಚ್ ಮತ್ತು ಚೆರ್ರಿಗಳ ಪ್ರಬೇಧದಲ್ಲಿಯೇ ಬರುತ್ತದೆ. ಯುರೋಪ್ ಮೂಲದ ಪ್ರುನಸ್ ಡೊಮೆಸ್ಟಿಕಾ ಪ್ರಬೇಧದ ಕೆಲವು ಬಗೆಯ ಪ್ಲಮ್ ಗಳಿವೆ. ಆದರೆ ಏಷ್ಯಾದ ಜನರು ಪ್ರುನಸ್ ಸಿಮೋನಿಲಿ ಮತ್ತು ಪ್ರುನಸ್ ಸ್ಯಾಲಿಸಿನಾ ಪ್ರಭೇದಗಳಿಂದ ಪ್ಲಮ್ ಬಗ್ಗೆ ಪರಿಚಿತರಾಗಿದ್ದಾರೆ. ಪ್ಲಮ್ ಹೆಸರು ಹಳೆಯ ಇಂಗ್ಲಿಷ್ 'ಪ್ಲುಮ್' ನಿಂದ ಬಂದಿದೆ. ಇದೀಗ, ಜನರು ಎರಡು ರೀತಿಯಲ್ಲಿ ಪ್ಲಮ್ ಅನ್ನು ಸೇವಿಸುತ್ತಾರೆ. ತಾಜಾ ಪ್ಲಮ್ ಅನ್ನು ಪ್ಲಮ್ ಮತ್ತು ಒಣಗಿದ ಪ್ಲಮ್ ಎಂದು ಕರೆಯಲಾಗುತ್ತದೆ, ಇದನ್ನು ಒಣದ್ರಾಕ್ಷಿ ಎಂದೂ ಕರೆಯಲಾಗುತ್ತದೆ, ಇದನ್ನು ಕೇಕ್ ನ ಹೆಚ್ಚುವರಿ ಪದಾರ್ಥಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಅಕಾಲಿಕ ಜನನವನ್ನು ತಡೆಯುತ್ತದೆ
ಅಕಾಲಿಕ ಜನನಕ್ಕೆ ಕಾರಣವಾಗುವ ಬಹಳಷ್ಟು ಅಂಶಗಳಿರುತ್ತವೆ ಆದರೆ ನಿಯಮಿತವಾಗಿ ಪ್ಲಮ್ ಹಣ್ಣನ್ನು ಸೇವಿಸುವುದರಿಂದ ಮಹಿಳೆಯರಿಗೆ ಅಕಾಲಿಕ ಜನನ ಸಂಭವಿಸುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಬಹುದು. ಪ್ಲಮ್ ಹಣ್ಣು ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವನ್ನು ಹೊಂದಿರುವುದೇ ಇದಕ್ಕೆ ಕಾರಣ. ಸ್ನಾಯುಗಳನ್ನು ಸಡಿಲಿಸುವಲ್ಲಿ ಮೆಗ್ನೀಶಿಯಂ ಗಮನಾರ್ಹ ಪಾತ್ರವನ್ನು ಹೊಂದಿದೆ, ಆದ್ದರಿಂದ ಆರಂಭಿಕ ಸಂಕೋಚನವನ್ನು ತಡೆಯಬಹುದು.

ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಉತ್ತಮಗೊಳಿಸುತ್ತದೆ
ಗರ್ಭಾವಸ್ಥೆಯಲ್ಲಿ ತಾಯಂದಿರು ಸೇವಿಸಬೇಕಾದ ಪ್ರಮುಖ ಖನಿಜಗಳಲ್ಲಿ ಕಬ್ಬಿಣವೂ ಒಂದು. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಕಬ್ಬಿಣವು ಅವಶ್ಯಕವಾಗಿದೆ ಮತ್ತು ಭ್ರೂಣದ ಬೆಳವಣಿಗೆಗೆ ಕೆಂಪು ರಕ್ತ ಕಣಗಳು ಅತ್ಯಂತ ಮುಖ್ಯವಾಗಿವೆ. ಸಾಕಷ್ಟು ಪ್ರಮಾಣದ ಕೆಂಪು ರಕ್ತ ಕಣಗಳಿಲ್ಲದೆ, ಜನನದ ದೋಷದಿಂದ ಜನಿಸಬಹುದಾದ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ಲಮ್ ಹಣ್ಣು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಉತ್ತಮಗೊಳಿಸುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಪ್ಲಮ್ ಹಣ್ಣನ್ನು ಮಗುವಿನ ಆರೋಗ್ಯದ ದೃಷ್ಟಿಯಿಂದ ಸೇವಿಸುವುದು ಅತ್ಯಂತ ಉತ್ತಮ.

ನೈಸರ್ಗಿಕವಾಗಿ ಮಲಬದ್ಧತೆಯನ್ನು ತೊಡೆದುಹಾಕುತ್ತದೆ
ಗರ್ಭಾವಸ್ಥೆಯಲ್ಲಿ, ಕರುಳು ನಿಧಾನವಾಗುತ್ತಿದೆ ಏಕೆಂದರೆ ಹೊಟ್ಟೆಯಲ್ಲಿ ಮಗು ಇರುವುದರಿಂದ ಅದು ಹೊಟ್ಟೆಯಲ್ಲಿ ಹೆಚ್ಚು ಸ್ಥಳವನ್ನು ಆಕ್ರಮಿಸುತ್ತದೆ, ಆದ್ದರಿಂದ ಕೆಲವೊಮ್ಮೆ ಮಲಬದ್ಧತೆಯನ್ನು ತಪ್ಪಿಸುವುದು ಕಷ್ಟ, ಏಕೆಂದರೆ ಕರುಳಿನ ಚಲನೆ ಈ ಸಮಯದಲ್ಲಿ ಸಾಮಾನ್ಯವಾಗಿರುವುದಿಲ್ಲ. ಪ್ಲಮ್ ಹಣ್ಣು ಫೈಬರ್ ನಿಂದ ಸಮೃದ್ಧವಾಗಿದೆ, ಇದು ತಾಯಂದಿರಿಗೆ ಮಲಬದ್ಧತೆಯನ್ನು ನೈಸರ್ಗಿಕವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ ಏಕೆಂದರೆ ಜೀರ್ಣಾಂಗವ್ಯೂಹದೊಳಗಿನ ಚಲನೆಯನ್ನು ಸಾಮಾನ್ಯಗೊಳಿಸಲು ಫೈಬರ್ ಸಹಾಯ ಮಾಡುತ್ತದೆ.

ಆಯಾಸ ಮತ್ತು ಒತ್ತಡಕ್ಕೆ ಪರಿಹಾರಗಳು
ಗರ್ಭಾವಸ್ಥೆಯಲ್ಲಿ ಆಯಾಸಕ್ಕೆ ಕಾರಣವಾಗುವ ಒತ್ತಡವನ್ನು ತಪ್ಪಿಸುವುದು ಕೆಲವೊಮ್ಮೆ ತುಂಬಾ ಕಷ್ಟ. ಹಾರ್ಮೋನ್ ಅಸಮತೋಲನ ಸೇರಿದಂತೆ ಗರ್ಭಾವಸ್ಥೆಯಲ್ಲಿ ಒತ್ತಡವನ್ನು ಉಂಟುಮಾಡುವ ಬಹಳಷ್ಟು ಅಂಶಗಳಿವೆ. ನಿಮಗೆ ಬೇಕಾಗಿರುವುದು ನಿಮಗೆ ಸಂತೋಷವನ್ನು ಉಂಟುಮಾಡುವ ಆಹಾರಗಳು. ಪ್ಲಮ್ ಹಣ್ಣು ಪೊಟ್ಯಾಶಿಯಂ ಮತ್ತು ಆಂಟಿಆಕ್ಸಿಡೆಂಟ್ ಅನ್ನು ಹೊಂದಿರುವುದರಿಂದ ಅದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಒತ್ತಡವನ್ನು ಅನುಭವಿಸುವ ಬದಲು ನೀವು ಹೆಚ್ಚು ಶಕ್ತಿಯುತವಾಗಿರುತ್ತೀರಿ!

ಗರ್ಭಾವಸ್ಥೆಯ ಮಧುಮೇಹವನ್ನು ತಡೆಯುತ್ತದೆ
ಅಕಾಲಿಕ ಜನನ ಮಾತ್ರವಲ್ಲದೆ, ಗರ್ಭಿಣಿ ತಾಯಂದಿರು ಎದುರಿಸಬೇಕಾದ ಇನ್ನೊಂದು ಭಯವೆಂದರೆ ಗರ್ಭಧಾರಣೆಯ ಸಮಯದ ಮಧುಮೇಹ. ಆದಾಗ್ಯೂ, ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಲು ಪ್ರತಿದಿನವೂ ಸೇವಿಸಲು ಶಿಫಾರಸು ಮಾಡಲಾದ ಹಣ್ಣುಗಳಲ್ಲಿ ಪ್ಲಮ್ ಹಣ್ಣು ಕೂಡ ಒಂದು. ಪ್ಲಮ್ ನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದೊಂದಿಗೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದು ಇದಕ್ಕೆ ಕಾರಣ.

ರಕ್ತದೊತ್ತಡವನ್ನು ಸಮರ್ಥವಾಗಿ ನಿಯಂತ್ರಿಸುತ್ತದೆ
ಗರ್ಭಾವಸ್ಥೆಯಲ್ಲಿ ರಕ್ತದೊತ್ತಡದ ಹೆಚ್ಚಳವು ತಾಯಿಗೆ ಮಾತ್ರವಲ್ಲ ಮಗುವಿಗೂ ಮಾರಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ, ನಿಮ್ಮ ರಕ್ತದೊತ್ತಡವನ್ನು ಈ ಸಮಯದಲ್ಲಿ ನಿಯಂತ್ರಿಸುವುದು ಅತ್ಯಂತ ಮುಖ್ಯವಾಗಿದೆ. ಪೊಟ್ಯಾಶಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ರಕ್ತದೊತ್ತಡವನ್ನು ನಿಯಂತ್ರಿಸುವ ಒಂದು ಸುಲಭ ಮಾರ್ಗವಾಗಿದೆ. ಅದೃಷ್ಟವಶಾತ್, ಕಡಿಮೆ ಸೋಡಿಯಂ ಹೊಂದಿರುವ ಪೊಟ್ಯಾಶಿಯಂನ ಉತ್ತಮ ಮೂಲವೆಂದರೆ ಪ್ಲಮ್ ಹಣ್ಣು. ಇದರ ಸೇವನೆ ರಕ್ತದೊತ್ತಡ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುತ್ತದೆ.

ಮೂಳೆಗಳಿಗೆ ಉತ್ತಮ
ಗರ್ಭಾವಸ್ಥೆಯಲ್ಲಿ, ನೀವು ಸೇವಿಸಿದ ಕ್ಯಾಲ್ಸಿಯಂ ಮಗುವಿನ ಬೆಳವಣಿಗೆಗೆ ಮಾತ್ರವಲ್ಲದೆ ತಾಯಿಯನ್ನು ಆರೋಗ್ಯವಾಗಿಡಲು ಸಹ ಅಗತ್ಯವಾಗಿರುತ್ತದೆ. ದೇಹದಲ್ಲಿನ ಕ್ಯಾಲ್ಸಿಯಂ ಪ್ರಮಾಣವು ಸಾಕಷ್ಟಿಲ್ಲದಿದ್ದರೆ, ಭ್ರೂಣದ ಬೆಳವಣಿಗೆಗೆ ಕ್ಯಾಲ್ಸಿಯಂನ ಅಗತ್ಯವನ್ನು ತಾಯಿಯ ಮೂಳೆಯಲ್ಲಿರುವ ಕ್ಯಾಲ್ಸಿಯಂ ಸಂಗ್ರಹದಿಂದ ತೆಗೆದುಕೊಳ್ಳಲಾಗುತ್ತದೆ. ಖಂಡಿತವಾಗಿಯೂ ಹೀಗೆ ಆಗಲು ಯಾರೂ ಬಯಸುವುದಿಲ್ಲ ಹಾಗಾಗಿ ಕ್ಯಾಲ್ಸಿಯಂ ಸಮೃದ್ಧವಾಗಿರುವ ಪ್ಲಮ್ ಅನ್ನು ಸೇವಿಸುವುದು ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ.

ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
ಉತ್ಕರ್ಷಣ ನಿರೋಧಕಗಳು (ಆಂಟಿಆಕ್ಸಿಂಡೆಂಟ್ಸ್) ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವುದರಿಂದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ಲಮ್ ಸೇವನೆ ಅದ್ಭುತ ವಿಷಯವಾಗಿದೆ. ಗರ್ಭಾವಸ್ಥೆಯಲ್ಲಿ ಬರುವ, ಸಾಮಾನ್ಯ ಜ್ವರವು ಮಗುವಿಗೆ ಮಾರಕವಾಗಬಹುದು, ಆದ್ದರಿಂದ ಗರ್ಭಾವಸ್ಥೆಯಲ್ಲಿ ಎಂದಿಗೂ ಅನಾರೋಗ್ಯಕ್ಕೆ ಒಳಗಾಗದಂತೆ ನೀವು ನಿಮ್ಮನ್ನು ನೋಡಿಕೊಳ್ಳಬೇಕು.
ಈ ಮೇಲಿನ ಎಲ್ಲಾ ಅತ್ಯುತ್ತಮ ಪ್ರಯೋಜನಗಳನ್ನು ಹೊಂದಿರುವ ಪ್ಲಮ್ ಹಣ್ಣು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಬಹಳ ಅಗತ್ಯವಾಗಿರುವುದರಿಂದ ಇದನ್ನು ಗರ್ಭಾವಸ್ಥೆಯಲ್ಲಿ ತಪ್ಪದೇ ಸೇವಿಸಿ.



Click it and Unblock the Notifications