For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ತಪ್ಪದೇ ಸೇವಿಸಬೇಕಾದ ಪೌಷ್ಠಿಕ ಹಣ್ಣು-ತರಕಾರಿಗಳಿವು

By Deepu
|

ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಸ್ತ್ರೀಯೋರ್ವಳು ಗರ್ಭಿಣಿಯಾಗಿರುವಳೋ, ಇಲ್ಲವೋ ಎ೦ಬುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುವ ಪರೀಕ್ಷೆಯು ಧನಾತ್ಮಕವಾಗಿದೆ ಎ೦ದು ಕ೦ಡುಬ೦ದಲ್ಲಿ, ಆಗ ಆಕೆಯಲ್ಲಿ ಉ೦ಟಾಗುವ ಭಾವೋದ್ವೇಗವನ್ನು ವರ್ಣಿಸಲು ಪದಗಳೇ ಸಾಲದು..!

ಹಾಗಾಗಿ ಇಂತಹ ಸಂತಸವನ್ನು ಇನ್ನಷ್ಟು ಇಮ್ಮಡಿಗೊಳಿಸಲು ತಾವು ಸೇವಿಸುವ ಆಹಾರ ಕ್ರಮವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎಂಬುದನ್ನು ಗರ್ಭಿಣಿಯರು ಮರೆಯಬಾರದು. ಹೌದು ಪ್ರಸ್ತುತ ದಿನಗಳಲ್ಲಿ ಜೀವನ ಶೈಲಿಯ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆಯ ಅಭ್ಯಾಸಗಳು ನಮ್ಮ ಪ್ರತಿಯೊಂದು ಸಂಭವನೀಯ ಕಾಯಿಲೆಗಳಿಗೆ ಮೂಲ ಕಾರಣವಾಗಿವೆ. ಇಂತಹ ನಡವಳಿಕೆಗಳಿಂದ ಕೆಲವರು ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ]

ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?

ಅದರಲ್ಲೂ ಗರ್ಭಿಣಿಯರು ಕೈಗೆಟುಕುವ ಸಿದ್ಧ ಆಹಾರಗಳಿಗೆ ಗುಲಾಮರಾಗಿ, ಅವುಗಳ ದುಷ್ಪರಿಣಾಮಗಳನ್ನೂ ಅರಿಯದೇ ಸುಲಭವಾಗಿ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ಕೆಲವೊಮ್ಮೆ ಇಂತಹ ಆಹಾರಗಳ ಸೇವನೆಯಿಂದಾಗಿ, ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಗರ್ಭಿಣಿಯರಿಗೆ೦ದೇ ಮೀಸಲಾಗಿರುವ ಕೆಲವೊ೦ದು ಪೌಷ್ಠಿಕ ಅಂಶಗಳಿಂದ ಕೂಡಿರುವ ತರಕಾರಿ, ಹಣ್ಣುಗಳನ್ನೂ ಸೇವಿಸಿದಲ್ಲಿ ಅದರಿ೦ದ ಆಕೆಯು ಪಡೆದುಕೊಳ್ಳಬಹುದಾದ ಆರೋಗ್ಯ ಲಾಭವು ದ್ವಿಗುಣಗೊಳ್ಳುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ....

ಬೀಟ್ ರೂಟ್‍ಗಳು

ಬೀಟ್ ರೂಟ್‍ಗಳು

ಬೀಟ್‍ರೂಟ್‍ಗಳು ಸಹ ಗರ್ಭಿಣಿಯಾಗಿರುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರ ಜೊತೆಗೆ ಇದರಲ್ಲಿ ಕಬ್ಬಿಣ ಮತ್ತು ಫೊಲಿಕ್ ಆಮ್ಲಗಳ ಪ್ರಮಾಣವು ಸಹ ಅಧಿಕವಾಗಿರುತ್ತದೆ ಮತ್ತು ವಿಟಮಿನ್ ಎ ಹಾಗು ಸಿಗಳು ಸಹ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಗರ್ಭಿಣಿಯಾಗಿರುವಾಗ ತಿನ್ನಲೇ ಬೇಕಾದ ತರಕಾರಿಗಳಲ್ಲಿ ಒಂದಾಗಿದೆ.

ಸಿಹಿ ಆಲೂಗಡ್ಡೆಗಳು

ಸಿಹಿ ಆಲೂಗಡ್ಡೆಗಳು

ಸಿಹಿ ಆಲೂಗಡ್ಡೆಗಳು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಇದರ ಪ್ರಮುಖ ಪ್ರಯೋಜನಗಳೆಂದರೆ, ಇದು ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಮುಖ್ಯವಾಗಿ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಮತ್ತು ಪೊಟಾಶಿಯಂ ಸಮೃದ್ಧವಾಗಿರುತ್ತದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಸೀತಾಫಲ ಹಣ್ಣು

ಸೀತಾಫಲ ಹಣ್ಣು

ಪೋಷಕಾ ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಗರ್ಭಾವಸ್ಥೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅತಿ ಅಗತ್ಯ. ಕಿತ್ತಳೆ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ನೀರು ಲಭ್ಯವಿದ್ದು ಗರ್ಭಿಣಿಯ ಅಗತ್ಯದ ನೀರಿನ ಕೊರತೆಯನ್ನು ನೀಗಿಸುತ್ತದೆ ಹಾಗೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮತ್ತು ಸೋಡಿಯಂ ಲವಣಗಳು ದೇಹದಲ್ಲಿ ಸಂತುಲಿತ ಪ್ರಮಾಣದ ನೀರು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.

ಸೀಬೆ ಹಣ್ಣುಗಳು

ಸೀಬೆ ಹಣ್ಣುಗಳು

ಸೀಬೆಗಳನ್ನು ಗರ್ಭಿಣಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಹಾಗು ಫ್ಲಾವೊನಾಯ್ಡ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಹಣ್ಣಾಗಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ದ್ರಾಕ್ಷಿ

ದ್ರಾಕ್ಷಿ

ಹೆಚ್ಚಿನವರು ಗರ್ಭಿಣಿಯರು ಈ ಹಣ್ಣನ್ನು ತಿನ್ನಬಾರದು ಎಂದೇ ಯೋಚಿಸುತ್ತಾರೆ. ಆದರೆ ವಿಟಮಿನ್ ಎ ಅನ್ನು ಈ ಹಣ್ಣು ಒಳಗೊಂಡಿದ್ದು ಫೋಲೆಟ್, ಪೊಟಾಶಿಯಮ್, ಫಾಸ್‌ಫರಸ್, ಮೆಗ್ನೇಶಿಯಂ, ಸೋಡಿಯಂ ಅನ್ನು ಈ ಹಣ್ಣು ಒಳಗೊಂಡಿದೆ. ಗರ್ಭಾವಸ್ಥೆಯಲ್ಲಿ ಇದು ಅತ್ಯುತ್ತಮ ಆಹಾರ ಎಂದೆನಿಸಿದೆ.

ಕಲ್ಲಂಗಡಿ, ನೇರಳೆ, ದ್ರಾಕ್ಷಿ

ಕಲ್ಲಂಗಡಿ, ನೇರಳೆ, ದ್ರಾಕ್ಷಿ

ಗರ್ಭಿಣಿಯಾಗಿರುವಾಗ, ಪ್ರತಿದಿನ ಐದು ಭಾಗಗಳಷ್ಟು ಹಣ್ಣುಗಳನ್ನು ಸೇವಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳಾದ ಕಲ್ಲಂಗಡಿ, ನೇರಳೆ, ದ್ರಾಕ್ಷಿ ಇತ್ಯಾದಿಗಳನ್ನು ಸೇವಿಸಿರಿ. ವಿಟಾಮಿನ್ C ನಿಂದ ಸಮೃದ್ಧವಾಗಿರುವ ಕಿತ್ತಲೆಗಳು ಕಬ್ಬಿಣದ ಅಂಶವು ಶರೀರದಲ್ಲಿ ಹಿರಲ್ಪಡಲು ಸಹಕಾರಿಯಾಗಿದೆ ಹಾಗೂ ಸೇಬುಗಳು ನಾರಿನಂಶದಿಂದ ಕೂಡಿರುವುದರಿಂದ, ಗರ್ಭಿಣಿಯಾಗಿರುವಾಗ ಸಾಮಾನ್ಯವಾಗಿ ತಲೆದೋರುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿವೆ.

ಸೇಬು

ಸೇಬು

"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು...

ಎಲೆತರಕಾರಿಗಳು

ಎಲೆತರಕಾರಿಗಳು

ಬೀಟಾ ಕ್ಯಾರೊಟಿನ್ ಮತ್ತು ಲ್ಯೂಟಿನ್‭‎ನಂತಹ ಸಸ್ಯಜನ್ಯ ಅಂಶಗಳನ್ನು ಈ ತರಕಾರಿಗಳು ಒಳಗೊಂಡಿರುವುದರಿಂದ ಗರ್ಭಿಣಿಯರ ಆಹಾರದಲ್ಲಿ ಇದು ಇರಲೇಬೇಕು. ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಕಷ್ಟಗಳನ್ನು ಇದು ನಿವಾರಿಸುತ್ತದೆ. ಅಂತೆಯೇ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ

ಸಂಪೂರ್ಣ ಧಾನ್ಯಗಳು

ಸಂಪೂರ್ಣ ಧಾನ್ಯಗಳು

ಕಬ್ಬಿಣ ಮತ್ತು ಜಿಂಕ್ ಅಂಶಗಳನ್ನು ಸಂಪೂರ್ಣ ಧಾನ್ಯಗಳು ಒಳಗೊಂಡಿರುತ್ತವೆ. ಗರ್ಭಾವಸ್ಥೆ ಸಂದರ್ಭದಲ್ಲಿ ಯಾವುದೇ ರಕ್ತ ಅಸಮತೋಲನಗಳನ್ನು ಸೋಲಿಸಲು ಅಂದರೆ ಅನಿಮಿಯಾದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಈ ಧಾನ್ಯಗಳು ಸಹಕಾರಿಯಾಗಿದೆ.

ನಟ್ಸ್

ನಟ್ಸ್

ಈ ಹಿಂದೆ ಯಾವುದೇ ರೀತಿಯ ಅಲರ್ಜಿಗಳು ನಿಮಗುಂಟಾಗಿಲ್ಲ ಎಂದಾದಲ್ಲಿ, ಯಾವುದೇ ರೀತಿಯ ನಟ್ಸ್ ಅನ್ನು ನಿಮಗೆ ಸೇವಿಸಬಹುದು. ಪೋಷಕಾಂಶ ಮತ್ತು ಶಕ್ತಿಗಾಗಿ ಸಣ್ಣ ಸಂಗ್ರಾಹಾರವಾಗಿರುವುದರಿಂದ ಗರ್ಭಾವಸ್ಥೆ ಕಾಲದಲ್ಲಿ ನಟ್ಸ್ ಸೇವಿಸುವುದರಿಂದ ಸಂತಸಭರಿತವಾಗಿ ಗರ್ಭಾವಸ್ಥೆಯನ್ನು ತಾಯಿ ಅನುಭವಿಸಬಹುದಾಗಿದೆ.

ಬ್ರಕೋಲಿ

ಬ್ರಕೋಲಿ

ಈ ಹಸಿರು ತರಕಾರಿಯನ್ನು ನಿಮ್ಮ ಗರ್ಭಾವಸ್ಥೆ ಡಯೆಟ್‎ನಲ್ಲಿ ನೀವು ಸೇರಿಸಿಕೊಳ್ಳಲೇಬೇಕು. ಬ್ರಕೋಲಿ ಸೇವನೆಯು ಹೆಚ್ಚು ಪ್ರಮಾಣದ ಕ್ಯಾಲ್ಶಿಯಮ್ ಮತ್ತು ಫೊಲೇಟ್ ಅನ್ನು ಒದಗಿಸುತ್ತದೆ ಇದು ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

English summary

Nutritious Fruits-vegetables You'll have During Pregnancy

A pregnant woman needs to ensure that her diet provides enough nutrients and energy for her baby to develop and grow properly, and also to make sure that her body is healthy enough to deal with the changes that are occurring.For a healthy pregnancy, the mother's diet needs to be balanced and nutritious So boldsky kannada shares some healthy foods, which should usefull for during pregnancy
X
Desktop Bottom Promotion