For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ 'ಮಧುಮೇಹ' ಸಮಸ್ಯೆ ಇದ್ದರೆ-ಪಥ್ಯಾಹಾರ ಹೀಗಿರಲಿ

By Hemanth
|

ಗರ್ಭಧಾರಣೆ ವೇಳೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಆರೋಗ್ಯ ಕ್ರಮದ ಬಗ್ಗೆ ಚಿಂತೆಯಾವುದು. ದೇಹದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳಿಂದಾಗಿ ಬಾಯಿಯ ರುಚಿಯು ಬದಲಾಗಿ ಕೆಲವೊಂದು ಆಹಾರಗಳು ಪಥ್ಯವಾಗದೆ ಇರಬಹುದು. ಇನ್ನು ಕೆಲವು ನಿಮಗೆ ಇಷ್ಟವಾಗಿದ್ದರೂ ಇದನ್ನು ತಿನ್ನಲು ಸಾಧ್ಯವಾಗದೆ ಇರಬಹುದು. ಗರ್ಭಧಾರಣೆಯೆಂದರೆ ನೀವು ಇಬ್ಬರಿಗಾಗಿ ಊಟ ಮಾಡುತ್ತಿದ್ದೀರಿ ಎಂದರ್ಥ. ಇದರಿಂದ ಯಾವಾಗಲೂ ಆರೋಗ್ಯಕರವಾಗಿರುವುದನ್ನು ಸೇವಿಸಬೇಕು.

ನೀವು ಆರೋಗ್ಯವಾಗಿದ್ದರೂ ಆಹಾರ ಸೇವನೆ ಬಗ್ಗೆ ತುಂಬಾ ಚಿಂತೆಯಾಗಿದ್ದರೆ ಮಧುಮೇಹ ಹೊಂದಿರುವಂತಹ ಗರ್ಭಿಣಿಯರು ಏನು ಮಾಡಬೇಕು? ಮಧುಮೇಹ ಹೊಂದಿರುವಂತಹ ಗರ್ಭಿಣಿಯರು ಈ ಸಮಯದಲ್ಲಿ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿದೆ. ಇದರಿಂದ ಮಧುಮೇಹ ಹೊಂದಿರುವ ಗರ್ಭಿಣಿಯರಿಗೆ ತುಂಬಾ ಕ್ರಮಬದ್ಧವಾಗಿ ಆಹಾರವನ್ನು ನೀಡಬೇಕು. ಕೆಲವು ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಮಧುಮೇಹ ಕಾಣಿಸಿಕೊಳ್ಳುವುದು. ಇದು ಗರ್ಭಧಾರಣೆ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದು. ನಿಮಗೆ ಮಧುಮೇಹ ಇದ್ದರೂ ಅಥವಾ ಗರ್ಭಧಾರಣೆ ವೇಳೆ ಮಧುಮೇಹ ಬಂದರೂ ನೀವು ಸೇವಿಸುವಂತಹ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕು.

ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವಂತಹ ಮಧುಮೇಹಕ್ಕೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ಸಾಮಾನ್ಯ ಗರ್ಭಿಣಿಯರಿಗಿಂತ ಮಧುಮೇಹ ಇರುವಂತಹ ಗರ್ಭಿಣಿಯರಿಗೆ ನೀಡುವಂತಹ ಆಹಾರವು ಭಿನ್ನವಾಗಿರುವುದು. ಇದರಿಂದ ಮಧುಮೇಹಿ ಗರ್ಭಿಣಿಯರಿಗೆ ವಿಶೇಷವಾಗಿ ಆಹಾರವನ್ನು ತಯಾರಿಸಲಾಗುತ್ತದೆ. ನೀವು ಸ್ತ್ರೀರೋಗ ತಜ್ಞರೊಂದಿಗೆ ಇದರ ಬಗ್ಗೆ ಮಾತನಾಡಬೇಕು. ಮಧುಮೇಹ ಹೊಂದಿರುವಂತಹ ಗರ್ಭಿಣಿಯರು ಮತ್ತು ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಮಧುಮೇಹಿಗಳಿಗೆ ಕೆಲವೊಂದು ಆಹಾರಗಳನ್ನು ಈ ಲೇಖನದಲ್ಲಿ ಸೂಚಿಸಲಾಗಿದೆ.

1. ಕಲ್ಲಂಗಡಿ

1. ಕಲ್ಲಂಗಡಿ

ಕಲ್ಲಂಗಡಿ ಹಣ್ಣು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಕಲ್ಲಂಗಡಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿದೆ. ಆದರೆ ಇದರಲ್ಲಿ ಗ್ಲೈಸೆಮಿಕ್ ಕಡಿಮೆ ಇದೆ. ಕಲ್ಲಂಗಡಿಯು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಕಲ್ಲಂಗಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಇದ್ದರೂ ಉಳಿದಂತೆ ಹಲವಾರು ಪೋಷಕಾಂಶಗಳೂ ಇವೆ. ಪ್ರಮುಖವಾಗಿ ವಿಟಮಿನ್ ಎ ಮತ್ತು ಸಿ. ಈ ಪೋಷಕಾಂಶಗಳು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಮಗುವಿನ ಪೋಷಣೆಗೂ ನೆರವಾಗುತ್ತದೆ. ಗರ್ಭಾವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇದರಲ್ಲಿ ಎದೆಯುರಿ ಅಥವಾ ಹೊಟ್ಟೆಯಲ್ಲಿ ಉರಿಯೂ ಒಂದು. ಹೀಗೆ ಉರಿ ಕಾಣಿಸಿಕೊಂಡಾಗ ಗಾಬರಿಯಾಗದೇ ತಕ್ಷಣವೇ ಒಂದು ಕಪ್‌ನಷ್ಟು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ತಿಂದರೆ ಸಾಕಾಗುತ್ತದೆ.

2. ಗೆಣಸು

2. ಗೆಣಸು

ಗರ್ಭಿಣಿಯರಿಗೆ ಹೆಚ್ಚಿನ ಶಕ್ತಿಬೇಕಾಗುತ್ತದೆ. ಇದರಿಂದ ಪಿಷ್ಠ ಕಾರ್ಬ್ ಹೊಂದಿರುವ ಅನ್ನ ಸೇವನೆ ಮಾಡಬೇಕು. ನೀವು ಇದೇ ಒಂದು ಒಂದು ಭಾಗ ಬಟಾಟೆ ಮತ್ತು ಅರ್ಧ ಭಾಗ ಗೆಣಸು ಸೇವಿಸಬಹುದು. ಇನ್ನು ಗೆಣಸಿನಲ್ಲಿ ಪ್ರಮುಖವಾಗಿ ಪಿಷ್ಟದ ಪ್ರಮಾಣ ಹೆಚ್ಚಿದ್ದರೂ ಇವು ಜೀರ್ಣಗೊಂಡಾಗ ಸರಳ ಸಕ್ಕರೆಗಳಾಗಿ ವಿಂಗಡನೆಗೊಳ್ಳುತ್ತವೆ. ಈ ಸಕ್ಕರೆಗಳನ್ನು ಹೀರಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಹಾಗೂ ಈ ಸಕ್ಕರೆ ರಕ್ತದಲ್ಲಿನ ಒಟ್ಟಾರೆ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುವ ಕಾರಣ ಮಧುಮೇಹಿಗಳಿಗೂ ಗೆಣಸು ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಮೊದಲಾದವುಗಳ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಬೀಟ್ಯಾ ಕ್ಯಾರೋಟೀನ್ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ನಿಯಮಿತ ಸೇವನೆಯಿಂದ ಕಣ್ಣಿನ ಆರೋಗ್ಯ, ಉಸಿರಾಟದ ವ್ಯವಸ್ಥೆ ಹಾಗೂ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

3. ಇಡೀ ಸಿರೇಲ್

3. ಇಡೀ ಸಿರೇಲ್

ಇಡೀ ಸಿರೇಲ್ ಗಳಾಗಿರುವ ಮುಸ್ಲಿ, ಓಟ್ಸ್, ಮಿಲ್ಲೆಟ್ ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ನಿಮಗೆ ಬೇಕಿರುವ ಕಾರ್ಬ್ರೋಹೈಡ್ರೇಟ್ಸ್ ಇದರಿಂದ ಸಿಗುವುದು ಮತ್ತು ಮಲಬದ್ಧತೆಯನ್ನು ದೂರವಿರಿಸಬಹುದು.

4. ತೆಳು ಮಾಂಸ

4. ತೆಳು ಮಾಂಸ

ಕೋಳಿ ಅಥವಾ ತೆಳುವಾಗಿ ಕತ್ತರಿಸಿಕೊಂಡಿರುವ ಕೆಂಪು ಮಾಂಸವು ಗರ್ಭಿಣಿಯರಿಗೆ ಬೇಕಾಗಿರುವಂತಹ ಕಬ್ಬಿಣ ಮತ್ತು ಪ್ರೋಟೀನ್ ನೀಡುವುದು. ಆದರೆ ಇದಕ್ಕೆ ಸಿಹಿ ಸಾಸ್ ಹಾಕಬೇಡಿ.

5. ಸಿಟ್ರಸ್ ಹಣ್ಣುಗಳು

5. ಸಿಟ್ರಸ್ ಹಣ್ಣುಗಳು

ಮಧುಮೇಹಿಗಳು ಯಾವತ್ತೂ ಜ್ಯೂಸ್ ಕುಡಿಯಬಾರದು. ಇವರು ಹಣ್ಣುಗಳನ್ನು ತಿಂದರೆ ಒಳ್ಳೆಯದು. ಕಿತ್ತಳೆ, ಸಿಹಿ ಲಿಂಬೆ ಮತ್ತು ಬೆರ್ರಿಗಳು ಒಳ್ಳೆಯದು. ಆದರೆ ದಿನಕ್ಕೆ ಒಂದು ಹಣ್ಣು ಮಾತ್ರ ತಿನ್ನಿ.

6. ಸೇಬು

6. ಸೇಬು

ಸಾಮಾನ್ಯವಾಗಿ ಉತ್ತರ ಭಾರತದ, ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುವ ಸೇಬುಹಣ್ಣು ಹಿಂದೆ ದುಬಾರಿಯಾಗಿದ್ದ ಕಾರಣ ಶ್ರೀಮಂತರೇ ಹೆಚ್ಚಾಗಿ ಖರೀದಿಸುತ್ತಿದ್ದರು. ಆದರೆ ಇಂದು ಸೇಬುಹಣ್ಣು ವರ್ಷದ ಬಹುತೇಕ ದಿನಗಳಲ್ಲಿ ಜನಸಾಮಾನ್ಯರಿಗೆ ಎಟಕುವಂತ ಬೆಲೆಯಲ್ಲಿ ದೊರಕುತ್ತಿದೆ. ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿರುವ ಕಾರಣ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ಭಾಗ್ಯ ಕರುಣಿಸುವ ಹಣ್ಣಾಗಿದೆ. ಇನ್ನು ಗರ್ಭಿಣಿಯರು ಯಾವತ್ತೂ ಸೇಬು ಸೇವನೆ ಮಾಡುವುದನ್ನು ಕಡೆಗಣಿಸಲೇಬಾರದು. ಮಧುಮೇಹ ಹೊಂದಿರುವ ಗರ್ಭಿಣಿಯರು ದಿನಕ್ಕೆ ಒಂದು ಹಸಿರು ಸೇಬು ಅಥವಾ ½ ಕೆಂಪು ಸೇಬು ತಿನ್ನಬಹುದು.

7. ಕಡಿಮೆ ಕೊಬ್ಬು ಇರುವ ಮೊಸರು

7. ಕಡಿಮೆ ಕೊಬ್ಬು ಇರುವ ಮೊಸರು

ಮಧುಮೇಹಿಗಳು ಕೆನೆಯಿರುವ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಕಡಿಮೆ ಕೊಬ್ಬು ಇರುವಂತಹ ಮೊಸರನ್ನು ಸೇವನೆ ಮಾಡಿದರೆ ಇದು ಹೊಟ್ಟೆಗೆ ಒಳ್ಳೆಯದು ಮತ್ತು ದೇಹಕ್ಕೆ ಕ್ಯಾಲ್ಸಿಯಂ ಸಿಗುವುದು

8. ಹಸಿರೆಲೆ ತರಕಾರಿಗಳು

8. ಹಸಿರೆಲೆ ತರಕಾರಿಗಳು

ಸಾತ್ವಿಕ ಆಹಾರವೆಂದು ಕರೆಯಲಾಗುವ ತರಕಾರಿಗಳು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಾಗಿದ್ದಾರೆ ಎಂದರೆ ತಪ್ಪಾಗಲಾರದು. ತರಕಾರಿ ಹಾಗೂ ಹಸಿರೆಲೆ ತರಕಾರಿಗಳಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಹಾಗೂ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಂಸಾಹಾರದಲ್ಲಿ ಹೆಚ್ಚಿನ ಕೊಬ್ಬು ಇರುವ ಕಾರಣದಿಂದಾಗಿ ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳು ಬರುತ್ತದೆ. ಕೆಲವೊಂದು ತರಕಾರಿಗಳನ್ನು ಬೇಯಿಸಿ ತಿಂದರೆ ಇನ್ನು ಕೆಲವು ತರಕಾರಿಗಳನ್ನು ಸಲಾಡ್ ರೂಪದಲ್ಲಿಯೂ ಸೇವನೆ ಮಾಡಲಾಗುತ್ತದೆ. ಆದರೆ ಬೇಯಿಸಿ ತಿನ್ನುವಾಗ ತರಕಾರಿಗಳಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಷ್ಟವಾಗುವುದು. ಮಧುಮೇಹ ಹೊಂದಿದ್ದರೂ ಹಸಿರೆಲೆ ತರಕಾರಿಗಳ ಸೇವನೆ ಮಾಡುವುದರಿಂದ ಬರುವಂತಹ ಆರೋಗ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಸಲೆ, ಬ್ರಾಕೋಲಿ ಮತ್ತು ಲೆಟಸ್ ಸೇವಿಸಿ.

9. ಮೊಟ್ಟೆ

9. ಮೊಟ್ಟೆ

ಗರ್ಭಿಣಿ ಮಹಿಳೆಯು ದಿನಕ್ಕೆ ಎರಡು ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು. ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇಲ್ಲದೆ ಇರುವ ಕಾರಣದಿಂದಾಗಿ ಇದನ್ನು ಸೇವಿಸಬಹುದು. ಆದರೆ ಹೆಚ್ಚಾಗಿ ಕರಿದರೆ ನಿಮ್ಮ ಕ್ಯಾಲರಿ ಜಾಸ್ತಿಯಾಗಬಹುದು.

10. ಸೋಯಾ

10. ಸೋಯಾ

ಮಧುಮೇಹಿಗಳಿಗೆ ಸೋಯಾವು ಒಳ್ಳೆಯ ಪ್ರೋಟೀನ್ ಒದಗಿಸುವುದು. ನೀವು ಸಸ್ಯಹಾರಿಯಾಗಿದ್ದರೆ ಆಗ ನೀವು ಮಾಂಸ ಮತ್ತು ಮೀನಿನ ಬದಲು ಸೋಯಾ ಸೇವಿಸಬಹುದು.

English summary

Top 10 Pregnancy Foods For Diabetics

Most women are concerned about their diet during pregnancy. A lot has to change in your food habits during pregnancy. You are technically eating for ‘two' and you need to adapt your food habits accordingly. If you are healthy and still going crazy managing your pregnancy diet, imagine the plight of expectant mother who is diabetic! The right pregnancy food for diabetics is very important to keep their gestational period risk-free.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more