For Quick Alerts
ALLOW NOTIFICATIONS  
For Daily Alerts

ಹೊಟ್ಟೆಯಲ್ಲಿನ ನಿಮ್ಮ ಮಗುವಿನ ಚಲನೆಯ ಬಗ್ಗೆ ತಿಳಿದಿರಬೇಕಾಗಿರುವ ಸಂಗತಿಗಳು

By Sushma Charhra
|

ನೀವು ಗರ್ಭವತಿಯಾಗಿದ್ದೀರಿ ಎಂಬುದೊಂದು ನಿಮಗೂ ನಿಮ್ಮ ಕುಟುಂಬಕ್ಕೂ ಬಹಳ ಖುಷಿಯ ವಿಚಾರವಾಗಿರುತ್ತದೆ. ಹೆಣ್ಣೊಬ್ಬಳು ಮತ್ತೊಂದು ಜೀವಕ್ಕೆ ಜೀವ ತುಂಬುವ ಸುಮಧುರ ಕ್ಷಣಗಳವು. ಇದನ್ನು ನೀವು ವೈದ್ಯರ ಬಳಿ ಪರೀಕ್ಷಿಸಿಕೊಂಡೋ ಅಥವಾ ಮನೆಯಲ್ಲೇ ಪರೀಕ್ಷೆ ಮಾಡಿಕೊಂಡೋ ತಿಳಿದ ಮರುಕ್ಷಣ ಆಗುವ ಸಂತೋಷಕ್ಕೆ ಪರಿವೆಯೇ ಇಲ್ಲ.

ಬೆಳಗಿನ ಹೊತ್ತು ಕಾಣಿಸಿಕೊಳ್ಳುವ ಕೆಲವು ಸಮಸ್ಯೆಗಳು ಮತ್ತು ಸಹಿಸಬಹುದಾದ, ಸಹಿಸಲು ಅಸಾಧ್ಯವಾಗುವ ಕೆಲವು ಚಿಹ್ನೆಗಳು ಗರ್ಭಿಣಿ ಎಂದು ತಿಳಿದ ಕೂಡಲೇ ಪ್ರಾರಂಭವಾಗುತ್ತದೆ. ಆದರೆ ಯಾವಾಗ ಮಗುವು ನಿಮ್ಮನ್ನು ಒದೆಯಲು ಶುರು ಮಾಡುತ್ತದೆಯೋ ಆಗ, ನಿಮ್ಮ ಜೀವದೊಳಗಿನ ಜೀವಕ್ಕೆ ಬಲ ಬಂದಿದೆ ಎಂಬ ಭಾವನೆ ನಿಮ್ಮನ್ನು ಆವರಿಸುತ್ತದೆ ಮತ್ತು ಚಲನೆಯ ಅನುಭವವು ಗರ್ಭವತಿಗೆ ಬಹಳ ಖುಷಿಯನ್ನು ನೀಡುತ್ತದೆ.

why do babies kick in the womb at night

ಮೊದಲ ಕಿಕ್ ಒಂದು ರೀತಿಯ ಚಿಟ್ಟೆ ಹಾರಿದಂತ ಅನುಭವವು ನಿಮ್ಮ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಆಗುತ್ತದೆಯಷ್ಟೇ... ಅದೊಂದು ರೀತಿ ಮೃದುವಾದ ಚಲನೆ ಅಷ್ಟೇ. ಅದನ್ನು ಕ್ವಿಕನಿಂಗ್ ಎಂದು ಕರೆಯಲಾಗುತ್ತದೆ. ಕ್ವಿಕನಿಂಗ್ ನ ಚಿಹ್ನೆಯು ಮಗುವು ಆರೋಗ್ಯವಾಗಿ ಮತ್ತು ನಿಮ್ಮೊಳಗೆ ಬೆಳೆಯುತ್ತಿದೆ ಎಂಬುದರ ಸಂಕೇತವಾಗಿರುತ್ತದೆ.

ನೀವು ನಿಮ್ಮ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಅನುಭವಿಸುವ ಪ್ರತಿ ಚಲನೆಯು ಕೂಡ ಮಗುವಿನ ಒದೆತ ಆಗಿರುತ್ತದೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಹೊಟ್ಟೆಯಲ್ಲಿ ಬಹಳಷ್ಟು ಜಾಗ ಲಭ್ಯವಿದ್ದರೆ, ನಿಮ್ಮ ಮಗು ಹೊಟ್ಟೆಯೊಳಗೆ ಸಾಕಷ್ಟು ಸುತ್ತಾಡುತ್ತದೆ ಮತ್ತು ತನ್ನ ಕಾಲು, ಕೈ ಮತ್ತು ತಲೆಯ ಸಹಾಯದಿಂದ ಆಚೀಚೆ ತಿರುಗಾಡುತ್ತಲೇ ಇರುತ್ತದೆ.

ನೀವು ನಿಮ್ಮ ಮಗು ಬಿಕ್ಕಳಿಸುವುದುನ್ನು ಕೂಡ ಹೊಟ್ಟೆಯೊಳಗೆ ಗಮನಿಸಬಹುದು. ಅಷ್ಟೇ ಅಲ್ಲ, ಆರಾಮದಾಯವಾಗಿ ಮಲಗುವುದು ಕೂಡ ನಡೆಯುತ್ತದೆ. ಆದರೆ ಯಾಕೆ ಮಕ್ಕಳು ಹೀಗೆ ಹೊಟ್ಟೆಯೊಳಗಿದ್ದಾಗ ಒದೆಯುತ್ತವೆ, ಮತ್ತು ಮಗುವಿನ ಚಲನೆಯ ಬಗ್ಗೆ ಗರ್ಭಿಣಿಯರು ತಿಳಿದಿರಬೇಕಾದ ಅಂಶಗಳು ಯಾವುದು? ಕಿಬ್ಬೊಟ್ಟೆಯಲ್ಲಿ ನಡೆಯುವ ಈ ಪ್ರಕ್ರಿಯೆಯು ತಾಯಿಗೆ ಮಹದಾನಂದ ನೀಡುತ್ತದೆ ನಿಜ. ಆದರೆ ಇದರ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದಾಗ ಇನ್ನಷ್ಟು ಆರೋಗ್ಯಯುತವಾಗಿ ಇರಲು ಸಾಧ್ಯವಾಗುತ್ತದೆ. ಹಾಗಾಗಿ ಇವತ್ತಿನ ಈ ಲೇಖನವು ಗರ್ಭಿಣಿಯರಲ್ಲಿನ ಮಗುವಿನ ಚಲನೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.ನಿಮಗೂ ಅದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.

• ಯಾವಾಗ ನೀವು ನಿಮ್ಮ ಮಗು ಒದೆಯುವ ಅನುಭವವನ್ನು ಪಡೆಯುತ್ತೀರಿ?

ಗರ್ಭಿಣಿಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದರೆ ಆಕೆ 14 ನ್ ವಾರದಲ್ಲಿಯೇ ಮಗುವಿನ ಒದೆಯುವ ಅನುಭವವನ್ನು ಪಡೆಯುತ್ತಾರೆ. ಮೊದಲ ಬಾರಿ ತಾಯಿಯಾಗುತ್ತಿರುವವರು, 14 ನೇ ವಾರದ ನಂತರದ ದಿನಗಳಲ್ಲಿ ಈ ಅನುಭವವನ್ನು ಪಡೆಯಲು ಪ್ರಾರಂಭಿಸುತ್ತಾರೆ. ಇದು 23 ನೇ ವಾರದಿಂದ 24 ನೇ ವಾರವೂ ಆಗಿರಬಹುದು. ಒಂದು ವೇಳೆ ನಿಮ್ಮ ಮಗು ಚಲಿಸುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಆವರಿಸಿದರೆ, ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಅಲ್ಟ್ರಾಸೌಂಡ್ ಸ್ಕ್ರಾನಿಂಗ್ ಮಾಡಿಸಿ ಯಾವುದೇ ತಪ್ಪಾಗಿಲ್ಲ ಮಗು ಆರೋಗ್ಯವಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

• ಯಾಕೆ ನಿಮ್ಮ ಮಗು ಒದೆಯುತ್ತದೆ?

ನಿಮ್ಮ ಮಗು ನಿಮ್ಮ ಗರ್ಭದೊಳಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದು ಚಲಿಸುತ್ತದೆ,ಪರಿಶೋಧಿಸುತ್ತದೆ ಮತ್ತು ಕಲಿಯುತ್ತದೆ ಕೂಡ. ನಿಮ್ಮ ಮಗುವಿನ ಚಲನೆಯು ಸುತ್ತಮುತ್ತಲಿನ ಪರಿಚರಕ್ಕೆ ನೀಡುವ ಪ್ರತಿಕ್ರಿಯೆ ಮತ್ತು ನಿಮಗೆ ನೀಡುವ ಪ್ರತಿಕ್ರೆಯೆಯಾಗಿರುತ್ತದೆ. ಶಬ್ದ, ಬೆಳಕು, ಹವಾಮಾನ ಮತ್ತು ಆಹಾರದ ರುಚಿಗೆ ಕೂಡ ಮಗು ಪ್ರತಿಕ್ರಿಯೆ ನೀಡುತ್ತದೆ.
ನೀವು ಹೆಚ್ಚು ಒತ್ತಡದಲ್ಲಿದ್ದಾಗ ಅಥವಾ ಕಿರಿಕಿರಿ ಅನುಭವಿಸುತ್ತಿದ್ದಾಗ ನಿಮ್ಮ ಮಗು ಹೆಚ್ಚು ಚಲಿಸಬಹುದು ಅದೇ ನೀವು ಧ್ಯಾನ ಮಾಡುತ್ತಿದ್ದರೆ ಶಾಂತವಾಗಿದ್ದರೆ ಮಗುವಿನ ಚಲನೆ ಕಡಿಮೆ ಇರಬಹುದು. ಚಲನೆಗಳು ಹೇಗಿರುತ್ತದೆ ಎಂದರೆ ಕಂಪ್ಲೀಟ್ ನಿಮ್ಮ ಹೊಟ್ಟೆಯಲ್ಲಿ ಒಂದು ಸುತ್ತು ಹಾಕುವ ಸಾಧ್ಯತೆ ಇರುತ್ತೆ ಮತ್ತು ತುಂಬಾ ಸ್ಟ್ರೆಚ್ ಆಗಲೂ ಬಹುದು.ಒದೆಯುವುದು ಮತ್ತು ಚಲನೆಯು ಮಗುವಿನ ಸರಿಯಾದ ಮೂಳೆಗಳ ಮತ್ತು ಮಾಂಸಖಂಡಗಳ ಬೆಳವಣಿಗೆಯ ಸಂಕೇತವಾಗಿದೆ. ಒದೆಯುವಿಕೆಯು ಒಂದು ರೀತಿಯ ಮಗುವಿನ ವ್ಯಾಯಾಮವಾಗಿದ್ದು, ಅದು ನಿಮ್ಮ ಮಗುವಿಗೆ ಹೊಟ್ಟೆಯಲ್ಲಿದ್ದಾಗಲೂ ಕೂಡ ಅಗತ್ಯವಿದೆ.

• ಯಾವ ರೀತಿಯ ಒದೆತ ಸಹಜವಾಗಿರುವುದಾಗಿರುತ್ತದೆ?

ಪ್ರತಿ ಮಗುವೂ ವಿಭಿನ್ನವಾದ ಚಲನೆಯನ್ನು ಹೊಂದಿರುತ್ತದೆ. ಕೆಲವು ಮಕ್ಕಳು ಹೆಚ್ಚು ಆಕ್ಟೀವ್ ಆಗಿರುತ್ತದೆ ಮತ್ತು ದಿನಪೂರ್ತಿ ಒದೆಯುತ್ತಲೇ ಇರುತ್ತದೆ ಮತ್ತು ಕೆಲವು ಮಕ್ಕಳು ಆಗಾಗ ಅಪರೂಪಕ್ಕೊಮ್ಮೆ ಒದೆಯಬಹುದು.ಸಾಮಾನ್ಯವಾಗಿ ದಿನಕ್ಕೆ 20 ಒದೆತವನ್ನು ಪ್ರತಿ ಗರ್ಭಿಣಿಯೂ ನಿರೀಕ್ಷಿಸಬಹುದು. ಊಟ ಮಾಡಿದ ಕೂಡಲೇ ಒದೆತವು ಅಧಿಕವಾಗಿರುವುದನ್ನು ನೀವು ಗಮನಿಸಬಹುದು.
ನಿಮ್ಮ ಮಗು ಗರ್ಭದಲ್ಲಿ ಯಾವ ದಿಕ್ಕಿನಲ್ಲಿದೆ ಎಂಬ ಆಧಾರದ ಮೇಲೆ ನಿಮಗೆ ಒದೆಯುವಿಕೆಯ ಅನುಭವವೂ ಕೂಡ ಬೇರೆಬೇರೆ ಜಾಗದಲ್ಲಿ ಇರುತ್ತದೆ. ಒಂದು ವೇಳೆ ನಿಮ್ಮ ಮಗುವಿನ ಮುಖವು ಮೇಲ್ಬಾಗದಲ್ಲಿದ್ದರೆ ಹೊಟ್ಟೆಗೆ ಒದೆತ ಸಿಗುತ್ತದೆ. ಬೇರೆ ದಿಕ್ಕಿನಲ್ಲಿದ್ದರೆ ಬೆನ್ನುಮೂಳೆ , ಮೂತ್ರಕೋಶದ ಕಡೆಗೆ ಒದೆತ ಸಿಗಬಹುದು.

• ಯಾವಾಗ ನಿಮ್ಮ ಮಗುವಿನ ಒದೆತವನ್ನು ಲೆಕ್ಕ ಮಾಡಲು ಶುರು ಮಾಡಬೇಕು?

ಒಮ್ಮೆ ನಿಮ್ಮ ಮಗುವಿನ ಚಲನೆಯನ್ನು ಅನುಭವಿಸಲು ಶುರುಮಾಡಿದ ಕೆಲವು ವಾರಗಳಲ್ಲಿ ನಿಮಗೆ ಸಹಜ ಯಾವುದು ಅಸಹಜ ಯಾವುದು ಎಂಬ ಬಗ್ಗೆ ತನ್ನಷ್ಟಕ್ಕೆ ತಾನೇ ತಿಳಿಯುತ್ತಾ ಸಾಗುತ್ತೆ. ಮಗುವು ಬೆಳವಣಿಗೆ ಹೊಂದಿದಂತ, ನೀವು ಹೆಚ್ಚೆಚ್ಚು ಚಲನೆ ಅಥವಾ ಒದೆತವನ್ನು ನಿರೀಕ್ಷಿಸಬಹುದು ಮತ್ತು ಇದು ಮಗು ದಿನದಿಂದ ದಿನಕ್ಕೆ ಬಲಿಷ್ಟಗೊಳ್ಳುತ್ತಿದೆ ಎಂಬುದರ ಸಂಕೇತವಾಗಿದೆ. ಒಂದು ವೇಳೆ ನಿಮಗೆ ಮಗುವಿನ ಒದೆತ ಅಥವಾ ಚಲನೆಯಲ್ಲಿ ಭಾರೀ ವ್ಯತ್ಯಾಸ ಕಂಡರೆ, ನೀವು ಎಷ್ಟು ಬಾರಿ ಒದೆಯುತ್ತಿದೆ ಎಂಬುದನ್ನು ಲೆಕ್ಕ ಹಾಕಲು ಶುರು ಮಾಡಿ.
ವೈದ್ಯರನ್ನು ಸಂಪರ್ಕಿಸಿ
-ಒಂದು ವೇಳೆ ಎರಡು ಗಂಟೆಗಳಲ್ಲಿ ನೀವು 10 ಕ್ಕಿಂತ ಕಡಿಮೆ ತುಳಿತ ಅಥವ ಚಲನೆಯಾಗುತ್ತಿರುವ ಅನುಭವವಾದರೆ
-ನಿಮ್ಮ ಮಗು ಧ್ವನಿ, ಸ್ಪರ್ಷ ಅಥವಾ ಬೆಳಕಿಗೆ ಸ್ಪಂದನೆ ನೀಡದಿದ್ದರೆ
-ಕಳೆದ ಕೆಲವು ದಿನಗಳಿಂದ ನಿಮ್ಮ ಮಗುವಿನ ಚಲನೆ ನಿಧಾನವಾಗಿ ಕಡಿಮೆಯಾಗುತ್ತಿದ್ದರೆ

• ಒಂದು ವೇಳೆ ನಿಮ್ಮ ಮಗುವಿನ ಚಲನೆ ಕಡಿಮೆಯಾದರೆ ಅದರ ಅರ್ಥವೇನು?

ಒಂದು ವೇಳೆ ನಿಮ್ಮ ಮಗುವಿನ ಚಲನೆಯು ಭಾರೀ ಮಟ್ಟದಲ್ಲಿ ಕಡಿಮೆಯಾಗುತ್ತಿದೆಯಾದರೆ,ಅದಕ್ಕಾಗಿ ನೀವು ಭಯ ಪಡುವ ಅಗತ್ಯವಿಲ್ಲ. ಬಹಳಷ್ಟು ಸಂದರ್ಬಗಳಲ್ಲಿ, ನೀವು ಚಲನೆಯನ್ನು ಲೆಕ್ಕ ಮಾಡಬೇಕು ಎಂದುಕೊಂಡಾಗ. ಇನ್ನೂ ಹಲವು ಸಂದರ್ಬದಲ್ಲಿ ನೀವು ಮಗುವು ಚಲಿಸುತ್ತಿರುವಾಗ ನೀವು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಬ್ಯೂಸಿ ಆಗಿದ್ದು ಅದನ್ನು ಗಮನಿಸಿಕೊಳ್ಳದೇ ಇದ್ದಿರಬಹುದು.ಹೆಚ್ಚಾಗಿ ಪದೇಪದೇ ಚಲನೆಯಾದರೆ ಮತ್ತು ಕ್ರಿಯಾಶೀಲವಾಗಿ ಚಲಿಸಿದರೆ ಮಾತ್ರ ಹೆಚ್ಚಿನವರು ಗಮನಿಸಿಕೊಳ್ಳುತ್ತಾರೆ.

ಆದರೆ ಇದು ಮಗುವು ಅತಿಯಾಗಿ ಒತ್ತಡದಲ್ಲಿದೆ. ಆಮ್ಲಜನಕ ಪೂರೈಕೆ ಅಧಿಕವಾಗಿದೆ ಮತ್ತು ಪೋಷಕಾಂಶಗಳ ಕೆಲವು ಕಾರಣದಿಂದಾಗಿಯೂ ಕೂಡ ಚಲನೆ ಕಡಿಮೆಯಾಗಿರಬಹುದು. ಒಂದು ವೇಳೆ ನಿಮಗೆ ನಿಮ್ಮ ಮಗುವಿನ ಚಲನೆ ಕಡಿಮೆ ಇದೆ ಎಂಬ ಭಾವನೆ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿ, ನಿಮ್ಮ ಆರೋಗ್ಯವಾಗಿದೆಯಾ ಎಂಬುದನ್ನು ಪರೀಕ್ಷಿಸಿ ತಿಳಿಸುತ್ತಾರೆ. ಮಗುವಿನ ಚಲನೆ ಕಡಿಮೆ ಇದೆ ಎಂಬುದನ್ನೇ ಮನಸ್ಸಿಗೆ ತೆಗೆದುಕೊಂಡು ಗರ್ಭಿಣಿ ಒತ್ತಡಕ್ಕೆ ಸಿಲುಕುವುದು ಸರಿಯಲ್ಲ.

• ಮಗುವಿನ ಚಲನೆ ಮತ್ತು ಒದೆಯುವಿಕೆಯನ್ನು ಪ್ರತಿ ದಿನ ಲೆಕ್ಕ ಇಡಬೇಕಾ?

ಒಂದು ವೇಳೆ ನೀವು ಅತೀ ಹೆಚ್ಚು ರಿಸ್ಕ್ ಇರುವ ತಾಯಿಯಾಗುತ್ತಿದ್ದರೆ, ಪ್ರತಿದಿನ ನಿಮ್ಮ ಮಗುವಿನ ಚಲನೆಯನ್ನು ಲೆಕ್ಕ ಇಡಬೇಕಾದ ಅಗತ್ಯವಿಲ್ಲ. ಒಂದು ವೇಳೆ ರಿಸ್ಕ್ ನಲ್ಲಿ ನೀವು ಗರ್ಭ ಧರಿಸಿದ್ದರೆ ವೈದ್ಯರೇ ನಿಮ್ಮ ಮಗುವಿನ ಚಲನೆಯನ್ನು ಟ್ರ್ಯಾಕ್ ಮಾಡುತ್ತಾರೆ. ಸಹಜ ಗರ್ಭಧಾರಣೆಯಾಗಿದ್ದರೆ, ನೀವು ಆರೋಗ್ಯಯುತವಾಗಿದ್ದರೆ ಖಂಡಿತ ಮನಸೋ ಇಚ್ಛೆ ನಿಮ್ಮ ಮಗುವಿನ ಚಲನೆಯನ್ನು ಲೆಕ್ಕ ಇಡಬಹುದು. ಆದರೆ ಅದೇ ವಿಚಾರವನ್ನು ಒತ್ತಡಕ್ಕೆ ತೆಗೆದುಕೊಳ್ಳುವಷ್ಟು ಲೆಕ್ಕ ಮಾಡುವುದು ಸರಿಯಲ್ಲ.

• ಸುಧಾರಿತ ಗರ್ಭಧಾರಣೆಯಲ್ಲಿ ಮಗುವಿನ ಚಲನೆಯು ಕಡಿಮೆ ಇರುತ್ತದೆಯಾ?

35 ಮತ್ತು 36 ನೇ ವಾರದಲ್ಲಿ ಮಗುವು ಹೊಟ್ಟೆಯೊಳಗೆ ಚಲಿಸಲು ಹೆಚ್ಚು ಜಾಗ ಇಲ್ಲದ ಕಾರಣ ಸ್ವಲ್ಪ ಮಟ್ಟಿಗೆ ಚಲನೆಯಲ್ಲಿ ಕುಸಿದ ಕಂಡುಬರುತ್ತದೆ. ಇದು ಸಾಮಾನ್ಯ ಮತ್ತು ಸಹಜವಾಗಿ ಎಲ್ಲಾ ತಾಯಂದಿರಲ್ಲೂ ನಡೆಯುತ್ತದೆ. ಆದರೆ ಚಲನೆಯೇ ನಡೆಯುತ್ತಿಲ್ಲ ಅಥವಾ ನಡೆಯುವುದಿಲ್ಲ ಎಂಬುದೊಂದು ತಪ್ಪು ಕಲ್ಪನೆ. ಮಗುವಿಗೆ ಮೊದಲಿನಷ್ಟು ಆಕ್ಟೀವ್ ಆಗಿ ಹೊರಳಾಡಲು ಜಾಗ ಸಾಕಾಗುವುದಿಲ್ಲ ಅಷ್ಟೇ ಬಿಟ್ಟರೆ,ಆರೋಗ್ಯವಾಗಿರುವ ಗರ್ಭಧಾರಣೆಯಲ್ಲಿ ಮಗುವಿನ ಚಲನೆಯು ನಡೆದೇ ನಡೆಯುತ್ತದೆ. ಮಗುವು ಒದೆಯುತ್ತದೆ,ಸ್ಟ್ರೆಚ್ ಮಾಡುತ್ತದೆ. ಅದನ್ನು ಹೊರಗಡೆಯಿಂದ ಕೂಡ ಗಮನಿಸಿಕೊಳ್ಳಬಹುದಾಗಿದೆ. ಗರ್ಭಾಶಯದಲ್ಲೂ ಮಗುವಿಕೆ ಬಿಕ್ಕಳಿಕೆ ಕಾಣಿಸಿಕೊಳ್ಳಬಹುದು.ಅದನ್ನು ನೀವು ಹೊರಗಿನಿಂದ ಅನುಭವಿಸಲೂ ಕೂಡ ಸಾಧ್ಯವಿದೆ.

• ಹೊಟ್ಟೆಯೊಳಗಿದ್ದಾಗ ಮಗುವಿನ ಚಲನೆಯು ಹುಟ್ಟಿದ ಮೇಲಿನ ವರ್ತನೆಯನ್ನು ಸೂಚಿಸುತ್ತದೆಯೇ?

ಕೆಲವು ಜನರು ಹೇಳುತ್ತಾರೆ. ಹೊಟ್ಟೆಯೊಳಗೆ ಮಗು ಹೆಚ್ಚು ಒದೆಯುತ್ತಿದ್ದರೆ, ಚಲಿಸುತ್ತಿದ್ದರೆ ಆ ಮಗು ಹುಟ್ಟಿದ ಮೇಲೆ ಕೂಡ ತುಂಬಾ ಚೂಟಿಯಾಗಿರುವ ಮತ್ತು ಬುದ್ಧಿವಂತ ಮಗುವಾಗಿರುತ್ತದೆ ಎಂಬುದಾಗಿ.. ಮತ್ತು ಯಾವ ಮಗು ಹೊಟ್ಟೆಯಲ್ಲಿ ಶಾಂತವಾಗಿರುತ್ತದೋ ಆ ಮಗು ಹುಟ್ಟಿದ ಮೇಲೂ ಕೂಡ ಅಷ್ಟೇ ಶಾಂತ ಸ್ವಭಾವವನ್ನು ಹೊಂದಿರುತ್ತದೆ ಎಂದು. ರಾತ್ರಿಯ ವೇಳೆಯಲ್ಲಿ ಹೆಚ್ಚು ಅಲುಗಾಡುತ್ತಾ, ಚಲಿಸುತ್ತಾ ಇರುವ ಮಗುವು ಹುಟ್ಟಿದ ನಂತರವೂ ಅದೇ ಅಭ್ಯಾಸ ಹೊಂದಿರುತ್ತಾರೆ. ಇಂತಹ ಮಗುವು ಹುಟ್ಟಿದ ನಂತರ ಬೆಳಿಗಿನ ಹೊತ್ತು ಹೆಚ್ಚು ನಿದ್ರಿಸುವುದು ಮತ್ತು ರಾತ್ರಿಯ ವೇಳೆ ಆಟವಾಡಲು ಶುರು ಮಾಡುತ್ತಾರೆ ಎಂಬುದಾಗಿ ಹೆಚ್ಚಿನವರು ಹೇಳುತ್ತಾರೆ. ಆದರೆ ಇದು ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಇದುವರೆಗೂ ಯಾವುದೇ ಪರೀಕ್ಷೆಗಳೂ ನಡೆದಿಲ್ಲ. ಹಾಗಾಗಿ ಇದನ್ನು ಒಪ್ಪಿಕೊಳ್ಳಬೇಕೋ ಅಥವಾ ಬಿಡಬೇಕೋ ನಿಮ್ಮ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.

English summary

Things You Need To Know About Your Baby’s Kicks In The Womb

When is it that you truly absorb the fact that you are pregnant? Is it when you see those lines on your home pregnancy test or is it when your doctor gives you the final confirmation of your pregnancy? The morning sickness and the other pleasant or unpleasant signs tell you that you are indeed pregnant. But when you feel those gentle but firm kicks of your baby in the womb, it hits you that there is a life that has taken roots in you.
X
Desktop Bottom Promotion