For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಬಿಳಿಯಾಗಿ ಹುಟ್ಟಬೇಕೆ, ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ!

By Sushma Charhra
|

ಯಾವಾಗ ಮಹಿಳೆಯೊಬ್ಬಳು ಗರ್ಭವತಿ ಎಂದು ತಿಳಿಯುತ್ತದೆಯೋ ಆಗ ಕುಟುಂಬದ ಎಲ್ಲ ಸದಸ್ಯರಿಂದ ಸಲಹೆಗಳು ಆರಂಭವಾಗುತ್ತದೆ.ಎಲ್ಲರೂ ನೀನು ಇನ್ನು ಒಬ್ಬಳಿಗಾಗಿ ತಿನ್ನುವುದಲ್ಲ, ಇಬ್ಬರಿಗಾಗಿ ತಿನ್ನಬೇಕು ಎಂದು ಹೇಳಲು ಪ್ರಾರಂಭಿಸುತ್ತಾರೆ. ಕೆಲವು ಸಲಹೆಗಳು ಸರಿಯೋ ತಪ್ಪೋ ಎಂಬ ಗೊಂದಲಕ್ಕೆ ಬೀಳುವುದು ಮಾತ್ರ ಗರ್ಭಿಣಿ ಸ್ತ್ರೀಯರು. ಹಿರಿಯರು ಹೇಳಿದ್ದೆಲ್ಲವೂ ಸರಿಯೇ ಅಥವಾ ಅದನ್ನು ತಿಂದರೆ ತನ್ನ ದೇಹಕ್ಕೆ ತನ್ನ ಮಗುವಿನ ಬೆಳವಣಿಗೆಗೆ ಸಹಕಾರಿಯೇ ಎಂಬ ಅನುಮಾನಗಳು ಹಲವರಲ್ಲಿ ಇರುತ್ತದೆ. ಜಾಸ್ತಿ ಓಡಾಡಬಾರದು, ಭಾರ ಎತ್ತಬಾರದು, ಎಂಬಿತ್ಯಾದಿ ಸಾಂಪ್ರದಾಯಿಕ ಸಲಹೆಗಳು ಪ್ರಾರಂಭವಾಗುತ್ತದೆ.

ನಿಜ ಹೇಳಬೇಕು ಎಂದರೆ ಗಂಡ ಕೂಡ ಹಲವು ವಿಚಾರಗಳಲ್ಲಿ ತ್ಯಾಗ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲಿ ತುಂಬಾ ವಿಚಿತ್ರವಾದ ಸಲಹೆ ಎಂದರೆ ನಿಮಗೆ ಬಿಳಿಯ ಬಣ್ಣದ ಮಗು ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ ಎಂಬುದು. ನಮ್ಮ ದೇಶದಲ್ಲಿ ಬಿಳಿ ತ್ವಚೆಯ ಬಗ್ಗೆ ಇರುವ ಆಸಕ್ತಿ ಬಹುಶ್ಯಃ ಎಂದಿಗೂ ಕಡಿಮೆಯಾಗುವುದೇ ಇಲ್ಲ ಎಂದೆನಿಸುತ್ತದೆ. ಒಂದು ವೇಳೆ ಫ್ಯಾಮಿಲಿಯ ಜೀನ್ಸ್ ಕಪ್ಪಾದರೂ ಕೂಡ ಬಿಳಿ ಮಗು ಬೇಕು ಎಂಬ ಆಸೆ ಹಲವರದ್ದು. ಹಾಗಾದ್ರೆ ಸರಿಯಾದ ಆಹಾರ ಕ್ರಮ ಅಳವಡಿಸಿಕೊಳ್ಳುವುದರಿಂದಾಗಿ ಬಿಳಿ ಮಗುವನ್ನು ಪಡೆಯಲು ಸಾಧ್ಯವಿದೆಯೇ?

food to eat during pregnancy in kannada

ತಜ್ಞರು ತಿಳಿಸುವಂತೆ, ನೀವು ತಿನ್ನುವ ಆಹಾರದಿಂದ ಮಗುವಿನ ಚರ್ಮದ ಬಣ್ಣ ಬದಲಾಗುವುದಿಲ್ಲ. ನಿಮ್ಮ ಮಗುವಿನ ಬಣ್ಣ ನಿರ್ಧರಿತವಾಗುವುದು ಗಂಡಹೆಂಡತಿಯ ಜೀನ್ಸ್ ನಿಂದ ಅಷ್ಟೇ. ಡಯಟ್ ನಿಂದಾಗಿ ಅದನ್ನೆಲ್ಲ ಬದಲಿಸಲು ಸಾಧ್ಯವಿಲ್ಲ. ಆದರೂ ಬಿಳಿ ತ್ವಚೆಯ ಬಗ್ಗೆ ಇರುವ ನಮ್ಮ ದೇಶದ ಆಸಕ್ತಿಯಿಂದಾಗಿ ಹಲವಾರು ಶತಕಗಳಿಂದ , ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ನಮೂದಿಸಲಾಗಿದ್ದು, ಅದು ಹುಟ್ಟುವ ಮಗು ಬಿಳಿ ತ್ವಚೆ ಹೊಂದಿರಲು ನೆರವು ನೀಡುತ್ತದೆಯಂತೆ.
ಹಾಗಾದ್ರೆ ಅದು ಯಾವೆಲ್ಲ ಆಹಾರಗಳು ಈ ರೀತಿಯ ಬಿಳಿ ತ್ವಚೆಯ ಮಗುವನ್ನು ನೀಡಲು ನೆರವಿಗೆ ಬರುತ್ತದೆ.. ಇಲ್ಲಿದೆ ನೋಡಿ ಸಂಪೂರ್ಣ ವಿವರ . ಮುಂದೆ ಓದಿ.

1) ಕೇಸರಿ ಹಾಲು
2) ತೆಂಗಿನ ಕಾಯಿ
3) ಹಾಲು
4) ಮೊಟ್ಟೆಗಳು
5) ಬಾದಾಮಿ
6) ತುಪ್ಪ
7) ಕಿತ್ತಲೆ ಹಣ್ಣುಗಳು
8) ಪರಂಗಿ ಹಣ್ಣು
9) ಸೋಂಪಿನ ಕಾಳುಗಳು
10) ದ್ರಾಕ್ಷಿ ರಸ

1) ಕೇಸರಿ ಹಾಲು

ಅದೆಷ್ಟೋ ಜನ ಮಹಿಳೆಯರು ತಮ್ಮ ಪ್ರಗ್ನೆನ್ಸಿಯಲ್ಲಿ ಕೇಸರಿ ಹಾಲನ್ನು ಸೇವಿಸುತ್ತಾರೆ.. ಕೇಸರಿ ಹಾಲು ಕುಡಿದರೆ ಬಿಳಿಯಾಗಿರುವ ಮಗು ಜನಿಸುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹೊಟ್ಟೆಯಲ್ಲಿ ಬೆಳವಣಿಗೆ ಹೊಂದುವ ಮಗುವಿನ ಚರ್ಮವನ್ನು ಬಿಳಿಯಾಗಿಸುವ ಸಾಮರ್ಥ್ಯ ಕೇಸರಿ ಹಾಲಿಗೆ ಇದೆ ಎನ್ನಲಾಗುತ್ತೆ.

2) ತೆಂಗಿನ ಕಾಯಿ

ನೀವು ಬಿಳಿಯಾಗಿರುವ ಮಗುವನ್ನು ಬಯಸುತ್ತಿದ್ದೀರಾದರೆ, ಪ್ರತಿದಿನ ತೆಂಗಿನಕಾಯಿ ಹಾಲನ್ನು ಸೇವಿಸಿ. ಭಾರತೀಯರ ನಂಬಿಕೆಯ ಪ್ರಕಾರ, ತೆಂಗಿನ ಕಾಯಿ ಹಾಲು ಬಿಳಿಯ ಮಗುವನ್ನು ಪಡೆಯಲು ನೆರವಾಗುತ್ತದೆ.

3) ಹಾಲು

ಗರ್ಭಿಣಿ ಸ್ತ್ರೀಯರು ಹೆಚ್ಚು ಹಾಲು ಸೇವಿಸುವುದು ಬಹಳ ಪ್ರಯೋಜನಕಾರಿ. ಮಗುವಿನ ಬೆಳವಣಿಗೆಗೆ ಬಹಳವಾಗಿ ಹಾಲು ಸಹಾಯ ಮಾಡುತ್ತದೆ.

4) ಮೊಟ್ಟೆಗಳು

ಎರಡನೇ ತ್ರೈಮಾಸಿಕ ಆರಂಭವಾದಾಗಿನಿಂದ ಗರ್ಭಿಣಿ ಸ್ತ್ರೀಯರು ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸಲು ಆರಂಭಿಸಬೇಕಂತೆ, ಇದರಿಂದ ಮಗುವಿನ ಬಣ್ಣವು ಬಿಳಿಯಾಗುತ್ತದೆಯಂತೆ.

5) ಬಾದಾಮಿ

ಗರ್ಭಿಣಿ ಸ್ತ್ರೀಯರು ಗರ್ಭ ಧರಿಸಿದಾಗಿನಿಂದ ಪ್ರತಿದಿನ ನೀರಿನಲ್ಲಿ ನೆನಸಿಟ್ಟ ಕೆಲವು ಬಾದಾಮಿಯನ್ನು ಪ್ರತಿದಿನ ಸೇವಿಸುವುದು ಬಹಳ ಪ್ರಯೋಜನಕಾರಿ. ಇದರಿಂದ ಆಕೆ ಬಿಳಿಬಿಳಿ ತ್ವಚೆ ಇರುವ ಮಗುವನ್ನು ಪಡೆಯಬಹುದು. ಆಯುರ್ವೇದದ ಪ್ರಕಾರ, ಹೀಗೆ ಬಾದಾಮಿ ಹಾಲು ಸೇವಿಸುವುದರಿಂದ ಮಗುವಿನ ಚರ್ಮದ ಬಣ್ಣ ಅತ್ಯುತ್ತಮವಾಗಿ ಇರಲಿದೆಯಂತೆ.

6)ತುಪ್ಪ

ಅಧ್ಯಯನಗಳು ಹೇಳುವಂತೆ, ಯಾವ ಗರ್ಭಿಣಿ ಸ್ತ್ರೀಯರು ತಮ್ಮ ಊಟಕ್ಕೆ ತುಪ್ಪವನ್ನು ಬಳಸುತ್ತಾರೋ, ಅಂತವರಿಗೆ ಕಡಿಮೆ ನೋವಿನಿಂದ ಹೆರಿಗೆ ಆಗುತ್ತದೆಯಂತೆ. ಅದರ ಜೊತಗೆ ತುಪ್ಪವು ನಿಮ್ಮ ಗರ್ಭದಲ್ಲಿರುವ ಮಗುವಿನ ಬಣ್ಣವನ್ನು ಬಿಳಿಯಾಗಿಸಲು ಕೂಡ ಸಹಕಾರಿ.

7) ಕಿತ್ತಳೆ

ಸಿಟ್ರಸ್ ಹಣ್ಣುಗಳಲ್ಲಿ ಒಂದೆನಿಸಿರುವ ಕಿತ್ತಳೆಯನ್ನು ಗರ್ಭಿಣಿ ಸ್ತ್ರೀಯರು ಸೇವಿಸುವುದು ಬಹಳ ಒಳ್ಳೆಯದು. ಇದು ವಿಟಮಿನ್ ಸಿ ಗಳಿಂದ ಶ್ರೀಮಂತವಾಗಿದ ಮತ್ತು ಮಗುವಿನ ಬೆಳವಣಿಗೆಗೆ ಮತ್ತು ಅದರ ಚರ್ಮದ ಬಣ್ಣ ಬಿಳಿಯಾಗಲು ಬಹಳವಾಗಿ ನೆರವಿಗೆ ಬರುತ್ತದೆ. ಆದರೆ ನೀವದನ್ನು ಒಂದು ದಿನಕ್ಕೆ ಲಿಮಿಟ್ ಮಾಡಿಕೊಳ್ಳುವುದು ಉತ್ತಮ.

8) ಪರಂಗಿ ಹಣ್ಣು

ಭಾರತೀಯರ ನಂಬಿಕೆ ಏನೆಂದರೆ ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ ಮತ್ತು ಇದು ಮಗುವಿನ ಚರ್ಮದ ಬಣ್ಣ ಬಿಳಿಯಾಗುವಂತೆ ಮಾಡುತ್ತದೆ.ಪ್ರತಿದಿನ ಒಂದು ಗ್ಲಾಸ್ ಪರಂಗಿ ಹಣ್ಣಿನ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು.

9) ಸೋಂಪಿನ ಕಾಳುಗಳು

ಸೋಂಪಿನ ಕಾಳುಗಳನ್ನು ನೆನಸಿದ ನೀರನ್ನು ಸೇವಿಸುವುದರಿಂದಾಗಿ ಹುಟ್ಟುವ ಮಗುವಿನ ಮೈಬಣ್ಣ ಬಿಳಿಯಾಗಿ ಇರುತ್ತದೆಯಂತೆ. ಗರ್ಭಿಣಿ ಸ್ತ್ರೀಯರು ಪ್ರತಿದಿನ 3 ml ನಷ್ಟು ಸೋಂಪು ನೆನಸಿದ ನೀರನ್ನು ಪ್ರತಿ ದಿನ ಬೆಳಿಗ್ಗೆ ಎದ್ದ ಕೂಡಲೇ ಸೇವಿಸುವುದು ಬಹಳ ಒಳ್ಳೆಯದು. ಇದು ಬೆಳಗ್ಗೆ ಎದ್ದ ಕೂಡಲೇ ಆಗುವ ಕೆಟ್ಟ ಫೀಲಿಂಗ್ ನ್ನು ಕೂಡ ತೆಗೆದು ಹಾಕುತ್ತದೆ.

10) ದ್ರಾಕ್ಷಿ ರಸ

ದ್ರಾಕ್ಷಿ ರಸ ಮತ್ತೊಂದು ರುಚಿಕರವಾದ ಮದ್ದಾಗಿದ್ದು ಮಕ್ಕಳ ಚರ್ಮವು ಬಿಳಿಯಾಗಿರುವಂತೆ ಮಾಡುತ್ತದೆ. ದ್ರಾಕ್ಷಿಯಲ್ಲಿ ಆಲ್ಫಾ- ಹೈಡ್ರಾಕ್ಸಿಲ್ ಆಸಿಡ್ ಗಳಿದ್ದು ಇವು ಚರ್ಮ ಬಣ್ಣವನ್ನು ವೃದ್ಧಿಸುವಲ್ಲಿ ನೆರವಾಗುತ್ತದೆ.. ಪ್ರತಿದಿನ ಗರ್ಭಿಣಿಯಾಗಿದ್ದಾಗ 60ml ನಷ್ಟು ದ್ರಾಕ್ಷಿ ರಸ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆದರೆ ವಿಜ್ಞಾನವು ಈ ರೀತಿ ಆಹಾರ ಸೇವನೆಯಿಂದ ಮಗುವಿನ ಬಣ್ಣ ನಿರ್ಧಾರವಾಗುತ್ತೆ ಎಂಬ ವಿಚಾರವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಿದ್ದವಿಲ್ಲ, ಹಾಗೆಂದು ಸಂಪೂರ್ಣವಾಗಿ ಇದನ್ನು ತೆಗೆದುಹಾಕಲೂ ಕೂಡ ವಿಜ್ಞಾನಕ್ಕೆ ಮನಸ್ಸಿಲ್ಲ.
ಅದಕ್ಕೆ ವಿಜ್ಞಾನ ಕೆಲವೊಮ್ಮೆ ವಿಚಿತ್ರ ಅನ್ನಿಸುತ್ತೆ. ಒಂದು ವೇಳೆ ನೀವು ಈ ಎಲ್ಲಾ ಆಹಾರಗಳನ್ನು ಸೇವಿಸಿ, ನಿಮ್ಮ ಕುಟುಂಬದಲ್ಲಿ ಮೊದಲ ಬಿಳಿಯ ಮಗು ಹುಟ್ಟಿದರೆ ಆಶ್ಚರ್ಯವಾಗಬಹುದು ಎಲ್ಲರಿಗೂ...!!!

English summary

Foods to Eat During Pregnancy To Get A Fair Baby

According to experts, what you eat cannot alter the complexion of your baby. The complexion of the foetus which is growing inside your womb will be a mixture of the genes from the father and mother and it has got nothing to do with your diet. Here is a list of foods that can be consumed during pregnancy, which will help improve the complexion of your baby.
X
Desktop Bottom Promotion