ಆರೋಗ್ಯ ತಜ್ಞರ ಪ್ರಕಾರ-ಮಗು ಅತ್ತರೆ ಒಳ್ಳೆಯದಂತೆ!

By: Hemanth
Subscribe to Boldsky

ಮಕ್ಕಳು ಅತ್ತರೆ ಆಗ ತಾಯಿಗೆ ಆತಂಕವಾವುದು ಪ್ರಕೃತಿ ಸಹಜ ನಿಯಮ. ಹೊಟ್ಟೆ ಹಸಿದಿದೆಯಾ ಅಥವಾ ಏನಾದರೂ ಸಮಸ್ಯೆಯಾಗಿದೆಯಾ ಎನ್ನುವ ಚಿಂತೆ ಕಾಡುವುದು. ಮಗು ಹಸಿದಾಗ ಅಳುವುದು ಸಹಜ. ಯಾಕೆಂದರೆ ಮಗುವಿಗೆ ತನ್ನ ಹಸಿವು ಅಥವಾ ಸಮಸ್ಯೆ ಹೇಳಲು ನಮ್ಮ ಹಾಗೆ ಮಾತು ಬರುವುದಿಲ್ಲ. ಇದರಿಂದ ಮಗು ಅಳುವಿನ ಮೂಲಕವಾಗಿ ಇದನ್ನು ತೋರಿಸಿಕೊಡುತ್ತದೆ. ಇಂತಹ ಸಮಯದಲ್ಲಿ ಎದೆಹಾಲು ನೀಡಿದರೆ ಅಳು ನಿಲ್ಲಿಸಬಹುದು.

ಮಗು ಯಾವತ್ತೂ ಸುಮ್ ಸುಮ್ನೆ ಅಳುವುದಿಲ್ಲ, ನೆನಪಿರಲಿ...

ಎದೆಹಾಲು ನೀಡಿದ ಬಳಿಕವೂ ಅಳು ನಿಲ್ಲಿಸಿಲ್ಲ ಎಂದಾದರೆ ಏನಾದರೂ ಸಮಸ್ಯೆಯಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಮಗು ಅಳುತ್ತಾ ಇದ್ದರೆ ಆತಂಕ ಸಹಜ. ಆದರೆ ಮಗು ಅಳುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅತ್ತರೆ ಮಗುವಿಗೆ ಹೇಗೆ ಲಾಭವಾಗಲಿದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ತಾಯಿ ಗರ್ಭದಿಂದ ಹೊರ ಬಂದ ಕೂಡಲೇ

ತಾಯಿ ಗರ್ಭದಿಂದ ಹೊರ ಬಂದ ಕೂಡಲೇ

ತಾಯಿ ಗರ್ಭದಿಂದ ಹೊರ ಬಂದ ಕೂಡಲೇ ಮಗು ತಕ್ಷಣ ಅಳಲು ಆರಂಭಿಸುತ್ತದೆ. ಇದರಿಂದ ಮಗುವಿನ ಶ್ವಾಸಕೋಶವು ತೆರೆದು ಗಾಳಿ ಉಸಿರಾಡಲು ಮಗುವಿಗೆ ನೆರವಾಗುವುದು. ಮೊದಲ ಸಲ ಮಗು ಗಾಳಿಯನ್ನು ಉಸಿರಾಡುವುದು.

ತನಗೆ ಬೇಕಿರುವುದನ್ನು ಪಡೆಯಲು...

ತನಗೆ ಬೇಕಿರುವುದನ್ನು ಪಡೆಯಲು...

ಮಾತು ಕಲಿಯುವ ಮೊದಲು ಸಂಪರ್ಕಕ್ಕಾಗಿ ಮಗು ಅಳುತ್ತದೆ. ಯಾವುದನ್ನಾದರೂ ಪಡೆಯಲು ಅಥವಾ ನೆರವು ಬೇಕಿದ್ದರೆ ಮಗು ಅಳುತ್ತದೆ. ಮಗುವಿಗೆ ಅಪ್ಪುಗೆ ಬೇಕಿದ್ದರೆ ಆಗ ಅಳುತ್ತದೆ. ಮಗು ತನಗೆ ಬೇಕಿರುವುದನ್ನು ಪಡೆಯಲು ಅಳುವುದು...

ವಿಚಿತ್ರ ಹಬ್ಬ: ಇಲ್ಲಿ ಮಗು ಅತ್ತರೆ ಇವರಿಗೆ-ಹಾಲು ಕುಡಿದಷ್ಟೇ ಸಂತಸ!

ಮೌನ ತುಂಬಾ ಅಪಾಯಕಾರಿ

ಮೌನ ತುಂಬಾ ಅಪಾಯಕಾರಿ

ಮಗು ಅಳದೇ ಇದ್ದರೆ ಆಗ ಚಿಂತೆ ಮಾಡಬೇಕಾಗುತ್ತದೆ. ನೈಸರ್ಗಿಕವಾಗಿ ಮಗು ಅಳುತ್ತಾ ಇರಬೇಕು. ಮಗು ಅಳದೇ ಇದ್ದರೆ ಆಗ ಅದು ತುಂಬಾ ಒತ್ತಡಕ್ಕೆ ಒಳಗಾಗಿದೆ ಅಥವಾ ತನ್ನೊಳಗೆ ಅದು ಗೊಂದಲದಲ್ಲಿದೆ ಎಂದರ್ಥ.

ವ್ಯಾಯಾಮ

ವ್ಯಾಯಾಮ

ಅಳುವುದು ಮಗುವಿಗೆ ವ್ಯಾಯಾಮವೆಂದರೆ ನಿಮಗೆ ನಂಬಲು ಸಾಧ್ಯವೇ? ಆದರೆ ಇದು ನಿಜ. ಯಾಕೆಂದರೆ ಮಗು ಅತ್ತರೆ ಆಗ ಮಗುವಿನ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ಸಿಗುವುದು. ಈ ವಯಸ್ಸಿನಲ್ಲಿ ಇದು ಒಳ್ಳೆಯ ವ್ಯಾಯಾಮವೆಂದು ಪರಿಗಣಿಸಲಾಗಿದೆ.

ಭಾವನೆ ವ್ಯಕ್ತಪಡಿಸಲು

ಭಾವನೆ ವ್ಯಕ್ತಪಡಿಸಲು

ಮಗು ತನ್ನ ಭಾವನೆ ವ್ಯಕ್ತಪಡಿಸಲು ಅಳುತ್ತದೆ. ದೊಡ್ಡವರಂತೆ ಮಕ್ಕಳು ಕೂಡ ತಮ್ಮ ಭಾವನೆ ವ್ಯಕ್ತಪಡಿಸಲು ಅಳುತ್ತವೆ.

English summary

Why Crying Is Good For Your Baby

Sometimes, you never know why your baby is crying. Actually, crying is the language of babies. Your baby is trying to tell you something. Though most of us perceive crying as a bad thing, it isn't always bad as far as babies are concerned. Sometimes, the crying is to express a need and sometimes, it is done just for attention. Actually, health experts say that crying is natural and is also good during that infancy. Here are some reasons why why crying is good for babies.
Subscribe Newsletter