For Quick Alerts
ALLOW NOTIFICATIONS  
For Daily Alerts

  ಪ್ರಗ್ನೆನ್ಸಿಯಲ್ಲಿ ಕಾಣಿಸುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವ ತಂತ್ರಗಳು

  By Sushma Charhra
  |

  ತಾಯ್ತನ ಎನ್ನುವುದು ಹಲವು ದೈಹಿಕ ಬದಲಾವಣೆಗಳಿಗೆ ಕಾರಣವಾಗುತ್ತೆ. ಅದರಲ್ಲಿ ಒಂದು ಈ ಮಲಬದ್ಧತೆ. ಇದನ್ನು ನಿಮ್ಮ ಹಾರ್ಮೋನುಗಳ ವ್ಯತ್ಯಾಸದಿಂದ ಆಗುತ್ತದೆ ಎಂದು ಭಾವಿಸಿ ಇಲ್ಲವೇ ನಿಮ್ಮ ಡಯಟ್ಟಿನ ವ್ಯತ್ಯಾಸದಿಂದಲೇ ಎಂದುಕೊಳ್ಳಿ, ಆದರೆ ಇದರ ವಿರುದ್ಧ ಸೆಣಸಾಡುವುದು ಪ್ರಗ್ನೆನ್ಸಿಯ ಒಂದು ಬಹುದೊಡ್ಡ ಸವಾಲು.

  ಆದರೆ, ಇದಕ್ಕೆ ಕೆಲವು ಸಾಕ್ಷ್ಯಾಧಾರಿತ ಔಷಧಿಗಳಿವೆ, ಈಗಾಗಲೇ ಹಲವು ಮಹಿಳೆಯರು ಅದನ್ನು ಬಳಸುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಅಥವಾ ಸ್ವಲ್ಪ ಮಟ್ಟಿಗೆ ಮಲಬದ್ಧತೆ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.

  Effective Home Remedies To Relieve Constipation During Pregnancy

  • ಪ್ರಗ್ನೆನ್ಸಿಯಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ

  • ಯಾಕೆ ತಾಯಿಯಾಗುವ ಮಹಿಳೆಯರಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ?

  • ಬಸುರಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸಲು ಇರುವ ಸರಳ ಮಾರ್ಗಗಳು

  ಪ್ರಗ್ನೆನ್ಸಿಯಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ

  ಕಿಬ್ಬೊಟ್ಟೆಯಲ್ಲಿ ನೋವು, ಕರುಳಿನಲ್ಲಿ ಏನೋ ಚಲಿಸಿದಂತ ಭಾವನೆ ಇವುಗಳು ಪ್ರಮುಖವಾಗಿ ಮಲಬದ್ಧತೆಯ ಲಕ್ಷಣಗಳಾಗಿದ್ದು, ಹೆಚ್ಚಿನ ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಕೊನೆಯ ಮೂರು ತಿಂಗಳಲ್ಲಿ ಹೊಟ್ಟೆ ಹೆಚ್ಚು ದಪ್ಪವಾಗಿರುವ ಸಂದರ್ಬದಲ್ಲಿ ಈ ಸಮಸ್ಯೆ ಎದುರಾಗುತ್ತದೆ.

  ನೀವು ಇದನ್ನು ಹಾರ್ಮೋನುಗಳ ವ್ಯತ್ಯಾಸವೆಂದು ಬೇಕಾದರೆ ಹೇಳಬಹುದು, ಪ್ರಸವಪೂರ್ವದಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಗಳಿಂದಾಗುವ ವ್ಯತ್ಯಾಸ, ಅಥವಾ ಹೊಟ್ಟೆಯ ಮೇಲೆ ಬೀಳುತ್ತಿರುವ ಅತಿಯಾದ ಒತ್ತಡ ಇವೆಲ್ಲ ಗುಣಲಕ್ಷಣಗಳಿಂದ ಸ್ವಲ್ಪ ಮಟ್ಟಿನ ಆರಾಮ ಪಡೆಯಲು ಕೆಲವು ಮಾರ್ಗಗಳಿವೆ. ಈ ಗುಣಲಕ್ಷಣಗಳು ನಿಮಗೆ ಡೆಲಿವರಿ ನಂತರವಷ್ಟೇ ಗುಣಮುಖವಾಗಲಿದ್ದು, ಕೆಲವು ಸರಳ ಔಷಧೋಪಾಯಗಳು ನಿಮಗೆ ಸ್ವಲ್ಪ ಮಟ್ಟಿನ ಆರಾಮ ನೀಡಲು ಮತ್ತು ಅದಕ್ಕೆ ಸಂಬಂಧಿಸಿದ ನಿಮ್ಮ ಚಿಂತೆಯನ್ನು ಕಡಿಮೆ ಮಾಡಲು ನೆರವು ಮಾಡಬಹುದು ಅಷ್ಟೇ..

  • ಯಾಕೆ ತಾಯಿಯಾಗುವ ಮಹಿಳೆಯರಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ?

  ದೇಹದ ಮಾಂಸಖಂಡಗಳು ಹೆಚ್ಚು ರಿಲ್ಯಾಕ್ಸ್ ಆಗಲು ಆರಂಭವಾಗುತ್ತದೆ ಯಾಕೆಂದರೆ ಗರ್ಭಿಣಿಯಾದಾಗ ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಜೆಸ್ಟ್ರಾನ್ ಹಾರ್ಮೋನು ಬಿಡುಗಡೆಗೊಳ್ಳುತ್ತದೆ. ಇದು ಕರುಳಿನ ಸ್ನಾಯುಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದೇ ಕಾರಣದಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮವಾಗುತ್ತೆ ಮತ್ತು ಅದು ನಿಧಾನಗತಿಯಲ್ಲಿ ಸಾಗಿ, ಮಲಬದ್ಧತೆಗೆ ಕಾರಣವಾಗುತ್ತೆ. ಗರ್ಭಿಣಿಯರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದು ಅಸಹಜವೇನಲ್ಲ, ಆಕ್ಟ್ ಅಬ್ಸ್ಟೆಟ್ರಿಶಿಯಾ ಮತ್ತು ಗೈನೆಕಾಲಜಿಕಾ ಸ್ಕ್ಯಾಂಡಿನೇವಿಕಾ ನೀಡಿರುವ ಮಾಹಿತಿಯ ಪ್ರಕಾರ ಶೇಕಡಾ 90 ರಷ್ಟು ಗರ್ಭಿಣಿ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಾರೆ ಮತ್ತು ಮಲಬದ್ಧತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

  ಜನರು ಹಲವಾರು ವರ್ಷಗಳಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ ಮತ್ತು ಮಾಡಿದ್ದಾರೆ, ನೈಸರ್ಗಿಕ ವಿಧಾನಗಳನ್ನೂ ಕೆಲವರು ಅನುಸರಿಸಿದ್ದಾರೆ. ಅಷ್ಟೇ ಅಲ್ಲ. ಕೆಲವು ಮಾತ್ರೆಗಳನ್ನು ಕೂಡ ಬಳಸಿದ್ದಾರೆ.

  ಆದರೆ, ಮಲಬದ್ಧತೆಯು ಗರ್ಭಿಣಿಯರಲ್ಲಿ ಕಾಣಿಸಿಕೊಂಡಾಗ, ಹಲವಾರು ಪರಿಹಾರಗಳನ್ನು ಪ್ರಯತ್ನಿಸಿದರೂ ಅದರಲ್ಲಿ ಪ್ರಯೋಜನಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ವರ್ತಿಸುವುದು ಕೆಲವು ಮಾತ್ರ. ಹಾಗಾದ್ರೆ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ- ಅದರ ಪರಿಹಾರ ಇವುಗಳ ಬಗ್ಗೆ ಇನ್ನಷ್ಟು ವಿವರ ಮುಂದೆ ಇದೆ.. ಓದಿ...

  ಬಸುರಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸಲು ಇರುವ ಸರಳ ಮಾರ್ಗಗಳು

  • ಫೈಬರ್ ಅಂಶ ಅಧಿಕವಾಗಿರುವ ಆಹಾರಗಳನ್ನು ಗರ್ಭಿಣಿ ಸ್ತ್ರೀಯರು ಸೇವಿಸಬೇಕು. ಇದರಿಂದಾಗಿ ಮಲಬದ್ಧತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿಕೊಳ್ಳಬಹುದು. ಇದು ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳನ್ನೂ ನೀಡುತ್ತದೆ. 25 ರಿಂದ 30 ಗ್ರಾಮ್ ನಷ್ಟು ಫೈಬರ್ ಅಂಶವನ್ನು ಪ್ರತಿನಿತ್ಯ ಗರ್ಭಿಣಿ ಸ್ತ್ರೀಯರು ಸೇವಿಸಬೇಕು.

  ತರಕಾರಿಗಳು, ತಾಜಾ ಹಣ್ಣುಗಳು, ಬೀನ್ಸ್ ಗಳು, ಹೊಟ್ಟು ಧಾನ್ಯಗಳು, ಅವರೆಕಾಳು, ಒಣದ್ರಾಕ್ಷಿ, ಧಾನ್ಯದ ಬ್ರೆಡ್, ಲೆಂಟಿಲ್ಸ್ ಗಳನ್ನು ನಿಮ್ಮ ಡಯಟ್ ನಲ್ಲಿರುವುದು ಸೂಕ್ತ. ಆಪಲ್, ಬಾಳೆಹಣ್ಣು, ರಸ್ಬೆರಿ, ಅಂಜೂರ, ಸ್ಟ್ರಾಬೆರಿ ಬಳಸಿ ಫ್ರೂಟ್ ಸಲಾಡ್ ಸೇವಿಸಿ. ಸ್ವೀಟ್ ಕಾರ್ನ್, ಕ್ಯಾರೆಟ್, ಮೊಳಕೆ ಕಾಳುಗಳನ್ನು ರೋಸ್ಟ್ ಮಾಡಿ ತಯಾರಿಸಿದ ಸೈಡ್ ಡಿಶ್ ಗಳನ್ನು ಕೂಡ ತಯಾರಿಸಿಕೊಳ್ಳಬಹುದು.

  • ಆದಷ್ಟು ನಿಮ್ಮನ್ನು ನೀವು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ. ನಾರ್ಮಲ್ ಗಿಂತ ಎರಡು ಪಟ್ಟು ಹೆಚ್ಚು ನೀರು ಸೇವಿಸಬೇಕಾಗುತ್ತದೆ . 8 ಗ್ಲಾಸ್ ನಷ್ಟು ನೀರನ್ನು ಪ್ರತಿದಿನ ಗರ್ಭಿಣಿ ಸ್ತ್ರೀಯರು ಸೇವಿಸಲೇ ಬೇಕು ಎಂದು ಹೇಳಲಾಗುತ್ತೆ.. ಇದರಿಂದಾಗಿ ನಿಮ್ಮ ಹೊಟ್ಟೆಯನ್ನು ಸಾಫ್ಟ್ ಮತ್ತು ಜೀರ್ಣಕ್ರಿಯೆಯ ಟ್ರ್ಯಾಕ್ ಸರಾಗವಾಗಿ ಇರಲು ಸಾಧ್ಯವಾಗುತ್ತೆ

  • ನೀವು ಪ್ರತಿದಿನ ತೆಗೆದುಕೊಳ್ಳುವ ಆಹಾರ ಒಟ್ಟು ಅಂಶವನ್ನು ಕಡಿಮೆಗೊಳಿಸಿ ಮತ್ತು ಸಣ್ಣಸಣ್ಣ ಮೀಲ್ ಗಳಾಗಿ ಆಗಾಗ ಸೇವಿಸಿ..ನೀವು ಪ್ರತಿದಿನ ಮೂರೇ ಮೂರು ದೊಡ್ಡ ಆಹಾರವನ್ನು ಸೇವಿಸುವುದಕ್ಕಿಂತ ಐದರಿಂದ ಆರು ಸಣ್ಣ ಸಣ್ಣ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳಬಹುದು.. ಇದು ನಿಮಗೆ ಮಲಬದ್ಧತೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲು ನೆರವು ನೀಡುತ್ತದೆ. ಹೀಗೆ ಮಾಡಿದರೆ ಅಂದರೆ ಸಣ್ಣಸಣ್ಣ ಪ್ರಮಾಣದಲ್ಲಿ ಆಹಾರ ತೆಗೆದುಕೊಂಡರೆ ನಿಮ್ಮ ಹೊಟ್ಟೆಯು ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕೂ ಸುಲಭವಾಗುತ್ತದೆ. ಅತಿಯಾಗಿ ಆಹಾರ ಸೇವಿಸುವುದರಿಂದಾಗಿ ನಿಮ್ಮ ಹೊಟ್ಟೆಗೆ ಅತಿಯಾಗಬಹುದು ಮತ್ತು ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಗೆ ನೀವು ತೆಗೆದುಕೊಂಡ ಆಹಾರವನ್ನು ಪ್ರೊಸೆಸ್ ಮಾಡಿ ಜೀರ್ಣಿಸುವುದು ಕಷ್ಟವಾಗಬಹುದು.

  • ಗರ್ಭಿಣಿ ಸ್ತ್ರೀಯರು ತಮ್ಮನ್ನು ತಾವು ದೈಹಿಕವಾಗಿ ಆಕ್ಟೀವ್ ಆಗಿರುವಂತೆ ನೋಡಿಕೊಳ್ಳಬೇಕು.. ಮಲಬದ್ಧತೆಯಿಂದ ಮುಕ್ತಿ ಪಡೆಯಲು ನಿಮ್ಮ ನ್ನು ನೀವು ಆದಷ್ಟು ದೈಹಿಕ ಚಟುವಟಿಗಳಲ್ಲಿ ಸಕ್ರಿಯರಾಗಿರುವಂತೆ ನೋಡಿಕೊಳ್ಳುವುದು ಉತ್ತಮವಾದ ಮಾರ್ಗವಾಗಿದೆ.. ನಿಮ್ಮ ಮೂತ್ರಕೋಶವನ್ನು ಸಣ್ಣ ಪ್ರಮಾಣದ ವ್ಯಾಯಾಮವು ಸ್ಟಿಮುಲೇಟ್ ಮಾಡಿ ಮಲವಿಸರ್ಜನೆಗೆ ನೆರವು ನೀಡುತ್ತದೆ.. ಗರ್ಭಿಣಿ ಸ್ತ್ರೀಯರು (ಒಂದು ವೇಳೆ ಅವರ ಆರೋಗ್ಯ ಸಹಕರಿಸಿದರೆ) ಪ್ರತಿದಿನ ವ್ಯಾಯಾಮ ಮಾಡಬೇಕು - ವಾರಕ್ಕೆ ಮೂರು ದಿನವಾದರೂ ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡುವುದು ಬಹಳ ಒಳ್ಳೆಯದು.

  ಪ್ರಗ್ನೆನ್ಸಿಯಲ್ಲಿ ಪ್ರಗ್ನೆನ್ಸಿಗೆ ಸಂಬಂಧಿಸಿದ ಯೋಗದ ಅಭ್ಯಾಸ ಮಾಡಿಕೊಂಡು ದೈಹಿಕವಾಗಿ ಆಕ್ಟೀವ್ ಆಗಿರುವಂತೆ ನೋಡಿಕೊಳ್ಳುವುದನ್ನು ಹೆಚ್ಚಿನ ಗರ್ಭಿಣಿ ಸ್ತ್ರೀಯರು ರೂಢಿಸಿಕೊಳ್ಳಬೇಕಾಗಿರುವ ಪ್ರಮುಖ ಅಂಶ. ಪ್ರತಿದಿನ ನೀವು ಬಹಳಷ್ಟು ನಡೆಯುವುದು ಸೂಕ್ತವಾದದ್ದು.. ಯಾವೆಲ್ಲ ವ್ಯಾಯಾಮಗಳನ್ನು ಪ್ರಗ್ನೆನ್ಸಿಯಲ್ಲಿ ಮಾಡುವುದು ಸೇಫ್ ಎಂಬ ಬಗ್ಗೆ ನೀವು ನಿಮ್ಮ ವೈದ್ಯಯರ ಬಳಿ ಸಲಹೆ ಪಡೆದು ತೆಗೆದುಕೊಳ್ಳಬಹುದು( ಪ್ರಮುಖವಾಗಿ ನೀವು ವ್ಯಾಯಾಮದ ಭಂಗಿಗಳಿಗೆ ಹೊಸಬ್ಬರಾಗಿದ್ದರೆ)

  • ಕೆಲವು ಸಾಮಾನ್ಯ ಮದ್ದುಗಳನ್ನು ಪ್ರಯತ್ನಿಸುತ್ತಲೇ ಇದ್ದು, ಈಗಲೂ ನೀವು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿದ್ದೀರಾದರೆ, ನೀವು ನಿಮ್ಮ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಒಂದು ವೇಳೆ ನೀವು ಅತಿಯಾಗಿ ಮಲಬದ್ಧತೆ ಎದುರಿಸುತ್ತಿದ್ದರೆ, ನಿಮ್ಮ ವೈದ್ಯರು ನಿಮಗೆ ಸ್ಟೋಲ್ ಸಾಫ್ಟನರ್ ಎಂಬುದನ್ನು ಸದ್ಯದ ಮಟ್ಟಿನ ಪರಿಹಾರವಾಗಿ ನೀಡಬಹುದು. ಸ್ಟೋಲ್ ಸಾಫ್ಟನರ್ ನ್ನು ಬಹಳ ದಿನ ಬಳಕೆ ಮಾಡಬಾರದು, ಯಾಕೆಂದರೆ ಇದು ಡಿಹೈಡ್ರೇಷನ್ ನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಮತ್ತು ದೇಹದ ಎಲೆಕ್ಟ್ರೋಲೈಟ್ ನ ಸಮತೋಲವನ್ನು ಇದು ಬದಲಾಯಿಸಿ ಬಿಡುತ್ತದೆ.

  ಸ್ಟೋಲ್ ಸಾಫ್ಟರ್ ನಿಮ್ಮ ಮೂತ್ರಪಿಂಡವನ್ನು ಸ್ವಚ್ಛಗೊಳಿಸುವುದಕ್ಕಾಗಿ ಡಿಸೈನ್ ಮಾಡಲಾಗಿದ್ದು, ಸುಲಭದಲ್ಲಿ ಮಲವು ಹೊರಹೋಗಲು ನೆರವು ಮಾಡುವ ಒಂದು ಸಾಧನವಾಗಿರುತ್ತದೆ.ಇವುಗಳು ಕೈಗಳಿಂದಲೇ ಬಳಸುವಂತಿರುತ್ತದೆ, ನಿಜ ಹೇಳಬೇಕು ಎಂದರೆ ಪ್ರಗ್ನೆನ್ಸಿಯಲ್ಲಿ ತೆಗೆದುಕೊಳ್ಳುವ ಹೆಚ್ಚಿನ ಸಪ್ಲಿಮೆಂಟ್ಸ್ ಗಳು ( ಉದಾಹರಣೆಗೆ ಕಬ್ಬಿಣಾಂಶ) ಇವುಗಳೇ ಗರ್ಭಿಣಿ ಸ್ತ್ರೀಯರಲ್ಲಿ ಮಲಬದ್ಧತೆಗೆ ಕಾರಣವಾಗುವ ಪ್ರಮುಖ ಅಂಶವಾಗಿರುತ್ತದೆ.ಆದರೆ, ಸ್ಟೋಲ್ ಸಾಫ್ಟನರ್ ಗಳ ಬಳಕೆಯನ್ನು ನಿಮ್ಮ ವೈದ್ಯರಿಗೆ ತಿಳಿಯದಂತೆ ಯಾವುದೇ ಕಾರಣಕ್ಕೂ ಮಾಡಬೇಡಿ.ಒಂದು ವೇಳೆ ನಿಮ್ಮ ವೈದ್ಯರು ಇದಕ್ಕೆ ಸಲಹೆ ನೀಡಿದರೆ ಮಾತ್ರ ಬಳಕೆ ಮಾಡುವುದು ಸರಿ, ಯಾಕೆಂದರೆ ಎಲ್ಲಾ ಔಷಧಗಳು ಪ್ರಗ್ನೆನ್ಸಿಯಲ್ಲಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂಬುದು ನೆನಪಿರಲಿ.

  ಮಲಬದ್ಧೆತೆಯು ಗರ್ಭಿಣಿಯಲ್ಲಿ ಸಾಮಾನ್ಯ ಸಮಸ್ಯೆ ಮತ್ತು ಕೆಟ್ಟ ಅನುಭವ ಕೊಡುವ ಸಮಸ್ಯೆ ಕೂಡ ಹೌದು. ಇದು ಡೆಲವರಿ ನಂತರ ಸಂಪೂರ್ಣ ಗುಣಮುಖವಾಗುತ್ತೆ. ಹಾಗಾಗಿ ಪ್ರಗ್ನೆನ್ಸಿಯಲ್ಲಿ ನೀವಿದನ್ನು ನೈಸರ್ಗಿಕ ವಿಧಾನಗಳಿಂದಲೇ ಡೀಲ್ ಮಾಡಬೇಕಾಗುತ್ತದೆ.ಹಾಗಾಗಿ ಆದಷ್ಟು ಗಟ್ಟಿಯಾಗಿರಿ, ಮಾನಸಿಕವಾಗಿ ಸದೃಢರಾಗಿರಿ ಯಾಕೆಂದರೆ ಇದೊಂದು ನಿಮ್ಮ ಜೀವನದ ಕಷ್ಟದ ದಿನಗಳು ಎಂದು ನಿಮಗೆ ಅನ್ನಿಸುತ್ತಿದ್ದರೂ ಕೂಡ ಮುಂದೆ ಅಧ್ಬುತ ಅನುಭವವೊಂದು ನಿಮ್ಮ ಎದುರಾಗಲಿದೆ. ಮೇಲೆ ತಿಳಿಸಿದ ರೆಮಿಡಿಗಳನ್ನು ಬಳಸಿ ಆದಷ್ಟು ಮಟ್ಟಿಗೆ ರಿಲ್ಯಾಕ್ಸ್ ಆಗಲು ಪ್ರಯತ್ನಿಸಿ.. ಆಲ್ ದಿ ಬೆಸ್ಟ್ ಫಾರ್ ಯುವರ್ ಡೆಲಿವರಿ...

  English summary

  Ways To Cure Constipation Problem During Pregnancy

  Pregnancy brings along a lot of physical ailments. One of them being constipation. Blame it on the hormones or your dietary structure, dealing with constipation during pregnancy is a tough job. However, there are certain full-proof remedies that ladies have been using to get rid of or at least to slightly reduce the issues associated with constipation.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more